ರಾತ್ರಿ ಬಟ್ಟೆ ಒಗೆಯುವ ಅಥವಾ ಒಣಗಿಸುವ ಅಭ್ಯಾಸ ನಿಮಗೂ ಇದ್ಯಾ? ಮುನಿಸಿಕೊಳ್ಳುತ್ತಾಳಂತೆ ಲಕ್ಷ್ಮೀ

ನಮ್ಮಲ್ಲಿ ಮೊದಲಿನಿಂದಲೂ ಕೆಲವೊಂದು ಪದ್ದತಿಗಳು ನಡೆದುಕೊಂಡು ಬಂದಿವೆ. ಕೆಲವು ಕೆಲಸಗಳನ್ನು ಸಂಜೆ ಮೇಲೆ ಮಾಡಬಾರದು ಅನ್ನೋದು. ಸಂಜೆ ಮೇಲೆ ಉಗುರು ಕತ್ತರಿಸಬಾರದು, ಮನೆಯೊಳಗಿನ ಕಸ ಹೊರಗೆ ಹಾಕಬಾರದು, ತುಳಸಿಯನ್ನು ಮುಟ್ಟಬಾರದು ಹೀಗೆ ಇನ್ನೂ ತುಂಬಾ ನಂಬಿಕೆಗಳು ಇವೆ. ನಮ್ಮ ಹಿರಿಯರು ಇದನ್ನು ಹೇಳಿಕೊಂಡೇ ಬಂದಿದ್ದಾರೆ. ಈಗಲೂ ಕೆಲವರು ಅದನ್ನು ಪಾಲಿಸ್ತಾರೆ. ಇನ್ನು ಕೆಲವರಿಗೆ ಸಾಧ್ಯ ಆಗೋದಿಲ್ಲ. ಸಾಧ್ಯ ಆಗೋದಿಲ್ಲ ಅನ್ನೋದಕ್ಕೂ ಬೇರೆ ಬೇರೆ ಕಾರಣಗಳು ಇರ್ತಾವೆ.

ಸಂಜೆ ಮೇಲೆ ಮಾಡಬಾರದು ಅನ್ನೋ ಶಾಸ್ತ್ರ ಇರೋ ಇನ್ನೊಂದು ಕೆಲಸ ಅಂದ್ರೆ ಬಟ್ಟೆ ಒಗೆಯೋದು ಮತ್ತು ಒಣಗಿಸೋದು. ಇವೆರಡನ್ನೂ ರಾತ್ರಿ ಹೊತ್ತು ಮಾಡಲೇಬಾರದಂತೆ. ಜ್ಯೋತಿಷ್ಯದಲ್ಲಿ ಅಥವಾ ವಾಸ್ತುವಿನಲ್ಲಿ ಇದಕ್ಕೆ ಒಂದು ರೀತಿಯ ಕಾರಣ ಹೇಳಿದರೆ, ವಿಜ್ಞಾನ ಮತ್ತೊಂದು ಹೇಳುತ್ತದೆ. ಒಟ್ಟಿನಲ್ಲಿ ರಾತ್ರಿ ಬಟ್ಟೆ ಒಗೆಯಬಾರದು, ಒಣಗಿಸಬಾರದು ಎನ್ನುವುದಕ್ಕೆ ಶಾಸ್ತ್ರ ಮತ್ತು ವಿಜ್ಞಾನ ಎರಡರಲ್ಲಿಯೂ ಕಾರಣ ಇದೆ.

Washing

ರಾತ್ರಿ ಬಟ್ಟೆ ಒಗೆಯುವುದು ಒಣಗಿಸುವುದು ಸರಿಯಲ್ಲ

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಸ್ಥಿತಿ ಹೇಗಾಗಿದೆ ಅಂದ್ರೆ ಯಾವುದಕ್ಕೂ ಟೈಂ ಇರೋದೇ ಇಲ್ಲ. ಬ್ಯುಸಿ ಜೀವನ. ಹಾಗಾಗಿ ಕೆಲಸ ಕಾರ್ಯಗಳಿಗೆ ಯಾವಾಗ ಸಮಯ ಸಿಗುವುದೋ ಆಗ ಮಾಡಿ ಮುಗಿಸಬೇಕು. ಇದೇ ಕಾರಣದಿಂದ ಇವತ್ತಿನ ಕಾಲದಲ್ಲಿ ಶಾಸ್ತ್ರ ಸಂಪ್ರದಾಯ ನಂಬಿಕೆಗಳಿಮಧ ಜನ ದೂರ ಹೋಗ್ತಾ ಇದ್ದಾರೆ. ಬೆಳಗ್ಗಿನ ಹೊತ್ತಿನಲ್ಲಿ ಬಟ್ಟೆ ಒಗೆಯೋದು ಆಗೋದಿಲ್ಲ ಎನ್ನುವ ಕಾರಣಕ್ಕೆ ರಾತ್ರಿ ಹೊತ್ತು ಬಟ್ಟೆ ಒಗೆಯುವವರು ತುಂಬಾ ಮಂದಿ ಇದ್ದಾರೆ. ಈಗಂತೂ ಎಲ್ಲರ ಮನೆಯಲ್ಲಿ ವಾಷಿಂಗ್‌ ಮೆಶಿನ್‌ ಇದೆ ಹಾಗಾಗಿ ಬೆಳಿಗ್ಗೆ ಮೆಶಿನ್‌ಗೆ ಬಟ್ಟೆ ಹಾಕಿದ್ದರೂ ರಾತ್ರಿ ಒಣಗಲು ಹಾಕಿ ಬಿಡುತ್ತಾರೆ. ಆದರೆ ರಾತ್ರಿ ಬಟ್ಟೆ ಒಗೆಯುವುದು,ಒಣಗಿಸುವುದು ಎರಡೂ ನಿಷಿದ್ಧ.

ಸುತ್ತುವುದು ನೆಗೆಟಿವ್‌ ಎನರ್ಜಿ

ಸೂರ್ಯಾಸ್ತದ ನಂತರ, ಸಕಾರಾತ್ಮಕ ಶಕ್ತಿ ಕಡಿಮೆಯಾಗುತ್ತದೆಯಂತೆ. ಸುತ್ತಲೂ ನೆಗೆಟಿವ್‌ ಎನರ್ಜಿಯೇ ಸುತ್ತುತ್ತಿರುತ್ತದೆಯಂತೆ. ಒಂದು ವೇಳೆ ರಾತ್ರಿ ಹೊತ್ತಿನಲ್ಲಿ ಬಟ್ಟೆಗಳನ್ನು ಒಗೆದು ಒಣಗಲು ಹಾಕಿದರೆ ಆ ಬಟ್ಟೆಗಳು ನೆಗೆಟಿವ್‌ ಎನರ್ಜಿಯನ್ನು ಹೀರಿಕೊಳ್ಳುತ್ತವೆಯಂತೆ. ಮರುದಿನ ನಾವು ಅದೇ ಬಟ್ಟೆ ಹಾಕಿಕೊಂಡಾಗ ಆ ನಕಾರಾತ್ಮಕ ಶಕ್ತಿ ನಮ್ಮ ಮೇಲೆ ಪರಿಣಾಮ ಬೀರುತ್ತದೆ. ಇದು ಖಿನ್ನತೆ, ಒತ್ತಡ ಮತ್ತು ಕಾರಣ ಇಲ್ಲದೆ ಹೆದರಿಕೆ ಆಗೋದು ಮುಂತಾದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ನಾವು ಮಾಡುವ ಕೆಲಸದಲ್ಲಿಯೂ ಅಡೆತಡೆ ಉಂಟುಮಾಡುತ್ತದೆ.

ಆರ್ಥಿಕ ತೊಂದರೆ

ರಾತ್ರಿ ಹೊತ್ತಿನಲ್ಲಿ ಬಟ್ಟೆ ಒಗೆಯುವುದರಿಂದ ಹಣದ ಸಮಸ್ಯೆಗಳು ಉಂಟಾಗಬಹುದು. ರಾತ್ರಿ ಬಟ್ಟೆ ಒಗೆಯುವುದರಿಂದ ಲಕ್ಷ್ಮಿ ದೇವಿಗೆ ಕೋಪ ಬರುತ್ತದೆಯಂತೆ. ಪ್ರತಿದಿನ ಹೀಗೆ ಮಾಡ್ತಾ ಇದ್ರೆ ಬಡತನ ವಕ್ಕರಿಸುತ್ತದೆಯಂತೆ. ಆರ್ಥಿಕ ನಷ್ಟ, ಸಾಲದ ಸಮಸ್ಯೆಗಳು ಮತ್ತು ಕೌಟುಂಬಿಕ ವಿವಾದಗಳನ್ನು ಹೆಚ್ಚಿಸುತ್ತದೆ ಅನ್ನೊದು ನಂಬಿಕೆ.

ಸೂರ್ಯನ ಬೆಳಕು ಮುಖ್ಯ

ಬಟ್ಟೆ ಒಣಗಿಸುವಲ್ಲಿ ಸೂರ್ಯನ ಬೆಳಕು ಬಹಳ ಮುಖ್ಯ. ಸೂರ್ಯನ UV ಕಿರಣಗಳು ಬಟ್ಟೆಗಳಲ್ಲಿರುವ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತವೆ. ನಾವು ರಾತ್ರಿ ಹೊತ್ತು ಬಟ್ಟೆಗಳನ್ನು ಒಣಗಿಸಿದಾಗ, ಸೂರ್ಯನ ಬೆಳಕು ಬಟ್ಟೆಗೆ ಸಿಗೋದಿಲ್ಲ. ಇದರಿಂದಾಗಿ ಬಟ್ಟೆಗಳಲ್ಲಿನ ನೀರಿನ ಅಂಶ ಹಾಗೆಯೇ ಉಳಿಯುತ್ತದೆ. ಇದರ ಜೊತೆಗೆ ರಾತ್ರಿ ಬೀಳುವ ಇಬ್ಬನಿಯಿಂದಾಗಿ ಬಟ್ಟೆಗಳು ಸರಿಯಾಗಿ ಒಣಗುವುದಿಲ್ಲ. ಇದು ಫಂಗಸ್‌ ಮತ್ತು ಬ್ಯಾಕ್ಟೀರಿಯಾಗಳು ಅವುಗಳ ಮೇಲೆ ಬೆಳೆಯಲು ಕಾರಣವಾಗುತ್ತದೆ. ನೆರಳಿನಲ್ಲಿ ಒಣಗಿಸಿದ ಬಟ್ಟೆ ಯಾವಾಗಲೂ ಒಂದು ರೀತಿಯ ವಾಸನೆ ಬೀರುತ್ತದೆ.ಅಂತಹ ಬಟ್ಟೆಗಳನ್ನು ಧರಿಸುವುದರಿಂದ ಅಲರ್ಜಿ, ತುರಿಕೆ ಮತ್ತು ಕೆಂಪು ದದ್ದು ಮುಂತಾದ ಚರ್ಮದ ಸಮಸ್ಯೆಗಳಿಗೆ ಕಾರಣವಾಗಬಹುದು.

ಮನೆಯಲ್ಲಿ ಬಟ್ಟೆಗಳನ್ನು ಒಣಗಿಸುವುದು

ಒಂದು ವೇಳೆ ರಾತ್ರಿಯೇ ಬಟ್ಟೆ ಒಗೆಯಬೇಕು ಬೇರೆ ದಾರಿಯೇ ಇಲ್ಲ ಎಂದಾದರೆ ಅದನ್ನು ಮನೆಯ ಹೊರಗೆ ಕತ್ತಲೆಯಲ್ಲಿ ಒಣಗಿಸಬೇಡಿ. ಫ್ಯಾನ್ ಗಾಳಿಯಲ್ಲಿ ಮನೆಯ ಒಳಗೆಯೇ ಒಣಗಲು ಹಾಕಿ. ಇದು ಯಾವುದೇ ವಾಸ್ತು ದೋಷಗಳಿಗೆ ಕಾರಣವಾಗುವುದಿಲ್ಲ. ಸ್ವಲ್ಪ ಮಟ್ಟಿಗೆ ಚರ್ಮದ ಸಮಸ್ಯೆ ಕೂಡಾ ಬಾರದಂತೆ ನೋಡಿಕೊಳ್ಳಬಹುದು. ಮಕ್ಕಳು ಅಥವಾ ವಯಸ್ಸಾದವರು ಮೊದಲೇ ಕಡಿಮೆ ರೋಗನಿರೋಧಕ ಶಕ್ತಿಯನ್ನು ಹೊಂದಿರುತ್ತಾರೆ. ಆದ್ದರಿಂದ ಅವರ ಬಟ್ಟೆಗಳನ್ನು ರಾತ್ರಿ ಹೊತ್ತು ಹೊರಗೆ ಒಣಗಿಸಲೇಬಾರದು.

ಇನ್ನೊಂದು ಮುಖ್ಯ ವಿಚಾರ ಎಂದರೆ, ವಾಷಿಂಗ್ ಮೆಷಿನ್‌ನಲ್ಲಿ ಒಗೆದ ಬಟ್ಟೆಗಳನ್ನು ತಕ್ಷಣ ಹೊರಗೆ ತೆಗೆಯಬೇಕು. ಒದ್ದೆ ಬಟ್ಟೆಗಳನ್ನು ರಾತ್ರಿಯಿಡೀ ಮೆಷಿನ್‌ ಒಳಗೆ ಬಿಟ್ಟರೆ ವಾಸ್ತು ದೋಷಗಳು ಉಂಟಾಗಬಹುದು. ಹಾಗಾಗಿ ಹಗಲಿನಲ್ಲಿ ಬಟ್ಟೆ ಒಗೆಯುವ ಅಭ್ಯಾಸವನ್ನು ಮಾಡಿಕೊಳ್ಳುವುದು ಒಳ್ಳೆಯದು. ಕುಟುಂಬದ ಸದಸ್ಯರ ಮಾನಸಿಕ ಶಾಂತಿ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಇದು ಪ್ರಯೋಜನಕಾರಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+