ಬೇಸಿಗೆಯಲ್ಲಿ ಖಾಲಿ ಹೊಟ್ಟೆಗೆ ಬೆಚ್ಚಗಿನ ನೀರು ಕುಡಿಯಬೇಕಾ, ಇಲ್ಲಿದೆ ಉತ್ತರ

ಬೇಸಿಗೆಯಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ನಮ್ಮ ದಿನಚರಿಯಲ್ಲಿ ಕೆಲವು ಮಹತ್ವದ ಬದಲಾವಣೆಳನ್ನು ಮಾಡಿಕೊಳ್ಳೂವುದು ಅಗತ್ಯವಾಗಿದೆ. ಅಂದರೆ ವಿಶೇಷವಾಗಿ ನೀರು ಕುಡಿಯುವ ಅಭ್ಯಾಸದ ಬಗ್ಗೆ ಹಲವರಿಗೆ ಒಂದೇ ಪ್ರಶ್ನೆ ಎದುರಾಗುತ್ತದೆ. ಬೇಸಿಗೆಯಲ್ಲೂ ಖಾಲಿ ಹೊಟ್ಟೆಗೆ ಬೆಚ್ಚಗಿನ ನೀರು ಕುಡಿಯಬೇಕಾ, ಅಥವಾ ತಣ್ಣೀರನ್ನು ಕುಡಿಯಬೇಕಾ? ಎಂದು ಹಲವರಲ್ಲಿ ಗೊಂದಲವಿದೆ.

ಈ ಪ್ರಶ್ನೆಗೆ ಸರಳ ಉತ್ತರ ಇಲ್ಲ. ನಮ್ಮ ಆರೋಗ್ಯ ಮತ್ತು ದೇಹದ ಅವಶ್ಯಕತೆಗಳನ್ನು ಮನದಲ್ಲಿಟ್ಟುಕೊಂಡು ಸರಿಯಾದ ವಿಧಾನವನ್ನು ನಾವು ಆಯ್ಕೆ ಮಾಡಿಕೊಳ್ಳುವುದು ಉತ್ತಮ.

Warm Water

ಬೇಸಿಗೆ ಕಾಲದಲ್ಲಿ ಬೆಚ್ಚಗಿನ ನೀರು ಬೇಕಾ?

ಸಾಮಾನ್ಯವಾಗಿ ಬಿಸಿ ನೀರು ಕುಡಿಯುವ ಅಭ್ಯಾಸವನ್ನು ಚಳಿಗಾಲದಲ್ಲಿ ನಾವು ಅನುಸರಿಸುತ್ತೇವೆ. ಆದರೆ ಕೆಲವರು ಬೇಸಿಗೆಯಲ್ಲೂ ಇದೆ ಅಭ್ಯಾಸವನ್ನು ಮುಂದುವರಿಸುತ್ತಾರೆ. ನಿಜ ಹೇಳಬೇಕೆಂದರೆ ಬೇಸಿಗೆಯಲ್ಲಿ ಬೆಚ್ಚಗಿನ ನೀರು ಕುಡಿಯುವುದು ಆರೋಗ್ಯಕ್ಕೆ ಹಾನಿಕಾರಕವಲ್ಲ. ಆದರೆ ಅದನ್ನು ಕಡ್ಡಾಯವಾಗಿ ಪಾಲಿಸಬೇಕೆಂಬುದಿಲ್ಲ.

ತಾಪಮಾನಕ್ಕಿಂತ ದೇಹದ ಹೈಡ್ರೇಷನ್ ಮುಖ್ಯ

ನೀವು ತಣ್ಣೀರಾಗಲಿ, ಸಾಮಾನ್ಯ ನೀರಾಗಲಿ ಅಥವಾ ಬೆಚ್ಚಗಿನ ನೀರಾಗಲಿ ಯಾವುದೆ ನೀರಾದರು ಮುಖ್ಯವಾಗಿ ಅದು ನಮ್ಮ ದೇಹಕ್ಕೆ ಸಾಕಾಗುವಷ್ಟು ನೀರು ದೊರೆಯುತ್ತದೆ.

ಬೇಸಿಗೆಯಲ್ಲಿ ಬೆವರಿನ ಮೂಲಕ ದೇಹದಿಂದ ಅತಿಯಾದ ತೇವಾಂಶ ಮತ್ತು ಲವಣಾಂಶಗಳು ಹೆಚ್ಚು ಹೊರಹೋಗುತ್ತವೆ.

ಡಿಹೈಡ್ರೇಷನ್ ಅಪಾಯ ಹೆಚ್ಚಾಗುತ್ತದೆ ಆದ್ದರಿಂದ ದಿನಪೂರ್ತಿ ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ಹೀಗಾಗಿ ನೀರಿನ ತಾಪಮಾನಕ್ಕಿಂತ ನೀರು ಕುಡಿಯುವ ಪ್ರಮಾಣವೇ ಮುಖ್ಯ.

ಮನೆಯಲ್ಲಿ ನೀರು ಉಳಿಸುವ ಸರಳ ಮತ್ತು ಪರಿಣಾಮಕಾರಿ ಮಾರ್ಗಗಳು
ಮನೆಯಲ್ಲಿ ನೀರು ಉಳಿಸುವ ಸರಳ ಮತ್ತು ಪರಿಣಾಮಕಾರಿ ಮಾರ್ಗಗಳು

ಬೆಳಗ್ಗೆ ಬೆಚ್ಚಗಿನ ನೀರು ಕುಡಿಯುವ ಲಾಭಗಳು:

ಜೀರ್ಣಕ್ರಿಯೆ ಸುಧಾರಣೆ

ಬೆಚ್ಚಗಿನ ನೀರು ಜೀರ್ಣಕ್ರಿಯೆಯನ್ನು ಚುರುಕುಗೊಳಿಸಿ ದೇಹದಲ್ಲಿನ ವಿಷಪದಾರ್ಥಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.

ಮೆಟಾಬಾಲಿಸಂ ಹೆಚ್ಚಳ

ಬೆಳಿಗ್ಗೆ ಒಂದು ಗ್ಲಾಸ್ ಬೆಚ್ಚಗಿನ ನೀರು ಕುಡಿಯುವುದರಿಂದ ದೇಹದ ಚಯಾಪಚಯ ಕ್ರಿಯೆ ಸಕ್ರಿಯವಾಗುತ್ತದೆ.

ಫ್ರಿಡ್ಜ್ ನೀರು vs ಮಣ್ಣಿನ ಮಡಕೆ: ಬೇಸಿಗೆಯಲ್ಲಿ ಯಾವುದು ಆರೋಗ್ಯಕರ?
ಫ್ರಿಡ್ಜ್ ನೀರು vs ಮಣ್ಣಿನ ಮಡಕೆ: ಬೇಸಿಗೆಯಲ್ಲಿ ಯಾವುದು ಆರೋಗ್ಯಕರ?

ಮಲಬದ್ಧತೆಗೆ ಪರಿಹಾರ

ಮಲಬದ್ಧತೆ ಸಮಸ್ಯೆಯಿಂದ ಬಳಲುವವರಿಗೆ ಬೆಚ್ಚಗಿನ ನೀರು ನೆರವಾಗಬಹುದು.

ಬೇಸಿಗೆಯಲ್ಲಿ ಗಮನಿಸಬೇಕಾದ ಅಂಶಗಳು:

ಬೇಸಿಗೆಯಲ್ಲಿ ದೇಹಕ್ಕೆ ಹೆಚ್ಚಾಗಿ ತಣ್ಣನೆಯ ನೀರಿನ ಅಗತ್ಯ ಅನಿಸುತ್ತದೆ. ತುಂಬಾ ಬಿಸಿ ನೀರು ಕುಡಿಯುವುದು ಅನಾನುಕೂಲ ಉಂಟುಮಾಡಬಹುದು. ದೇಹದಲ್ಲಿ ತಾಪಮಾನ ಹೆಚ್ಚಾಗುವ ಸಮಯದಲ್ಲಿ ಬೆಚ್ಚಗಿನ ಪಾನೀಯಗಳು ಇಷ್ಟವಾಗದೇ ಇರಬಹುದು. ಹಾಗಾಗಿ ನಿಮ್ಮ ದೇಹದ ಅಗತ್ಯಕ್ಕೆ ತಕ್ಕಂತೆ ನಾವು ನಿರ್ಧಾರ ತೆಗೆದುಕಳ್ಳೊವುದು ಮುಖ್ಯ.

ಬೇಸಿಗೆಯಲ್ಲಿ ಸರಿಯಾದ ವಿಧಾನ ಯಾವುದು?

* ಬೆಳಗ್ಗೆ ಬೆಚ್ಚಗಿನ ನೀರು ಕುಡಿಯಬಹುದು, ಅದು ನಿಮಗೆ ಸೂಕ್ತವಾದರೆ ಮಾತ್ರ.

* ದಿನದ ವೇಳೆ ತಣ್ಣೀರು ಅಥವಾ ಸಾಮಾನ್ಯ ನೀರನ್ನು ಕುಡಿಯಬಹುದು.

* ಯಾವಾಗಲೂ ದೇಹವನ್ನು ಹೈಡ್ರೇಟ್ ಆಗಿರಿಸುವುದು ಮುಖ್ಯ

ಹೆಚ್ಚುವರಿ ಸಲಹೆಗಳು

ದಿನಕ್ಕೆ ಕನಿಷ್ಠ 7-8 ಗ್ಲಾಸ್ ನೀರು ಕುಡಿಯಿರಿ

ಎಳನೀರು, ಹಣ್ಣು ರಸಗಳನ್ನು ಸೇವಿಸಿ

ಹೆಚ್ಚು ಕಾಫೀನ್ ಮತ್ತು ಸಕ್ಕರೆ ಇರುವ ಪಾನೀಯಗಳನ್ನು ಕಡಿಮೆ ಮಾಡಿ

ನೀರಿನ ಅಂಶ ಹೆಚ್ಚು ಇರುವ ಹಣ್ಣುಗಳು - ಕಲ್ಲಂಗಡಿ, ಸೌತೆಕಾಯಿ, ಕಿತ್ತಳೆಗಳನ್ನು ಸೇವಿಸಿ

ಒಟ್ಟಾರೆ ಹೇಳುವುದಾದರೆ

ಬೇಸಿಗೆಯಲ್ಲಿ ಖಾಲಿ ಹೊಟ್ಟೆಗೆ ಬೆಚ್ಚಗಿನ ನೀರು ಕುಡಿಯುವುದು ಹಾನಿಕಾರಕವಲ್ಲ. ಕೆಲವು ಆರೋಗ್ಯ ಲಾಭಗಳೂ ಇವೆ. ಆದರೆ ನೀರಿನ ತಾಪಮಾನಕ್ಕಿಂತ ದೇಹಕ್ಕೆ ಬೇಕಾದಷ್ಟು ನೀರು ಕುಡಿಯುವುದೇ ಮುಖ್ಯ. ದೇಹದ ಅಗತ್ಯಕ್ಕೆ ತಕ್ಕಂತೆ ನೀರಿನ ಆಯ್ಕೆಯನ್ನು ಮಾಡಿಕೊಳ್ಳುವುದು ಉತ್ತಮ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+