ಟಾಯ್ಲೆಟ್ ಕ್ಲೀನ್ ಮಾಡುವಾಗ ಇದೊಂದನ್ನು ಬಳಸಿ, ಫಳ ಫಳ ಹೊಳೆಯುತ್ತೆ ಟ್ರೈ ಮಾಡಿ

ಮಾನವನ ಮಲಮೂತ್ರ ವಿಸರ್ಜನೆ ಮತ್ತು ವೈಯಕ್ತಿಕ ಸ್ವಚ್ಛತೆಗಾಗಿ ಬಳಸುವ ಅತ್ಯಗತ್ಯವಾದ ನೈರ್ಮಲ್ಯ ಸೌಲಭ್ಯವೇ ಶೌಚಾಲಯ. ಇದು ನಮ್ಮ ಜೀವನದಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ.ಆರೋಗ್ಯ ಮತ್ತು ಪರಿಸರ ನೈರ್ಮಲ್ಯವನ್ನು ಕಾಪಾಡುವ ಉದ್ದೇಶದಿಂದ ಬಳಸುವ ಶೌಚಾಲಯವನ್ನು ಶುಚಿಯಾಗಿಡುವುದು ಅಗತ್ಯ. ಸಾಮಾನ್ಯವಾಗಿ ಎಲ್ಲರೂ ಶೌಚಾಲಯವನ್ನು ತೊಳೆದು ಸ್ವಚ್ಛ ಮಾಡುತ್ತಾರೆ. ಹೀಗೆ ಸ್ವಚ್ಛ ಮಾಡುವಾಗ ಕಮೋಡ್‌, ಶೌಚಕ್ಕೆ ಕುಳಿತುಕೊಳ್ಳುವ ಸೀಟನ್ನು ಶುಚಿಗೊಳಿಸುತ್ತೇವೆ. ಇಷ್ಟಾದರೆ ಶೌಚಾಲಯ ನಿಜಕ್ಕೂ ಶುಚಿಯಾಯಿತೇ? ಖಂಡಿತಾ ಇಲ್ಲ. ನಿಮ್ಮ ಕಮೋಡ್‌ನ ಕೆಳಭಾಗವನ್ನು, ಅಂದರೆ ಕಮೋಡ್‌ ಟೈಲ್ ಅನ್ನು ಸ್ಪರ್ಶಿಸುವ ಪಿಂಗಾಣಿ ಪಟ್ಟಿಯನ್ನು ಸರಿಯಾಗಿ ಸ್ವಚ್ಛ ಮಾಡದೇ ಹೋದರೆ ಅತ್ಯಂತ ಕೊಳಕು ಭಾಗ ಸ್ವಚ್ಛವಾಗದೆ ಉಳಿಯುತ್ತದೆ.

ಕಮೋಡ್‌ನ ಕೆಳಭಾಗವು ಅಂದುಕೊಂಡಿರುವುದಕ್ಕಿಂತ ಹೆಚ್ಚು ಅಪಾಯಕಾರಿ:

ಹೆಚ್ಚಿನ ಜನರು ಶೌಚಾಲಯದ ತಳಭಾಗದ ಸುತ್ತಲೂ ಸ್ವಚ್ಛಗೊಳಿಸಲು ವಾಸನೆ ಬರುವವರೆಗೆ ಕಾಯುತ್ತಾರೆ. ಟೈಲ್ಸ್‌ಗಳ ಮಧ್ಯೆ ಇರುವ ಗ್ರೌಟ್ ರೇಖೆಗಳು, ನೆಲದ ಸ್ತರಗಳು ಮತ್ತು ಫಿಕ್ಸ್ಚರ್‌ನ ಹಿಂದಿನ ಸಣ್ಣ ಜಾಗದಲ್ಲಿ ಬ್ಯಾಕ್ಟೀರಿಯಾಗಳು ವಾರಗಟ್ಟಲೆ ಸಂಗ್ರಹವಾಗುತ್ತಿರುತ್ತವೆ.

Want a Sparkling Clean Toilet

ಜರ್ನಲ್ ಆಫ್ ಅಪ್ಲೈಡ್ ಮೈಕ್ರೋಬಯಾಲಜಿಯಲ್ಲಿ ನಡೆದ ಪೀರ್-ರಿವ್ಯೂಡ್ ಅಧ್ಯಯನದ ಪ್ರಕಾರ, ಶೌಚಾಲಯದ ಮೇಲ್ಮೈಗಳಲ್ಲಿರುವ ಬ್ಯಾಕ್ಟೀರಿಯಾಗಳು ಸ್ನಾನಗೃಹದ ನೆಲ, ಸಿಂಕ್ ನಲ್ಲಿಗಳು ಮತ್ತು ಕೌಂಟರ್‌ಟಾಪ್‌ಗಳಲ್ಲಿಯೂ ಕಂಡುಬರುತ್ತವೆ. ಇವು ಸ್ವಚ್ಛಗೊಳಿಸುವ ಉಪಕರಣಗಳು ಮತ್ತು ದೈನಂದಿನ ಸಂಪರ್ಕದ ಮೂಲಕ ಹರಡುತ್ತವೆ. ಇದು ಕೋಣೆಯಾದ್ಯಂತ ನಿಧಾನವಾಗಿ ಹರಡುತ್ತದೆ.

ನಮ್ಮಲ್ಲಿ ಹೆಚ್ಚಿನವರು ಸುವಾಸನೆ ಬೀರುವ ಟಾಯ್ಲೆಟ್ ಕ್ಲೀನರ್‌ಗಳನ್ನು ಬಳಸಿ ಶೌಚಾಲಯ ಶುಚಿಗೊಳಿಸುತ್ತಾರೆ. ಆದರೆ ಇದು ಬ್ಯಾಕ್ಟೀರಿಯಾಗಳನ್ನು ಕೊಲ್ಲುವಲ್ಲಿ ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿದೆ ಎನ್ನುವುದು ಯಾರಿಗೂ ತಿಳಿದಿರುವುದಿಲ್ಲ.

ಅಡುಗೆ ಮನೆ ಸಿಂಕ್‌ ಬಳಿ ನೀವು ಮಾಡುವ ಈ ತಪ್ಪುಗಳಿಂದಲೇ ಮನೆಯಲ್ಲಿ ಜಿರಳೆ, ಇರುವೆ ಓಡಾಡುವುದು
ಅಡುಗೆ ಮನೆ ಸಿಂಕ್‌ ಬಳಿ ನೀವು ಮಾಡುವ ಈ ತಪ್ಪುಗಳಿಂದಲೇ ಮನೆಯಲ್ಲಿ ಜಿರಳೆ, ಇರುವೆ ಓಡಾಡುವುದು

ಬಿಳಿ ವಿನೆಗರ್ ಹೇಗೆ ಸಹಾಯಕ:

ವಿನೆಗರ್ 5 ಪ್ರತಿಶತ ಅಸಿಟಿಕ್ ಆಮ್ಲದ ದ್ರಾವಣವಾಗಿದೆ. ಇದು ಸೋಂಕುನಿವಾರಕವಾಗಿ ಕೆಲಸ ಮಾಡುತ್ತದೆ. ಇದು ಶೌಚಾಲಯ ವಾಸನೆ ಬಾರದಂತೆ ತಡೆಯುತ್ತದೆ. ಖನಿಜ ಸಂಗ್ರಹ ಮತ್ತು ಗಟ್ಟಿಯಾದ ನೀರಿನ ಕಲೆಗಳನ್ನು ಒಡೆಯುತ್ತದೆ. ಗ್ರೌಟ್ ಲೈನ್‌ಗಳಂತಹ ತಲುಪಲು ಕಷ್ಟವಾಗುವ ಸ್ಥಳಗಳಲ್ಲಿ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ.

ಜರ್ನಲ್ ಆಫ್ ಕ್ಲಿನಿಕಲ್ & ಮೆಡಿಸಿನ್ ಇಮೇಜಸ್ ಕೇಸ್ ರಿಪೋರ್ಟ್‌ನಲ್ಲಿ ಪ್ರಕಟವಾದ ಮತ್ತೊಂದು ಅಧ್ಯಯನವು, ಪೂರ್ಣ-ಶಕ್ತಿಯ ವಿನೆಗರ್ ಮನೆಯ ಮೇಲ್ಮೈಗಳಲ್ಲಿ ಬಹು ಬ್ಯಾಕ್ಟೀರಿಯಾದ ತಳಿಗಳ ವಿರುದ್ಧ ಹೋರಾಡುವಲ್ಲಿ ಬಲವಾದ ಸೋಂಕುನಿವಾರಕ ಗುಣಗಳನ್ನು ಹೊಂದಿದೆ ಎಂದು ಹೇಳಿದೆ. ಕೆಲವು ಸಂದರ್ಭಗಳಲ್ಲಿ, ಸೆರಾಮಿಕ್ ಟೈಲ್‌ಗಳ ಮೇಲಿ ಬ್ಲೀಚ್ ಆಧಾರಿತ ಕ್ಲೀನರ್‌ಗಳಿಗೆ ಹೋಲಿಸಬಹುದು. ಬೇರೆ ಬಾತ್‌ ರೂಮ್‌ ಕ್ಲೀನರ್‌ ಮತ್ತು ಟಾಯ್ಲೆಟ್ ಕ್ಲೀನರ್‌ಗಳಿಗೆ ಹೋಲಿಸಿದರೆ ಇದು ಹೆಚ್ಚು ಪರಿಣಾಮಕಾರಿಯಾಗಿದೆ ಮಾತ್ರವಲ್ಲ, ಅಗ್ಗವೂ ಹೌದು.

ಜಿರಳೆಗಳ ಕಾಟದಿಂದ ಬೇಸತ್ತಿದ್ದೀರಾ? ಈ ನೈಸರ್ಗಿಕ ವಿಧಾನಗಳಿಂದ ಜಿರಳೆಗಳನ್ನು ಸುಲಭವಾಗಿ ಓಡಿಸಬಹುದು
ಜಿರಳೆಗಳ ಕಾಟದಿಂದ ಬೇಸತ್ತಿದ್ದೀರಾ? ಈ ನೈಸರ್ಗಿಕ ವಿಧಾನಗಳಿಂದ ಜಿರಳೆಗಳನ್ನು ಸುಲಭವಾಗಿ ಓಡಿಸಬಹುದು

ವಿನೆಗರ್‌ ಬಳುವುದು ಹೇಗೆ?:

ಕಮೋಡ್‌ ಬುಡದ ಸುತ್ತಲೂ, ನೆಲದ ಮೇಲೆ ಮತ್ತು ಅದರ ಹಿಂದೆ ಬಿಳಿ ವಿನೆಗರ್ ಸಿಂಪಡಿಸಿ. 10 ರಿಂದ 15 ನಿಮಿಷಗಳ ಕಾಲ ಹಾಗೆಯೇ ಬಿಡಿ. ಒದ್ದೆಯಾದ ಬಟ್ಟೆ ಅಥವಾ ಪೇಪರ್ ಟವೆಲ್‌ನಿಂದ ಅದನ್ನು ಒರೆಸಿ. ಇಷ್ಟಾದ ಮೇಲೂ ಗ್ರೌಟ್ ಲೈನ್‌ಗಳ ಮೇಲೆ ಕಲೆ ಗಮನಿಸಿದರೆ, ಬ್ರಷ್‌ನಿಂದ ಸ್ಕ್ರಬ್ ಮಾಡಿ. ಶೌಚಾಲಯ ಫಳ ಫಳನೆ ಹೊಳೆಯುತ್ತದೆ. ವಾರಕ್ಕೆ ಎರಡರಿಂದ ಮೂರು ಬಾರಿ ಹೀಗೆ ಮಾಡುವುದರಿಂದ ನಿಮ್ಮ ಶೌಚಾಲಯ ವಾಸನೆ ಬರುವುದೇ ಇಲ್ಲ.

ಹೆಚ್ಚಿನ ಮೇಲ್ಮೈ ಸೋಂಕುನಿವಾರಕಗಳಿಗೆ ಸೂಕ್ಷ್ಮಜೀವಿಗಳನ್ನು ಕೊಲ್ಲಲು ಕೆಲವು ನಿಮಿಷಗಳ ಸಂಪರ್ಕ ಸಮಯ ಬೇಕಾಗುತ್ತದೆ. ಸಿಂಪಡಿಸಿ ತಕ್ಷಣ ಒರೆಸುವುದರಿಂದ ಬ್ಯಾಕ್ಟೀರಿಯಾ ಒದ್ದೆಯಾದ ಮೇಲ್ಮೈಯಲ್ಲಿ ಚಲಿಸುವಂತೆ ಮಾಡುತ್ತದೆ. ಹಾಗಾಗಿ ಇದನ್ನು ಟಾಯ್ಲೆಟ್ ಬೌಲ್ ಮೇಲೆ ಸಿಂಪಡಿಸಿ ಸ್ಕ್ರಬ್ ಮಾಡಿ ಐದು ನಿಮಿಷಗಳ ಕಾಲ ಕುಳಿತುಕೊಳ್ಳಲು ಬಿಡಿ, ನಂತರ ಫ್ಲಶ್ ಮಾಡಬೇಕು. ಬೌಲ್‌ನ ಹೊರಭಾಗ ಮತ್ತು ಟ್ಯಾಂಕ್ ಬದಿಗಳಿಗೂ ವಿನೆಗರ್‌ ಸ್ಪ್ರೇಯನ್ನು ಸಿಂಪಡಿಸಬೇಕು.ಇಲ್ಲಿಯೂ ಈ ಸ್ಪ್ರೇ 10 ನಿಮಿಷಗಳ ಕಾಲ ಕುಳಿತುಕೊಳ್ಳಲು ಬಿಡಬೇಕು ನಂತರ ಒರೆಸಬೇಕು. ಮುಚ್ಚಳ ಮತ್ತು ಆಸನದ ಎರಡೂ ಬದಿಗಳಿಗೂ ಇದೇ ರೀತಿ ಮಾಡಬೇಕು.

ಫ್ಲಶ್ ಹ್ಯಾಂಡಲ್ ಹೆಚ್ಚು ಸ್ಪರ್ಶಿಸಲ್ಪಡುವ ಮೇಲ್ಮೈಗಳಲ್ಲಿ ಒಂದಾಗಿದೆ. ಹಾಗಾಗಿ ಇದನ್ನು ಶುಚಿಗೊಳಿಸುವುದು ಕೂಡಾ ಬಹಳ ಮುಖ್ಯ.

ಗಟ್ಟಿಯಾದ ನೀರಿನ ಕಲೆಗಳಿಗೆ ಒಂದು ಟ್ರಿಕ್:

ವಿನೆಗರ್ ಬಳಸುವ ಮೂಲಕ ನಿಮ್ಮ ಟಾಯ್ಲೆಟ್ ಬೌಲ್‌ನಲ್ಲಿರುವ ಮೊಂಡುತನದ ಹಳದಿ ರಿಂಗ್‌ ಅನ್ನು ಕೂಡಾ ಹೋಗಲಾಡಿಸಬಹುದು.

ಸಾಕಷ್ಟು ಪ್ರಮಾಣದಲ್ಲಿ ಬಿಳಿ ವಿನೆಗರ್ ಅನ್ನು ಹಾಕಿ ರಾತ್ರಿಯಿಡೀ ಬಿಡಿ. ಬೆಳಿಗ್ಗೆ, ಒಂದು ಕಪ್ ಅಡಿಗೆ ಸೋಡಾವನ್ನು ಸೇರಿಸಿ.

ಫಿಜಿಂಗ್ ಪ್ರತಿಕ್ರಿಯೆಯು ಖನಿಜ ನಿಕ್ಷೇಪಗಳನ್ನು ಒಡೆಯಲು ಸಹಾಯ ಮಾಡುತ್ತದೆ. ಹಾಗಾಗಿ ಸ್ಕ್ರಬ್ ಮಾಡಿ, ತೊಳೆಯಿರಿ.

ಅಗತ್ಯವಿದ್ದರೆ ಮತ್ತೊಮ್ಮೆ ಪುನರಾವರ್ತಿಸಿ. ಇದು ಕಠಿಣ ರಾಸಾಯನಿಕ ಕ್ಲೀನರ್‌ಗಿಂತ ನಿಧಾನವಾಗಿರುತ್ತದೆ. ಆದರೆ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಟಾಯ್ಲೆಟ್‌ ಹಾಳಾಗದಂತೆ ತಡೆಯುತ್ತದೆ.

ಶೌಚಾಲಯವನ್ನು ಎಷ್ಟು ಬಾರಿ ಸ್ವಚ್ಛಗೊಳಿಸಬೇಕು?:

ಶೀತ ಮತ್ತು ಜ್ವರ ಕಾಲದಲ್ಲಿ, ಅಥವಾ ನಿಮ್ಮ ಮನೆಯಲ್ಲಿ ಯಾರಾದರೂ ಅನಾರೋಗ್ಯದಿಂದ ಬಳಲುತ್ತಿದ್ದರೆ, ಪ್ರತಿ ಎರಡರಿಂದ ಮೂರು ದಿನಗಳಿಗೊಮ್ಮೆ ಸಂಪೂರ್ಣ ಸೋಂಕುನಿವಾರಕ ಶುಚಿಗೊಳಿಸುವಿಕೆ ಅಗತ್ಯವಾಗಿದೆ. ಇಲ್ಲವಾದರೆ ವಾರಕ್ಕೊಮ್ಮೆ ಮಾತ್ರ ಸ್ವಚ್ಛಗೊಳಿಸಿದರೂ ಸಾಕಾಗುತ್ತದೆ.

ಇನ್ನು ಟಾಯ್ಲೆಟ್ ಬ್ರಷ್ ಅನ್ನು ಮುಚ್ಚಿದ ಪಾತ್ರೆಯಲ್ಲಿ ಒದ್ದೆಯಾಗಿಟ್ಟರೆ, ಅದು ಸ್ವತಃ ಮಾಲಿನ್ಯದ ಮೂಲವಾಗಬಹುದು. ಪ್ರತಿ ಬಳಕೆಯ ನಂತರ ಸೋಂಕುನಿವಾರಕವನ್ನು ಸಿಂಪಡಿಸಿ, ಬ್ರೆಷ್‌ ಎನ್ನು ಸರಿಯಾಗಿ ಒಳಗಲು ಬಿಡಿ. ಇದು ದೊಡ್ಡ ಪರಿಣಾಮವನ್ನು ಬೀರುವ ಸಣ್ಣ ಬದಲಾವಣೆಯಾಗಿದೆ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+