Amruthadhaare Serial: ಭೂಮಿಕಾ - ಗೌತಮ್‌ಗೆ ಮಿಂಚು ಕೈ ತಪ್ಪುವ ಆತಂಕ, ಜೈದೇವ್‌ಗೆ ಬೇಬಿ ಹೊಸ ಶಾಕ್

Amruthadhaare Serial: ಅಮೃತಧಾರೆ ಸೀರಿಯಲ್ ರೋಚಕಘಟ್ಟವನ್ನು ತಲುಪಿದೆ. ಇತ್ತೀಚಿನ ಎಪಿಸೋಡ್‌ಗಳಲ್ಲಿ ಕಥೆ ಹಲವು ತಿರುವು ಪಡೆದುಕೊಂಡಿದೆ. ಆದರೆ ಹೊಸ ತಿರುವುಗಳಿಗೆ ಪ್ರೇಕ್ಷಕರು ನೋ ಎಂದಿದ್ದಾರೆ. ಅಮೃತಧಾರೆ ಸೀರಿಯಲ್‌ನಲ್ಲಿ ಮಿಂಚು, ಭೂಮಿಕಾ ಹಾಗೂ ಗೌತಮ್ ದಿವಾನ್ ಅವರ ಮಗಳು ಎನ್ನುವ ವಿಷಯ ಇನ್ನೇನು ರಿವೀಲ್ ಆಗಬೇಕು ಎನ್ನುವಾಗಲೇ ಕೇಡಿ ಜೈದೇವ್ ಎಂಟ್ರಿಯಾಗಿತ್ತು. ಈ ವಿಷಯವು ಇದೀಗ ಮತ್ತೊಂದು ಹೊಸ ತಿರುವು ಪಡೆದುಕೊಂಡಿದೆ. ಅಲ್ಲದೆ ಇದೇ ಟೈಮ್‌ನಲ್ಲಿಯೇ ಕೇಡಿ ಜೈದೇವ್‌ಗೆ ಬೇಬಿ ಶಾಕ್ ಕೊಟ್ಟಿದ್ದಾಳೆ. ಮತ್ತೊಬ್ಬ ಹುಡುಗನನ್ನು ಪ್ರೀತಿಸುತ್ತಿರುವುದಾಗಿ ಬೇಬಿ ಹೇಳಿದ್ದಾಳೆ. ಇದಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಕರ್ಮ ರಿಟರ್ನ್ಸ್ ಅಂದರೆ ಇದೇ ಅನ್ಸುತ್ತೆ ಸರಿಯಾಗಿ ಆಗಿದೆ ಅಂತಿದ್ದಾರೆ. ಆದರೆ ಮತ್ತೊಂದು ಕಡೆ ಮಹಿಮಾಗೆ ಮಿಂಚುವನ್ನು ದತ್ತು ನೀಡಬೇಕು ಎನ್ನುವ ಮನೆಯವರ ಬೇಡಿಕೆ ಗೌತಮ್ ಮತ್ತು ಭೂಮಿಕಾ ಅವರನ್ನು ಸಂಕಷ್ಟಕ್ಕೆ ದೂಡಿದೆ. ಈ ತಿರುವು ಪ್ರೇಕ್ಷಕರಿಗೂ ಖುಷಿ ಕೊಟ್ಟಿಲ್ಲ. ಮಿಂಚುವೇ ಗೌತಮ್ - ಭೂಮಿಕಾ ಮಗಳು ಎನ್ನುವ ವಿಷಯ ರಿವೀಲ್ ಮಾಡಬೇಕು ಎನ್ನುವುದು ಪ್ರೇಕ್ಷಕರ ಆಸೆಯಾಗಿತ್ತು.

ಕೇಡಿ ಜೈದೇವ್‌ಗೆ ಮತ್ತೊಂದು ಶಾಕ್ ಕೊಟ್ಟ ಬೇಬಿ

ಇನ್ನು ಕೇಡಿ ಜೈದೇವ್‌ಗೆ ಬೇಬಿ ಹೊಸ ಶಾಕ್ ಕೊಟ್ಟಿದ್ದಾಳೆ. ಬೇಬಿ ಹೊಸ ಬಾಯ್ ಫ್ರೆಂಡ್ ಮಾಡಿಕೊಂಡಿದ್ದಾಳೆ. ಜೈ ಇದು ಗೋಕುಲ್ ನನ್ನ ಬಾಯ್‌ಫ್ರೆಂಡ್ ಅಂತ ಪರಿಚಯ ಮಾಡಿಕೊಟ್ಟಿದ್ದಾಳೆ. ಗೋಕುಲ್ ಇವರೇ ಜೈ ನಾನು ಹೇಳುತ್ತಿದ್ನಲ್ಲ ಅಂತ ಪರಿಚಯ ಮಾಡ್ಸಿದ್ದಾಳೆ. ಗೋಕುಲ್ ನನಗೆ ತುಂಬಾ ತಿಂಗಳುಗಳಿಂದ ಪರಿಚಯ, ನಾವಿಬ್ಬರು ಮದುವೆ ಆಗಬೇಕು ಅಂತ ಅಂದುಕೊಂಡಿದ್ದೇವೆ ಅಂತ ಹೇಳಿದ್ದಾಳೆ ಇದನ್ನು ಕೇಳಿ ಜೈದೇವ್ ಶಾಕ್‌ಗೆ ಒಳಗಾಗಿದ್ದಾನೆ. ನಿನ್ನಿಂದ ನಾನು ತುಂಬಾ ದೂರ ಹೋಗುತ್ತಿದ್ದೇನೆ. ಇಬ್ಬರೂ ನೆಮ್ಮದಿಯಾಗಿ ಇರಬಹುದು ಅಂತ ಬೇಬಿ ಹೇಳಿದ್ದಾಳೆ. ನಾನು ಹೋಗುವುದಕ್ಕಿಂತ ಮುಂಚೆ ನಿನಗೆ ಏನು ಬೇಕೋ ಅದನ್ನು ಮಾಡಿಕೊಟ್ಟು ಹೋಗುತ್ತೇನೆ ಅಂತಲೂ ಹೇಳಿದ್ದಾಳೆ.

Amruthadhaare Serial

ಗೌತಮ್ ದಿವಾನ್ ಕಣ್ಣೀರು

ಮಹಿಮಾಗೆ ಗರ್ಭಪಾತವಾಗಿದ್ದು, ಆ ನೋವಿನಲ್ಲಿದ್ದಾಳೆ. ಈ ವಿಷಯವನ್ನು ಕೇಳಿ ಗೌತಮ್ ಹಾಗೂ ಭೂಮಿಕಾ ಸಹ ಶಾಕ್‌ಗೆ ಒಳಗಾಗಿದ್ದಾರೆ. ವಿಷಯ ಕೇಳಿ ಗೌತಮ್ ಕಣ್ಣೀರು ಹಾಕಿದ್ದಾನೆ. ಎಲ್ಲರೂ ನೋವಿನಲ್ಲಿ ಇರುವುದರಿಂದ ಎಲ್ಲರೂ ಸೇರಿ ಊಟ ಮಾಡೋಣ ಅಂತ ಗೌತಮ್ ಹೇಳಿದ್ದಾನೆ. ಮಹಿಮಾಗೆ ಧೈರ್ಯ ತುಂಬುವಂತೆ ಆಗುತ್ತೆ ಎನ್ನುವುದು ಗೌತಮ್ ಲೆಕ್ಕಾಚಾರವಾಗಿದೆ. ಮಹಿಮಾ ಎಲ್ಲರ ಮುಂದೆಯೂ ನೋವು ತೋಡಿಕೊಂಡಿದ್ದಾಳೆ. ಕೆಲವು ಸಲ ಜೀವನ ನಮ್ಮನ್ನು ನಮ್ಮ ಕನಸಿನ ತುಂಬಾ ಹತ್ತಿರಕ್ಕೆ ಕರೆದುಕೊಂಡು ಹೋಗುತ್ತೆ. ಏಕಾಏಕಿ ಮಧ್ಯದಲ್ಲಿ ಕೈ ಬಿಟ್ಟು ಬಿಡುತ್ತದೆ. ಇದು ನಮ್ಮ ತಪ್ಪಲ್ಲ. ಇರುವುದನ್ನು ಇರುವಂತೆ ಒಪ್ಪಿಕೊಂಡು, ನಂಬಿಕೆಯಿಂದ ಮುಂದಕ್ಕೆ ಹೋಗುತ್ತಿರಬೇಕು ಅಂತ ಧೈರ್ಯ ತುಂಬಿದ್ದಾನೆ.

Amruthadhare Serial: ಅಮೃತಧಾರೆ ಸೀರಿಯಲ್‌ನಲ್ಲಿ ಹೊಸ ತಿರುವು: ಹೊಸ ವಿಲನ್ ಎಂಟ್ರಿ, ಅಖಿಲಾಂಡೇಶ್ವರಿ ಸಿಹಿ ಮಾತು ತಲುಪುತ್ತಾ
Amruthadhare Serial: ಅಮೃತಧಾರೆ ಸೀರಿಯಲ್‌ನಲ್ಲಿ ಹೊಸ ತಿರುವು: ಹೊಸ ವಿಲನ್ ಎಂಟ್ರಿ, ಅಖಿಲಾಂಡೇಶ್ವರಿ ಸಿಹಿ ಮಾತು ತಲುಪುತ್ತಾ

ಮಿಂಚು ದತ್ತು ಕೊಡುವ ವಿಚಾರಕ್ಕೆ ಪ್ರೇಕ್ಷಕರು ಬೇಸರ

ಇನ್ನು ಮಹಿಮಾಗೆ ಮಿಂಚುಳನ್ನು ದತ್ತು ಕೊಡಬೇಕು ಎನ್ನುವ ಪ್ರಸ್ತಾವನೆಯನ್ನು ಮನೆಯವರು ಭೂಮಿಕಾ ಮತ್ತು ಗೌತಮ್ ಮುಂದೆ ಇರಿಸಿದ್ದು, ಇದಕ್ಕೆ ಪ್ರೇಕ್ಷಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಹಿಮಾ ದುಃಖದಲ್ಲಿ ಇರುವಾಗ ಮಿಂಚು ಬಂದು ಅತ್ತೆ, ಯಾಕೆ ಅಳ್ತಾ ಇದ್ದಿರಾ... ನಿಮಗೆ ಮಕ್ಕಳು ಅಂತ ನಾವಿಲ್ವಾ ಅಂತ ಕೇಳಿದ್ದಾಳೆ. ಇದಾದ ಮೇಲೆ ಮಿಂಚು ದತ್ತು ಕೊಡುವ ವಿಷಯ ಚರ್ಚೆಯಾಗಿದೆ. ಆದರೆ ಇದು ಪ್ರೇಕ್ಷಕರಲ್ಲಿ ಬೇಸರ ಮೂಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+