Toxic: ಟಾಕ್ಸಿಕ್ ಚಿತ್ರದ 'ತಬಾಹಿ' ಹಾಡಿನಲ್ಲಿ ಕಥೆ ಲೀಕ್; ಲೇಡಿ ಸೂಪರ್‌ಸ್ಟಾರ್ ನಯನತಾರಾ ಎಂಟ್ರಿ ನೋಡಿ ಫ್ಯಾನ್ಸ್ ಶಾಕ್

ಸ್ಯಾಂಡಲ್‌ವುಡ್ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಕುತೂಹಲ ಮೂಡಿಸಿರುವ, ರಾಕಿಂಗ್ ಸ್ಟಾರ್ ಯಶ್ (Yash) ಮುಖ್ಯಭೂಮಿಕೆಯಲ್ಲಿರುವ 'ಟಾಕ್ಸಿಕ್' (Toxic - A Fairy Tale for Grown-Ups) ಸಿನಿಮಾದ ಮೊದಲ ವಿಡಿಯೋ ಸಾಂಗ್ ಲಾಂಚ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಿದೆ. 'ತಬಾಹಿ' (Tabaahi) ಹೆಸರಿನ ಈ ಹಾಡಿನಲ್ಲಿ ಯಶ್ ಹಾಗೂ ಬಾಲಿವುಡ್ ಬ್ಯೂಟಿ ಕಿಯಾರಾ ಅಡ್ವಾಣಿ (Kiara Advani) ಅವರ ಕೆಮಿಸ್ಟ್ರಿ ನೆಟ್ಟಿಗರ ನಿದ್ದೆಕೆಡಿಸಿದೆ. ಹಾಡಿನುದ್ದಕ್ಕೂ ಯಶ್ ಮತ್ತು ಕಿಯಾರಾ ಅವರ ಬೋಲ್ಡ್ ಹಾಗೂ ರೊಮ್ಯಾಂಟಿಕ್ ದೃಶ್ಯಗಳೇ ತುಂಬಿದ್ದು, ಇಬ್ಬರ ಮಿತಿಮೀರಿದ ರೊಮ್ಯಾನ್ಸ್ ನೋಡಿ ರಾಕಿ ಭಾಯ್ ಅಭಿಮಾನಿಗಳು ಫಿದಾ ಆಗಿದ್ದಾರೆ.

ಹಾಡಿನಲ್ಲಿ ಕಥೆ ರಿವೀಲ್

ಈ ಹಿಂದೆ ಬಿಡುಗಡೆಯಾಗಿದ್ದ ಟಾಕ್ಸಿಕ್ ಸಿನಿಮಾದ ಟೀಸರ್‌ನಲ್ಲೇ ಯಶ್ ಅವರ ಬೋಲ್ಡ್ ಲುಕ್ ಮತ್ತು ಸೀನ್‌ಗಳು ಭಾರಿ ವಿವಾದಕ್ಕೆ ಕಾರಣವಾಗಿದ್ದವು. ಆದರೆ ಇದೀಗ ಬಿಡುಗಡೆಯಾಗಿರುವ 'ತಬಾಹಿ' ವಿಡಿಯೋ ಸಾಂಗ್‌ನಲ್ಲಿ ಚಿತ್ರದ ಕಥೆ ಏನಿರಬಹುದು ಎಂಬ ಸಣ್ಣ ಸುಳಿವನ್ನು ನಿರ್ದೇಶಕರು ಬಿಟ್ಟುಕೊಟ್ಟಿದ್ದಾರೆ. ಸಿನಿಮಾದಲ್ಲಿ ಯಶ್ 'ರಾಯ' ಎಂಬ ಕ್ಯಾರೆಕ್ಟರ್‌ನಲ್ಲಿ ಕಾಣಿಸಿಕೊಂಡರೆ, ಕಿಯಾರಾ ಅಡ್ವಾಣಿ 'ರುಮಿ' ಎಂಬ ಬೋಲ್ಡ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇಷ್ಟೇ ಅಲ್ಲದೆ, ಇಡೀ ಹಾಡಿನ ಮತ್ತೊಂದು ದೊಡ್ಡ ಸರ್ಪ್ರೈಸ್ ಅಂದರೆ ಅದು ಸೌತ್ ಲೇಡಿ ಸೂಪರ್‌ಸ್ಟಾರ್ ನಯನತಾರಾ (Nayanthara) ಅವರ ಎಂಟ್ರಿ. ಹಾಡಿನ ಒಂದು ಪ್ರಮುಖ ದೃಶ್ಯದಲ್ಲಿ ನಯನತಾರಾ ಕೂಡ ಕಾಣಿಸಿಕೊಂಡಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ಡಬಲ್ ಮಾಡಿದೆ.

Yash

ಖಡಕ್ ಡೈಲಾಗ್ ಪಂಚ್

ಕೇವಲ ರೊಮ್ಯಾನ್ಸ್ ಮಾತ್ರವಲ್ಲದೆ, ಹಾಡಿನ ನಡುವೆ ಬರುವ ಯಶ್ ಅವರ ಒಂದು ಪವರ್‌ಫುಲ್ ಡೈಲಾಗ್ ಈಗ ಎಲ್ಲೆಡೆ ವೈರಲ್ ಆಗ್ತಿದೆ. "ಮತ್ತೊಂದು ಹುಡುಗಿ ಜೊತೆ ಯಶ್‌ ರೊಮ್ಯಾನ್ಸ್‌ ಮಾಡುವಾಗ ನಿನ್ನಂತ ಸ್ವಾರ್ಥಿ ಪ್ರೀತೀಲಿ ಬೀಳ್ಬೋದು ಅನ್ಸುತ್ತಾ? ಎಂದು ಕೇಳಿದ್ದಕ್ಕೆ, ಕಷ್ಟ ಅನ್ಸುತ್ತೆ" ಎಂಬ ಯಶ್ ಅವರ ಮ್ಯಾನರಿಸಂ ಹಾಗೂ ವಾಯ್ಸ್ ಟೋನ್ ಕೇಳಿ ಫ್ಯಾನ್ಸ್ ಹುಚ್ಚೆದ್ದು ಕುಣಿಯುತ್ತಿದ್ದಾರೆ. ಸದ್ಯ ಬಿಡುಗಡೆಯಾಗಿರುವ ಹಾಡಿನ ಬೋಲ್ಡ್ ದೃಶ್ಯಗಳು ಇಂಟರ್ನೆಟ್‌ನಲ್ಲಿ ಟ್ರೆಂಡ್ ಆಗ್ತಿದೆ.

ಹಾಡಿನ ಹಿಂದಿರುವ ಕ್ರೇಜಿ ಟೀಮ್

ವಿಶೇಷ ಅಂದರೆ ಈ ಅದ್ಭುತ ಹಾಡಿಗೆ ಖ್ಯಾತ ಸಂಗೀತ ನಿರ್ದೇಶಕ ವಿಶಾಲ್ ಮಿಶ್ರಾ ಧ್ವನಿ ಹಾಗೂ ಸಂಗೀತ ಸಂಯೋಜನೆ ನೀಡಿದ್ದಾರೆ. ಇನ್ನು ಸ್ಯಾಂಡಲ್‌ವುಡ್‌ನ ಸ್ಟಾರ್ ಲಿರಿಸಿಸ್ಟ್ ಯೋಗರಾಜ್ ಭಟ್ (Yogaraj Bhat) ಅವರು ಈ ಹಾಡಿಗೆ ಸಾಹಿತ್ಯ ಬರೆದಿದ್ದು, ಹಿನ್ನೆಲೆಯಲ್ಲಿ ಪ್ರೇಗ್ ನಗರದಲ್ಲಿ ಇದರ ಡಬ್ಬಿಂಗ್ ಕಾರ್ಯ ನಡೆದಿದೆ. ಸಂತೋಷ್ ವೆಂಕಿ ವೋಕಲ್ ಕೋಆರ್ಡಿನೇಟರ್ ಆಗಿ ಕೆಲಸ ಮಾಡಿದ್ದಾರೆ.

Yash

ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರಕ್ಕೆ ಸ್ವತಃ ಯಶ್ ಮತ್ತು ಗೀತು ಮೋಹನ್ ದಾಸ್ ಕಥೆ ಬರೆದಿದ್ದಾರೆ. ಚಿತ್ರದಲ್ಲಿ ಯಶ್, ಕಿಯಾರಾ ಮತ್ತು ನಯನತಾರಾ ಮಾತ್ರವಲ್ಲದೆ ಹುಮಾ ಖುರೇಷಿ, ತಾರಾ ಸುತಾರಿಯಾ ಹಾಗೂ ಕನ್ನಡದ ಕ್ರಶ್ ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸುತ್ತಿರುವ 'ಟಾಕ್ಸಿಕ್' ಸಿನಿಮಾ ಇದೇ ಆಗಸ್ಟ್ 26ರಂದು ವಿಶ್ವಾದ್ಯಂತ ಅತ್ಯಂತ ಅದ್ಧೂರಿಯಾಗಿ ಬೆಳ್ಳಿಪರದೆಗೆ ಬರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+