ಅಡುಗೆ ಮನೆ ಸಿಂಕ್‌ ಬಳಿ ನೀವು ಮಾಡುವ ಈ ತಪ್ಪುಗಳಿಂದಲೇ ಮನೆಯಲ್ಲಿ ಜಿರಳೆ, ಇರುವೆ ಓಡಾಡುವುದು

ಅಡುಗೆ ಮನೆ ಎಷ್ಟೇ ಸ್ವಚ್ಛವಾಗಿದ್ದರೂ, ಅಡುಗೆ ಮನೆಯ ಸಿಂಕ್ ವಿಷಯದಲ್ಲಿ ಅನೇಕ ಜನರು ಕೆಲವು ಸಣ್ಣ ತಪ್ಪುಗಳನ್ನು ಮಾಡುತ್ತಾರೆ. ಇದು ತಿಳಿಯದೇಯೇ ಆಗುವ ತಪ್ಪುಗಳು. ಆದರೂ ತಿಳಿಯದೇ ಆಗುವ ಈ ತಪ್ಪುಗಳಿಗೆ ಬೆಲೆ ನಾವೇ ತೆರಬೇಕು. ಯಾಕೆಂದರೆ ಅಡುಗೆ ಮನೆಯ ಸಿಂಕ್ ಕೇವಲ ಪಾತ್ರೆ ತೊಳೆಯುವ ಸ್ಥಳವಲ್ಲ. ಸರಿಯಾದ ಕಾಳಜಿಯನ್ನು ವಹಿಸದೇ ಹೋದರೆ ಅದು ಬ್ಯಾಕ್ಟೀರಿಯಾ, ಜಿರಳೆ ಮತ್ತು ಇರುವೆಗಳಿಗೆ ಪ್ರಮುಖ ಆವಾಸಸ್ಥಾನವಾಗಬಹುದು.

ಎಂಜಲು ತಟ್ಟೆ ಸಿಂಕ್‌ ನಲ್ಲಿ ಬಿಡುವುದು:

ಸಿಂಕ್ ನಿಂದ ಬರುವ ಕೆಟ್ಟ ವಾಸನೆ ಮತ್ತು ಕೊಳಕು ಮನೆಯಾದ್ಯಂತ ರೋಗಾಣುಗಳು ಹರಡಿ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ಸಮಸ್ಯೆಗಳನ್ನು ತಪ್ಪಿಸಲು, ಸಿಂಕ್ ಸ್ವಚ್ಛಗೊಳಿಸುವಾಗ ಕೆಲವು ಪ್ರಮುಖ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ರಾತ್ರಿ ಊಟದ ನಂತರ ಎಂಜಲು ಪಾತ್ರೆಗಳನ್ನು ಸಿಂಕ್‌ನಲ್ಲಿ ಬಿಟ್ಟು ಬೆಳಿಗ್ಗೆ ತೊಳೆಯುವ ಅಭ್ಯಾಸ ಅನೇಕರಿಗಿದೆ. ಹಸಿ ಆಹಾರ ತ್ಯಾಜ್ಯ ಮತ್ತು ಕೊಳಕು ಪಾತ್ರೆಗಳನ್ನು ಅಡುಗೆಮನೆಯ ಸಿಂಕ್‌ನಲ್ಲಿ ದೀರ್ಘಕಾಲ ಇಡುವುದರಿಂದ ಜಿರಳೆಗಳು ಮತ್ತು ಇರುವೆಗಳು ಬೇಗನೆ ಅಡುಗೆ ಮನೆ ಪ್ರವೇಶಿಸಿ ಬಿಡುತ್ತವೆ.

Kitchen Sink Mistakes

ಸಿಂಕ್‌ ಸಂಪೂರ್ಣ ಒಣಗಿರಲಿ:

ಜಿರಳೆಗಳು ಸಿಂಕ್ ಡ್ರೈನೇಜ್ ಪೈಪ್‌ಗಳ ಮೂಲಕ ಮೇಲಕ್ಕೆ ಬರುತ್ತವೆ. ಈ ಜಿರಳೆಗಳು ಕಾರ್ಯಾಚರಣೆಗೆ ಇಳಿಯುವುದೇ ರಾತ್ರಿ ಹೊತ್ತಿನಲ್ಲಿ. ಆದ್ದರಿಂದ, ರಾತ್ರಿ ಮಲಗುವ ಮೊದಲು ಎಲ್ಲಾ ಪಾತ್ರೆಗಳನ್ನು ತೊಳೆದು ಸಿಂಕ್ ಅನ್ನು ಸಂಪೂರ್ಣವಾಗಿ ಖಾಲಿ ಮಾಡುವುದು ಬಹಳ ಮುಖ್ಯ. ಇಲ್ಲಿ ಪಾತ್ರೆಗಳನ್ನು ತೊಳೆಯುವುದು ಮಾತ್ರ ಮುಖ್ಯವಲ್ಲ, ಪಾತ್ರೆ ತೊಳೆದ ನಂತರ ಸಿಂಕ್‌ ಅನ್ನು ಸಂಪೂರ್ಣವಾಗಿ ಒರೆಸಿ ಒಣಗಿರುವಂತೆ ನೋಡಿಕೊಳ್ಳಬೇಕು. ನೀರನ್ನು ಒರೆಸದೆ ಸಿಂಕ್ ಸುತ್ತಲೂ ಬಿಡುವುದರಿಂದ ತೇವಾಂಶದ ಕಾರಣಕ್ಕೆ ಬ್ಯಾಕ್ಟೀರಿಯಾ ಹುಟ್ಟಿಕೊಳ್ಳುತ್ತದೆ.

ಮನೆ ತುಂಬಾ ಜಿರಳೆಗಳು ಓಡಾಡುತ್ತಿವೆಯೇ? ಅಡುಗೆ ಮನೆಯಲ್ಲಿಯೇ ಇರುವ ಈ ವಸ್ತು ಬಳಸಿದರೆ ಸಿಗುವುದು ಶಾಶ್ವತ ಮುಕ್ತಿ
ಮನೆ ತುಂಬಾ ಜಿರಳೆಗಳು ಓಡಾಡುತ್ತಿವೆಯೇ? ಅಡುಗೆ ಮನೆಯಲ್ಲಿಯೇ ಇರುವ ಈ ವಸ್ತು ಬಳಸಿದರೆ ಸಿಗುವುದು ಶಾಶ್ವತ ಮುಕ್ತಿ

ಬಿಸಿ ನೀರು:

ಸಿಂಕ್ ಸ್ವಚ್ಛಗೊಳಿಸಲು ಕೇವಲ ಸಾಮಾನ್ಯ ನೀರು ಅಥವಾ ಪಾತ್ರೆ ತೊಳೆಯುವ ದ್ರವ ಸಾಕಾಗುವುದಿಲ್ಲ. ವಾರಕ್ಕೆ ಎರಡು ಬಾರಿಯಾದರೂ ಸಿಂಕ್ ಪೈಪ್ ಕೆಳಗೆ ಬಿಸಿ ನೀರನ್ನು ಸುರಿಯುವುದರಿಂದ ಒಳಗೆ ಸಂಗ್ರಹವಾಗಿರುವ ಗ್ರೀಸ್ ಮತ್ತು ಆಹಾರ ಕಣಗಳು ಕರಗುತ್ತವೆ. ಇದು ಪೈಪ್‌ಗಳಲ್ಲಿ ಬ್ಲಾಕೇಜ್‌ ಆಗದಂತೆ ತಡೆಯುತ್ತದೆ. ಮಾತ್ರವಲ್ಲ ಒಳಗಿನ ಜಿರಳೆ ಮೊಟ್ಟೆಗಳು ಮತ್ತು ಬ್ಯಾಕ್ಟೀರಿಯಾಗಳನ್ನು ಸಹ ಕೊಲ್ಲುತ್ತದೆ.

ಅಡುಗೆ ಸೋಡಾ ಮತ್ತು ವಿನೆಗರ್:

ಸಿಂಕ್ ಒಳಗೆ ಮತ್ತು ಪೈಪ್ ಗಳಲ್ಲಿ ಸ್ವಲ್ಪ ಅಡುಗೆ ಸೋಡಾ ಮತ್ತು ವಿನೆಗರ್ ಮಿಶ್ರಣವನ್ನು ಬೆರೆಸಿ ಸ್ವಲ್ಪ ಸಮಯದ ನಂತರ ಬಿಸಿನೀರನ್ನು ಸುರಿದರೆ, ಕೆಟ್ಟ ವಾಸನೆ ಸಂಪೂರ್ಣವಾಗಿ ಮಾಯವಾಗುತ್ತದೆ. ಸಿಂಕ್ ಪೈಪ್‌ಗಳಲ್ಲಿನ ಸೋರಿಕೆಯನ್ನು ನಿರ್ಲಕ್ಷಿಸುವುದರಿಂದ ಗೋಡೆಗಳ ನಡುವೆ ತೇವಾಂಶ ಸಂಗ್ರಹವಾಗಬಹುದು. ಇದು ಗೆದ್ದಲು ಮತ್ತು ಜಿರಳೆಗಳಿಗೆ ಕಾರಣವಾಗಬಹುದು. ಆದ್ದರಿಂದ, ಅಡುಗೆಮನೆಯ ಸಿಂಕ್ ಅಡಿಯಲ್ಲಿರುವ ಪ್ರದೇಶವು ಒಣಗಿರುವುದು ಬಹಳ ಮುಖ್ಯ.

ಜಿರಳೆಗಳ ಕಾಟದಿಂದ ಬೇಸತ್ತಿದ್ದೀರಾ? ಈ ನೈಸರ್ಗಿಕ ವಿಧಾನಗಳಿಂದ ಜಿರಳೆಗಳನ್ನು ಸುಲಭವಾಗಿ ಓಡಿಸಬಹುದು
ಜಿರಳೆಗಳ ಕಾಟದಿಂದ ಬೇಸತ್ತಿದ್ದೀರಾ? ಈ ನೈಸರ್ಗಿಕ ವಿಧಾನಗಳಿಂದ ಜಿರಳೆಗಳನ್ನು ಸುಲಭವಾಗಿ ಓಡಿಸಬಹುದು

ಸಿಂಕ್ ಸ್ಟ್ರೈನರ್‌:

ರಾತ್ರಿ ಹೊತ್ತು ಸಿಂಕ್ ರಂಧ್ರವನ್ನು ಮುಚ್ಚಲು ಸಿಂಕ್ ಸ್ಟ್ರೈನರ್‌ಗಳನ್ನು ಬಳಸಬಹುದು. ಈ ಮೂಲಕ ಕೀಟಗಳು ಸಿಂಕ್‌ ರಂಧ್ರಗಳಿಂದ ಒಳಗೆ ಬರುವುದನ್ನು ತಡೆಯಬಹುದು. ಅಡುಗೆಮನೆಯ ಆರೋಗ್ಯವು ಸಿಂಕ್‌ನ ಶುಚಿತ್ವವನ್ನು ಅವಲಂಬಿಸಿರುವುದರಿಂದ, ಈ ಸಲಹೆಗಳನ್ನು ಅನುಸರಿಸುವುದು ಅತ್ಯಗತ್ಯ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+