ರಶ್ಮಿಕಾ ಮಂದಣ್ಣಗೆ ಯಾರೂ ಸಾಟಿಯಿಲ್ಲ: ಹಾಲಿವುಡ್ ನಟ ವಿನ್‌ಸ್ಟನ್ ಡ್ಯೂಕ್ ಪೋಸ್ಟ್ ವೈರಲ್

ಸ್ಯಾಂಡಲ್‌ವುಡ್‌ನಿಂದ ಸಿನಿಮಾ ಜರ್ನಿ ಶುರು ಮಾಡಿ, ಟಾಲಿವುಡ್, ಬಾಲಿವುಡ್ ದಾಟಿ ಈಗ ಜಪಾನ್‌ನಲ್ಲೂ ರಶ್ಮಿಕಾ ಮಂದಣ್ಣ ಮಿಂಚಿದ್ದಾರೆ. ಟೋಕಿಯೊದಲ್ಲಿ ನಡೆದ ಪ್ರತಿಷ್ಠಿತ 'ಕ್ರಂಚಿರಾಲ್ ಅನಿಮೆ ಅವಾರ್ಡ್ಸ್ 2026' ವೇದಿಕೆಯಲ್ಲಿ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಮಿಂಚಿದ್ದಾರೆ. ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಹಾಲಿವುಡ್‌ನ ಪ್ರಸಿದ್ಧ ನಟ ವಿನ್‌ಸ್ಟನ್ ಡ್ಯೂಕ್ (Winston Duke) ಅವರೊಂದಿಗೆ ವೇದಿಕೆ ಹಂಚಿಕೊಂಡ ರಶ್ಮಿಕಾ, ಈ ವರ್ಷದ 'ಬೆಸ್ಟ್ ಅನಿಮೇಷನ್ ಆಫ್ ದಿ ಇಯರ್' ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಬಳಿಕ ರಶ್ಮಿಕಾ ಬಗ್ಗೆ ಡ್ಯೂಕ್ ಹಂಚಿಕೊಂಡಿರುವ ಪೋಸ್ಟ್‌ ಭಾರೀ ವೈರಲ್‌ ಆಗಿದೆ.

ರಶ್ಮಿಕಾ ಮಂದಣ್ಣ 'ಅಪ್ರತಿಮ' ಎಂದ ಹಾಲಿವುಡ್ ನಟ

ಕಾರ್ಯಕ್ರಮದ ಬಳಿಕ ಜಪಾನ್ ಪ್ರವಾಸದ ಸುಂದರ ಕ್ಷಣಗಳ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಹಾಲಿವುಡ್ ನಟ ವಿನ್‌ಸ್ಟನ್ ಡ್ಯೂಕ್, ರಶ್ಮಿಕಾ ಮಂದಣ್ಣ ಅವರ ವ್ಯಕ್ತಿತ್ವವನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. "ಅನಿಮೆ ಪ್ರಶಸ್ತಿ ಸಮಾರಂಭದ ಅದ್ಭುತ ಅನುಭವಕ್ಕಾಗಿ ಕ್ರಂಚಿರಾಲ್‌ಗೆ ಧನ್ಯವಾದಗಳು. ಇದು ನನ್ನ ಮೊದಲ ಜಪಾನ್ ಪ್ರವಾಸವಾಗಿದ್ದು, ಇಲ್ಲಿನ ಶ್ರೀಮಂತ ಸಂಸ್ಕೃತಿಯನ್ನು ಆಸ್ವಾದಿಸಿದ್ದು ಮತ್ತು ಅದ್ಭುತ ಜನರನ್ನು ಭೇಟಿಯಾಗಿದ್ದು ಅವಿಸ್ಮರಣೀಯವಾಗಿತ್ತು. ಅದರಲ್ಲೂ ಮುಖ್ಯವಾಗಿ, ಅಪ್ರತಿಮ (Incomparable) ಪ್ರತಿಭೆ ರಶ್ಮಿಕಾ ಮಂದಣ್ಣ ಅವರೊಂದಿಗೆ ವೇದಿಕೆ ಹಂಚಿಕೊಂಡ ಕ್ಷಣ ನಿಜಕ್ಕೂ ಅದ್ಭುತವಾಗಿತ್ತು" ಎಂದು ವಿನ್‌ಸ್ಟನ್ ಡ್ಯೂಕ್ ಬರೆದುಕೊಂಡಿದ್ದಾರೆ.

Winston Duke

ಕಪ್ಪು ಉಡುಪಿನಲ್ಲಿ ಮಿಂಚಿದ ರಶ್ಮಿಕಾ

ಇತ್ತೀಚೆಗಷ್ಟೇ ನಟ ವಿಜಯ್ ದೇವರಕೊಂಡ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ರಶ್ಮಿಕಾ ಮಂದಣ್ಣ, ಮದುವೆಯ ನಂತರದ ತಮ್ಮ ಈ ಮೊದಲ ಜಾಗತಿಕ ಅಂಗಳದ ಭೇಟಿಯಲ್ಲಿ ಹೊಸ ಕಳೆ ಬೀರಿದ್ದರು. ಈ ಅಂತರರಾಷ್ಟ್ರೀಯ ವೇದಿಕೆಗಾಗಿ ಪ್ರಸಿದ್ಧ ವಿನ್ಯಾಸಕ ಪ್ರಬಲ್ ಗುರುಂಗ್ ವಿನ್ಯಾಸಗೊಳಿಸಿದ ಕಪ್ಪು ಬಣ್ಣದ ಗೌನ್ ಧರಿಸಿದ್ದರು. ಹೂವಿನ ಅಲಂಕಾರದ ವಿನ್ಯಾಸವಿದ್ದ ಈ ಉಡುಪಿಗೆ ಸರಿಹೊಂದುವಂತೆ ಆಕರ್ಷಕ ರತ್ನದ ಹಾರವನ್ನು ಧರಿಸಿ, ಸಿಂಪಲ್ ಹೇರ್ ಸ್ಟೈಲ್‌ನಲ್ಲಿ ರಶ್ಮಿಕಾ ಕಂಗೊಳಿಸುತ್ತಿದ್ದ ಫೋಟೋಗಳು ಸದ್ಯ ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗುತ್ತಿವೆ.

ಅನಿಮೆ ಪ್ರಶಸ್ತಿಗಳ ರೇಸ್‌ನಲ್ಲಿ ಗೆದ್ದವರು ಯಾರು?

ಜಪಾನ್‌ನ ಗ್ರಾಂಡ್ ಪ್ರಿನ್ಸ್ ಹೋಟೆಲ್‌ನಲ್ಲಿ ನಡೆದ ಈ ಬಾರಿಯ ಹತ್ತನೇ ವರ್ಷದ ಅನಿಮೆ ಪ್ರಶಸ್ತಿ ಸಮಾರಂಭದಲ್ಲಿ ಜಾಗತಿಕ ಮಟ್ಟದ ಅನಿಮೇಷನ್ ಚಿತ್ರಗಳಿಗೆ ಗೌರವ ಸಲ್ಲಿಸಲಾಯಿತು. ಅನಿಮೆ ಆಫ್ ದಿ ಇಯರ್: ವಿಶ್ವದಾದ್ಯಂತ ಭಾರೀ ಕ್ರೇಜ್ ಸೃಷ್ಟಿಸಿದ್ದ 'ಮೈ ಹೀರೋ ಅಕಾಡೆಮಿ: ಫೈನಲ್ ಸೀಸನ್' (My Hero Academia Final Season) ಅತ್ಯುತ್ತಮ ಅನಿಮೆ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಫಿಲ್ಮ್ ಆಫ್ ದಿ ಇಯರ್ ವಿಭಾಗದಲ್ಲಿ ನೋಡುವುದಾದರೆ, ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ 'ಡೆಮನ್ ಸ್ಲೇಯರ್: ಕಿಮೆಟ್ಸು ನೊ ಯೈಬಾ ಇನ್ಫಿನಿಟಿ ಕ್ಯಾಸಲ್' ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಕನ್ನಡ ಕಲೀತಿದ್ದೀನಿ, ಮುಂದಿನ ಸಲ ಪಕ್ಕಾ ಚೆನ್ನಾಗಿ ಮಾತನಾಡ್ತೀನಿ: 'ಪೆದ್ದಿ' ಪ್ರಚಾರದಲ್ಲಿ ಕನ್ನಡಿಗರ ಮನಗೆದ್ದ ನಟ ರಾಮ್‌ಚರಣ್‌
ಕನ್ನಡ ಕಲೀತಿದ್ದೀನಿ, ಮುಂದಿನ ಸಲ ಪಕ್ಕಾ ಚೆನ್ನಾಗಿ ಮಾತನಾಡ್ತೀನಿ: 'ಪೆದ್ದಿ' ಪ್ರಚಾರದಲ್ಲಿ ಕನ್ನಡಿಗರ ಮನಗೆದ್ದ ನಟ ರಾಮ್‌ಚರಣ್‌

ರಶ್ಮಿಕಾ ಹಾಗೂ ವಿನ್‌ಸ್ಟನ್ ಡ್ಯೂಕ್ ಜೋಡಿಯು ಪ್ರಕಟಿಸಿದ ವರ್ಷದ ಅತ್ಯುತ್ತಮ ಅನಿಮೇಷನ್ ಪ್ರಶಸ್ತಿಯು 'ಸೋಲೋ ಲೆವೆಲಿಂಗ್ ಸೀಸನ್ 2' (Solo Leveling Season 2) ಪಾಲಾಯಿತು. ವಿಶೇಷವೆಂದರೆ, ಈ ಬಾರಿ ಅನಿಮೆ ಪ್ರಶಸ್ತಿಗಳಿಗಾಗಿ ಜಗತ್ತಿನಾದ್ಯಂತ ಬರೋಬ್ಬರಿ 7.3 ಕೋಟಿಗೂ ಹೆಚ್ಚು ಅಭಿಮಾನಿಗಳು ವೋಟ್ ಮಾಡಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಅನಿಮೆ ಕ್ರೇಜ್ ಗಣನೀಯವಾಗಿ ಹೆಚ್ಚಿರುವುದು ಸಾಬೀತಾಗಿದೆ. ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಕನ್ನಡದ ರಶ್ಮಿಕಾ ಅವರ ಈ ಅಂತರರಾಷ್ಟ್ರೀಯ ಸಾಧನೆಗೆ ಸಿನಿಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+