ಜಿರಳೆಗಳ ಕಾಟದಿಂದ ಬೇಸತ್ತಿದ್ದೀರಾ? ಈ ನೈಸರ್ಗಿಕ ವಿಧಾನಗಳಿಂದ ಜಿರಳೆಗಳನ್ನು ಸುಲಭವಾಗಿ ಓಡಿಸಬಹುದು
ಮನೆಯನ್ನು ಎಷ್ಟು ಸ್ವಚ್ಛವಾಗಿಟ್ಟರೂ ಕೆಲವೊಮ್ಮೆ ಈ ಜಿರಳೆಗಳ ಕಾಟ ತಪ್ಪುವುದಿಲ್ಲ. ವಿಶೇಷವಾಗಿ ಅಡಿಗೆಮನೆ, ಸಿಂಕ್ ಸುತ್ತಮುತ್ತ, ಕಿಟಕಿ ಸುತ್ತ, ಹಾಗೂ ತೇವಾಂಶ ಇರುವ ಜಾಗಗಳಲ್ಲಿ ಜಿರಳೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಜಿರಳೆಗಳು ಕೇವಲ ಅಸಹ್ಯ ಮಾತ್ರವಲ್ಲ, ನಮ್ಮ ಆರೋಗ್ಯಕ್ಕೂ ಹಾನಿಕಾರಕ. ಆಹಾರವನ್ನು ಕಲುಷಿತಗೊಳಿಸುವುದರ ಜೊತೆಗೆ ಅಲರ್ಜಿಗಳು ಮತ್ತು ಸೋಂಕುಗಳಿಗೆ ಕಾರಣವಾಗುತ್ತವೆ.
ಬಹಳಷ್ಟು ಜನರು ಜಿರಳೆಗಳನ್ನು ಓಡಿಸಲು ರಾಸಾಯನಿಕ ಸ್ಪ್ರೇ ಮತ್ತು ಕೀಟನಾಶಕಗಳನ್ನು ಬಳಸುತ್ತಾರೆ. ಆದರೆ ಇವುಗಳು ಮಕ್ಕಳು ಮತ್ತು ಸಾಕುಪ್ರಾಣಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ, ಇಂತಹ ರಾಸಾಯನಿಕಗಳ ಬದಲಾಗಿ ಮನೆಯಲ್ಲೇ ಸಿಗುವ ಕೆಲವು ನೈಸರ್ಗಿಕ ಪದಾರ್ಥಗಳನ್ನು ಬಳಸಿ ಜಿರಳೆಗಳ ಕಾಟವನ್ನು ಸಂಪೂರ್ಣವಾಗಿ ತಡೆಗಟ್ಟಬಹುದು.

ಪುದೀನಾ ಎಣ್ಣೆ ವಾಸನೆ
ಜಿರಳೆಗಳಿಗೆ ಪುದೀನಾ ಎಣ್ಣೆಯ ವಾಸನೆ ಕಂಡರೆ ಓಡುತ್ತದೆ ಆದ್ದರಿಂದ ಅಡಿಗೆಮನೆಯಲ್ಲಿ ಪುದೀನಾ ಎಣ್ಣೆ ಸ್ಪ್ರೇ ಮಾಡುವುದು ಉತ್ತಮ.
ಉಪಯೋಗಿಸುವ ವಿಧಾನ
10-15 ಹನಿ ಪುದೀನಾ ಎಣ್ಣೆಯನ್ನು ನೀರಿನಲ್ಲಿ ಬೆರೆಸಿ ಸ್ಪ್ರೇ ಬಾಟಲಿಯಲ್ಲಿ ಹಾಕಿ ಮನೆಯ ಮೂಲೆಗಳು, ಬಾಗಿಲು ಮತ್ತು ಕಿಟಕಿಗಳ ಬಳಿ ಸಿಂಪಡಿಸಿ.
ಬೇವಿನ ಎಣ್ಣೆ
ಬೇವು ಅತ್ಯುತ್ತಮವಾದ ನೈಸರ್ಗಿಕ ಕೀಟ ನಿವಾರಕವಾಗಿ ಕೆಲಸ ಮಾಡುತ್ತದೆ, ಬೇವಿನ ಎಣ್ಣೆಯು ಪರಿಸರ ಸ್ನೇಹಿಯಾಗಿದ್ದು, ಕೀಟಗಳನ್ನು ಯಾವುದೆ ರಾಸಾಯನಿಕ ಅಡ್ಡಪರಿಣಾಮಗಳಿಲ್ಲದೆ ದೂರವಿಡಲು ಸಹಾಯ ಮಾಡುತ್ತದೆ.
ಉಪಯೋಗಿಸುವ ವಿಧಾನ
ಬೇವು ಎಣ್ಣೆಯನ್ನು ನೀರಿನಲ್ಲಿ ಬೆರೆಸಿ ಸಿಂಪಡಿಸಬಹುದು ಅಥವಾ ಬೇವು ಪುಡಿಯನ್ನು ಜಿರಳೆಗಳು ಕಾಣಿಸುವ ಜಾಗಗಳಲ್ಲಿ ಹಾಕಬೇಕು.
ಬೇಕಿಂಗ್ ಸೋಡಾ ಮತ್ತು ಸಕ್ಕರೆ
ಬೇಕಿಂಗ್ ಸೋಡಾ(ಅಡುಗೆ ಸೋಡಾ) ಬಳಸಿ ಜಿರಳೆಗಳನ್ನು ಸುಲಭವಾಗಿ ಮತ್ತು ನೈಸರ್ಗಿಕವಾಗಿ ನಿಯಂತ್ರಿಸಬಹುದು, ಸಕ್ಕರೆ ಮತ್ತು ಬೇಕಿಂಗ್ ಸೋಡಾ ಸಮನಾದ ಪ್ರಮಾಣಗಳಲ್ಲಿ ಬೆರಸಿ ಜಿರಳೆಗಳು ಓಡಾಡುವ ಜಾಗದಲ್ಲಿ ಇಡುವುದರಿಂದ ಸಕ್ಕರೆಗೆ ಆಕರ್ಷಿತವಾಗು ಬರುವ ಜಿರಳೆಗಳು ಬೇಕಿಂಗ್ ಸೋಡಾ ತಿಂದು ಸಾಯುತ್ತವೆ.
ಉಪಯೋಗಿಸುವ ವಿಧಾನ
ಬೇಕಿಂಗ್ ಸೋಡಾ ಮತ್ತು ಸಕ್ಕರೆಯನ್ನು ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿ ಮನೆಯ ಮೂಲೆಗಳಲ್ಲಿ, ಸಿಂಕ್ ಕೆಳಭಾಗದಲ್ಲಿ ಹಾಗೂ ಫ್ರಿಜ್ ಹಿಂಭಾಗದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಹಾಕಬೇಕು.
ತೇಜಪತ್ರೆ
ಮನೆಯಲ್ಲಿ ಜಿರಳೆಗಳ ಕಾಟವನ್ನು ತಪ್ಪಿಸಲು ತೇಜಪತ್ರೆ ಅತ್ಯಂತ ಸರಳ, ಪರಿಣಾಮಕಾರಿ ಮತ್ತು ನೈಸರ್ಗಿಕ ಮನೆಮದ್ದಾಗಿದೆ.
ಉಪಯೋಗಿಸುವ ವಿಧಾನ
ಕೆಲವು ತಾಜಾ ಅಥವಾ ಒಣಗಿದ ತೇಜಪತ್ರೆಗಳನ್ನು ಕೈಯಿಂದಲೇ ಚೆನ್ನಾಗಿ ಪುಡಿ ಮಾಡಿಕೊಳ್ಳಿ. ತೇಜಪತ್ರೆಯಿಂದ ಹೊರಹೊಮ್ಮುವ ಕಟುವಾದ ಮತ್ತು ತೀಕ್ಷ್ಣವಾದ ಪರಿಮಳವು ಜಿರಳೆಗಳಿಗೆ ರೇಜಿಗೆ ಹುಟ್ಟಿಸುತ್ತದೆ. ಇದರಿಂದಾಗಿ ಅವು ಆ ಜಾಗದಿಂದ ದೂರ ಓಡಿಹೋಗುತ್ತವೆ.
ಮನೆಯೊಳಗೆ ಜಿರಳೆಗಳು ಸುಳಿಯದಂತೆ ತಡೆಯಲು ಈ ಕೆಳಗಿನ ಅಭ್ಯಾಸಗಳು ಅತ್ಯಗತ್ಯವಾಗಿವೆ
* ಆಹಾರವನ್ನು ತೆರೆದಿಡಬೇಡಿ
* ಊಟದ ನಂತರ ಮತ್ತು ಎಣ್ಣೆ ಕಲೆಗಳನ್ನು ತಕ್ಷಣ ಸ್ವಚ್ಛಗೊಳಿಸಿ
* ಆಹಾರ ಪದಾರ್ಥಗಳನ್ನು ಆಡದೆ ಇರುವಂತಹ ಡಬ್ಬಿಗಳಲ್ಲಿ ಇಡಿ
* ರಾತ್ರಿ ವೇಳೆ ಪಾತ್ರೆಗಳನ್ನು ತೊಳೆಯದೇ ಬಿಡಬೇಡಿ
* ನೀರಿನ ತೇವಾಂಶ ಕಡಿಮೆ ಮಾಡಿ
* ಲೀಕ್ ಆಗಿರುವ ಟ್ಯಾಪ್ ಮತ್ತು ಪೈಪ್‌ಗಳನ್ನು ಸರಿಪಡಿಸಿ
ಅನಗತ್ಯ ವಸ್ತುಗಳನ್ನು ಮನೆಯಿಂದ ಹೊರಗೆ ಹಾಕಿ
ಹಳೆಯ ಪತ್ರಿಕೆಗಳು, ಕಾರ್ಡ್‌ಬೋರ್ಡ್ ಪೆಟ್ಟಿಗೆಗಳು ಮತ್ತು ಅನಗತ್ಯ ಬ್ಯಾಗ್‌ಗಳು ಜಿರಳೆಗಳಿಗೆ ಅಡಗಿಕೊಳ್ಳಲು ಸೂಕ್ತ ಜಾಗವಾಗಿರುತ್ತವೆ. ಆದ್ದರಿಂದ ಮನೆಯನ್ನು ಸ್ವಚ್ಛವಾಗಿ ಮತ್ತು ಗೊಂದಲರಹಿತವಾಗಿ ಇಡುವುದು ಮುಖ್ಯ.














Click it and Unblock the Notifications