Fridge Tips: ಖಾಲಿ A4 ಶೀಟ್ ಇಟ್ಟು ಫ್ರೀಡ್ಜ್‌ನ ಬಾಳಿಕೆ ಬರುವ ದಿನಗಳ ಪತ್ತೆ ಮಾಡಿ!
ಮನೆಯಲ್ಲಿ ಇರುವ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳಿರಲಿ ಅವುಗಳನ್ನು ಆಗಾಗ ಸರ್ವಿಸ್ ಮಾಡಿಸುತ್ತಾ ಇರಬೇಕು. ಹೀಗೆ ಮಾಡಿದರೆ ಅದರ ಲೈಫ್ ಟೈಮ್ (ಬಾಳಿಕೆ ದಿನಗಳು) ಸ್ವಲ್ಪ ಹೆಚ್ಚಿಸಬಹುದು. ಅಲ್ಲದೆ, ಕೆಲವೊಂದು ಉಪಕರಣಗಳು ಸರಿಯಾಗಿ ಕೆಲಸ ಮಾಡದೇ ಹೋದಾಗ ವಿದ್ಯುತ್ ಬಿಲ್ ಕೂಡಾ ಜಾಸ್ತಿ ಬರುತ್ತದೆ. ಇಲ್ಲಾ ಇಡೀ ಮನೆಯ ಎಲೆಕ್ಟ್ರಿಸಿಟಿ ಶಾಟ್ ಆಗಿ ಬಿಡಬಹುದು.
ಬೇಸಿಗೆ ಮತ್ತು ಮಳೆಗಾಲದಲ್ಲಿ, ರೆಫ್ರಿಜರೇಟರ್ (ಫ್ರಿಡ್ಜ್) ತುಂಬಾ ಒತ್ತಡಕ್ಕೆ ಬೀಳುತ್ತದೆ. ನಿಮ್ಮ ಮನೆಯ ವಿದ್ಯುತ್ ಜಾಸ್ತಿ ಬರುತ್ತಿದ್ದರೆ ಅಥವಾ ಬಳಸುವ ಯುನಿಟ್ ಹೆಚ್ಚು ತೋರಿಸುತ್ತಿದ್ದರೆ ಅದಕ್ಕೆ ನಿಮ್ಮ ಮನೆಯ ಫಿಜ್ ಕಾರಣವಾಗಿರಲೂಬಹುದು. ಸೋಶಿಯಲ್ ಮೀಡಿಯಾದಲ್ಲಿ ಅಡುಗೆಮನೆಯ ಒಂದು ಹ್ಯಾಕ್ ವೈರಲ್ ಆಗುತ್ತಿದೆ. A4 ಪ್ರಿಂಟರ್ ಪೇಪರ್ ಅನ್ನು ಫ್ರಿಡ್ಜ್‌ನಲ್ಲಿ ಇಡುವ ಹ್ಯಾಕ್ ಅದು. ಕೇಳುವುದಕ್ಕೆ ಸ್ವಲ್ಪ ವಿಚಿತ್ರ ಅನ್ನಿಸಬಹುದು. ಆದರೆ ವಿಜ್ಞಾನದ ಪ್ರಕಾರ, ಈ A4 ಶೀಟ್ ಫ್ರಿಡ್ಜ್ ಯಾವ ರೀತಿ ಕೆಲಸ ಮಾಡುತ್ತದೆ ಎನ್ನುವ ರಿಪೋರ್ಟ್ ನೀಡುತ್ತದೆ ಎನ್ನಲಾಗಿದೆ.

* ಆರ್ದ್ರತೆ ಸೂಚಕ
A4 ಶೀಟ್ ಅಥವಾ ಕಾಗದವನ್ನು ಸೆಲ್ಯುಲೋಸ್ ಫೈಬರ್ ಉಪಯೋಗಿಸಿ ಮಾಡುತ್ತಾರೆ. ಇದು ಗಾಳಿಯಿಂದ ತೇವಾಂಶವನ್ನು ಬೇಗನೆ ಹೀರಿಕೊಳ್ಳುತ್ತದೆ. ಫ್ರಿಡ್ಜ್‌ನಲ್ಲಿ A4 ಶೀಟನ್ನು ಇಟ್ಟಾಗ ಅದು ಒದ್ದೆಯಾದರೆ, ಸುಕ್ಕುಗಟ್ಟಿದರೆ ಫ್ರಿಡ್ಜ್ ಒಳಗೆ ಹೆಚ್ಚುವರಿ ತೇವಾಂಶ ಸಂಗ್ರಹ ಆಗ್ತಾ ಇದೆ ಎಂದರ್ಥ. ಹೋಗಿ ಬಂದು ಹೋಗಿ ಬಂದು ಫ್ರಿಡ್ಜ್ ಅನ್ನು ಓಪನ್ ಮಡುವುದರಿಂದ ಹೀಗಾಗುತ್ತದೆ. ಅಥವಾ ಫ್ರಿಡ್ಜ್ ಒಳಗೆ ಬಿಸಿ ಆಹಾರವನ್ನು ಇಟ್ಟರೂ ಹೀಗಾಗುತ್ತದೆ. ಒಂದು ವೇಳೆ ನಿಮ್ಮ ಫ್ರಿಡ್ಜ್‌ನಲ್ಲಿ ಈ ರೀತಿ ಆದರೆ ತಕ್ಷಣದ ಗಮನ ಕೊಡಬೇಕಾಗುತ್ತದೆ.
* ಹಿಮಗಡ್ಡೆ ಮತ್ತು ಮಂಜುಗಡ್ಡೆಯ ರಚನೆ
ಫ್ರಿಡ್ಜ್‌ನಲ್ಲಿ ನೀರಿನ ಆವಿಯ ಪ್ರಮಾಣ ಅಥವಾ ಆರ್ದ್ರತೆ ಹೆಚ್ಚಾದ್ರೆ, ಫ್ರಿಡ್ಜ್ ತುಂಬಾ ಮಂಜುಗಡ್ಡೆ ರೂಪುಗೊಳ್ಳುತ್ತದೆ. ನಂತರ ಅದರೊಳಗೆ ಯಾವ ವಸ್ತುವನ್ನು ಇಡುವುದಕ್ಕೂ ಜಾಗವೇ ಇರುವುದಿಲ್ಲ. ಫ್ರಿಡ್ಜ್‌ನಲ್ಲಿ ಇಟ್ಟ A4 ಶೀಟ್ ಗಟ್ಟಿಯಾಗಿ ಅದರ ಮೇಲೆ ಸಣ್ಣ ಮಂಜುಗಡ್ಡೆ ಹರಳುಗಳು ಕಾಣಿಸಿದ್ರೆ, ಫ್ರಿಡ್ಜ್‌ನಲ್ಲಿ ಘನೀಕರಿಸುವ ಪ್ರಕ್ರಿಯೆ ಶುರುವಾಗಿದೆ ಅಂತಲೇ ಅರ್ಥ. ಹೀಗಾದಾಗ ಕಂಪ್ರೆಸರ್ ಮೇಲೆ ಒತ್ತಡ ಹೆಚ್ಚಾಗುತ್ತದೆ. ಇದು ವಿದ್ಯುತ್ ಬಳಕೆಯನ್ನು ಹೆಚ್ಚು ಮಾಡುತ್ತದೆ. ಪರಿಣಾಮ ಬಿಲ್ ಜಾಸ್ತಿ ಬರ್ತದೆ.
* ಫ್ರಿಡ್ಜ್‌ನ ರಬ್ಬರ್ ಸೀಲ್ ಸಡಿಲವಾಗಿದೆಯೇ?
ಒಂದು ವೇಳೆ ಫ್ರಿಡ್ಜ್‌ನ ರಬ್ಬರ್ ಸವೆದಿದ್ರೆ ಅಥವಾ ಸಡಿಲಾಗಿದ್ರೆ ರಬ್ಬರ್ ಗ್ಯಾಸ್ಕೆಟ್ ಹೊರಗಿನಿಂದ ಬೆಚ್ಚಗಿನ, ಗಾಳಿ ಒಳಗೆ ಬರೋ ಸಾಧ್ಯತೆ ಹೆಚ್ಚು. ಇದನ್ನು ಪರಿಶೀಲಿಸುವ ವಿಧಾನ ಕೂಡಾ ತುಂಬಾ ಸಿಂಪಲ್.
ಫ್ರಿಡ್ಜ್ ಬಾಗಿಲು ಮತ್ತು ಚೌಕಟ್ಟಿನ ನಡುವೆ A4 ಕಾಗದದ ಅರ್ಧ ಹಾಳೆಯನ್ನು ಇಡಿ. ಬಾಗಿಲು ಮುಚ್ಚಿ. ಈಗ ಆ ಶೀಟನ್ನು ಹೊರತೆಗೆಯೋದಕ್ಕೆ ನೋಡಿ. ಯಾವ ಸಮಸ್ಯೆನೂ ಇಲ್ಲದೇ ಪೇಪರ್ ಹೊರಗೆ ಬಂದರೆ ಅಥವಾ ಜಾರಿದ್ರೆ ಫ್ರಿಡ್ಜ್‌ನ ರಬ್ಬರ್ ಸೀಲ್ ಸವೆದಿದೆ ಎಂದು ಅರ್ಥ ಮಾಡಿಕೊಳ್ಳಬೇಕು.
* ಗಾಳಿಯ ಪ್ರಸರಣ
ಫ್ರಿಡ್ಜ್ ಸರಿಯಾಗಿ ಕೆಲಸ ಮಾಡಬೇಕಾದ್ರೆ, ತಂಪಾದ ಗಾಳಿ ಎಲ್ಲಾ ಕಡೆ ಸಮವಾಗಿ ಚಲಿಸಬೇಕು. ನಿಮ್ಮ ಫ್ರಿಡ್ಜ್‌ನಲ್ಲಿ ಬೇರೆ ಬೇರೆ ಜಾಗದಲ್ಲಿ A4 ಶೀಟ್ ಇಟ್ಟು ಸ್ವಲ್ಪ ಹೊತ್ತಿನ ನಂತರ ನೋಡಿದಾಗ ನಿರ್ದಿಷ್ಟ ಜಾಗದಲ್ಲಿ ಒದ್ದೆಯಾಗಿದ್ರೆ, ಅಥವಾ ತಣ್ಣಗಾಗಿದ್ರೆ, ಆ ಪ್ರದೇಶದಲ್ಲಿನ ಗಾಳಿ ಸರಿಯಾಗಿ ಪರಿಚಲನೆಯಾಗ್ತಾ ಇಲ್ಲ ಅನ್ನೋದನ್ನು ಸೂಚಿಸುತ್ತದೆ.
ಈ ಹ್ಯಾಕ್‌ನಿಂದ ವಾಸನೆ ನಿವಾರಿಸಬಹುದೇ?
ಇಲ್ಲ! ಫ್ರಿಡ್ಜ್‌ನಿಂದ ಕೆಟ್ಟ ವಾಸನೆ ಬಾರದಂತೆ ಮಾಡುವುದಕ್ಕೆ ಈ A4 ಶೀಟ್ ಟ್ರಿಕ್‌ನಿಂದ ಸಾಧ್ಯ ಇಲ್ಲ. ಅಡಿಗೆ ಸೋಡಾ ಅಥವಾ ಇದ್ದಿಲು ಇದಕ್ಕೆ ಒಳ್ಳೆಯ ಆಯ್ಕೆಯಾಗಿದೆ. ಈ A4 ಪೇಪರ್ ಹ್ಯಾಕ್ ಫ್ರಿಡ್ಜ್ ಸಮಸ್ಯೆಗಳನ್ನು ಕಂಡು ಹಿಡಿಯುವುದಕ್ಕೆ ತುಂಬಾ ಅಗ್ಗದ ಮತ್ತು ಪರಿಣಾಮಕಾರಿ ಮಾರ್ಗವಾಗಿದೆ. ಆದರೆ ಇದು ಯಾವುದೇ ಸಮಸ್ಯೆಗೆ ಶಾಶ್ವತ ಪರಿಹಾರವಲ್ಲ.
ಫ್ರಿಡ್ಜ್‌ನ ತಾಪಮಾನವನ್ನು ಯಾವಾಗಲೂ 0°F (-18°C) ಗೆ ಹೊಂದಿಸಿ. ಗಾಳಿಯ ಹರಿವನ್ನು ಕಾಪಾಡಿಕೊಳ್ಳಲು ಫ್ರಿಡ್ಜ್‌ನಲ್ಲಿ ಹೆಚ್ಚು ವಸ್ತುಗಳನ್ನು ತುಂಬಿಡಬೇಡಿ. ಒಂದು ವೇಳೆ ನಿಮ್ಮ ಬಳಿ ನಾನ್ ಫ್ರಾಸ್ಟ್ ಫ್ರೀ ರೆಫ್ರಿಜರೇಟರ್ ಇದ್ದು, ಮಂಜುಗಡ್ಡೆಯ ಪದರವು ಕಾಲು ಇಂಚಿಗಿಂತ ಹೆಚ್ಚು ದಪ್ಪವಾಗಿದ್ದರೆ, ಡಿಫ್ರಾಸ್ಟಿಂಗ್ ಮಾಡುವುದನ್ನು ಮರೀಬೇಡಿ.


Click it and Unblock the Notifications
