Vastu Tips For Salt: ಪತಿ ಮತ್ತು ಹೆಂಡತಿಯ ನಡುವೆ ಪ್ರೀತಿ ಹೆಚ್ಚಿಸುವ ಉಪ್ಪು.. ಹೇಗೆ?

ಸಂಬಂಧಗಳಲ್ಲಿ ಸಮಸ್ಯೆಗಳು ಸರ್ವೇ ಸಾಮಾನ್ಯ. ವಿಶೇಷವಾಗಿ ಪತಿ-ಪತ್ನಿಯ ನಡುವಿನ ಸಂಬಂಧದಲ್ಲಿ ಹೆಚ್ಚಿನ ಘರ್ಷಣೆಗಳು ಸಂಭವಿಸುತ್ತವೆ. ವೈವಾಹಿಕ ಜೀವನದಲ್ಲಿ ಅನೇಕ ಬಾರಿ ಪತಿ-ಪತ್ನಿಯ ನಡುವೆ ಜಗಳಗಳು ಹೆಚ್ಚಾಗಿ ಕಂಡು ಬರುತ್ತವೆ. ಇದಕ್ಕೆ ಕಾರಣ ಮನೆಯಲ್ಲಿನ ವಾಸ್ತು ದೋಷವಾಗಿರಬಹುದು.

ಹೌದು... ಮನೆಯಲ್ಲಿ ತಿಳಿಯದೆ ಎಲ್ಲಂದರಲ್ಲಿ ಇಡುವ ವಸ್ತುಗಳಿಂದಾಗಿ ವೈವಾಹಿಕ ಸಂಬಂಧದಲ್ಲಿ ಸಮಸ್ಯೆಗಳು ಹೆಚ್ಚಾಗಬಹುದು. ಆದರೆ ವಾಸ್ತು ಪ್ರಕಾರ ತೆಗೆದುಕೊಳ್ಳುವ ಕ್ರಮಗಳ ಮೂಲಕ ನಿಮ್ಮ ಸಮಸ್ಯೆಗಳನ್ನು ಹೋಗಲಾಡಿಸಬಹುದು. ಹಾಗಾಗಿ ಇಂದು ನಾವು ನಿಮ್ಮ ವೈವಾಹಿಕ ಜೀವನದಲ್ಲಿ ಜಗಳಗಳನ್ನು ತೊಡೆದುಹಾಕಲು ಉಪ್ಪನ್ನು ಬಳಸುವ ಪರಿಹಾರಗಳನ್ನು ಹೇಳಲಿದ್ದೇವೆ. ಉಪ್ಪು ಆಹಾರದ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ನಿಮ್ಮ ವೈವಾಹಿಕ ಜೀವನದಲ್ಲಿ ಪ್ರೀತಿಯನ್ನೂ ಕೂಡ ಹೆಚ್ಚಿಸುತ್ತದೆ. ಅದು ಹೇಗೆ ಅನ್ನೋದನ್ನು ಈಗ ತಿಳಿಯೋಣ.

Vastu Tips For Salt Salt that increases love between husband and wife

*ಗಂಡ ಹೆಂಡತಿ ನಡುವೆ ಜಗಳ

ಅನೇಕ ಬಾರಿ ವೈವಾಹಿಕ ಜೀವನದಲ್ಲಿ ಸಂತೋಷ ಇರುವುದಿಲ್ಲ. ದಿನವೂ ಒಂದಲ್ಲ ಒಂದು ವಿಷಯಕ್ಕೆ ಪತಿ-ಪತ್ನಿಯ ನಡುವೆ ಜಗಳಗಳು ನಡೆಯುತ್ತವೆ. ಹಾಗಿದ್ದಲ್ಲಿ ಇದಕ್ಕೆ ಉಪ್ಪು ಪರಿಹಾರವಾಗಿರಬಹುದು. ಇದು ನಿಮಗೆ ಪ್ರಯೋಜನಕಾರಿಯಾಗಿದೆ ಎಂದು ವಾಸ್ತುಶಾಸ್ತ್ರ ಹೇಳುತ್ತದೆ. ಹಾಗಾದರೆ ಮನೆಯಲ್ಲಿ ದಂಪತಿಗಳ ನಡುವೆ ಶಾಂತಿ ನೆಮ್ಮದಿ ಕಾಪಾಡಲು ಉಪ್ಪು ಹೇಗೆ ಪ್ರಯೋಜನಕಾರಿಯಾಗಿದೆ ಎಂದು ತಿಳಿಯೋಣ.

*ಸಣ್ಣ ವಿವಾದಗಳನ್ನು ತಪ್ಪಿಸಲು ಹೀಗೆ ಮಾಡಿ....

ಸಣ್ಣ ವಿವಾದಗಳನ್ನು ತಪ್ಪಿಸಲು ನಿಮ್ಮ ಮಲಗುವ ಕೋಣೆಯ ಮೂಲೆಯಲ್ಲಿ ಕಲ್ಲು ಉಪ್ಪು ಅಥವಾ ಪುಡಿ ಉಪ್ಪನ್ನು ಇರಿಸಿ. ಪೂರ್ಣ ತಿಂಗಳು ಅಲ್ಲಿ ಅದನ್ನು ಬಿಟ್ಟುಬಿಡಿ. ಒಂದು ತಿಂಗಳು ಮುಗಿದ ತಕ್ಷಣ, ಆ ಉಪ್ಪನ್ನು ಅಲ್ಲಿಂದ ತೆಗೆದುಹಾಕಿ. ಈ ಪರಿಹಾರವನ್ನು ಅನುಸರಿಸುವುದರಿಂದ ಮನೆಯಲ್ಲಿ ಶಾಂತಿ ನೆಲೆಸುತ್ತದೆ. ಜೊತೆಗೆ ಸಣ್ಣಪುಟ್ಟ ವಿವಾದಗಳೂ ಕಡಿಮೆಯಾಗುತ್ತವೆ.

*ಮನೆಯ ಮುಖ್ಯ ದ್ವಾರದಲ್ಲಿ ಹೀಗೆ ಮಾಡಿ....

ಅನೇಕ ಬಾರಿ ಮನೆಯಲ್ಲಿ ನಕಾರಾತ್ಮಕತೆಯಿಂದಾಗಿ ಜನರ ನಡುವೆ ಜಗಳಗಳು ಕಂಡುಬರುತ್ತವೆ. ಆದ್ದರಿಂದ ಉಪ್ಪನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ಮತ್ತು ಅದನ್ನು ನಿಮ್ಮ ಮನೆಯ ಮುಖ್ಯ ದ್ವಾರದಲ್ಲಿ ನೇತುಹಾಕಿ. ಹೀಗೆ ಮಾಡುವುದರಿಂದ ನೆಗೆಟಿವ್ ಎನರ್ಜಿ ದೂರವಾಗಿ ನಮ್ಮ ಜೀವನದಲ್ಲಿ ನೆಮ್ಮದಿ ಇರುತ್ತದೆ.

Vastu Tips For Salt Salt that increases love between husband and wife

* ಉಪ್ಪು ನೀರಿನ ಸ್ವಚ್ಚತೆ

ಪ್ರತಿದಿನ ಉಪ್ಪು ನೀರಿನಿಂದ ಮನೆಯನ್ನು ಒರೆಸುವುದರಿಂದ ಪತಿ-ಪತ್ನಿಯರ ನಡುವಿನ ಸಂಬಂಧವು ಗಟ್ಟಿಯಾಗುತ್ತದೆ. ಇಬ್ಬರ ನಡುವಿನ ಭಿನ್ನಾಭಿಪ್ರಾಯ ಶಾಂತವಾಗುತ್ತದೆ. ಇದು ಮನೆಯಿಂದ ನಕಾರಾತ್ಮಕತೆಯನ್ನು ಸಹ ತೆಗೆದುಹಾಕುತ್ತದೆ. ಪ್ರತಿನಿತ್ಯ ಈ ಪರಿಹಾರಗಳನ್ನು ಮಾಡುವುದರಿಂದ ಇಬ್ಬರ ನಡುವಿನ ವಿವಾದ ಶೀಘ್ರವೇ ಪರಿಹಾರವಾಗುತ್ತದೆ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+