Valentine's Day: ನಿಮ್ಮ ಪ್ರೇಯಸಿಗೆ ಗಿಫ್ಟ್ ಕೊಡಲು ಬೆಸ್ಟ್ ಐಡಿಯಾ ಇಲ್ಲಿದೆ!
Valentine's Day/Date: ಪ್ರೇಮಿಗಳ ದಿನಾಚರಣೆ / ವ್ಯಾಲೆಂಟೈನ್ಸ್ ಡೇಗೆ ಇನ್ನು ಕೇವಲ ಆರು ದಿನಗಳು ಮಾತ್ರ ಬಾಕಿ ಉಳಿದಿವೆ. ವ್ಯಾಲೆಂಟೈನ್ಸ್‌ಗೆ ನಿಮ್ಮ ಪ್ರೇಯಸಿಗೆ ನೀವು ಕೊಡಬಹುದಾದ ಗಿಫ್ಟ್ ಐಡಿಯಾಗಳು ಇಲ್ಲಿವೆ. ಪ್ರೇಮಿಗಳು ಪರಸ್ಪರ ಪ್ರೀತಿ ಹಂಚಿಕೊಳ್ಳುವುದು.
ತಮ್ಮ ಪ್ರೀತಿಯನ್ನು ನಿವೇದನೆಯನ್ನು ಮಾಡಿಕೊಳ್ಳುವುದಕ್ಕೆ ಫೆಬ್ರವರಿ 14 ವಿಶೇಷ ದಿನವಾಗಿದೆ. ಹಾಗಾದರೆ ಪ್ರೇಮಿಗಳ ದಿನದಂದು ನೀವು ನಿಮ್ಮ ಪ್ರೇಯಸಿಗೆ ಯಾವೆಲ್ಲ ಗಿಫ್ಟ್‌ಗಳನ್ನು ಕೊಡಬಹುದು ಎನ್ನುವುದಕ್ಕೆ ಸಿಂಪಲ್ ಟಿಪ್ಸ್ ಇಲ್ಲಿವೆ.

ಈ ವರ್ಷದ ವ್ಯಾಲೆಂಟೈನ್ಸ್ ದಿನವನ್ನು ವಿಶೇಷವಾಗಿಸಲು ಹಾಗೂ ನಿಮ್ಮ ಪ್ರೀತಿ ಪಾತ್ರರಿಗೆ ಗಿಫ್ಟ್ ಕೊಡುವುದಕ್ಕೆ ಸಿಂಪಲ್ ಟಿಪ್ಸ್‌ಗಳು ಇಲ್ಲಿವೆ. ಪ್ರತಿ ವರ್ಷವೂ ಫೆಬ್ರವರಿ ಪ್ರೇಮಿಗಳಿಗೆ ವಿಶೇಷ ದಿನವಾಗಿದೆ. ಈ ಬಾರಿಯೂ ಪ್ರೇಮಿಗಳ ದಿನಾಚರಣೆಗೆ ಸಿದ್ಧತೆ ಜೋರಾಗಿದೆ.
ಪ್ರೇಮಿಗಳ ದಿನಾಚರಣೆಯ ಗಿಫ್ಟ್ ಎನ್ನುವುದು ಕೇವಲ ಗಿಫ್ಟ್ ಆಗಿ ಮಾತ್ರ ಉಳಿದಿಲ್ಲ. ಅದು ನಿಮ್ಮ ಪ್ರೀತಿಯನ್ನು ಹಂಚಿಕೊಳ್ಳುವ ಹಾಗೂ ನಿಮ್ಮ ಆತ್ಮೀಯರಿಗೆ ಏನು ಬೇಕು, ಯಾವುದು ಇಷ್ಟ ಎಂದು ತಿಳಿದುಕೊಳ್ಳುವ ಕೊಡುವ ಪ್ರಯತ್ನವೂ ಹೌದು.

ಪ್ರೇಯಸಿ / ಪ್ರಿಯತಮನ ಇಷ್ಟ ತಿಳಿದುಕೊಳ್ಳಿ: ಪ್ರೇಮಿಗಳ ದಿನಾಚರಣೆಯ ಸಮಯದಲ್ಲಿ ನಿಮ್ಮ ಪ್ರೇಯಸಿಗೆ ಅಥವಾ ಪ್ರಿಯತಮನಿಗೆ ಗಿಫ್ಟ್ ಕೊಡುವ ಮುಚ್ಚೆ ಅವರ ಇಷ್ಟವನ್ನು ತಿಳಿದುಕೊಳ್ಳಿ. ದೊಡ್ಡ ಗಿಫ್ಟ್‌ಗಳನ್ನೇ ಕೊಡಬೇಕು ಎಂದೇನು ಇಲ್ಲ. ನೀವು ಪ್ರೇಯಸಿ / ಪ್ರಿಯತಮನಿಗೆ ಗಿಫ್ಟ್ ಕೊಡುವಾಗ ಈ ವಿಷಯಗಳನ್ನು ಗಮನಿಸಿ. ಬಣ್ಣ, ಆಹಾರ ಹಾಗೂ ಹವ್ಯಾಸಗಳನ್ನು ನೋಡಿ ನೀವು ಅವರಿಗೆ ಒಳ್ಳೆಯ ಗಿಫ್ಟ್‌ಗಳನ್ನು ಕೊಡಬಹುದು.
ಫ್ಯಾಷನ್ ವಾಚ್: ಮಾರುಕಟ್ಟೆಯಲ್ಲಿ ಈಗ ಹಲವು ಬಗೆಯ ವಾಚ್‌ಗಳು ಬಂದಿವೆ. ನೀವು ನಿಮ್ಮಿಷ್ಟದ ವಾಚ್‌ಗಳನ್ನು ಲವರ್ಸ್‌ಗೆ ಕೊಡಬಹುದು. ಈಗೆಲ್ಲ ನೀವು ವಾಚ್‌ನಲ್ಲಿ ಪ್ರೇಮಿಗಳ ಫೋಟೋವನ್ನು ಸಹ ಸೇರಿಸುವುದಕ್ಕೆ ಅವಕಾಶ ಇದೆ. ಫ್ಯಾಷನ್ ಇರುವ ಅಥವಾ ಸ್ಮಾರ್ಟ್ ವಾಚ್‌ಗಳನ್ನು ಸಹ ನೀವು ಗಿಫ್ಟ್ ಆಗಿ ಕೊಡಬಹುದಾಗಿದೆ. ಪ್ರೇಮಿಗಳ ವ್ಯಕ್ತಿತ್ವಕ್ಕೆ ಅನುಗುಣವಾಗಿ ತಿಳಿ ಅಥವಾ ಗಾಢ ಬಣ್ಣದ ವಾಚ್‌ಗಳನ್ನು ನೀವು ಗಿಫ್ಟ್ ಆಗಿ ಕೊಡಬಹುದಾಗಿದೆ.
ಗ್ರೀಟಿಂಗ್ಸ್ ಕಾರ್ಡ್ ಕೊಡಿ: ಪ್ರೇಮಿಗಳ ದಿನಾಚರಣೆಗೆ ನೀವು ಗ್ರೀಟಿಂಗ್ಸ್ ಕಾರ್ಡ್‌ಗಳನ್ನು ಸಹ ಕೊಡಬಹುದು. ಈಗೆಲ್ಲಾ ವಾಟ್ಸಪ್ - ಇನ್ಸ್‌ಟಾದಲ್ಲಿ ನೀವು ಸಣ್ಣ ವಿಡಿಯೋವನ್ನು ಮಾಡಿ ಸಹ ಹಂಚಿಕೊಳ್ಳಬಹುದು. ಇಲ್ಲ ನಿಮ್ಮಬ್ಬರ ಮಧುರ ಕ್ಷಣಗಳ ಫೋಟೋ ಫ್ರೇಮ್ ಮಾಡಿ ಸಹ ಕೊಡಬಹುದು. ಇದು ಸಣ್ಣ ಸಣ್ಣ ಖುಷಿಯ ಕ್ಷಣಗಳನ್ನು ಹಂಚಿಕೊಳ್ಳುವ ಸಮಯವಾಗಿದೆ.
ಹ್ಯಾಂಡ್‌ಬ್ಯಾಗ್‌ಗಳು: ಈ ವಿಶೇಷ ದಿನದಂದು ನೀವು ನಿಮ್ಮ ಪ್ರೇಯಸಿಗೆ ಹ್ಯಾಂಡ್ ಬ್ಯಾಗ್‌ಗಳನ್ನು ಕೊಡಬಹುದು. ಮಾರುಕಟ್ಟೆಯಲ್ಲಿ ಈಗ ಹಲವು ಮಾದರಿಯ ಸಣ್ಣ ಹಾಗೂ ದೊಡ್ಡ ಹ್ಯಾಂಡ್ ಬ್ಯಾಗ್ ಇದೆ. ಎಲ್ಲಾ ಜಾಗಕ್ಕೂ ಕ್ಯಾರಿ ಮಾಡಬಹುದಾದ ಸಣ್ಣ ಹ್ಯಾಂಡ್ ಬ್ಯಾಗ್‌ಗಳನ್ನು ನೀವು ಗಿಫ್ಟ್ ಆಗಿ ಕೊಡಬಹುದಾಗಿದೆ. ಸಣ್ಣ ಬ್ಯಾಗ್‌ಗಳು ಈಗ ಟ್ರೆಂಡಿಂಗ್‌ನಲ್ಲಿವೆ.
ಸ್ಕಿನ್‌ಕೇರ್: ಪ್ರೇಮಿಗಳ ದಿನದಂದ ಗಿಫ್ಟ್ ಆಗಿ ಸ್ಕಿನ್ ಕೇರ್ ಇಲ್ಲವೇ ಬ್ಯೂಟಿಪಾರ್ಲರ್ ಮಾದರಿಯ ಸಣ್ಣ ಕಿಟ್ಸ್‌ಗಳನ್ನು ಸಹ ನೀವು ಗಿಫ್ಟ್ ಮಾದರಿಯಲ್ಲಿ ಕೊಡಬಹುದು. ಸ್ಕಿನ್ ಕೇರ್ ಸೆಟ್ ಬಾಕ್ಸ್‌ಗಳು ಬರುತ್ತವೆ. ಈ ರೀತಿಯ ಬಾಕ್ಸ್‌ನಲ್ಲಿ ಸ್ಕಿನ್ ಕೇರ್‌ನ ಎಲ್ಲಾ ಕ್ರಿಮ್‌ಗಳು ಸಹ ಇರುತ್ತವೆ.
ಚಿನ್ನ: ಚಿನ್ನದ ಉಂಗುರ, ಕಿವಿಯೋಲೆ ಅಥವಾ ಸಣ್ಣ ಗಿಫ್ಟ್‌ಗಳನ್ನು ಈ ಸಮಯದಲ್ಲಿ ನೀವು ಕೊಡಬಹುದಾಗಿದೆ. ಚಿನ್ನದ ಬೆಲೆ ಈಗ ತುಸು ಜಾಸ್ತಿ ಇದೆಯಾದರೂ, ಇದು ದೀರ್ಘಕಾಲದ ಹೂಡಿಕೆಯಾಗಿದೆ. ಹೀಗಾಗಿ ನೀವು ಚಿನ್ನದ ಆಭರಣವನ್ನು ಗಿಫ್ಟ್ ಆಗಿ ಕೊಡಬಹುದಾಗಿದೆ.












Click it and Unblock the Notifications