ನೀವು ಮಾಡುವ ಈ ತಪ್ಪುಗಳಿಂದಲೇ ಹಾವು ಮನೆಯತ್ತ ಸುಳಿಯುವುದು!ಈಗಲೇ ಸರಿಪಡಿಸಿಕೊಳ್ಳಿ

ಹೇಳಿ ಕೇಳಿ ಇದು ಮಳೆಗಾಲ. ಬಿಲದಲ್ಲಿ ಅಡಗಿರುವ ಹಾವುಗಳೆಲ್ಲಾ ಬಿಲ ಬಿಟ್ಟು ಹೊರ ಬರುತ್ತಿರುತ್ತವೆ. ಹೀಗೆ ಹೊರ ಬರುವ ಹಾವುಗಳು ಮಳೆಗಾಲದಲ್ಲಿ ತಾವು ಬೆಚ್ಚಗೆ ನೆಲೆ ನಿಲ್ಲುಲು ಜಾಗ ಕೂಡಾ ಹುಡುಕುತ್ತಿರುತ್ತವೆ. ಇದೇ ಹೊತ್ತಿನಲ್ಲಿ ನೀವು ತಿಳಿದೋ ತಿಳಿಯದೆಯೋ ಮಾಡುವ ಕೆಲವು ತಪ್ಪುಗಳು ಹಾವುಗಳು ನಿಮ್ಮ ಮನೆಯ ಸುತ್ತಮುತ್ತ ನೆಲೆಸುವಂತೆ ಮಾಡಿಬಿಡುತ್ತವೆ. ಈ ಹಾವುಗಳು ನೀವು ವಾಸಿಸುವ ಸ್ಳಳಕ್ಕೆ ಬಾರದಂತೆ ತಡೆಯುವುದು ಒಂದು ಸಾಹಸವೇ ಸರಿ. ಇನ್ನು ಹಾವುಗಳನ್ನು ದೂರ ಇಡಬೇಕಾದರೆ ಅದನ್ನು ನಿಮ್ಮ ಮನೆಯ ಬಳಿ ಆಕರ್ಷಿಸುವ ಅಂಶ ಯಾವುದು ಎನ್ನುವುದನ್ನು ನೀವು ತಿಳಿದುಕೊಳ್ಳಬೇಕಾಗುತ್ತದೆ. ಆಗ ಹಾವುಗಳನ್ನು ದೂರ ಇಡುವ ಕೆಲಸವನ್ನು ಸುಲಭವಾಗಿ ಮಾಡಬಹುದು.

ಸಾಕುಪ್ರಾಣಿಗಳ ಆಹಾರ ಮತ್ತು ನೀರನ್ನು ಹೊರಗೆ ಬಿಡುವುದು:

ಸಾಕುಪ್ರಾಣಿಗಳಿಗೆ ಆಹಾರ ನೀಡಿದ ನಂತರ, ಹೆಚ್ಚಿನವರು ಆಹಾರದ ಬಟ್ಟಲು ಮತ್ತು ನೀರನ್ನು ಮನೆಯ ಹೊರಗೆಯೇ ಬಿಡುತ್ತಾರೆ. ಇದು ಹಾವುಗಳನ್ನು ಆಕರ್ಷಿಸುವಲ್ಲಿ ದೊಡ್ಡ ಪಾತ್ರ ವಹಿಸುತ್ತದೆ. ಸಾಕುಪ್ರಾಣಿಗಳ ಆಹಾರವನ್ನು ಹೊರಗೆ ಬಿಟ್ಟಾಗ, ಇಲಿ ಹೆಗ್ಗಣಗಳು ಅಲ್ಲಿಗೆ ಬರುತ್ತದೆ. ಇಲಿ, ಹೆಗ್ಗಣ ಹಾವಿನ ಆಹಾರ ಎನ್ನುವುದನ್ನು ನಾವು ಮರೆಯುವಂತಿಲ್ಲ. ಹಾವುಗಳು ತಮ್ಮ ಬೇಟೆಯನ್ನು ಹುಡುಕಿಕೊಂಡು ಮನೆ ಅಂಗಳದವರೆಗೂ ಬರುತ್ತದೆ. ಅಲ್ಲಿಯೇ ಸಮೀಪದಲ್ಲಿ ಮನೆ ಮಾಡಿಕೊಳ್ಳುತ್ತದೆ. ಸಾಕು ಪ್ರಾಣಿಗಳಿಗೆ ಆಹಾರ ನೀಡಿದ ನಂತರ ಯಾವುದೇ ಕಾರಣಕ್ಕೂ ಊಟ, ನೀರಿನ ಪಾತ್ರೆಯನ್ನು ಹೊರಗೆ ಬಿಡಬೇಡಿ.

Snakes

ಇಲಿಗಳ ಸಮಸ್ಯೆಗಳನ್ನು ನಿರ್ಲಕ್ಷಿಸುವುದು:

ಹಾವುಗಳು ಇಲಿಗಳನ್ನು ತಿನ್ನುತ್ತವೆ. ನಿಮ್ಮ ಮನೆ ಅಥವಾ ಮನೆ ಸುತ್ತಮುತ್ತ ಇಲಿಗಳ ಓಡಾಟ ಹೆಚ್ಚಾಗಿದ್ದರೆ ನಿರ್ಲಕ್ಷಿಸಬೇಡಿ. ಎಲ್ಲಿ ಇಲಿಗಳಿರುತ್ತದೆಯೋ ಅಲ್ಲಿ ಹಾವುಗಳು ಕೂಡಾ ಕಾಣಿಸಿಕೊಳ್ಳುತ್ತವೆ. ಬಹುತೇಕ ಮಂದಿ ಇಲಿಗಳ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಾರೆ. ಈ ನಿಮ್ಮ ನಿರ್ಲಕ್ಷ್ಯವೇ ಹಾವುಗಳಿಗೆ ಸೂಕ್ತವಾದ ಬೇಟೆಯಾಡುವ ಸ್ಥಳವನ್ನು ಸೃಷ್ಟಿ ಮಾಡಿಕೊಡುತ್ತದೆ. ಇದರ ಬದಲು ಇಲಿಗಳ ನಿರ್ನಾಮಕ್ಕೆ ಕ್ರಮಗಳನ್ನು ತೆಗೆದುಕೊಳ್ಳಿ. ಅದರೊಂದಿಗೆ, ಆಹಾರ ಮೂಲಗಳನ್ನು ಕೂಡಾ ತೆಗೆದುಹಾಕಿ. ಪೆಸ್ಟ್‌ ಕಂಟ್ರೋಲ್‌ ಮಾಡಿಸುವುದು ಇಲಿಗಳ ಕಾಟದಿಂದ ಮುಕ್ತಿ ಪಡೆಯಲು ಇರುವ ಸೂಕ್ತ ಮಾರ್ಗವಾಗಿದೆ.

ನಿಮ್ಮ ಸುತ್ತ ಮುತ್ತ ಹಾವು ಮನೆ ಮಾಡಿದೆ ಎನ್ನುವುದನ್ನು ಸೂಚಿಸುವ ಎಚ್ಚರಿಕೆಯ ಸಂಕೇತಗಳಿವು
ನಿಮ್ಮ ಸುತ್ತ ಮುತ್ತ ಹಾವು ಮನೆ ಮಾಡಿದೆ ಎನ್ನುವುದನ್ನು ಸೂಚಿಸುವ ಎಚ್ಚರಿಕೆಯ ಸಂಕೇತಗಳಿವು

ಮರದ ರಾಶಿಗಳನ್ನು ಹಾಗೆಯೇ ಬಿಡುವುದು:

ಆಶ್ರಯವನ್ನು ಹುಡುಕುತ್ತಾ ಹಾವುಗಳು ನಿಮ್ಮ ಅಂಗಳದಲ್ಲಿಯೇ ಓಡಾಡುತ್ತಿದ್ದರೆ ಅದಕ್ಕೆ ಬೇಕಾದ ಜಾಗವನ್ನು ನೀವೇ ನಿರ್ಮಿಸಿ ಕೊಡಬೇಡಿ. ಅಂದರೆ ಮನೆಯ ಸುತ್ತಲೂ ಹಾಕಿರುವ ಮರದ ರಾಶಿಗಳು, ಎತ್ತರದ ಹುಲ್ಲು ಅಥವಾ ಕಲ್ಲಿನ ರಾಶಿಗಳ ಬಗ್ಗೆ ಯೋಚಿಸಿ. ಇವೆಲ್ಲವೂ ಹಾವುಗಳಿಗೆ ಪರಿಪೂರ್ಣ ಆಶ್ರಯವನ್ನು ಒದಗಿಸಬಹುದು. ನಿಮ್ಮ ಹುಲ್ಲುಹಾಸನ್ನು ಟ್ರಿಮ್ ಮಾಡಿ, ಸತ್ತು ಹೋಗಿರುವ ಗಿಡ ಗುಂಟೆಗಳನ್ನು ತೆಗೆದು ಹಾಕಿ. ಮರದ ತುಂಡುಗಳು ಇದ್ದರೆ ಮನೆಯಿಂದ ದೂರ ಸಂಗ್ರಹಿಸಿ. ಮಾತ್ರವಲ್ಲ ಹೀಗೆ ಸಂಗ್ರಹಿಸುವಾಗ ನೆಲದಿಂದ ಕನಿಷ್ಠ ಆರು ಇಂಚುಗಳಷ್ಟು ಎತ್ತರದಲ್ಲಿ ಸಂಗ್ರಹಿಸಿ.ನಿಮ್ಮ ಮನೆಯೆದುರು ಇರುವ ತೋಟಕ್ಕೆ ಅತಿಯಾಗಿ ನೀರು ಹಾಕಬೇಡಿ. ನೀರು ಅಲ್ಲೇ ನಿಂತರೆ
ಕೀಟಗಳು ಮತ್ತು ಸಣ್ಣ ಪ್ರಾಣಿಗಳನ್ನು ಆಕರ್ಷಿಸುತ್ತದೆ. ಈ ಕೀಟಗಳು, ಕಪ್ಪೆ ಹಾವುಗಳಿಗೆ ಸೂಕ್ತವಾದ ಭೋಜನ. ಆದ್ದರಿಂದ ನಿಮ್ಮ ಪರಿಸರವನ್ನು ತೇವವಾಗಿಡುವುದೆಂದರೆ ಹಾವುಗಳನ್ನು ಭೋಜನಕ್ಕೆ ಆಹ್ವಾನಿಸಿದಂತೆ.

ಸಣ್ಣ ಸಂದುಗಳನ್ನು ನಿರ್ಲಕ್ಷಿಸುವುದು:

ಹಾವುಗಳು ನಂಬಲಾಗದಷ್ಟು ಮೃದುವಾಗಿರುತ್ತವೆ. ಅವು ಸಣ್ಣ ಸಂದು ಸಿಕ್ಕರೂ ಸಾಕು ಒಳಗೆ ತೂರಿ ಕೊಳ್ಳುತ್ತದೆ. ಬಾಗಿಲುಗಳ ಕೆಳಗೆ, ಪರದೆಗಳ ಸುತ್ತಲೂ ಮತ್ತು ಛಾವಣಿ ಅಥವಾ ಗೋಡೆಯಲ್ಲಿ ಸಂದು ಅಥವಾ ಬಿರುಕುಗಳಿದ್ದರೆ ಅಲ್ಲಿಂದಲೇ ಹಾವು ಒಳಗೆ ಪ್ರವೇಶಿಸಬಹುದು. ಸಾಮಾನ್ಯ ಎಂಟ್ರಿ ಪಾಯಿಂಟ್‌ಗಳನ್ನು ತಡೆಗಟ್ಟಲು ಈ ಅಂತರಗಳು ಮತ್ತು ಬಿರುಕುಗಳನ್ನು ಸರಿಪಡಿಸಿ. ನಿಮ್ಮ ಮನೆಯ ಹೊರಭಾಗವನ್ನು ನಿಯಮಿತವಾಗಿ ಪರೀಕ್ಷಿಸಿ ಮತ್ತು ಯಾವುದೇ ರೀತಿಯ ಸಂದು ಮತ್ತು ಬಿರುಕುಗಳಿದ್ದರೆ ಮುಚ್ಚಿ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+