Teddy Day 2024: ಯಾವ ಬಣ್ಣದ ಟೆಡ್ಡಿ ಬೇರ್ ಯಾವ ಅರ್ಥವನ್ನು ಸೂಚಿಸುತ್ತದೆ?
ವ್ಯಾಲೆಂಟೈನ್ಸ್ ವೀಕ್ ಶುರುವಾದ ಕೂಡಲೇ ವಾತಾವರಣದಲ್ಲಿ ಪ್ರೀತಿಯ ಪರಿಮಳ ತುಂಬಿ ತುಳುಕುತ್ತಿದೆ. ಈ ವಾರ ಪ್ರೀತಿಸುವವರಿಗೆ ಹಬ್ಬವೋ ಹಬ್ಬ. ಪ್ರೇಮಿಗಳ ವಾರದ ನಾಲ್ಕನೇ ದಿನ ಅಂದರೆ ಫೆಬ್ರವರಿ 10ರಂದು ಟೆಡ್ಡಿ ಡೇ ಎಂದು ಆಚರಿಸಲಾಗುತ್ತದೆ.
ಈ ವಾರದುದ್ದಕ್ಕೂ ಜನರು ತಮ್ಮ ಪ್ರೀತಿಪಾತ್ರರಿಗೆ ದಿನಕ್ಕೆ ಅನುಗುಣವಾಗಿ ಉಡುಗೊರೆಗಳನ್ನು ನೀಡುತ್ತಾರೆ. ಜೊತೆಗೆ ಅವರ ಹೃದಯದ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಈ ಸಮಯದಲ್ಲಿ ಮಾರುಕಟ್ಟೆಯಲ್ಲಿ ಬಗೆ ಬಗೆಯ ಗುಲಾಬಿ ಹೂವುಗಳು, ರುಚಿಕರವಾದ ಚಾಕೊಲೇಟ್ಗಳು, ಪ್ರತಿಯೊಂದು ಗಾತ್ರದ ಟೆಡ್ಡಿ ಬೇರ್‌ಗಳು ನೋಡುಗರನ್ನು ಆಕರ್ಷಿಸುತ್ತಿವೆ.

ಟೆಡ್ಡಿ ದಿನದಂದು ನಿಮ್ಮ ಪ್ರೀತಿಯ ಸಂಗಾತಿಗೆ ಮಾತ್ರ ನೀವು ಟೆಡ್ಡಿಯನ್ನು ಉಡುಗೊರೆಯಾಗಿ ನೀಡುವುದಲ್ಲ. ಬದಲಿಗೆ ನೀವು ನಿಮ್ಮ ತಂಗಿ, ಮಗಳು ಅಥವಾ ವಿಶೇಷ ಸ್ನೇಹಿತರಿಗೂ ಟೆಡ್ಡಿಯನ್ನು ಉಡುಗೊರೆಯಾಗಿ ನೀಡುವ ಮೂಲಕ ಈ ದಿನವನ್ನು ಆಚರಿಸಬಹುದು.
ನಿಮ್ಮ ಪ್ರೀತಿಯ ಸಂಗಾತಿಗೆ ಟೆಡ್ಡಿಯನ್ನು ಉಡುಗೊರೆಯಾಗಿ ನೀಡಲು ನೀವು ಯೋಚಿಸುತ್ತಿದ್ದರೆ, ನೀವು ನೀಡುತ್ತಿರುವ ಟೆಡ್ಡಿಯ ಬಣ್ಣವನ್ನು ನೆನಪಿನಲ್ಲಿಡಿ. ಏಕೆಂದರೆ ಪ್ರತಿಯೊಂದು ಟೆಡ್ಡಿಯ ಬಣ್ಣಕ್ಕೂ ವಿಶೇಷ ಅರ್ಥವಿದೆ. ಟೆಡ್ಡಿ ಬೇರ್‌ಗಳ ವಿವಿಧ ಬಣ್ಣಗಳ ಅರ್ಥವೇನು ಮತ್ತು ಟೆಡ್ಡಿಯ ಹೊರತಾಗಿ, ಟೆಡ್ಡಿ ದಿನದಂದು ನೀವು ಬೇರೆ ಯಾವ ಉಡುಗೊರೆಗಳನ್ನು ನೀಡಬಹುದು ಎಂಬುದನ್ನು ತಿಳಿಯೋಣ.
1. ನೀಲಿ ಟೆಡ್ಡಿ ಬೇರ್
ನೀಲಿ ಬಣ್ಣದ ಟೆಡ್ಡಿ ಬೇರ್ ನಿಮ್ಮ ಪ್ರೀತಿಯನ್ನು ಪ್ರತಿನಿಧಿಸುತ್ತದೆ. ಹುಡುಗಿಗೆ ನೀಲಿ ಬಣ್ಣದ ಟೆಡ್ಡಿ ಬೇರ್ ಉಡುಗೊರೆಯಾಗಿ ಬಂದರೆ, ಅಂಥವರು ತುಂಬಾ ಅದೃಷ್ಟವಂತರು ಎಂದು ಭಾವಿಸಿ. ಯಾಕೆಂದರೆ ನಿಮ್ಮ ಮುಂದೆ ಇರುವ ವ್ಯಕ್ತಿ ನಿಮ್ಮನ್ನು ತುಂಬಾ ಪ್ರೀತಿಸುತ್ತಿದ್ದಾನೆ ಎಂದು ಅದು ಸೂಚಿಸುತ್ತದೆ.
2. ಹಸಿರು ಟೆಡ್ಡಿ ಬೇರ್
ಹಸಿರು ಬಣ್ಣವು ಪ್ರಕೃತಿ ಮತ್ತು ತಾಜಾತನದೊಂದಿಗೆ ಸಂಬಂಧಿಸಿದೆ. ನೀವು ಈ ಬಣ್ಣದ ಟೆಡ್ಡಿಯನ್ನು ಪಡೆದರೆ, ನಿಮ್ಮ ಸಂಗಾತಿ ಯಾವಾಗಲೂ ನಿಮಗಾಗಿ ಕಾಯುತ್ತಾರೆ ಎಂದರ್ಥ.
3. ಕೆಂಪು ಟೆಡ್ಡಿ ಬೇರ್
ಕೆಂಪು ಬಣ್ಣ ಪ್ರೀತಿಯನ್ನು ಪ್ರತಿನಿಧಿಸುತ್ತದೆ. ಇದು ನಿಮ್ಮ ಸಂಗಾತಿಯ ಎಂದಿಗೂ ಮುಗಿಯದ ಪ್ರೀತಿ ಮತ್ತು ಉತ್ಸಾಹದ ಭಾವನೆಯನ್ನು ವ್ಯಕ್ತಪಡಿಸುತ್ತದೆ.
4. ಕಪ್ಪು ಟೆಡ್ಡಿ ಬೇರ್
ನಿಮ್ಮ ಸಂಗಾತಿಯಿಂದ ನೀವು ಕಪ್ಪು ಟೆಡ್ಡಿ ಬೇರ್ ಸ್ವೀಕರಿಸಿದರೆ, ಅವನು ಅಥವಾ ಅವಳು ನಿಮ್ಮ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ ಎಂದು ಸೂಚಿಸುತ್ತದೆ.

5. ವೈಟ್ ಟೆಡ್ಡಿ ಬೇರ್
ಟೆಡ್ಡಿ ಡೇಯಂದು ನೀವು ಈ ಬಣ್ಣದ ಟೆಡ್ಡಿ ಬೇರ್ ಅನ್ನು ಪಡೆದರೆ, ನಿಮ್ಮ ಸಂಗಾತಿ ಈಗಾಗಲೇ ಬೇರೊಬ್ಬರೊಂದಿಗೆ ಸಂಬಂಧವನ್ನು ಹೊಂದಿದ್ದಾರೆ ಎಂದು ಅರ್ಥ.

6. ಆರೆಂಜ್ ಟೆಡ್ಡಿ ಬೇರ್
ಸಂತೋಷ ಮತ್ತು ಸಕಾರಾತ್ಮಕ ಶಕ್ತಿಯೊಂದಿಗೆ ಸಂಬಂಧಿಸಿದ ಈ ಬಣ್ಣದ ಗೊಂಬೆಯನ್ನು ಟೆಡ್ಡಿ ದಿನದಂದು ನೀವು ಪಡೆದರೆ ನಂತರ ಪ್ರೇಮಿಗಳ ದಿನಕ್ಕೆ ಸಿದ್ಧರಾಗಿರಿ ಎಂದು ಸೂಚಿಸುತ್ತದೆ.

7. ಪಿಂಕ್ ಟೆಡ್ಡಿ ಬೇರ್
ಈ ಬಣ್ಣ ಪ್ರೀತಿ ಮತ್ತು ಕಾಳಜಿಯನ್ನು ತೋರಿಸುತ್ತದೆ. ಪಿಂಕ್ ಟೆಡ್ಡಿ ಬೇರ್ ಪಡೆದರೆ ಇತರ ವ್ಯಕ್ತಿಯು ನಿಮ್ಮ ಪ್ರಸ್ತಾಪವನ್ನು ಒಪ್ಪಿಕೊಂಡಿದ್ದಾರೆ ಎಂದರ್ಥ.

8. ಪರ್ಪಲ್ ಟೆಡ್ಡಿ ಬೇರ್
ಈ ಬಣ್ಣವು ರೋಮ್ಯಾಂಟಿಕ್ ವಾತಾವರಣವನ್ನು ಸೃಷ್ಟಿಸಲು ಉತ್ತಮವಾಗಿದೆ. ಪಿಂಕ್ ಟೆಡ್ಡಿ ಬೇರ್ ಬಂದಾಗ, ಇತರ ವ್ಯಕ್ತಿಯು ನಿಮ್ಮ ಬಗ್ಗೆ ಆಸಕ್ತಿ ಹೊಂದಿಲ್ಲ ಮತ್ತು ಆದರೆ ಸ್ನೇಹ ಸಂಬಂಧದಲ್ಲಿ ಮುಂದುವರಿಯುವುದನ್ನು ಸೂಚಿಸುತ್ತದೆ.

9. ಹಳದಿ ಟೆಡ್ಡಿ ಬೇರ್
ಹಳದಿ ಬಣ್ಣದ ಟೆಡ್ಡಿ ಬೇರ್ ಸಕಾರಾತ್ಮಕತೆಯ ಸಂಕೇತವಾಗಿದೆ. ಆದರೆ ಟೆಡ್ಡಿ ಡೇಯಲ್ಲಿ ಈ ಬಣ್ಣದ ಟೆಡ್ಡಿ ಬೇರ್ ಅನ್ನು ಪಡೆಯುವುದು ಒಳ್ಳೆಯದಲ್ಲ. ವ್ಯಕ್ತಿಯು ನಿಮ್ಮೊಂದಿಗೆ ಸಂಬಂಧ ಮುರಿಯಲು ಬಯಸುತ್ತಾನೆ ಎಂದು ಇದು ತೋರಿಸುತ್ತದೆ.

10. ಬ್ರೌನ್ ಟೆಡ್ಡಿ ಬೇರ್
ನಿಮ್ಮ ಕಾರಣದಿಂದಾಗಿ ಯಾರೊಬ್ಬರ ಹೃದಯವು ಮುರಿದುಹೋದರೆ, ಇದನ್ನು ವ್ಯಕ್ತಪಡಿಸಲು ಅವರು ನಿಮಗೆ ಕಂದು ಬಣ್ಣದ ಟೆಡ್ಡಿಯನ್ನು ನೀಡಬಹುದು.
ಟೆಡ್ಡಿ ದಿನದಂದು ನೀವು ಈ ಉಡುಗೊರೆಗಳನ್ನು ನೀಡಬಹುದು
ನಿಮ್ಮ ಸಂಗಾತಿಗೆ ಚಾಕೊಲೇಟ್ ಇಷ್ಟವಾದರೆ ನೀವು ಅವರಿಗೆ ಟೆಡ್ಡಿ ಆಕಾರದ ಚಾಕೊಲೇಟ್ ಉಡುಗೊರೆಯಾಗಿ ನೀಡಬಹುದು. ನೀವು ಟೆಡ್ಡಿ ಮುದ್ರಿತ ಟೀ ಶರ್ಟ್, ಉಡುಗೆ ಅಥವಾ ಕ್ಯಾಪ್ ನೀಡಬಹುದು. ಈ ದಿನ ನೀವು ಅವರಿಗೆ ಟೆಡ್ಡಿ ವಿನ್ಯಾಸದ ಚಪ್ಪಲಿಗಳು, ಉಂಗುರಗಳು, ಕೂ ಚೈನ್ ಇತ್ಯಾದಿಗಳನ್ನು ಸಹ ನೀಡಬಹುದು.












Click it and Unblock the Notifications