Summer Drinks Recipe: ಬೇಸಿಗೆಗೆ ದೇಹ ತಂಪಾಗಿಸುವ ಪಾನೀಯಗಳನ್ನು ಮನೆಯಲ್ಲೇ ತಯಾರಿಸಿ

ಚಳಿಗಾಲ ಮುಗಿದು ಬೇಸಿಗೆ ಕಾಲ ಶುರುವಾಗುತ್ತಿದೆ. ಬೇಸಿಗೆಯಲ್ಲಿ ತಂಪಾದ ಪಾನೀಯಗಳನ್ನು ಕುಡಿದರೆ ಅದರಲ್ಲಿರುವ ಆನಂದವೇ ಬೇರೆ. ಕೆಲ ಪಾನೀಯಗಳು ದೇಹಕ್ಕೆ ತಂಪು ನೀಡುವುದು ಮಾತ್ರವಲ್ಲದೆ ಆರೋಗ್ಯಕ್ಕೂ ಕೂಡ ತುಂಬಾ ಪ್ರಯೋಜನಕಾರಿಯಾಗಿವೆ. ಅಂತಹ ಪಾನೀಯಗಳ ವಿವರ ಹಾಗೂ ತಯಾರಿಸುವ ವಿಧಾನ ಇಲ್ಲಿದೆ.

ರಾಗಿ ಗಂಜಿ

ರಾಗಿ ಗಂಜಿಯನ್ನು ಮನೆಯಲ್ಲಿ ತಯಾರಿಸಬಹುದು. ಮೊದಲಿಗೆ ಮೂರು ಟೇಬಲ್ ಸ್ಪೂನ್ ರಾಗಿ ಹಿಟ್ಟನ್ನು ಒಂದು ಬಟ್ಟಲಿನಲ್ಲಿ ಹಾಕಿ ಅದಕ್ಕೆ ಸ್ವಲ್ಪ ನೀರು ಹಾಕಿ ಗಂಟಾಗದಂತೆ ಹಾಲಿನ ಹದಕ್ಕೆ ಕಲಿಸಿಕೊಳ್ಳಿ. ಬಳಿಕ ಎರಡು ಲೋಟದಷ್ಟು ನೀರನ್ನು ಒಂದು ಪಾತ್ರೆಯಲ್ಲಿ ಹಾಕಿ ಅದಕ್ಕೆ ಸ್ವಲ್ಪ ಉಪ್ಪು ಹಾಕಿ ಕುದಿಸಿ. ನೀರು ಕುದಿಯುವಾಗ ಅದಕ್ಕೆ ಕಾಲ್ ಚಮಚ ಜೀರಿಗೆ ಹಾಕಿ, ಒಂದು ಎಸಳು ಜಜ್ಜಿದ ಬೆಳ್ಳುಳ್ಳಿ ಹಾಕಿ. ಬಳಿಕ ನೀರಿನಲ್ಲಿ ಕಲಸಿದ ರಾಗಿ ಹಿಟ್ಟನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಗಂಜಿ ಗಟ್ಟಿಯಾಗುವವರೆಗೂ ಕುದಿಸಿ. ಗಂಜಿ ಜಾಮ್‌ನಂತೆ ಆದ ಬಳಿಕ ಅದನ್ನು ತಣ್ಣಗಾಗಲು ಬಿಟ್ಟು ಅರ್ಧ ಲೋಟ ಗಂಜಿಗೆ ಅರ್ಧ ಲೋಟ ಮಜ್ಜಿಗೆ ಬೆರೆಸೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುಡಿಯಿರಿ. ಇದು ಬೇಸಿಗೆಗೆ ದೇಹವನ್ನು ತಂಪಾಗಿಡುವುದು ಮಾತ್ರವಲ್ಲದೆ, ಆರೋಗ್ಯಕ್ಕೂ ಒಳ್ಳೆಯದು.

summer drinks recipe prepare cool drinks for summer at home

ಮಜ್ಜಿಗೆ

ಮಜ್ಜಿಗೆಯನ್ನು ಸಾಮಾನ್ಯವಾಗಿ ಮನೆಯಲ್ಲಿ ಎಲ್ಲಾ ಗೃಹಿಣಿಯರು ತಯಾರಿಸುತ್ತಾರೆ. ಆದರೆ ಹೋಟೆಲ್ ಶೈಲಿಯಲ್ಲಿ ಮಜ್ಜಿಗೆಯನ್ನು ತಯಾರಿಸಬೇಕು ಅಂದರೆ ಗಟ್ಟಿ ಮೊಸರು ಕಾಲ್ ಲೀಟರ್‌ ತೆಗೆದುಕೊಂಡು ಗಂಟಿರದಂತೆ ಚೆನ್ನಾಗಿ ಮಿಕ್ಸ್ ಮಾಡಿ( ಮಿಕ್ಸಿಗೂ ಹಾಕಿಕೊಳ್ಳಬಹುದು). ನಂತರ ಇದಕ್ಕೆ ಒಂದು ಲೋಟ ನೀರು ಬೆರೆಸಿ, ರುಚಿಗೆ ತಕ್ಕಷ್ಟು ಉಪ್ಪು, ಒಂದು ಚಿಕ್ಕದಾಗಿ ಹೆಚ್ಚಿದ ಹಸಿ ಮೆಣಸಿನಕಾಯಿ, ಸಣ್ಣದಾಗಿ ಹೆಚ್ಚಿದ ಈರುಳ್ಳಿ ಕಾಲ್ ಚಮಚ ಹಾಗೂ ಸ್ವಲ್ಪ ಕೊತ್ತಂಬರಿ ಸೊಪ್ಪು, ಜಜ್ಜಿದ ಚೂರು ಶುಂಠಿ ಎಲ್ಲವನ್ನೂ ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿದರೆ ರುಚಿಯಾದ ಮಜ್ಜಿಗೆ ಕುಡಿಯಲು ಸಿದ್ಧವಾಗುತ್ತದೆ.

summer drinks recipe prepare cool drinks for summer at home

ನಿಂಬೆ ಪಾನಕ

ನಿಂಬೆ ಹಣ್ಣಿನ ಪಾನಕ ಬೇಸಿಗೆ ಕಾಲಕ್ಕೆ ದೇಹವನ್ನು ತಂಪಾಗಿಡುತ್ತದೆ. ಇದನ್ನು ನೀವು ಮನೆಯಲ್ಲಿ ರುಚಿಯಾಗಿ ತಯಾರಿಸಬಹುದು. ಇದರ ರುಚಿಯನ್ನು ಹೆಚ್ಚಿಸಲು ಕೆಲ ಮಾರ್ಗಗಳಿದೆ. ಅದನ್ನು ಅನುಸರಿಸಿದರೆ ರುಚಿಯಾದ ನಿಂಬೆ ಹಣ್ಣಿನ ಪಾನಕ ತಯಾರಿಸಬಹುದು. ಇದು ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೆ ಇಷ್ಟವಾಗುತ್ತದೆ.

summer drinks recipe prepare cool drinks for summer at home

ನಿಂಬೆ ಪಾನಕ ಮಾಡಲು ಮೊದಲಿಗೆ ಒಂದು ನಿಂಬೆ ಹಣ್ಣು ತೆಗೆದುಕೊಳ್ಳಿ. ಅದರ ರಸವನ್ನು ತೆಗೆದು ಬೀಜವನ್ನು ತೆಗೆಯಿರಿ. ಒಂದು ಲೋಟದ ತುಂಬಾ ನೀರು ಹಾಕಿ ಇದಕ್ಕೆ ಬೇಕಾದಷ್ಟು ಸಕ್ಕರೆ ಹಾಕಿ ಸಕ್ಕರೆ ಕರಗುವವರೆಗೂ ಮಿಕ್ಸ್ ಮಾಡಿ. ನಂತರ ಇದಕ್ಕೆ ಜೀರಿಗೆ ಪುಡಿ, ಸ್ವಲ್ಪ ಬೆಲ್ಲ, ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಒಂದು ಎಲೆ ಪುದೀನ ಹಾಕಿ ಮಿಕ್ಸ್‌ ಮಾಡಿ ಕುಡಿಯಿರಿ.

ಹೀಗೆ ಬೇಸಿಗೆಗೆ ಈ ಮೂರು ಪಾನೀಯಗಳನ್ನು ಸೇವಿಸುವುದರಿಂದ ದೇಹ ತಂಪಾಗಿರುತ್ತದೆ. ಅಲ್ಲದೆ ಇದು ಆರೋಗ್ಯವನ್ನೂ ಪೋಷಣೆ ಮಾಡುತ್ತದೆ. ಇದನ್ನು ನೀವು ಒಮ್ಮೆ ಮನೆಯಲ್ಲಿ ಟ್ರೈ ಮಾಡಿ. ನಿಮ್ಮ ಅನುಭವವನ್ನು ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+