Spicy Tomato Rice Recipe: ಸ್ಪೈಸಿ ಟೊಮೆಟೋ ರೈಸ್ ರೆಸಿಪಿ- ಮನೆಯಲ್ಲಿ ಮಾಡಿ ತಿಂದು ತೇಗಿ..

ಅಮ್ಮ ನೀನು ಯಾವಾಗಲು ಸಪ್ಪೆ ಸಪ್ಪೆ ಅಡುಗೆ ಮಾಡ್ತಿಯಾ.... ಅಂತ ನಿಮ್ಮ ಮಕ್ಕಳು ಹಾಗೂ ಕುಟುಂಬ ಸದಸ್ಯರು ನಿಮ್ಮನ್ನು ದೂರ್ತಾರಾ? ಹಾಗಾದರೆ ಯೋಚನೆ ಮಾಡಬೇಡಿ. ಇವತ್ತು ನಾವು ನಿಮಗೊಂದು ಖಾದ್ಯವನ್ನು ಹೇಳಿಕೊಡುತ್ತೇವೆ. ಇದು ಸ್ಪೈಸಿ ಟೊಮೆಟೋ ರೈಸ್. ಇದನ್ನು ನೀವು ಮನೆಯಲ್ಲಿ ರೆಡಿ ಮಾಡಿದರೆ ಖಂಡಿತ ನಿಮ್ಮ ಮಕ್ಕಳು ಹಾಗೂ ಕುಟುಂಬ ಸದಸ್ಯರ ಮೆಚ್ಚುಗೆಯನ್ನು ಪಡೆದುಕೊಳ್ಳುವುದರಲ್ಲಿ ಅನುಮಾನವೇ ಇಲ್ಲ.

ಟೊಮೆಟೋ ರೈಸ್... ಹೆಸರೇ ಹೇಳುವಂತೆ ಇದರಲ್ಲಿ ಟೊಮೆಟೊ ಸ್ವಲ್ಪ ಜಾಸ್ತಿನೇ ಇರುತ್ತೆ. ಆದರೆ ಇದರಲ್ಲಿ ಹುಳಿ ಉಪ್ಪು ಖಾರ ಸಮನಾಗಿದ್ದರೆ ಇದನ್ನು ತಿನ್ನುವುದರಲ್ಲಿ ಇರುವ ಮಜನಾ ಬೇರೆ. ಹಾಗಾದರೆ ತಡ ಮಾಡುವುದು ಬೇಡ ಸ್ಪೈಸಿ ಟೊಮೆಟೋ ರೈಸ್ ಮಾಡುವ ವಿಧಾನವನ್ನು ತಿಳಿದುಕೋಮಡು ಬಿಡೋಣ.

Spicy Tomato Rice Recipe: how to make Spicy Tomato Rice at home in Kannada

ಸ್ಪೈಸಿ ಟೊಮೆಟೋ ರೈಸ್ ಮಾಡಲು ಬೇಕಾಗುವ ಪದಾರ್ಥಗಳು:-

* ಅಕ್ಕಿ ಒಂದು ಕಪ್

* ಟೊಮೆಟೊ 2-3 (ಚಿಕ್ಕದು)

* ಈರುಳ್ಳಿ 1

*ಕೆಂಪು ಖಾರದ ಪುಡಿ 1 ಟೇಬಲ್ ಸ್ಪೂನ್

*ಕಾಳುಮೆಣಸು 2-3

*ಲವಂಗಾ 2

*ಚಕ್ಕೆ 1

*ಪಲಾವ್ ಎಲೆ 1

* ಎಣ್ಣೆ

* ಹುಣಸೆಹಣ್ಣು ಸ್ವಲ್ಪ

*ಉಪ್ಪು

*ಗೋಡಂಬಿ 3

*ಕರಿಬೇವು ಸ್ವಲ್ಪ

Spicy Tomato Rice Recipe: how to make Spicy Tomato Rice at home in Kannada

ಸ್ಪೈಸಿ ಟೊಮೆಟೋ ರೈಸ್ ತಯಾರಿಸುವ ವಿಧಾನ:-

* ಮೊದಲಿಗೆ ಟೊಮೆಟೊ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ.

*ಒಂದು ಕುಕ್ಕರ್ ಒಲೆಯ ಮೇಲೆ ಇಟ್ಟು ಮೂರು ಟೀ ಸ್ಪೂನ್ ಎಣ್ಣೆ ಹಾಕಿ. ಬಿಸಿ ಆದ ಬಳಿಕ ಈರುಳ್ಳಿ ಹಾಕಿ ಹುರಿಯಿರಿ. ಈರುಳ್ಳಿ ಕೆಂಪಾದ ಬಳಿಕ ಟೊಮೆಟೊ ಪೇಸ್ಟ್ ಹಾಕಿ ಎಣ್ಣೆ ಮೇಲೆ ಕಾಣಿಸುವವರೆಗೂ ಸಣ್ಣ ಉರಿಯಲ್ಲಿ ಬೇಯಿಸಿ.

* ನಂತರ ಇದಕ್ಕೆ ಕಾಳುಮೆಣಸು, ಲವಂಗಾ, ಚಕ್ಕೆ, ಪಲಾವ್ ಎಲೆ ಹಾಕಿ ಕಲಸಿ. ಹುಣಸೆಹಣ್ಣಿನ ರಸವನ್ನು ಹಾಕಿ ಸ್ವಲ್ಪ ಹೊತ್ತು ಬಿಡಿ.

* ಬಳಿಕ ಕೆಂಪು ಖಾರದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಗೋಡಂಬಿ, ಕರಿಬೇವು ಹಾಕಿ ಫ್ರೈ ಮಾಡಿ.

* ಎಣ್ಣೆ ಮೇಲೆ ಕಾಣಿಸಿಕೊಂಡರೆ ಟೊಮೆಟೊ ಬೆಂಬಿದೆ ಎಂದು ಅರ್ಥ. ಆಗ ಎರಡು ಕಪ್ ನೀರು ಹಾಕಿ, ತೊಳೆದು ಹತ್ತು ನಿಮಿಷ ನೆನೆಸಿದ ಅಕ್ಕಿಯನ್ನು ಹಾಕಿ.

* ಕುಕ್ಕರ್ ಮುಚ್ಚಿ ಮಧ್ಯಮ ಗಾತ್ರದ ಉರಿಯಲ್ಲಿ ಮೂರು ವಿಸಿಲ್ ಬರುವವರೆಗೂ ಬಿಡಿ.

* ಗ್ಯಾಸ್ ಆಫ್ ಮಾಡಿ ಐದು ನಿಮಿಷ ಬಿಡಿ. ಬಳಿಕ ಬಿಸಿ ಬಿಸಿ ಸ್ಪೈಸಿ ಟೊಮೆಟೋ ರೈಸ್ ಸವಿಯಲು ಸಿದ್ಧ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+