ನಿರಂತರ ಹೈ ಹೀಲ್ಸ್ ಧರಿಸುವವರಿಗೆ ಎದುರಾಗುವುದು ಈ ಸಮಸ್ಯೆ!

ಇತ್ತೀಚಿನ ದಿನಗಳಲ್ಲಿ, ಹೀಲ್ಸ್ ಧರಿಸುವುದು ಫ್ಯಾಶನ್ ಆಗಿದೆ. ಮಹಿಳೆಯರು ಸ್ಟೈಲಿಶ್ ಲುಕ್ ಕಾಯ್ದುಕೊಳ್ಳುವ ಸಲುವಾಗಿ ಪಾರ್ಟಿಗಳಿಗೆ ತೆರಳುವಾಗ, ಕಚೇರಿಗೆ ಹೋಗುವಾಗ ಹೀಗೆ ಗಂಟೆಗಟ್ಟಲೆ ಹೀಲ್ಸ್ ಧರಿಸುತ್ತಾರೆ. ಆದರೆ ದೀರ್ಘಕಾಲದವರೆಗೆ ಹೀಲ್ಸ್ ಧರಿಸುವುದರಿಂದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಇದು ನೇರವಾಗಿ ಮೊಣಕಾಲುಗಳ ಮೇಲೆ ಪರಿಣಾಮ ಬೀರುತ್ತದೆ. ದೀರ್ಘಕಾಲದವರೆಗೆ ಹೈ ಹೀಲ್ಸ್ ಧರಿಸುವುದರಿಂದ ದೇಹಕ್ಕೆ ಉಂಟಾಗುವ ಹಾನಿಯ ಬಗ್ಗೆ ಮಾಹಿತಿ ಇಲ್ಲಿದೆ.

ಹೀಲ್ಸ್ ಧರಿಸುವುದರಿಂದ ಮೊಣಕಾಲುಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ.

ವೈದ್ಯರ ಪ್ರಕಾರ, ಪ್ರತಿದಿನ ಮತ್ತು ದೀರ್ಘಕಾಲದವರೆಗೆ ಹೀಲ್ಸ್ ಧರಿಸುವುದರಿಂದ ದೇಹದ ಸಮತೋಲನ ಮತ್ತು ನಡಿಗೆಯ ಮಾದರಿಗಳು ಬದಲಾಗುತ್ತವೆ. ಮೊಣಕಾಲುಗಳ ಮೇಲೆ ಹೆಚ್ಚಿನ ಒತ್ತಡ ಉಂಟಾಗುತ್ತದೆ. ಮೊಣಕಾಲುಗಳ ಮೇಲೆ ಹೆಚ್ಚಾಗುವ ಈ ಒತ್ತಡ ಮಂಡಿ ಮತ್ತು ಸ್ನಾಯುಗಳ ಮೇಲಿನ ಒತ್ತಡವನ್ನು ಹೆಚ್ಚಿಸುತ್ತದೆ. ಇದು ಮೊಣಕಾಲು ನೋವು ಮತ್ತು ಬಿಗಿತಕ್ಕೆ ಕಾರಣವಾಗುತ್ತದೆ.

Wearing high heels

ನೋವು ಮತ್ತು ಬಿಗಿತ:

ದೀರ್ಘಕಾಲದವರೆಗೆ ಹೀಲ್ಸ್ ಧರಿಸುವುದರಿಂದ ಗಂಭೀರ ಸಮಸ್ಯೆಗಳು ಉಂಟಾಗಬಹುದು. ಆರಂಭದಲ್ಲಿ, ಅವು ಸೌಮ್ಯ ನೋವು ಮತ್ತು ಬಿಗಿತವನ್ನು ಉಂಟುಮಾಡಬಹುದು. ಆದರೆ, ಕ್ರಮೇಣ ಇದು ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. ನಿರಂತರ ಒತ್ತಡವು ಮಂಡಿ ಸವೆತದ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಇದು ಸಂಧಿವಾತದ ಅಪಾಯವನ್ನು ಕೂಡಾ ಉಂಟು ಮಾಡುತ್ತದೆ.

ಸ್ನಾಯುಗಳು ದುರ್ಬಲವಾಗುತ್ತವೆ:

ದೀರ್ಘಕಾಲದವರೆಗೆ ಎತ್ತರದ ಹಿಮ್ಮಡಿಯ ಬೂಟುಗಳನ್ನು ಧರಿಸುವುದರಿಂದ ಸ್ನಾಯುಗಳು ದುರ್ಬಲಗೊಳ್ಳುತ್ತವೆ. ಇದರಿಂದಾಗಿ ದೇಹದ ತೂಕದ ಭಾರ ಮೊಣಕಾಲುಗಳ ಮೇಲೆ ಬೀಳುತ್ತದೆ.

ಈ ವಿಷಯಗಳ ಬಗ್ಗೆ ಇರಲಿ ಎಚ್ಚರ:

ಹೈ ಹೀಲ್ಸ್ ಧರಿಸುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ. 2 ರಿಂದ 3 ಇಂಚುಗಳಿಗಿಂತ ಹೆಚ್ಚಿನ ಹೀಲ್ಸ್ ಧರಿಸುವುದರಿಂದ ಒತ್ತಡ ಹೆಚ್ಚಾಗುತ್ತದೆ. ತೆಳುವಾದ ಹೀಲ್ಸ್ ಧರಿಸುವುದರಿಂದ ಸಮತೋಲನಕ್ಕೂ ಅಡ್ಡಿಯಾಗುತ್ತದೆ. ಮೊನಚಾದ ಹೀಲ್ಸ್ ಪಾದಗಳ ನೈಸರ್ಗಿಕ ಚಲನೆಯನ್ನು ನಿರ್ಬಂಧಿಸುತ್ತದೆ. ಮೊಣಕಾಲುಗಳ ಮೇಲೆ ಹೆಚ್ಚುವರಿ ಒತ್ತಡವನ್ನು ಬೀರುತ್ತದೆ.

ತಜ್ಞರ ಪ್ರಕಾರ, ಕಡಿಮೆ ಎತ್ತರದ ಹೀಲ್ಸ್ ಧರಿಸಬೇಕು.
ಬಲ್ಕ್ ಹೀಲ್ಸ್ ಅಥವಾ ವೆಡ್ಜ್ ಹೀಲ್ಸ್ ಧರಿಸಬೇಕು.
2 ರಿಂದ 4 ಗಂಟೆಗಳಿಗಿಂತ ಹೆಚ್ಚು ಕಾಲ ಹೀಲ್ಸ್ ಧರಿಸಬಾರದು.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+