ಬೇಕಾಬಿಟ್ಟಿ ಪ್ಯಾರಾಸಿಟಮಲ್ ತೆಗೆದುಕೊಂಡರೆ ಈ ಸಮಸ್ಯೆ ಫಿಕ್ಸ್ ಹುಷಾರ್!
ನೀವು ರೆಗ್ಯೂಲರ್ ಆಗಿ ಪ್ಯಾರಾಸಿಟಮಲ್ (ಜ್ವರದ ಮಾತ್ರೆ)ಗಳನ್ನು ತೆಗೆದುಕೊಳ್ಳುತ್ತಿದ್ದರೆ ತಪ್ಪದೆ ಈ ಸುದ್ದಿ ಓದಿ. ಕೋವಿ*ನ ನಂತರ ಪ್ಯಾರಾಸಿಟಮಲ್ ಮಾತ್ರೆಗಳನ್ನು ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಈ ರೀತಿ ಮಾತ್ರೆಗಳನ್ನು ಸೇವಿಸುವುದು ಜೀವಕ್ಕೆ ಸಂಕಷ್ಟ ತರುವ ಸಾಧ್ಯತೆ ಇದೆ ಎಂದು ಹೊಸ ಅಧ್ಯಯನ ವರದಿ ಎಚ್ಚರಿಸಿದೆ. ಹೌದು, ಪ್ಯಾರಾಸಿಟಮಲ್ ನಿರಂತರವಾಗಿ ತೆಗೆದುಕೊಳ್ಳುವುದರಿಂದ ಆರೋಗ್ಯ ಹಾಗೂ ಹೃದಯದ ಆರೋಗ್ಯದ ಮೇಲೂ ಸಮಸ್ಯೆ ಬೀರುವ ಸಾಧ್ಯತೆ ಇದೆ ಅಂತ ಹೇಳಲಾಗಿದೆ. ಹಾಗಾದರೆ ಪ್ಯಾರಾಸಿಟಲಮ್ ತೆಗೆದುಕೊಂಡರೆ ಏನೆಲ್ಲಾ ಆಗುತ್ತೆ ಅಂತ ಇಲ್ಲಿದೆ ವಿವರ..
ಪ್ಯಾರಾಸಿಟಮಲ್ ತೆಗೆದುಕೊಳ್ಳುವುದರಿಂದ ನಿಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಅಂತ ಹೇಳಲಾಗಿದೆ. ನೋವು ನಿವಾರಕ ಪ್ಯಾರಸಿಟಮಾಲ್ ಅನ್ನು ಬೇಕಾಬಿಟ್ಟಿ ಸೇವಿಸಿದರೆ ಅಡ್ಡಪರಿಣಾಮ ಉಂಟಾಗುವ ಸಾಧ್ಯತೆ ಇದೆ. Stada ಆರೋಗ್ಯ ವರದಿಯು ಪ್ಯಾರಸಿಟಮಾಲ್ ಬೇಕಾಬಿಟ್ಟಿ ಸೇವಿಸುವುದರಿಂದ ಏನೆಲ್ಲಾ ಆಗಲಿದೆ ಎನ್ನುವ ಬಗ್ಗೆ ಸುದೀರ್ಘ ವರದಿಯನ್ನು ಪ್ರಕಟಿಸಿದೆ. ಜರ್ಮನಿಯಲ್ಲಿ ಪ್ರತಿ ವರ್ಷ ನೋವು ನಿವಾರಕಗಳ ಮಾರಾಟ ಜಾಸ್ತಿ ಆಗುತ್ತಿದೆ. ಅಲ್ಲಿ ಜನರ ಮೇಲೆ ಇದು ಯಾವ ರೀತಿ ಪರಿಣಾಮ ಬೀರುತ್ತದೆ ಎನ್ನುವ ವಿವರ ಇಲ್ಲಿದೆ.

ಜರ್ಮನಿಯಲ್ಲಿ ನಾಲ್ವರಲ್ಲಿ ಒಬ್ಬರು ವಾರಕ್ಕೊಮ್ಮೆಯಾದರೂ ಪ್ಯಾರಾಸಿಟಮಲ್ ತಗೋತಾರಂತೆ. ತಲೆನೋವು ಹಾಗೂ ಜ್ವರಕ್ಕೆ ವೈದ್ಯರು ನೀಡುವ ಮಾತ್ರೆ ಬೇರೆ. ಆದರೆ ನೀವಾಗಿಯೇ ಮಾತ್ರ ತಗೆದೆಕೊಂಡರೆ ಸಂಕಷ್ಟ ಎದುರಾಗಲಿದೆ. ಜನ ಈಗೆಲ್ಲ ಸಣ್ಣದಾಗಿ ಜ್ವರ ಬರುವಂತೆ ಇದೆ ಎಂದು ಅನಿಸಿದರೂ.
ಜ್ವರದ ಮಾತ್ರೆಗಳನ್ನು ತೆಗೆದುಕೊಳ್ಳುವುದು ಇದೆ. ಇದರಿಂದ ದೇಹದಲ್ಲಿನ ರೋಗ ನಿರೋಧಕ ಶಕ್ತಿಯ ಮೇಲೂ ಪರಿಣಾಮ ಬೀರುತ್ತದೆ. ರೋಗ ನಿರೋಧ ಶಕ್ತಿ ಕಡಿಮೆಯಾದಂತೆ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತವೆ. ಹೀಗಾಗಿ ಒಂದಕ್ಕೊಂದು ಸಂಬಂಧ ಹೊಂದಿವೆ. ಇನ್ನು ಹೆಚ್ಚಾಗಿ ಜ್ವರದ ಮಾತ್ರೆ ತೆಗೆದುಕೊಂಡರೆ, ದೇಹದಲ್ಲಿ ಆಮ್ಲೀಕರಣಕ್ಕೆ ಕಾರಣವಾಗಬಹುದು ಎಂದು ಅಧ್ಯಯನ ವರದಿ ಎಚ್ಚರಿಕೆ ಕೊಟ್ಟಿದೆ.

ರಕ್ತನಾಳಗಳ ಮೇಲೆ ಪರಿಣಾಮ: ನಿರಂತರವಾಗಿ ಜ್ವರದ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ದೇಹದಲ್ಲಿನ ರಕ್ತನಾಳಗಳ ಮೇಲೆ ಪರಿಣಾಮ ಬೀರಲಿದೆ. ಅಲ್ಲದೆ, ಹೃದಯದ ಸಮಸ್ಯೆಗೆ ಕಾರಣವಾಗಬಹುದು. ಅಲ್ಲದೆ ತಲೆನೋವಿನ ಸಮಸ್ಯೆ ಸಹ ಕಾಣಿಸಿಕೊಳ್ಳಬಹುದು ಎಂದು ವರದಿ ಹೇಳಿದೆ. ಹೀಗಾಗ, ಜ್ವರ ಅಥವಾ ಆರೋಗ್ಯ ಸಮಸ್ಯೆ ಪೂರ್ವದಲ್ಲಿ ಜ್ವರದ ಮಾತ್ರೆ ಸೇವಿಸುವುದನ್ನು ಕಡಿಮೆ ಮಾಡಿ. ಅಲ್ಲದೆ ವೈದ್ಯರ ಸಲಹೆ ಇಲ್ಲದೆ ಬೇಕಾಬಿಟ್ಟಿ ಜ್ವರ ನಿವಾರಕ ಮಾತ್ರೆಗಳನ್ನು ನುಂಗಬೇಡಿ.
ಕಿಡ್ನಿಗೂ ಸಮಸ್ಯೆ: ಪ್ಯಾರಾಸಿಟಿಮಲ ಮಾತ್ರೆಯನ್ನು ತೆಗೆದುಕೊಳ್ಳುತ್ತಲ್ಲೇ ಇದ್ದರೆ ಕಿಡ್ನಿ ಹಾಗೂ ಮೂತ್ರಪಿಂಡದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ. ಕೆಲವರು ವಾರಕ್ಕೆ ಒಮ್ಮೆ ಅಥವಾ ತಿಂಗಳಲ್ಲಿ ಮೂರ್ನಾಲ್ಕು ಬಾರಿ ಪ್ಯಾರಾಸಿಟಮಲ್ ಮಾತ್ರೆ ಸೇವಿಸುವ ಅಭ್ಯಾಸ ಮಾಡಿಕೊಳ್ಳುತ್ತಿದ್ದು. ಇದರಿಂದ ಮುಂದಿನ ದಿನಗಳಲ್ಲಿ ಅವರ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಬೇಕಾಬಿಟ್ಟಿ ಪ್ಯಾರಾಸಿಟಮಲ್ ತೆಗೆದುಕೊಳ್ಳುವುದರಿಂದ ಜ್ವರ ಬಂದಾಗ ಅದು ಸರಿಯಾಗಿ ಕೆಲಸ ಮಾಡದೆ ಇರುವ ಸಾಧ್ಯತೆಯೂ ಇದೆ.












Click it and Unblock the Notifications