RSV ವೈರಸ್ ಉಲ್ಬಣ: ಶೀತ, ಕೆಮ್ಮು ಇದ್ದವರಿಗೆ ವೈದ್ಯರ ಸಲಹೆಗಳು, ರೋಗ ಲಕ್ಷಣಗಳು

ಬೆಂಗಳೂರು, ಸೆಪ್ಟಂಬರ್ 05: ಮಳೆಗಾಲದಲ್ಲಿ ಆರೋಗ್ಯ ಸಮಸ್ಯೆ ಉಂಟಾಗುವಂತೆ ತೀವ್ರ ಬಿಸಲು ವಾತಾವರಣದಲ್ಲೂ ಒಮ್ಮೊಮ್ಮೆ ಗಂಟಲೂ ಕೆಟ್ಟು ಅನಾರೋಗ್ಯ ಸೃಷ್ಟಿಯಾಗುತ್ತದೆ. ತಲೆನೋವು ಶೀತವು ಉಂಟಾಗುತ್ತದೆ. ಅಂತದ್ದೇ ಭೀತಿಯ ಉಸಿರಾಟದ ಸಿನ್ಸಿಟಿಯಲ್ ವೈರಸ್ (RSV) ಇದೀಗ ಸಣ್ಣ ಮಕ್ಕಳು ಸೇರಿದಂತೆ ವಯಸ್ಕರನ್ನು ಕಾಡುತ್ತಿದ್ದು, ಆತಂಕ ಸೃಷ್ಟಿಸಿದೆ.

ಚಳಿಗಾಲದಲ್ಲಿ ಹೆಚ್ಚಾಗುವ ಈ ಆರ್‌ಎಸ್‌ವಿ ವೈರಸ್‌ಗೆ ವಯಸ್ಕರು ಅದರಲ್ಲೂ ಈಗಾಗಲೇ ಶ್ವಾಸಕೋಶದ ಸಮಸ್ಯೆ, ಹೃದ್ರೋಗದ ಸಮಸ್ಯೆ , ರೋಗನಿರೋಧಕ ಕಡಿಮೆ ಇರುವವರನ್ನು ಟಾರ್ಗೆಟ್‌ ಮಾಡುತ್ತಿದೆ. ಈ ಆರೋಗ್ಯ ಸಮಸ್ಯೆಯ ಇತಿಹಾಸ ಹೊಂದಿರುವವರಿಗೆ ಸಿನ್ಸಿಟಿಯಲ್‌ ವೈರಸ್‌ ಹೆಚ್ಚು ಮಾರಕವಾಗಲಿದೆ.

ಉಸಿರಾಟದ ಸಿನ್ಸಿಟಿಯಲ್‌ ವೈರಸ್‌ (ಆರ್‌ಎಸ್‌ವಿ)ನಿಂದ ವಯಸ್ಕರಲ್ಲಿ ಆಗುವ ಸಮಸ್ಯೆ ಹಾಗೂ ಇದರಿಂದ ಪಾರಾಗುವ ಕುರಿತು ಫೋರ್ಟಿಸ್‌ ಆಸ್ಪತ್ರೆಯ ಪಲ್ಮನಾಲಜಿಸ್ಟ್‌ ಡಾ. ವಿವೇಕ್‌ ಆನಂದ್ ಪಡೆಗಲ್ ಕೆಲವು ಆರೋಗ್ಯ ಸಲಹೆಗಳನ್ನು ನೀಡಿದ್ದಾರೆ.

rsv-virus-rise-in-children-and-youth

ಕೊರೊನಾ ನಂತರ RSV ಉಲ್ಬಣ

ಮಾರಣಾಂತಿಕ ಸಾಂಕ್ರಿಮಿಕ ಕೋವಿಡ್ 19 ನಂತರ ಸಾಕಷ್ಟು ಜನರ ಶ್ವಾಸಕೋಶ ದುರ್ಬಲಗೊಂಡಿದೆ. ಇದರಿಂದ ಆರ್‌ಎಸ್‌ವಿ ಸೋಂಕು ಸುಲಭವಾಗಿ ವಯಸ್ಕರನ್ನೂ ಸಹ ಕಾಡಬಹುದು. ಮಕ್ಕಳ ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇದುದ್ದರಿಂದ ಈ ವೈರಸ್‌ ಮಕ್ಕಳಿಗೆ ಸುಲಭವಾಗಿ ದಾಳಿ ಮಾಡುತ್ತಿತ್ತು. ಸದ್ಯ ಬದಲಾದ ಸನ್ನಿವೇಶದಲ್ಲಿ ವಯಸ್ಕರಿನ್ನು ಈ ವೈರಸ್ ತಗುಲುವ ಮಟ್ಟಕ್ಕೆ ಬಲಿಷ್ಠವಾಗಿದೆ. ಹೀಗಾಗಿ ಕೋವಿಡ್‌ಗೆ ತುತ್ತಾಗಿ ಗುಣವಾಗಿರುವ ವಯಸ್ಕರು ಅಥವಾ ಹಿರಿಯ ನಾಗರಿಕರು ಈ ವೈಸರ್‌ನಿಂದ ಹುಷಾರಿಗಿರುವುದು ಅವಶ್ಯಕವಾಗಿದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.

SV ಸೋಂಕು ಪತ್ತೆ ಹೇಗೆ?, ಲಕ್ಷಣಗಳು ಏನು?

ವಯಸ್ಕರಲ್ಲಿ RSV ಯ ಲಕ್ಷಣಗಳು ಮಕ್ಕಳಲ್ಲಿ ಕಂಡುಬರುವಂತೆಯೇ ಇರುತ್ತವೆ. ಅತಿಯಾಗಿ ಸ್ರವಿಸುವ ಮೂಗು, ಕೆಮ್ಮು, ಗಂಟಲುನೋವು, ಜ್ವರ, ಉಬ್ಬಸ ಮತ್ತು ಉಸಿರಾಟದ ತೊಂದರೆ ಕಾಡಲಿದೆ. ಕೆಲವು ಸಂದರ್ಭಗಳಲ್ಲಿ, ನ್ಯುಮೋನಿಯಾ, ಬ್ರಾಂಕಿಯೋಲೈಟಿಸ್ ಮತ್ತು ಆರ್‌ಎಸ್‌ವಿ-ಸಂಬಂಧಿತ ತೀವ್ರ ಉಸಿರಾಟದ ತೊಂದರೆ ಸಿಂಡ್ರೋಮ್ (ARDS) ನಂತಹ ಹೆಚ್ಚು ಗಂಭೀರ ತೊಡಕುಗಳು ಕಾಣಿಸಬಹುದು. ಈ ರೀತಿಯ ಲಕ್ಷಣಗಳು ನಿಮಗೆ ಕಂಡು ಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ RTPCR (ಕೋವಿಡ್ ಪರೀಕ್ಷೆಯಂತೆಯೇ) ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ಈ ವೈರಸ್ ಪತ್ತೆ ಮಾಡಬಹುದಾಗಿದೆ.

ಆರ್‌ಎಸ್‌ವಿ ರೋಗದ ವಿರುದ್ಧ ಲಸಿಕೆಗಳು ಭಾರತ ಹೊರತುಪಡಿಸಿ ಬೇರೆ ದೇಶಗಳಲ್ಲಿ ಲಭ್ಯವಿದೆ. ಹೀಗಾಗಿ ಭಾರತದಲ್ಲಿ ಇರುವವರು ಇದರ ಚಿಕಿತ್ಸಾ ಭಾಗವಾಗಿ ಕೆಮ್ಮು ನಿವಾರಕಗಳು, ಇನ್‌ಹೇಲರ್‌ ಮತ್ತು ಬ್ರಾಂಕೋಡಿಲೇಟರ್‌ಗಳ ಬಳಕೆ ಮಾಡುವ ಮೂಲಕ ತಡೆಗಟ್ಟಬಹುದಾಗಿದೆ.

rsv-virus-rise-in-children-and-youth

ಈ ವೈರಸ್‌ನಿಂದ ಪಾರಾಗುವ ಉಪಾಯಗಳು

1) ಚಳಿಗಾಲದ ತಿಂಗಳಲ್ಲಿಯೇ ಈ ವೈರಸ್‌ ಹೆಚ್ಚು ವೇಗವಾಗಿ ಹರಡುತ್ತದೆ ಎಂಬುದು ಸಾಬೀತಾದಿದೆ. ಆದ್ದರಿಂದ ಚಳಿಗಾಲದಲ್ಲಿ ಹೆಚ್ಚು ತೇವಾಂಶವಿರುವ ಪ್ರದೇಶದಲ್ಲಿ ಓಡಾಡುವುದು, ಸೊಳ್ಳೆಗಳ ಕಡಿತ, ಮಳೆಯಲ್ಲಿ ನೆನೆಯುವುದು, ಗಾಳಿಗೆ ಮೈ ಒಡ್ಡಿಕೊಳ್ಳುವುದನ್ನು ಕಡಿಮೆ ಮಾಡಬೇಕು.

2) ಶುಚಿತ್ವವಿಲ್ಲದೇ ಸ್ಥಳಗಳಿಗೆ ಹೋಗುವುದನ್ನು ನಿಲ್ಲಿಸಬೇಕು. ಇಲ್ಲವಾದರೆ ಬ್ಯಾಕ್ಟೀರಿಯಾ, ವೈರಸ್‌ಗಳಿಂದ ಈ ರೋಗ ನಮಗೆ ತಗುಲುವ ಸಾಧ್ಯತೆಗಳು ಇರುತ್ತವೆ.

3) ಈಗಾಗಲೇ ಕೋವಿಡ್‌ಗೆ ತುತ್ತಾಗಿ ಗುಣಮುಖರಾಗಿರುವವರು, ಕೋವಿಡ್‌ ಸಂದರ್ಭದಲ್ಲಿ ಅನುಸರಿಸುತ್ತಿದ್ದ ಮಾರ್ಗವನ್ನೇ ಅನುಸರಿಸಬೇಕು, ಸ್ಯಾನಿಟೈಜರ್‌ ಬಳಕೆ, ಮಾಸ್ಕ್‌ ಬಳಕೆ ಕಡ್ಡಾಯ ಮಾಡಿ, ಈಗಾಗಲೇ ಸೋಂಕು ಇರುವವರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಉತ್ತಮ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ವೈರಸ್ ನಿಯಂತ್ರಣ ಹೇಗೆ?

1) ಕೋವಿಡ್ ರೀತಿಯಲ್ಲಿ ಈ ರೋಗ ನಿಯಂತ್ರಣವನ್ನು ಮಾಡಬೇಕಿದೆ. ಅನಾರೋಗ್ಯದ ಜನರ ನಿಕಟ ಸಂಪರ್ಕದಿಂದ ದೂರವಿರಿ. ದೇಹವನ್ನು ಸದಾ ಬೆಚ್ಚಗಿರುವಂತೆ ನೋಡಿಕೊಳ್ಳಿ. ಮನೆಯಲ್ಲಿ ಈಗಾಗಲೇ ಯಾರಿಗಾದರು ಜ್ವರ ಅಥವಾ ನೆಗಡಿ ಬಂದಿದ್ದರೆ, ಅವರಿಂದಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿದೆ.

2) ನಿಮ್ಮ ಕೈಗಳನ್ನು ಸಾಬೂನು ಮತ್ತು ನೀರಿನಿಂದ ಆಗಾಗ್ಗೆ ಮತ್ತು ಸಂಪೂರ್ಣವಾಗಿ ತೊಳೆಯಿರಿ, ಅದು ಉಗುರುಗಳು ಸೇರಿದಂತೆ ಅಂಗೈ ಮತ್ತು ಕೈಗಳ ಎಲ್ಲಾ ಭಾಗಗಳನ್ನು ತಲುಪುತ್ತದೆ.

3) ಕೆಮ್ಮುವಾಗ ಅಥವಾ ಸೀನುವಾಗ ನಿಮ್ಮ ಬಾಯಿ ಮತ್ತು ಮೂಗನ್ನು ಕರವಸ್ತ್ರ ಅಥವಾ ಟವೆಲ್‌ನಿಂದ ಮುಚ್ಚಿಕೊಳ್ಳಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+