ಟೆರೇಸ್‌, ಛಾವಣಿ ಮೇಲೆ ಇಂಥ ಪೇಂಟ್ ಬಳಿದರೆ ಒಳಗಿನ ಉಷ್ಣಾಂಶ ಕಡಿಮೆಯಾಗುವುದು:ಮನೆ ತಂಪಾಗಿರುವುದು

ಬೇಸಿಗೆ ಬಿಸಿಗೆ ಜನರು ಹೈರಾಣಾಗಿದ್ದಾರೆ. ಬೆಂಗಳೂರಿನಲ್ಲಿ ಮಳೆ ಸುರಿದಿದೆಯಾದರೂ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇನ್ನೂ ಬಿಸಿಲಿನ ತೀವ್ರತೆ ತಡೆಯುವುದು ಸಾಧ್ಯವಾಗುತ್ತಿಲ್ಲ. ಜನರು ಮನೆ ಬಿಟ್ಟು ಹೊರ ಬರುವುದಕ್ಕೂ ಹಿಂದೆ ಮುಂದೆ ನೋಡುವ ಸ್ಥಿತಿ ಎದುರಾಗಿದೆ. ಹಾಗಂತ ಮನೆಯೊಳಗೆ ಇದ್ದವರು ಆರಾಮಾಗಿದ್ದರೆ ಎನ್ನಲು ಸಾಧ್ಯವೇ? ಖಂಡಿತಾ ಇಲ್ಲ, ಮನೆಯೊಳಗೆ ಇದ್ದವರನ್ನೂ ಬಿಸಿಲು ಸುಡುತ್ತಿದೆ. ಮನೆಯೊಳಗೆ ಪ್ರವೇಶಿಸುವ ಸೂರ್ಯನ ಶಾಖವನ್ನು ತಡೆದುಕೊಳ್ಳುವುದು ಕಷ್ಟಸಾಧ್ಯವಾಗುತ್ತಿದೆ.

ಕಾಡುತ್ತಿದೆ ಸುಡು ಬಿಸಿಲು:

ಇನ್ನು ಮೇಲಿನ ಮಹಡಿಗಳ ನಿವಾಸಿಗಳ ಸ್ಥಿತಿಯಂತೂ ಹೇಳತೀರದು. ಮನೆಯ ಟೆರೇಸ್ ಮೇಲೆ ಬೀಳುವ ಎಲ್ಲಾ ಶಾಖವು ಮನೆಯ ಮಹಡಿಯಲ್ಲಿ ವಾಸಿಸುತ್ತಿರುವವರ ಮೇಲೆ ನೇರ ಪರಿಣಾಮ ಬೀರುತ್ತದೆ. ಇದರಿಂದಾಗಿ, ಹಗಲಿನಲ್ಲಿ ಮಾತ್ರವಲ್ಲದೆ ರಾತ್ರಿಯೂ ಅತಿಯಾದ ಶಾಖವನ್ನು ಅನುಭವಿಸಬೇಕಾಗುತ್ತದೆ. ರಾತ್ರಿ ನಿದ್ದೆಗೂ ಇದು ಅಡ್ಡಿಯುಂತು ಮಾಡುತ್ತದೆ. ಪ್ರಸ್ತುತ, ಈ ಕಾರಣಕ್ಕಾಗಿ, ಕೆಲವರು ರೂಫ್ ಕೂಲಿಂಗ್ ಪೇಂಟ್ ಎಂಬ ಬಣ್ಣವನ್ನು ಖರೀದಿಸಿ ಟೆರೇಸ್‌ನ ನೆಲದ ಮೇಲೆ ಹಚ್ಚುತ್ತಾರೆ.

Roof Cooling Paint

ರೂಫ್ ಕೂಲಿಂಗ್ ಪೇಂಟ್‌:

ಇದೀಗ ಪೇಂಟ್‌ ಕಂಪನಿಗಳು ರೂಫ್ ಕೂಲಿಂಗ್ ಪೇಂಟನ್ನು ಮಾರುಕಟ್ಟೆಗೆ ಪರಿಚಯಿಸಿವೆ. ಇದನ್ನು ಖರೀದಿಸಿ ಮನೆಯ ಟೆರೇಸ್‌ನ ನೆಲದ ಮೇಲೆ ಹಚ್ಚಿದರೆ, ಮನೆಯ ತಾಪಮಾನವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು ಎಂದು ಹೇಳಲಾಗುತ್ತದೆ.

ಬೇಸಿಗೆಯಲ್ಲಿ ಶರೀರಕ್ಕೆ ತಂಪು ಕೊಡುವ ಗಸಗಸೆ ಪಾಯಸದ ರೆಸಿಪಿ ಇಲ್ಲಿದೆ
ಬೇಸಿಗೆಯಲ್ಲಿ ಶರೀರಕ್ಕೆ ತಂಪು ಕೊಡುವ ಗಸಗಸೆ ಪಾಯಸದ ರೆಸಿಪಿ ಇಲ್ಲಿದೆ

ರೂಫ್ ಕೂಲಿಂಗ್ ಪೇಂಟ್‌ನ ಪ್ರಯೋಜನ:

ರೂಫ್ ಕೂಲಿಂಗ್ ಪೇಂಟನ್ನು ಟೆರೇಸ್‌ ನೆಲದ ಮೇಲೆ ಹಚ್ಚುವುದರಿಂದ ಮನೆಯ ತಾಪಮಾನವನ್ನು 10 ರಿಂದ 15 ಡಿಗ್ರಿ ಸೆಲ್ಸಿಯಸ್ ಕಡಿಮೆ ಮಾಡಬಹುದು ಎಂದು ಹೇಳಲಾಗುತ್ತದೆ. ಸಾಮಾನ್ಯವಾಗಿ, ಸಣ್ಣ ಮನೆಗೆ ಬಳಸುವುದಾದರೆ 10 ಲೀಟರ್ ಪೇಂಟ್‌ ಸಾಕು. ದೊಡ್ಡ ಮನೆಯಾಗಿದ್ದರೆ, 20 ಲೀಟರ್ ವರೆಗೆ ಖರ್ಚಾಗುತ್ತದೆ. ಈ ರೀತಿಯ ಬಣ್ಣವು ಶಾಖವನ್ನು ಕಡಿಮೆ ಮಾಡುವುದಲ್ಲದೆ, ಇದು ವಾಟರ್‌ ಫ್ರೂಫ್‌ ಪೇಂಟ್‌ ಆಗಿದೆ. ಹಾಗಾಗಿ ಮಳೆನೀರು ಸೀಲಿಂಗ್‌ ಒಳಗೆ ಪ್ರವೇಶಿಸುವುದನ್ನು ಕೂಡಾ ಇದು ತಡೆಯುತ್ತದೆ. ಒಮ್ಮೆ ಸರಿಯಾಗಿ ಈ ಪೇಂಟನ್ನು ಬಳಿದರೆ, ಎಂಟು ವರ್ಷಗಳವರೆಗೆ ಇದರ ಪ್ರಯೋಜನವನ್ನು ಪಡೆಯಬಹುದು ಎನ್ನಲಾಗಿದೆ.

ಟೆರೆಸ್‌ ಗಾರ್ಡನ್‌ನಲ್ಲಿರುವ ಸಸ್ಯ ಬೇಸಿಗೆಯಲ್ಲಿ ಸಾಯುತ್ತಿವೆಯೇ? ಶಾಖದ ಹೊಡೆತದಿಂದ ಈ ಗಿಡಗಳ ರಕ್ಷಣೆ ಹೀಗಿರಲಿ
ಟೆರೆಸ್‌ ಗಾರ್ಡನ್‌ನಲ್ಲಿರುವ ಸಸ್ಯ ಬೇಸಿಗೆಯಲ್ಲಿ ಸಾಯುತ್ತಿವೆಯೇ? ಶಾಖದ ಹೊಡೆತದಿಂದ ಈ ಗಿಡಗಳ ರಕ್ಷಣೆ ಹೀಗಿರಲಿ

ಈ ಪೇಂಟನ್ನು ಬಳಸುವುದು ಹೇಗೆ:

ಈ ಬಣ್ಣವನ್ನು ಇಟ್ಟಿಗೆ ನೆಲ, ಸಿಮೆಂಟ್ ನೆಲ ಮತ್ತು ಟೈಲ್ಸ್ ಸೇರಿದಂತೆ ಎಲ್ಲಾ ರೀತಿಯ ನೆಲಕ್ಕೂ ಬಳಸಬಹುದು. ಆದರೆ ಬಣ್ಣವನ್ನು ಬಳಸುವ ಮೊದಲು, ನೆಲವನ್ನು ಚೆನ್ನಾಗಿ ಸ್ವಚ್ಛಗೊಳಿಸಬೇಕು. ನಂತರ ಮೂರು ಪದರಗಳಲ್ಲಿ ಈ ಪೇಂಟನ್ನು ಹಚ್ಚಬೇಕು. ಹೀಗೆ ಮಾಡುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ. ಅಲ್ಲದೆ ದೀರ್ಘಕಾಲದವರೆಗೆ ಬಾಳಿಕೆಯೂ ಬರುತ್ತದೆ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+