Rice Shavige Uppittu Recipe: ಅಕ್ಕಿ ಶಾವಿಗೆ ಉಪ್ಪಿಟ್ಟು ರೆಸಿಪಿ: ಮನೆಯಲ್ಲಿ ಮಾಡಿ ತಿನ್ನಿ ಇಷ್ಟಪಟ್ಟು
ಬಹುತೇಕ ಗೃಹಿಣಿಯರಿಗೆ ಅಡುಗೆ ಮಾಡುವುದು ತುಂಬಾ ಸುಲಭ. ಅದನ್ನು ಅವರು ಕರಗತ ಮಾಡಿಕೊಂಡುಬಿಟ್ಟಿರುತ್ತಾರೆ. ಹೀಗಾಗಿ ಎಷ್ಟೇ ಕಷ್ಟದ ಖಾದ್ಯವೇ ಆಗಲಿ ಅವರು ತುಂಬಾ ಸುಲಭವಾಗಿ ಮಾಡಿಬಿಡುತ್ತಾರೆ. ಆದರೆ ಕೆಲ ಖಾದ್ಯಗಳು ನೋಡಲು ತುಂಬಾ ಸರಳವಾಗಿ ಕಾಣಿಸುತ್ತವೆಯಾದರೂ ಅದನ್ನು ತಯಾರಿಸಲು ಕಷ್ಟವಾಗಬಹುದು. ಅಂಥಹ ತಿಂಡಿಗಳಲ್ಲಿ ಅಕ್ಕಿ ಶಾವಿಗೆ ಉಪ್ಪಿಟ್ಟು ಕೂಡ ಒಂದಾಗಿದೆ.
ಸಾಮಾನ್ಯವಾಗಿ ಶಾವಿಗೆ ಉಪ್ಪಿಟ್ಟನ್ನು ನೀವೆಲ್ಲಾ ಮನೆಯಲ್ಲಿ ಮಾಡುರುತ್ತೀರಿ. ಆದರೆ ಅದು ಮುದ್ದೆಯಾಗುವುದು ಅಥವಾ ಹೆಚ್ಚು ನೀರಾಗಿರುವ ಸಂದರ್ಭಗಳನ್ನು ನೀವು ಎದುರಿಸಿರುತ್ತೀರಿ. ಅಂಥಹ ಸಂದರ್ಭದಲ್ಲಿ ಶಾವಿಗೆ ಉಪ್ಪಿಟ್ಟು ಉದುರುದುರಾಗಿ ಮಾಡುವುದು ಅಥವಾ ಹೆಚ್ಚು ನೀರಾಗದಂತೆ ತಯಾರಿಸುವುದು ಹೇಗೆ ಅನ್ನೋದನ್ನು ಈಗ ತಿಳಿಯೋಣ. ನೀವು ಕೂಡ ಇದನ್ನು ಟ್ರೈ ಮಾಡಿ. ಮೊದಲ ಪ್ರಯತ್ನದಲ್ಲಿ ಅಕ್ಕಿ ಶಾವಿಗೆ ಉಪ್ಪಿಟ್ಟು ಅನ್ನು ರುಚಿಯಾಗಿ ಉದುರುದುರಾಗಿ ತಯಾರಿಸಿ.

ಹಾಗಾದರೆ ತಡ ಮಾಡುವುದು ಬೇಡ ಅಕ್ಕಿ ಶಾವಿಗೆ ಉಪ್ಪಿಟ್ಟು ತಯಾರಿಸುವ ವಿಧಾನ ಹಾಗೂ ಅದಕ್ಕೆ ಬೇಕಾಗಿರುವ ಪದಾರ್ಥಗಳ ಬಗ್ಗೆ ತಿಳಿಯೋಣ. ನೀವು ಇದನ್ನು ಮನೆಯಲ್ಲಿ ಟ್ರೈ ಮಾಡಿ, ರುಚಿ ನೋಡಿ ಜೊತೆಗೆ ಕಾಮೆಂಟ್ ಮಾಡಿ.
ಅಕ್ಕಿ ಶಾವಿಗೆ ಉಪ್ಪಿಟ್ಟು ತಯಾರಿಸಲು ಬೇಕಾಗುವ ಪದಾರ್ಥಗಳು:-
* ಅಕ್ಕಿ ಶಾವಿಗೆ 400 ಗ್ರಾಮ್
* ಎಣ್ಣೆ
* ಕಲ್ಲು ಉಪ್ಪು ಅರ್ಧ ಚಮಚ
* ಉದ್ದಿನ ಬೇಳೆ ಒಂದು ಚಮಚ
* ಕಡಲೇಬೇಳೆ ಒಂದು ಚಮಚ
* ಸಾಸಿವೆ ಅರ್ಧ ಚಮಚ
* ಕರಿಬೇವು ಸೊಪ್ಪು
* ಈರುಳ್ಳಿ ಎರಡು
* ಹಸಿ ವಾಸನೆ 5-6
* ಟೊಮ್ಯಾಟೋ ಎರಡು
* ಅರಿಶಿಣ ಪುಟಿ ಚಿಟಿಕೆ
* ಉಪ್ಪು ರುಚಿಗೆ ತಕ್ಕಷ್ಟು
* ತೆಂಗಿನ ತುರಿ ಒಂದು ಕಪ್
* ನಿಂಬೆ ಹಣ್ಣು ಒಂದು
ತಯಾರಿಸುವ ವಿಧಾನ:
* ಎರಡು ಲೀಟರ್ ನೀರು ಒಂದು ಪಾತ್ರೆಯಲ್ಲಿ ಹಾಕಿ ಕುದಿಯಲು ಬಿಡಿ.
* ಬಳಿಕ ಇದಕ್ಕೆ ಅಕ್ಕಿ ಶಾವಿಗೆಯನ್ನು ಹಾಕಿ. ಎರಡು ಚಮಚ ಎಣ್ಣೆ ಹಾಕಿ. ಈ ಎಣ್ಣೆ ಹಾಕುವುದರಿಂದ ಶಾವಿಗೆ ಬಿಡಿಬಿಡಿಯಾಗಿ ಇರುತ್ತದೆ. ಹೀಗೆ ಎರಡು ನಿಮಿಷ ಕುದಿಯಲು ಬಿಡಿ.
* ನಂತರ ಇದಕ್ಕೆ ಅರ್ಧ ಚಮಚ ಕಲ್ಲು ಉಪ್ಪು ಹಾಕಿಕೊಳ್ಳಬೇಕು. ಇದು ಕುದ್ದ ಬಳಿಕ ಇದನ್ನು ಸೋಸಿಕೊಳ್ಳಿ. ಎಂಟು ನಿಮಿಷ ತಣ್ಣಗಾಗಲು ಬಿಡಬೇಕು. ತಣ್ಣಗಾದರೆ ಶಾವಿಗೆ ಬಿಡಿ ಬಿಡಿಯಾಗಿರುತ್ತದೆ. ಬಳಿಕ ಇದನ್ನು ಒಂದು ತಟ್ಟೆಯಲ್ಲಿ ಹಾಕಿ ಅಗಲ ಮಾಡಿ ತಣ್ಣಗಾಗಲು ಬಿಡಬೇಕು.

ಇತ್ತ ನಾವು ಒಗ್ಗರೆಣೆ ಮಾಡಿಕೊಳ್ಳೋಣ.
*ಒಂದು ಬಾಣಲೆಯನ್ನು ಒಲೆಯ ಮೇಲೆ ಇಟ್ಟು, ಬಿಸಿಯಾದ ಮೇಲೆ ಅದಕ್ಕೆ ಎಣ್ಣೆ ಹಾಕೋಣ.
* ಇದಕ್ಕೆ ಉದ್ದಿನ ಬೇಳೆ ಹಾಗೂ ಕಡಲೇಬೇಳೆಯನ್ನು ಹಾಕಿಕೊಳ್ಳೋಣ.
* ಇದನ್ನು ಸಣ್ಣ ಉರಿಯಲ್ಲಿ ಸ್ವಲ್ಪ ಕೆಂಪಾಗುವವರೆಗೂ ಹುರಿದುಕೊಳ್ಳೋಣ.
* ಬಳಿಕ ಇದಕ್ಕೆ ಸಾಸಿವೆ ಹಾಕಬೇಕು. ಇದು ಚಟಪಟ ಅನ್ನೋವರೆಗೆ ಎಣ್ಣೆಯಲ್ಲಿ ಕೈಯಾಡಿಸಬೇಕು.
* ಕರಿಬೇವಿನ ಸೊಪ್ಪು ಹಾಕಿ ಎಣ್ಣೆಯಲ್ಲಿ ಹುರಿದುಕೊಳ್ಳಿ.
* ಸಣ್ಣಕೆ ಹೆಚ್ಚಿದ ಎರಡು ಈರುಳ್ಳಿಯನ್ನು ಎಣ್ಣೆಯಲ್ಲಿ ಹುರಿದುಕೊಳ್ಳಿ. ಬಳಿಕ ಇದಕ್ಕೆ ಸಣ್ಣಕೆ ಹೆಚ್ಚಿದ ಹಸಿ ಮೆಣಸಿನಕಾಯಿ ಹಾಕಿಕೊಳ್ಳಿ ಹಸಿ ವಾಸನೆ ಹೋಗುವವರೆಗೂ ಹುರಿದುಕೊಳ್ಳಿ.
* ಸಣ್ಣಕೆ ಹೆಚ್ಚಿದ ಟೊಮ್ಯಾಟೋ ಹಾಕಿ, ಅರಿಶಿಣ ಪುಟಿ ಚಿಟಿಕೆ ಹಾಕಿ.
* ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕಲಸಿ, ಈಗ ಬೇಯಿಸಿದ ಅಕ್ಕಿ ಶ್ಯಾವಿಗೆಯನ್ನು ಹಾಕಿ. ಚೆನ್ನಾಗಿ ಮಿಕ್ಸ್ ಮಾಡಿ.
* ನಂತರ ಇದಕ್ಕೆ ತೆಂಗಿನ ತುರಿ ಹಾಕಿ ಕಲಸಿಕೊಳ್ಳಿ, ನಿಂಬೆ ಹಣ್ಣಿನ ರಸವನ್ನು ಹಾಕಿ ಕದಡಿ.












Click it and Unblock the Notifications