Ragi Milk Recipe: ಬೇಸಿಗೆಯ ಬಿರು ಬಿಸಿಲಿಗೆ ಆರೋಗ್ಯಕರ, ರುಚಿಯಾದ ರಾಗಿ ಹಾಲು; ರೆಸಿಪಿ ಇಲ್ಲಿದೆ
ರಾಗಿ ಯಾವತ್ತಿಗೂ ಆರೋಗ್ಯಕರ ಆಹಾರ ಧಾನ್ಯಗಳ ಪಟ್ಟಿಯಲ್ಲಿ ತನ್ನನ್ನು ತಾನು ಗುರುತಿಸಿಕೊಂಡಿದೆ. ರಾಗಿ ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ರಾಗಿ ಬಳಸಿಕೊಂಡು ನೀವು ಹೆಚ್ಚು ಟೇಸ್ಟಿ ಮತ್ತು ಆರೋಗ್ಯಕರವಾಗಿ ರೆಸಿಪಿಗಳನ್ನು ಮಾಡಬಹುದು. ರಾಗಿ ಮುದ್ದೆ, ರಾಗಿ ರೊಟ್ಟಿ, ರಾಗಿ ಅಂಬಲಿ, ರಾಗಿ ಸರಿ, ರಾಗಿ ದೋಸೆ, ರಾಗಿ ಹಾಲುಬಾಯಿ ಸೇರಿದಂತೆ ಹಲವು ವಿಧವಾಗಿ ರಾಗಿಯನ್ನು ಬಳಸಬಹುದು.
ರಾಗಿಯ ಹಾಲು ಕೂಡ ಆರೋಗ್ಯಕ್ಕೆ ತುಂಬಾ ಅಮುಲ್ಯವಾದದ್ದು. ರಾಗಿಯ ಮಿಲ್ಕ್ ಶೇಕ್ ಅಥವಾ ರಾಗಿ ಹಾಲು ನಮ್ಮ ಆರೋಗ್ಯವನ್ನು ಕಾಪಾಡುವ ಜೊತೆಗೆ ದೇಹವನ್ನು ತಂಪಾಗಿ ಇರಿಸುತ್ತದೆ. ಇನ್ನೇನು ಬೇಸಿಗೆ ಶುರುವಾಗುತ್ತಿದ್ದು, ರಾಗಿ ಅಂಬಲಿಯನ್ನು ಕುಡಿಯುವವರ ಸಂಖ್ಯೆ ಹೆಚ್ಚಾಗುತ್ತದೆ. ಈ ವೇಳೆಯಲ್ಲಿ ರಾಗಿಯ ಹಾಲು ತುಂಬಾ ಉತ್ತಮವಾದದ್ದು. ಹಾಗಾದರೇ, ರಾಗಿಯ ಹಾಲು ತೆಗೆಯುವುದು ಹೇಗೆ ಎಂಬುದನ್ನು ಎರಡು ವಿಧಗಳಲ್ಲಿ ತಿಳಿಯೋಣ.

ರಾಗಿ ಹಾಲು ಮಾಡಲು ಬೇಕಾದ ಪದಾರ್ಥಗಳು: ಮೊದಲ ವಿಧಾನ
* 1/2 ಕಪ್ ರಾಗಿ
* ನಾಲ್ಕು ಬಾದಾಮಿ
* 1/4 ಕಪ್ ಪುಡಿ ಮಾಡಿದ ಬೆಲ್ಲ (ನಿಮ್ಮ ರುಚಿಗೆ ತಕ್ಕಂತೆ ಹೆಚ್ಚು ಕಡಿಮೆ ಮಾಡಿಕೊಳ್ಳಬಹುದು)
* 2 ಕಪ್ ನೀರು
* ಎರಡು ಪೂರ್ತಿ ಏಲಕ್ಕಿ
ರಾಗಿ ಹಾಲು ಮಾಡುವ ಮೊದಲ ವಿಧಾನ
ಒಂದು ಬಟ್ಟಲಿನಲ್ಲಿ ರಾಗಿ ಮತ್ತು ಬಾದಾಮಿ ತೆಗೆದುಕೊಳ್ಳಿ. ಅದನ್ನು 2 ರಿಂದ 3 ಬಾರಿ ಚೆನ್ನಾಗಿ ತೊಳೆಯಿರಿ. ಇದನ್ನು 2 ಗಂಟೆಗಳ ಕಾಲ ನೆನೆಸಿಡಿ. ನೆನೆಸಿದ ನಂತರ ನೀರನ್ನು ಸೋಸಿ ಮಿಕ್ಸಿ ಜಾರ್‌ಗೆ ಹಾಕಿಕೊಳ್ಳಿ. ಇದಕ್ಕೆ ನಿಮ್ಮ ರುಚಿಗೆ ತಕ್ಕಂತೆ ಬೆಲ್ಲ ಮತ್ತು ಏಲಕ್ಕಿ ಸೇರಿಸಿ. ಅಗತ್ಯವಿರುವ ನೀರನ್ನು ಸೇರಿಸಿ ಅವುಗಳನ್ನು ನುಣ್ಣಗೆ ಪೇಸ್ಟ್ ಆಗಿ ರುಬ್ಬಿಕೊಳ್ಳಿ. ಬಳಿಕ ಅದನ್ನು ಬಟ್ಟೆಯಲ್ಲಿ ಚೆನ್ನಾಗಿ ಸೋಸಿಕೊಳ್ಳಿ.
ಉಳಿದ ಮಿಶ್ರಣಕ್ಕೆ ಮತ್ತೆ ನೀರು ಬೆರೆಸಿ ಚೆನ್ನಾಗಿ ರುಬ್ಬಿಕೊಳ್ಳಿ. ಅದನ್ನು ಮತ್ತೆ ಫಿಲ್ಟರ್ ಮಾಡಿ. ಈಗ ಹಾಲು ರೆಡಿಯಾಗಿದೆ. ಇದನ್ನು ಹಾಗೆಯೇ ಸೇವಿಸಬಹುದು. ಇಲ್ಲ ಕೆಲ ಹೊತ್ತು ಫ್ರೀಜರ್‌ನಲ್ಲಿ ಇರಿಸಿ ತಣ್ಣಗಾದ ಮೇಲೆ ಅದರ ಮೇಲೆ ಕತ್ತರಿಸಿದ ಬಾದಾಮಿ ಅಥವಾ ಪುಡಿ ಮಾಡಿದ ಬಾದಾಮಿಯನ್ನು ಹಾಕಿ ಅಲಂಕಾರ ಮಾಡಿ ಸವಿಯಿರಿ.

ರಾಗಿ ಹಾಲು ಮಾಡಲು ಬೇಕಿರುವ ಪದಾರ್ಥಗಳು (ಎರಡನೇ ವಿಧಾನ)
* 1/2 ಕಪ್ ರಾಗಿ
* 1/4 ಕಪ್ ತಾಜಾ ತುರಿದ ತೆಂಗಿನಕಾಯಿ
* 1/4 ಕಪ್ ಪುಡಿ ಮಾಡಿದ ಬೆಲ್ಲ (ರುಚಿಗೆ ತಕ್ಕಂತೆ)
* 2 ಕಪ್ ನೀರು
* ಎರಡು ಏಲಕ್ಕಿ
ರಾಗಿ ಹಾಲು ಮಾಡುವ ಎರಡನೇ ವಿಧಾನ
ಒಂದು ಬಟ್ಟಲಿನಲ್ಲಿ ರಾಗಿ ತೆಗೆದುಕೊಳ್ಳಿ. ಇದನ್ನು 2 ಬಾರಿ ಚೆನ್ನಾಗಿ ತೊಳೆಯಿರಿ. ತೊಳೆದ ರಾಗಿಯನ್ನು ತಟ್ಟೆ ಅಥವಾ ಬಟ್ಟೆಯ ಮೇಲೆ ಹರಡಿ ಮತ್ತು ನೆರಳಿನಲ್ಲಿ ಒಣಗಲು ಬಿಡಿ. ಒಣಗಿದ ನಂತರ, ರಾಗಿಯು ಸ್ವಲ್ಪ ಊದಿಕೊಳ್ಳುವವರೆಗೆ ಹುರಿಯಿರಿ. ಆದರೆ, ಕಪ್ಪಾಗುವ ಹಾಗೆ ಅತಿಯಾಗಿ ಹುರಿಯಬೇಡಿ.
ರಾಗಿ ತಣ್ಣಗಾಗುವವರೆಗೆ ಕಾಯಿರಿ. 2 ಏಲಕ್ಕಿ, ತಾಜಾ ತೆಂಗಿನ ತುರಿ, ಬೆಲ್ಲವನ್ನು ಸೇರಿಸಿ ಮತ್ತು ಅಗತ್ಯವಿರುವ ನೀರನ್ನು ಸೇರಿಸಿ ನುಣ್ಣಗೆ ಪೇಸ್ಟ್ ಆಗಿ ರುಬ್ಬಿಕೊಳ್ಳಿ. ನಿಮ್ಮ ರುಚಿಗೆ ತಕ್ಕಂತೆ ಬೆಲ್ಲವನ್ನು ಹಾಕಿಕೊಳ್ಳಿ. ಬಳಿಕ ಬಟ್ಟೆ ಅಥವಾ ಜ್ಯೂಸ್ ಸ್ಟ್ರೈನರ್ ಬಳಸಿ ರುಬ್ಬಿದ ಪೇಸ್ಟ್ ಅನ್ನು ಫಿಲ್ಟರ್ ಮಾಡಿ. ಹಾಲು ಇದೆ ಎಂದು ಅನ್ನಿಸುವವರೆಗೂ ನೀರು ಹಾಕಿ ರುಬ್ಬಿ ಸೋಸಿಕೊಳ್ಳಿ. ಬಳಿಕ ಮೊದಲ ವಿಧಾನದಂತೆಯೇ ಇದನ್ನು ಹಾಗೆ ಕುಡಿಯಿರಿ ಅಥವಾ ಫ್ರಿಜರ್‌ನಲ್ಲಿ ಇಟ್ಟು ತಣ್ಣಗೆ ಮಾಡಿಕೊಂಡು ಈ ಬೇಸಿಗೆಯಲ್ಲಿ ಆನಂದಿದೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್












Click it and Unblock the Notifications