Get Updates
Get notified of breaking news, exclusive insights, and must-see stories!

Propose Day 2024: ನಿಮ್ಮ ಪ್ರೇಮಿ ಆಹಾರಪ್ರಿಯರಾಗಿದ್ದರೆ ಈ ರೀತಿಯಲ್ಲಿ ಪ್ರಪೋಸ್ ಮಾಡಿ

ಮನುಷ್ಯನಲ್ಲಿ ಎಲ್ಲಾ ವಿಚಾರದಲ್ಲೂ ಧೈರ್ಯವಿದೆ. ಯಾರಿಗಾದರೂ ಏನಾದರೂ ಹೇಳಬೇಕು ಅಂದುಕೊಂಡರೆ ಹಿಂದೂ ಮುಂದೂ ಯೋಚನೆ ಮಾಡದೆ ಥಟ್ ಅಂತ ಹೇಳಿ ಬಿಡುತ್ತಾನೆ. ಯಾರಿಗಾದರೂ ಬೈಬೇಕು ಅಂದರೆ ಬೈದುಬಿಡುತ್ತಾನೆ. ಆದರೆ ತಾನು ಪ್ರೀತಿಸುವ ಪ್ರೇಮಿಗೆ ಪ್ರೀತಿಯ ವಿಷಯ ಹೇಳಲು ಮಾತ್ರ ಧೈರ್ಯ ಮಾಡುವುದಿಲ್ಲ. ಇದು ಸಹಜವಾಗಿ ಎಲ್ಲರಲ್ಲೂ ಕಂಡು ಬರುವ ಸ್ವಭಾವ.

ಹೀಗೆ ಹಿಂಜರಿಕೆಯುಳ್ಳ ಪ್ರೇಮಿ ತನ್ನ ಮನದಾಳದ ಮಾತನ್ನು ಹೇಳಿಕೊಳ್ಳಲೆಂದೇ ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಪ್ರೇಮ ಪ್ರಸ್ತಾಪದ ದಿನ (Propose Day) ಒಬ್ಬ ಹುಡುಗಿ ಅಥವಾ ಹುಡುಗ ತಾವು ಇಷ್ಟ ಪಡುವವರಿಗೆ ತಮ್ಮ ಪ್ರೇಮ ಪ್ರಸ್ತಾಪ ಮಾಡಬಹುದು.

Propose Day 2024: Propose this way if your lover is a foodie

ಪ್ರಪೋಸ್ ಡೇ ಅಂದರೆ ನೀವು ನಿಮ್ಮೆಲ್ಲ ಧೈರ್ಯವನ್ನು ಒಟ್ಟುಗೂಡಿಸಿ, ನೀವು ಕ್ರಶ್ ಆಗಿರುವವರಿಗೆ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ದಿನವಾಗಿದೆ. ಪ್ರೇಮಿಗಳ ವಾರದ ಎರಡನೇ ದಿನವನ್ನು ಪ್ರಪಂಚದಾದ್ಯಂತ ಪ್ರಪೋಸ್ ಡೇ ಎಂದು ಆಚರಿಸಲಾಗುತ್ತದೆ. ಇದನ್ನು ಫೆಬ್ರವರಿ 8ರಂದು ತಮ್ಮ ಪ್ರೇಮ ಪ್ರಸ್ತಾಪದ ಮೂಲಕ ಪ್ರೇಮಿಗಳು ಆಚರಿಸುತ್ತಾರೆ. ಈ ದಿನ ಪ್ರೇಮಿಗಳು ತಮ್ಮ ಮನದಾಳದ ಮಾತುಗಳನ್ನು ವ್ಯಕ್ತಪಡಿಸುತ್ತಾರೆ.

ನೀವು ಕೂಡ ನಿಮ್ಮ ಪ್ರೀತಿಯ ವಿಷಯ ಹೇಳಲು ಬಯಸಿದರೆ ಅವರೊಂದಿಗೆ ಕೆಲ ಸಿಹಿ ಖಾದ್ಯವನ್ನು ಸವಿಯುವ ಮೂಲಕ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಬಹುದು. ನೀವು ಸಂದೇಶವನ್ನು ಆಹಾರದೊಳಗೆ ಮರೆಮಾಡಬಹುದು ಅಥವಾ ಆಹಾರವನ್ನು ಸ್ವತಃ ಪ್ರಸ್ತಾಪದಂತೆ ಕಾಣುವ ರೀತಿಯಲ್ಲಿ ಅಲಂಕರಿಸಬಹುದು. ಹಾಗಾದರೆ ಯಾವ ಆಹಾರದೊಂದಿಗೆ ನಿಮ್ಮ ಪ್ರೇಮ ಪ್ರಸ್ತಾಪ ಮಾಡಬಹುದು ಎಂದು ತಿಳಿಯೋಣ.

Propose Day 2024: Propose this way if your lover is a foodie

1. ಫಾರ್ಚೂನ್ ಕುಕೀಸ್

ಫಾರ್ಚೂನ್ ಕುಕೀಗಳು ನಿಮ್ಮ ಮನದಾಳದ ಮಾತುಗಳನ್ನು ತಲುಪಿಸಲು ಅತ್ಯುತ್ತಮ ಮಾರ್ಗವಾಗಿದೆ. ನಿಮ್ಮ ಮನದಾಳದ ಮಾತನ್ನು ಅದರ ಮೇಲೆ ಬರೆದು ಆ ಸಂದೇಶದೊಂದಿಗೆ ನಿಮ್ಮ ಪ್ರೀತಿಪಾತ್ರರಿಗೆ ನೀಡಬಹುದು. ಈ ಪ್ರಪೋಸ್ ದಿನದಂದು ನೀವು ಕೂಡ ಕುಕೀಗಳ ಸಹಾಯವನ್ನು ಪಡೆದುಕೊಳ್ಳಿ ಮತ್ತು ಅದರ ಸಹಾಯದಿಂದ ನಿಮ್ಮ ಹೃತ್ಪೂರ್ವಕ ಭಾವನೆಗಳನ್ನು ವ್ಯಕ್ತಪಡಿಸುವ ಮೂಲಕ ನಿಮ್ಮ ಪ್ರೀತಿ ಪಾತ್ರರನ್ನು ಆಶ್ಚರ್ಯಗೊಳಿಸಿ.

Propose Day 2024: Propose this way if your lover is a foodie

2. ಚಾಕೊಲೇಟ್ಗಳು

ಚಾಕೊಲೆಟ್ ಅಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅಲ್ಲದೆ ಪ್ರೀತಿಯಲ್ಲಿ ಚಾಕೊಲೆಟ್ ಪಾತ್ರ ಎಲ್ಲರಿಗೂ ತಿಳಿದಿದೆ. ಪ್ರತಿಯೊಬ್ಬರೂ ಅದರ ರುಚಿಯನ್ನು ಇಷ್ಟಪಡುತ್ತಾರೆ. ಇದು ಮನಸ್ಥಿತಿಯನ್ನು ಸುಧಾರಿಸುತ್ತದೆ. ಒಂದು ವೇಳೆ ನಿಮ್ಮ ಸಂಗಾತಿಗೆ ಚಾಕೊಲೆಟ್ ಇಷ್ಟವಾದರೆ ನಿಮ್ಮ ಕೆಲಸ ಸುಲಭವಾಗುತ್ತದೆ.

ಪ್ರಪೋಸ್ ಮಾಡಲು ಚಾಕೊಲೇಟ್ ಬಾಕ್ಸ್‌ನಲ್ಲಿ ಮೆಸೇಜ್ ಇಟ್ಟು ಉಡುಗೊರೆಯಾಗಿ ಕೊಡಿ. ಅಥವಾ ಸಂದೇಶವನ್ನು ಒಳಗಡೆ ಇಟ್ಟು ಚಾಕೊಲೇಟ್ ತಯಾರಿಸಬಹುದು. ನೀವು ಇದನ್ನು ಮಾಡಲು ವೃತ್ತಿಪರ ಚಾಕಲೇಟ್ ಮೇಕರ್‌ ಸಹಾಯವನ್ನು ಪಡೆಯಬಹುದು. ಇದಕ್ಕಾಗಿ ನೀವು ಯಾವುದೇ ಆಕಾರದ ಪ್ಲಾಸ್ಟಿಕ್ ಅಥವಾ ಸಿಲಿಕೋನ್ ಕವರ್ ಬಳಸಬಹುದು. ಕವರ್‌ನಲ್ಲಿ ಸಂದೇಶವಿಟ್ಟು ಅದರ ಮೇಲೆ ಕೇಕ್ ತಯಾರಿಸಬಹುದು. ಹೀಗೆ ನೀವು ನಿಮ್ಮ ಪ್ರೀತಿ ಪಾತ್ರರಿಗೆ ಪ್ರಪೋಸ್ ಮಾಡಬಹುದು.

Propose Day 2024: Propose this way if your lover is a foodie

3. ಕೇಕ್ ಮತ್ತು ಕಪ್ಕೇಕ್ಗಳು

ಇನ್ನೂ ಕೇಕ್ ಒಳಗೆ ನಿಮ್ಮ ಸಂದೇಶವನ್ನು ಇಡುವ ಕಲ್ಪನೆಯೂ ಅದ್ಭುತವಾಗಿದೆ. ಇದರಿಂದ ನಿಮ್ಮ ಪ್ರೀತಿ ಪಾತ್ರರು ಕೇಕ್ ಅನ್ನು ಕತ್ತರಿಸಿದಾಗ ಪ್ರತಿ ತುಣುಕಿನಲ್ಲಿ ನಿಮ್ಮ ಮನದಾಳದ ಮಾತು ಬರೆದ ಸಂದೇಶವನ್ನು ಕಂಡುಕೊಳ್ಳುತ್ತಾರೆ.

ಇದಕ್ಕಿಂತ ಇನ್ನೂ ಸುಲಭವಾದ ಮಾರ್ಗವೆಂದರೆ ನೀವು ಬೇಕರಿಯಿಂದ ಕಪ್ಕೇಕ್ ಅನ್ನು ಖರೀದಿಸಿ ತನ್ನಿ. ನಿಮ್ಮ ಹೃದಯದ ಭಾವನೆಗಳನ್ನು ಕಾಗದದ ಮೇಲೆ ಬರೆಯಿರಿ. ಅದನ್ನು ಕಪ್ಕೇಕ್ ಒಳಗೆ ಇರಿಸಿ. ಅದನ್ನು ಮುಚ್ಚಲು, ನೀವು ಅದರ ಮೇಲೆ ಚಾಕೊಲೇಟ್ ಚಿಪ್ಸ್ ಅಥವಾ ಸ್ಟ್ರಾಬೆರಿಗಳನ್ನು ಇರಿಸಿ. ಈ ರೀತಿಯಲ್ಲೂ ನೀವು ನಿಮ್ಮ ಸಂಗಾತಿಗೆ ಪ್ರಪೋಸ್ ಮಾಡಬಹುದು.

ಇದರ ಹೊರತಾಗಿ ಇನ್ನೊಂದು ಉಪಾಯವಿದೆ. ನೀವು ಬಹಳಷ್ಟು ಕಪ್ಕೇಕ್ಗಳನ್ನು ಖರೀದಿಸಿ ತನ್ನಿ. ಅವುಗಳನ್ನು ಒಂದು ಬಾಕ್ಸ್‌ನಲ್ಲಿ ಇರಿಸಿ. ಕ್ರೀಮ್ ಸಹಾಯದಿಂದ ಪ್ರತಿ ಕಪ್ಕೇಕ್ನಲ್ಲಿ ನಿಮ್ಮ ಸಂದೇಶದ ಒಂದೋಂದು ಅಕ್ಷರವನ್ನು ಬರೆಯಿರಿ. ಅನೇಕ ಬೇಕರಿ ಅಂಗಡಿಗಳು ಕಸ್ಟಮೈಸ್ ಮಾಡಿದ ಕಪ್‌ಕೇಕ್‌ಗಳನ್ನು ಸಹ ತಯಾರಿಸುತ್ತವೆ. ಇದನ್ನು ನಿಮ್ಮ ಪ್ರೀತಿ ಪಾತ್ರರಿಗೆ ನೀಡುವ ಮೂಲಕ ಈ ದಿನವನ್ನು ನೀವು ಆಚರಿಸಬಹುದು. ಹೀಗೆ ನಾನಾ ರೀತಿಯಲ್ಲಿ ನಿಮ್ಮ ಸಂದೇಶವನ್ನು ನಿಮ್ಮ ಸಂಗಾತಿಗೆ ತಲುಪಿಸಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+