Potato Pulao Recipe: ನೀವು ಆಲುಗೆಡ್ಡೆ ಪ್ರಿಯರಾ? ಮನೆಯಲ್ಲೇ ರುಚಿಯಾಗಿ ತಯಾರಿಸಿ ಆಲೂ ಪಲಾವ್

ಆಲುಗೆಡ್ಡೆ ಅಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ದೋಸೆ, ಚಪಾತಿ, ಪೂರಿ ಹೀಗೆ ಬಹುತೇಕ ಬೆಳಗಿನ ಉಪಾಹಾರ ತಯಾರಿಸಲು ಅಲೂಗಡ್ಡೆಯನ್ನು ಬಳಸಲಾಗುತ್ತದೆ. ಇಷ್ಟು ಮಾತ್ರವಲ್ಲ ಸಂಬಾಂರ್, ಸಂಜೆ ತಿಂಡಿಗೂ ಆಲೂಗಡ್ಡೆ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ.

ಪಾನೀಪುರಿ, ಸಮೋಸಾ, ಆಲೂಬೊಂಡಾ ಹೀಗೆ ಹೇಳ್ತಾ ಹೋದರೆ ಆಲೂಗಡ್ಡೆಯಿಂದ ತಯಾರಾಗುವ ಖಾದ್ಯಗಳ ದೊಡ್ಡ ಪಟ್ಟಿಯನ್ನೇ ಮಾಡಿಬಿಡಬಹುದು.

Potato Pulao Recipe: How to make Potato Pulao at home in kannada

ಹೀಗೆ ಭಾರತೀಯರ ಅಡುಗೆ ಮನೆಗಳಲ್ಲಿ ಬೇಡಿಕೆ ಹೆಚ್ಚಿರುವ ಈ ಆಲೂಗೆಡ್ಡೆಯಿಂದ ರುಚಿಕರ ಪಲಾವ್ ಕೂಡ ಮಾಡಬಹುದು. ಕೆಲವರು ಈ ಆಲೂಗೆಡ್ಡೆ ಪಲಾವ್ ಬಗ್ಗೆ ತಿಳಿದಿರಬಹುದು, ಮನೆಯಲ್ಲಿ ಮಾಡಿ ಕೂಡ ತಿಂದಿರಬಹುದು. ಆದರೆ ನಾವು ಇವತ್ತು ನಿಮಗೆ ಹೇಳಲು ಹೊರಟಿರುವ ಆಲೂಗೆಡ್ಡೆ ಪಲಾವ್ ರುಚಿಯಲ್ಲಿ ಬಗ್ಗೆ ಅಲ್ಲಗಳಿಯೋ ಮಾತೇ ಇಲ್ಲ. ಹೀಗೆ ರುಚಿಯಾಗಿ ಶುಚಿಯಾಗಿ ಮನೆಯಲ್ಲೇ ಆಲೂಗೆಡ್ಡೆ ಪಲಾವ್ ಮಾಡಿ ತಿಂದು ನಮ್ಮೊಂದಿಗೆ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ.

ಹಾಗಾದರೆ ತಡ ಮಾಡುವುದು ಬೇಡ ಆಲುಗೆಡ್ಡೆ ಪಲಾವ್ ತಯಾರಿಸುವುದು ಹೇಗೆ ಅನ್ನೋದನ್ನು ತಿಳಿಯೋಣ. ಮೊದಲಿಗೆ ಆಲುಗೆಡ್ಡೆ ಪಲಾವ್ ತಯಾರಿಸಲು ಬೇಕಾಗುವ ಪದಾರ್ಥಗಳ ಬಗ್ಗೆ ತಿಳಿಯೋಣ. ನಂತರ ಅದರ ಪಾಕವಿಧಾನವನ್ನು ತಿಳಿದುಕೊಳ್ಳೋಣ.

Potato Pulao Recipe: How to make Potato Pulao at home in kannada

ಅಲೂ ಪಲಾವ್ ತಯಾರಿಸಲು ಬೇಕಾಗುವ ಪದಾರ್ಥಗಳು:

* ಎಣ್ಣೆ 10 ಟೇಬಲ್ ಸ್ಪೂನ್

* ಚೆಕ್ಕೆ ಒಂದು ಇಂಚು

* ಏಲಕ್ಕಿ ಎರಡು

* ಪಲಾವ್ ಮೊಗ್ಗು 1

* ಲವಂಗ 4ರಿಂದ5

* ಪಲಾವ್ ಎಲೆ 1

* ಆಲುಗಡ್ಡೆ ಮಧ್ಯಮ ಗಾತ್ರದ 2

* ಈರುಳ್ಳಿ 2

* ಹಸಿ ಬಟಾಣಿ 1 ಕಪ್

* ಶುಂಠಿ ಕಾಲು ಟೇಬಲ್ ಸ್ಪೂನ್

* ಟೊಮ್ಯಾಟೋ 2

* ಅರಿಶಿನ ಚಿಟಿಕೆ

* ದನಿಯಾ ಪುಡಿ ಒಂದು ಚಮಚ

* ಗರಂ ಮಸಾಲ ಪುಡಿ 1 ಚಮಚ

* ಖಾರದ ಪುಡಿ 1 ಚಮಚ

* ಉಪ್ಪು

* ಅಕ್ಕಿ 1 ಕಪ್

* ಮೊಸರು ಕಾಲ್ ಕಪ್

* ನಿಂಬೆ ಹಣ್ಣು ಅರ್ಧ

* ಕೊತ್ತೊಂಬರಿ ಸೊಪ್ಪು

ಅಲೂ ಪಲಾವ್ ತಯಾರಿಸುವ ವಿಧಾನ:

* ಮೊದಲಿಗೆ ಕುಕ್ಕರ್ ಅನ್ನು ಒಲೆಯ ಮೇಲಿಟ್ಟು ಕಾದ ಬಳಿಕ ಎಣ್ಣೆ ಹಾಕಿ

* ಎಣ್ಣೆ ಬಿಸಿಯಾದ ಬಳಿಕ ಕಡಿಮೆ ಉರಿಯಲ್ಲಿ ಚೆಕ್ಕೆ, ಏಲಕ್ಕಿ, ಮೊಗ್ಗು, ಲವಂಗ, ಪಲಾವ್ ಎಲೆ ಹಾಕಿ ಸ್ವಲ್ಪ ಹುರಿಯಿರಿ.

* ಬಳಿಕ ಸಣ್ಣಕೆ ಹೆಚ್ಚಿದ ಆಲೂಗಡ್ಡೆ ಹಾಕಿ ಮಿಕ್ಸ್ ಮಾಡಿ. ಇದಾದ ಬಳಿಕ ಉದ್ದವಾಗಿ ಹೆಚ್ಚಿದ ಈರುಳ್ಳಿ ಹಾಕಿ ಚೆನ್ನಾಗಿ ಕಲಸಿ.

* ಬಳಿಕ ಇದಕ್ಕೆ ಹಸಿ ಬಟಾಣಿ ಹಾಕಿ ಮಿಕ್ಸ್‌ ಮಾಡಿ. ಎರಡರಿಂದ ಮೂರು ನಿಮಿಷ ಇದನ್ನು ಫ್ರೈ ಮಾಡಿ. ಶುಂಠಿ ಹಾಕಿ

* ಇದು ಚೆನ್ನಾಗಿ ಫ್ರೈ ಆದ ಬಳಿಕ ಇದಕ್ಕೆ ಟೊಮ್ಯಾಟೋ, ಅರಿಶಿಣ ಪುಡಿ, ದನಿಯಾ ಪುಡಿ ಹಾಕಿ ಚೆನ್ನಾಗಿ ಕದಡಿ

* ನಂತರ ಗರಂ ಮಸಾಲ ಪುಡಿ ಹಾಗೂ ಖಾರದ ಪುಡಿ ಹಾಕಿ ಕಲಸಿ. ಚೆನ್ನಾಗಿ ಹುರಿದುಕೊಂಡು ರುಚಿಗೆ ತಕ್ಕಷ್ಟು ಉಪ್ಪು ಹಾಕಿ.

* ಇದಕ್ಕೆ ಎರಡು ಲೋಟ ನೀರು ಹಾಕಿ. ಚೆನ್ನಾಗಿ ಕಲಸಿ ಉರಿ ಹೆಚ್ಚಿಸಿ. ನೀರು ಕುದಿಯುವಾಗ ಮೊಸರು ಹಾಕಿ.

* ಬಳಿಕ ಚೆನ್ನಾಗಿ ತೊಳೆದ ಅಕ್ಕಿಯನ್ನು ಇದಕ್ಕೆ ಹಾಕಿ ಮಿಕ್ಸ್‌ ಮಾಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ.

* ಎರಡು ವಿಸಿಲ್ ಬಂದ ತಕ್ಷಣ ಒಲೆ ಆಫ್ ಮಾಡಿ, ಕುಕ್ಕರ್ ಅಬೆ ತಾನಾಗಿ ಹೋಗಲು ಬಿಟ್ಟುಬಿಡಿ.

* ಕುಕ್ಕರ್ ಮುಚ್ಚಳ ತೆಗೆಯಿರಿ, ಅರ್ಧ ನಿಂಬೆ ಹಣ್ಣಿನ ರಸವನ್ನು ಹಾಕಿ. ಕೊತ್ತೊಂಬರಿ ಸೊಪ್ಪು ಉದುರಿಸಿ ಕಲಸಿದರೆ ಬಿಸಿ ಬಿಸಿ ಆಲೂ ಪಲಾವ್ ಸವಿಯಲು ಸಿದ್ಧ.

(ಗಮನಿಸಿ: ಇದಕ್ಕೆ ಬೇಕಿದ್ದಲ್ಲಿ, ಕ್ಯಾರೆಟ್, ಗೋಡಂಬಿ, ದ್ರಾಕ್ಷಿ, ಕ್ಯಾಪ್ಸಿಕಂ, ಬೀಟ್‌ರೂಟ್ ಕೂಡ ನೀವು ಬಳಸಬಹುದು.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+