ಜಿಮ್, ಡಯೆಟ್ ಇಲ್ಲದೆ ಕೇವಲ ಹತ್ತೇ ವಾರದಲ್ಲಿ 13 ಕಿಲೋ ತೂಕ ಕಳೆದುಕೊಂಡ ಮಹಿಳೆ
ಪ್ರಸವಾನಂತರ ಪ್ರತಿಯೊಬ್ಬ ಮಹಿಳೆ ದೈಹಿಕ ಮತ್ತು ಮಾನಸಿಕ ಬದಲಾವಣೆಗಳಿಂದ ಒಳಗಾಗುತ್ತಾಳೆ. ಈ ಸಮಯದಲ್ಲಿ ತೂಕ ಹೆಚ್ಚಾಗುವುದು, ಹೊಟ್ಟೆ ಉಬ್ಬರ ಮತ್ತು ಆತ್ಮವಿಶ್ವಾಸ ಕುಗ್ಗುವಂಥಹ ಸಮಸ್ಯೆಗಳು ಸಾಮಾನ್ಯವಾಗಿವೆ. ಆದರೆ ಕೆಲವು ಸರಿಯಾದ ಅಭ್ಯಾಸಗಳನ್ನು ಬಹಳ ತಾಳ್ಮೆಯಿಂದ ಅನುಸರಿಸಿದರೆ ಈ ಸಮಸ್ಯೆಯಿಂದ ಮೇಲೆ ಬರುವುದು ಕಷ್ಟವೇನಲ್ಲ. ಇತ್ತೀಚೆಗೆ, ಕಟೆಂಟ್ ಕ್ರಿಯೇಟರ್ ಸುರಭಿ ಪಿಸಲ್ ಎನ್ನುವ ಮಹಿಳೆ ತಮ್ಮ ವೈಟ್ ಲಾಸ್ ಜರ್ನಿಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಯಾವುದೇ ವ್ಯಾಯಾಮವಿಲ್ಲದೆ ಕೇವಲ 10 ವಾರಗಳಲ್ಲಿ 13 ಕೆಜಿ ತೂಕ ಇಳಿಸಿಕೊಂಡಿರುವ ಬಗ್ಗೆ ಇವರು ಈ ವಿಡಿಯೋದಲ್ಲಿ ವಿವರಿಸಿ ಹೇಳಿದ್ದಾರೆ.
ಪ್ರಸವಾನಂತರ ತೂಕ ಹೆಚ್ಚಾಗಲು ಕಾರಣವೇನು?
ಹೆರಿಗೆಯ ನಂತರ ದೇಹದಲ್ಲಿ ಅನೇಕ ಹಾರ್ಮೋನುಗಳ ಬದಲಾವಣೆಗಳಾಗುತ್ತವೆ. ದೇಹವು ಹಾರ್ಮೋನುಗಳ ಬದಲಾವಣೆಗಳೊಂದಿಗೆ ಸೆಣಸಾಡುತ್ತಿರುವಾಗಲೇ ತಾಯಿಯು ಮಗುವಿನ ಬಗ್ಗೆಯೂ ಕಾಳಜಿ ವಹಿಸಬೇಕಾಗುತ್ತದೆ.ಅಂಥಹ ಸಂದರ್ಭಗಳಲ್ಲಿ, ಸರಿಯಾಗಿ ನಿದ್ದೆ ಮಾಡುವುದು ಕೂಡಾ ಸಾಧ್ಯವಾಗುವುದಿಲ್ಲ. ನಿಯಮಿತವಾಗಿ ಆಹಾರ ಸೇವನೆಯೂ ಆಗುವುದಿಲ್ಲ. ದೈಹಿಕ ಚಟುವಟಿಕೆಯ ಕೊರತೆ ಮತ್ತು ಮಾನಸಿಕ ಒತ್ತಡದಿಂದಾಗಿ ತೂಕ ಹೆಚ್ಚಳ ಸಾಮಾನ್ಯವಾಗಿರುತ್ತದೆ. ಭಾರತದಲ್ಲಿ, ಹೆರಿಗೆಯ ನಂತರ ಮಹಿಳೆಯರಿಗೆ ಹೆಚ್ಚಾಗಿ ತುಪ್ಪ, ಬೆಲ್ಲ ಮತ್ತು ವಿವಿಧ ರೀತಿಯ ಒಣ ಹಣ್ಣುಗಳನ್ನು ನೀಡಲಾಗುತ್ತದೆ. ಪ್ರಸವಾನಂತರದ ಈ ಆಹಾರಗಳ ಸೇವನೆ ಕೂಡಾ ತೂಕ ಹೆಚ್ಚಾಗಲು ಪ್ರಮುಖ ಕಾರಣವಾಗಿರುತ್ತದೆ.

ಮಹಿಳೆಯ ವೈಟ್ ಲಾಸ್ ಜರ್ನಿಯ ಆರಂಭ:
ಹೆರಿಗೆಯ ನಂತರ, ತನ್ನ ದೇಹವು ತನ್ನದೇ ಅಲ್ಲ ಎನ್ನುವ ಭಾವ ಮೂಡಿತ್ತು ಎಂದು ಮಹಿಳೆ ತನ್ನ ಇನ್ಸ್ಟಾಗ್ರಾಮ್ ನಲ್ಲಿ ವೀಡಿಯೊದಲ್ಲಿ ಹೇಳಿಕೊಂಡಿದ್ದಾರೆ.ಈ ಸಮಯದಲ್ಲಿ, ತೂಕ ಹೆಚ್ಚಳ, ಹೊಟ್ಟೆ ಉಬ್ಬರ, ಮಲಬದ್ಧತೆ ಮತ್ತು ಆತ್ಮವಿಶ್ವಾಸದ ಕೊರತೆಯಂತಹ ಸಮಸ್ಯೆಗಳನ್ನು ಎದುರಿಸಿರುವುದಾಗಿ ಹೇಳಿಕೊಂಡಿದ್ದಾರೆ.ಆದರೆ ಈ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಲು ಕೆಲವು ಸರಳ ಹವ್ಯಾಸಗಳನ್ನು ರೂಪಿಸಿಕೊಂಡಿರುವುದಾಗಿ ಮಹಿಳೆ ಹೇಳಿದ್ದಾರೆ.
1. ಆಪಲ್ ಸೈಡರ್ ವಿನೆಗರ್:
ಸುರಭಿ ತನ್ನ ದೈನಂದಿನ ಆಹಾರದಲ್ಲಿ ಆಪಲ್ ಸೈಡರ್ ವಿನೆಗರ್ ಅನ್ನು ಸೇರಿಸುವುದಕ್ಕೆ ಆರಂಭಿಸಿದರು. ಆಪಲ್ ಸೈಡರ್ ವಿನೆಗರ್ ಕುಡಿಯುವುದರಿಂದ ಸುರಭಿಯ ಜೀರ್ಣಕ್ರಿಯೆ ಸುಧಾರಿಸಿತು. ಜೊತೆಗೆ ಹೆಚ್ಚು ಹೆಚ್ಚು ತಿನ್ನಬೇಕು ಎನ್ನುವ ಆಹಾರದ ಹಂಬಲಕ್ಕೂ ನಿಯಂತ್ರಣ ಬಿತ್ತು. ಕ್ರಮೇಣ, ತೂಕ ಇಳಿಕೆಯಾಗುತ್ತಿರುವುದು ಅವರ ಗಮನಕ್ಕೆ ಬಂತು. ಇಲ್ಲಿ ಸುರಭಿ ತನ್ನ ಗಮನವನ್ನು ಕೇವಲ ತೂಕ ಇಳಿಕೆಯ ಮೇಲೆ ಮಾತ್ರವಲ್ಲ, ತನ್ನ ಶಕ್ತಿ ವರ್ಧನೆ, ರೋಗನಿರೋಧಕ ಶಕ್ತಿ ಹೆಚ್ಚಳ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸುವತ್ತಲೂ ಹರಿಸಿದ್ದರು.
2. ಬ್ಲಾಕ್ ಸೀಡ್ ಆಯಿಲ್:
ಹೆರಿಗೆಯ ನಂತರ ತನ್ನ ತೂಕ ಇಳಿಸಿಕೊಳ್ಳಲು ಇವರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬ್ಲಾಕ್ ಸೀಡ್ ಆಯಿಲ್ ಅನ್ನು ತೆಗೆದುಕೊಳ್ಳಲು ಪ್ರಾರಂಭಿಸಿದರು. ಖಾಲಿ ಹೊಟ್ಟೆಯಲ್ಲಿ ಈ ಎಣ್ಣೆಯನ್ನು ಕುಡಿಯುವುದರಿಂದ ಅವರ ಚಯಾಪಚಯ ಕ್ರಿಯೆ ಸುಧಾರಿಸಿತು. ರಕ್ತದಲ್ಲಿನ ಸಕ್ಕರೆ ಮಟ್ಟವೂ ನಿಯಂತ್ರಣಕ್ಕೆ ಬಂತು ಎಂದು ಹೇಳಿಕೊಂಡಿದ್ದಾರೆ.
3. ಬುಲೆಟ್ ಬ್ರೂಫ್ ಕಾಫಿ:
ಬ್ಲಾಕ್ ಕಾಫಿ ಮತ್ತು ತೆಂಗಿನ ಎಣ್ಣೆಯ ಮಿಶ್ರಣವಾದ ಬುಲೆಟ್‌ಪ್ರೂಫ್ ಕಾಫಿಯ ಸೇವನೆಯನ್ನು ಕೂಡಾ ಆರಂಭಿಸುತ್ತಾರೆ. ಈ ಬುಲೆಟ್‌ಪ್ರೂಫ್ ಕಾಫಿ ಕುಡಿಯುವುದರಿಂದ ದಿನವಿಡೀ ಶಕ್ತಿ ಕಾಯ್ದುಕೊಳ್ಳಲು ಸಹಾಯವಾಗುತ್ತದೆಯಂತೆ.ಇದು ಹಸಿವನ್ನು ನಿಯಂತ್ರಿಸುತ್ತದೆ. ಜೊತೆಗೆ ಕೊಬ್ಬು ಕರಗಲು ಸಹಾಯ ಮಾಡುತ್ತದೆ.
4. ಆಹಾರದ ಸಮಯ:
ಪ್ರಸವಾನಂತರ ಇವರು ತಮ್ಮ ಆಹಾರದ ಮೇಲೆ ಗಮನ ಹರಿಸಿದ್ದು ಮಾತ್ರವಲ್ಲ, ಎಷ್ಟು ಪ್ರಮಾಣದಲ್ಲಿ ಆಹಾರ ಸೇವಿಸಬೇಕು, ಯಾವ ಆಹಾರವನ್ನು ಯಾವಾಗ ಸೇವಿಸಬೇಕು ಎನ್ನುವುದರ ಬಗ್ಗೆಯೂ ಎಚ್ಚರಿಕೆ ವಹಿಸಿದ್ದರು. ಪದೇ ಪದೇ ತಿನ್ನುವ ಬದಲು ತನಗೆ ಹಸಿವಾದಾಗ ಮಾತ್ರ ತಿನ್ನುತ್ತಿದ್ದರು.
5. ದೇಹವನ್ನು ಅರ್ಥಮಾಡಿಕೊಂಡಿದ್ದು:
ಇವೆಲ್ಲದ್ದಕ್ಕಿಂತ ಮುಖ್ಯವಾಗಿ ಅವರು ತನ್ನ ದೇಹದ ಅಗತ್ಯಗಳನ್ನು ಅರ್ಥಮಾಡಿಕೊಂಡರು. ಈ ಮೂಲಕ ದೇಹದ ಅಗತ್ಯಕ್ಕೆ ತಕ್ಕಂತೆ ಬದಲಾವಣೆಗಳನ್ನು ಮಾಡಿಕೊಂಡರು. ಇದು ತೂಕ ಇಳಿಸಿಕೊಳ್ಳುವುದಕ್ಕೆ ಹೆಚ್ಚಿನ ಸಹಾಯ ಮಾಡಿತು.ಅವರ ಆತ್ಮವಿಶ್ವಾಸವನ್ನೂ ಹೆಚ್ಚಿಸಿತು.
ಸುರಭಿಯವರು ಹೇಳುವಂತೆ ಉತ್ತಮ ಜೀರ್ಣಕ್ರಿಯೆ, ಹೆಚ್ಚಿನ ಶಕ್ತಿ ಮತ್ತು ಒತ್ತಡವನ್ನು ನಿರ್ವಹಿಸುವತ್ತ ಗಮನ ಹರಿಸಿದಾಗ ತೂಕ ಇಳಿಸುವುದು ನೈಸರ್ಗಿಕ ಪ್ರಕ್ರಿಯೆಯಾಯಿತು.ತೂಕ ಇಳಿಸಿಕೊಳ್ಳಲು ಕಟ್ಟುನಿಟ್ಟಿನ ಆಹಾರ ಕ್ರಮ ಅಥವಾ ಜಿಮ್ ಅಗತ್ಯವಿಲ್ಲ ಎನ್ನುವುದು ಸುರಭಿಯವರ ವೈಟ್ ಲಾಸ್ ಜರ್ನಿ ತಿಳಿಸುತ್ತದೆ.












Click it and Unblock the Notifications