Poppy Seeds: ಗಸಗಸೆ ಸೇವನೆಯಿಂದ ಆಗುವ 5 ಆರೋಗ್ಯ ಲಾಭಗಳು ಇಲ್ಲಿವೆ!
Poppy Seeds Benefits: ಮನೆಯಲ್ಲೇ ಇರುವ ಗಸಗಸೆಯನ್ನು ಬಳಸಿದರೆ ಸಾಕು ಹಲವು ಆರೋಗ್ಯ ಉಪಯೋಗಗಳು ಇವೆ. ಗಸಗಸೆ ಹಲವು ಆರೋಗ್ಯಕರ ಅಂಶಗಳನ್ನು ಒಳಗೊಂಡಿದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಜೀರ್ಣಕ್ರಿಯೆ ಉತ್ತಮವಾಗಲಿದೆ. ಜೀರ್ಣಕ್ರಿಯೆಯನ್ನು ಸುಧಾರಿಸುವಲ್ಲಿ ಗಸಗಸೆಯು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಗಸಗಸೆಯನ್ನು ಸೇವಿಸುವುದರಿಂದ ಏನೆಲ್ಲಾ ಆರೋಗ್ಯಕರ ಲಾಭಗಳಿವೆ ಎನ್ನುವ ವಿವರ ಇಲ್ಲಿದೆ. ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನ ಶೈಲಿಯಲ್ಲಿ ನಿದ್ದೆ ಕೊರತೆ ಹಾಗೂ ಒತ್ತಡ ಹೆಚ್ಚಾಗುತ್ತಿದೆ. ಈ ರೀತಿಯ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡಿಕೊಳ್ಳಲು ಗಸಗಸೆ ಸಹಕಾರಿಯಾಗಿದೆ.
ಮನೆಯಲ್ಲಿರುವ ಸಣ್ಣ ಆಹಾರ ಪದಾರ್ಥದವಾದ ಗಸಗಸೆಯಿಂದ ಹಲವು ಆರೋಗ್ಯ ಲಾಭಗಳಿವೆ. ಇದು ಸಣ್ಣ ಆಹಾರ ಪದಾರ್ಥವಾದರೂ ಇದರ ಲಾಭಗಳು ಅಪಾರ ಅಂತಲೇ ಹೇಳಬಹುದು. ಗಸಗಸೆ ಬೀಜಗಳನ್ನು ಪಾಯಸ ಮಾಡಿಕೊಂಡು ಸಹ ಕುಡಿಯಬಹುದು. ದಿನ ನಿತ್ಯ ಆಹಾರದಲ್ಲಿ ಗಸಗಸೆಯನ್ನು ಬಳಸುವುದರಿಂದ ನಿಮ್ಮ ಜೀರ್ಣಕ್ರಿಯೆ ಸುಧಾರಿಸುತ್ತದೆ. ಚಯಾಪಚಯ ಕ್ರಿಯೆಗೂ ಇದು ಸಹಕಾರಿಯಾಗಿದೆ. ಅಂದರೆ, ನಾವು ತಿನ್ನುವ ಮತ್ತು ಕುಡಿಯುವ ವಸ್ತುಗಳಿಂದ ನಮ್ಮ ದೇಹಕ್ಕೆ ಶಕ್ತಿ ಬರುತ್ತದೆ. ನಾವು ಸೇವಿಸುವ ಆಹಾರ ಪದಾರ್ಥಗಳನ್ನು ದೇಹದಲ್ಲಿ ಶಕ್ತಿಯ ರೂಪದಲ್ಲಿ ಬದಲಾಗುತ್ತವೆ. ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತನೆ ಮಾಡುವುದಕ್ಕೆ ಸಹಾಯ ಮಾಡುವ ನಮ್ಮ ದೇಹದ ಒಳಗಿನ ರಾಸಾಯನಿಕ ಪ್ರಕ್ರಿಯೆಯನ್ನು ಚಯಾಪಚಯ ಎನ್ನಲಾಗುತ್ತದೆ. ಈ ಪ್ರಕ್ರಿಯೆಗೆ ಗಸಗಸೆ ಸಹಕಾರಿಯಾಗಿದೆ.

ಗಸಗಸೆ ಬೀಜಗಳಲ್ಲಿನ ಹೆಚ್ಚಿನ ಫೈಬರ್ ಅಂಶವಿದೆ. ಈ ರೀತಿ ಹೆಚ್ಚು ಫೈಬರ್ ಅಂಶ ಇರುವುದರಿಂದ ಕರುಳಿನ ಆರೋಗ್ಯಕ್ಕೆ ಉತ್ತಮವಾಗಿದೆ. ಅಲ್ಲದೇ ಇದರೊಂದಿಗೆ ಮಲಬದ್ಧತೆಯನ್ನು ತಡೆಯಲು ಸಹ ಗಸಗಸೆ ಬೆಸ್ಟ್ ಅಂತಲೇ ಹೇಳಲಾಗುತ್ತದೆ. ಗಸಗಸೆ ಕೇವಲ ಜೀರ್ಣಕ್ರಿಯೆಗೆ ಮಾತ್ರವಲ್ಲ ಇನ್ನೂ 5 ಪ್ರಮುಖ ಉಪಯೋಗಗಳು ಈ ಆಹಾರ ಪದಾರ್ಥವನ್ನು ಸೇವಿಸುವುದರಿಂದ ಆಗಲಿದೆ. ಅದೇನು ಅಂತ ನೋಡೋಣ...
ಗಸಗಸೆ ಸಣ್ಣದಾದರೂ ಅದರ ಲಾಭ ದೊಡ್ಡದು ಎನ್ನುವಂತೆ ಇದರಿಂದ ಹಲವು ಉಪಯೋಗಗಳು ಇವೆ. ಗಸಗಸೆ ಸೇವಿಸುವುದರಿಂದ ನಿದ್ದೆ ಮಾಡುವುದಕ್ಕೆ ಸಹಕಾರಿಯಾಗಲಿದೆ. ಅಲ್ಲದೇ ಮೂಳೆಗಳು ಬಲವಾಗಲಿದ್ದು. ಹೃದಯದ ರಕ್ತನಾಳದ ಆರೋಗ್ಯ ದೃಷ್ಟಿಯಿಂದಲೂ ಸಹಕಾರಿಯಾಗಿವೆ. ಗಸಗಸೆಯಲ್ಲಿರುವ ಕ್ಯಾಲ್ಸಿಯಂ ಹಾಗೂ ಮೆಗ್ನೀಸಿಯಮ್ ಸೇರಿದಂತೆ ಹಲವು ಪೋಷಕಾಂಶಗಳು ಸಮೃದ್ಧವಾಗಿವೆ. ಈ ಆಹಾರ ಪದಾರ್ಥದಲ್ಲಿ ಹಲವು ಅಗತ್ಯ ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ.
* ಗಸಗಸೆ ಬೀಜಗಳು ದೇಹದಲ್ಲಿ ಉಷ್ಣಾಂಶವನ್ನು ಕಡಿಮೆ ಮಾಡುವುದಕ್ಕೆ ಸಹಕಾರಿಯಾಗಿದೆ. ದೇಹದಲ್ಲಿ ಒತ್ತಡವನ್ನು ಕಡಿಮೆ ಮಾಡುತ್ತದೆ. ನಿದ್ದೆ ಹೆಚ್ಚು ಮಾಡುವುದಕ್ಕೆ ಸಹಾಯ ಮಾಡುತ್ತದೆ. ಇನ್ನು ಗಸಗಸೆ ಬೀಜಗಳನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಪುರುಷರು ಮತ್ತು ಮಹಿಳೆಯರಲ್ಲಿ ಫಲವತ್ತತೆಯ ಪ್ರಮಾಣ ಹೆಚ್ಚಳವಾಗಲು ಕಾರಣವಾಗುತ್ತದೆ. ಒಮೆಗಾ-3 ಸೇರಿದಂತೆ ಹಲವು ಪೌಷ್ಟಿಕಾಂಶಗಳು ಇದರಲ್ಲಿ ಇದೆ.
* ದೇಹದ ಉಷ್ಣಾಂಶ ಇಳಿಕೆ: ಗಸಗಸೆಯನ್ನು ಸೇವಿಸುವುದರಿಂದ ದೇಹದಲ್ಲಿ ಉಷ್ಣಾಂಶ ಇಳಿಕೆಯಾಗಲಿದೆ. ಅಲ್ಲದೇ ದೇಹವನ್ನು ತಂಪಾಗಿ ಇರಿಸುವುದಕ್ಕೆ ಇದು ಸಹಕಾರಿಯಾಗಿದೆ. ದೇಹದಲ್ಲಿ ಉಷ್ಣಾಂಶ ಹೆಚ್ಚಾಗಿದೆ ಎನಿಸಿದಾಗ ನೀವು ಗಸಗಸೆ ಪಾಯಸವನ್ನು ಸಹ ಮಾಡಿಕೊಂಡು ಕುಡಿಯಬಹುದಾಗಿದೆ.












Click it and Unblock the Notifications