ಮನೆಯಲ್ಲಿ ಉಳಿದ ಅನ್ನ ಇದಿಯಾ? ಹಾಗಾದರೆ ಈ ಕೇರಳದ ಸ್ಪೆಷಲ್ ತುಪ್ಪದ ನೈಪಥಾಲ್ ಅನ್ನು 10 ನಿಮಿಷದಲ್ಲಿ ಮಾಡಿ..

ಪ್ರತಿದಿನ ಬೆಳಿಗ್ಗೆ ಇಡ್ಲಿ, ದೋಸೆ, ಪೂರಿ, ಚಪಾತಿಯನ್ನು ತಿನ್ನಲು ಬೇಸರ ಆಗಿದಿಯಾ? ಸ್ವಲ್ಪ ವಿಭಿನ್ನವಾದ ಉಪಹಾರವನ್ನು ತಿನ್ನಲು ಮನಸ್ಸಾಗಿದಿಯಾ? ಹಾಗಾದರೆ ಕೇರಳ ಸ್ಪೆಷಲ್ ತುಪ್ಪದ ನೈಪಥಾಲ್ (Neypathal) ಮಾಡಿ. ಈ ತುಪ್ಪದ ನೈಪಥಾಲ್ ಮಾಡಲು ಉಳಿದ ಅನ್ನ ಸಾಕು. ಇದರೊಂದಿಗೆ ನೀವು ರುಚಿಕರವಾದ ಪಥಾಲ್ ಮಾಡಬಹುದು.

ಕೇರಳದ ಜನರು ಈ ನೈಪಥಾಲ್ ಅನ್ನು ಬೆಳಗಿನ ಉಪಾಹಾರಕ್ಕಾಗಿ ತಿನ್ನುತ್ತಾರೆ. ಇದನ್ನು ನೀವು ಕೂಡ ನಿಮ್ಮ ಮನೆಯಲ್ಲಿ ತಯಾರಿಸಿ ಸೇವಿಸಬಹುದು. ಹಾಗಾದರೆ ತುಪ್ಪದ ನೈಪಥಾಲ್ ಅನ್ನು ಸರಳ ರೀತಿಯಲ್ಲಿ ಮಾಡುವುದು ಹೇಗೆಂದು ತಿಳಿಯೋಣ. ಇದನ್ನು ಓದಿ ಮನೆಯಲ್ಲೊಂದು ಬಾರಿ ಟ್ರೈ ಮಾಡಿ.

Neypathal Recipe In kannada: Learn how to prepare

ಅಗತ್ಯವಿರುವ ವಸ್ತುಗಳು:

*ಉಳಿದ ಅನ್ನ - 1 ಕಪ್

* ಅಕ್ಕಿ ಹಿಟ್ಟು - 1 ಕಪ್

* ಈರುಳ್ಳಿ - 1 (ಸಣ್ಣದಾಗಿ ಹೆಚ್ಚಿದ)

* ತೆಂಗಿನಕಾಯಿ - 1 1/2 ಕಪ್ (ತುರಿದ)

* ಉಪ್ಪು - ರುಚಿಗೆ ತಕ್ಕಂತೆ

* ನೀರು - ಅಗತ್ಯವಿರುವ ಪ್ರಮಾಣ

* ಜೀರಿಗೆ - 2 tbsp

* ಕರಿಬೇವಿನ ಎಲೆಗಳು - ಸ್ವಲ್ಪ (ಸಣ್ಣದಾಗಿ ಹೆಚ್ಚಿದ)

* ಎಣ್ಣೆ - ಕರಿಯಲು ಬೇಕಾದ ಪ್ರಮಾಣ

* ತುಪ್ಪ - ಅಗತ್ಯ ಪ್ರಮಾಣ

ಪಾಕವಿಧಾನ:

* ಮೊದಲು ಅಕ್ಕಿಯನ್ನು ಮಿಕ್ಸರ್ ಜಾರ್ ಗೆ ಹಾಕಿ ರುಬ್ಬಿಕೊಳ್ಳಿ.

* ನಂತರ ಇದನ್ನು ಒಂದು ಪಾತ್ರೆಗೆ ತೆಗೆದುಕೊಂಡು ಅದಕ್ಕೆ ಅಕ್ಕಿಹಿಟ್ಟು ಹಾಕಿ ಪೂರಿ ಹಿಟ್ಟಿನ ಹದಕ್ಕೆ ಕಲಸಿ.

* ನಂತರ ತೆಂಗಿನತುರಿ, ಈರುಳ್ಳಿ, ಜೀರಿಗೆ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮ್ಯಾಶ್ ಮಾಡಿ.

* ನಂತರ ಕಲಸಿದ ಹಿಟ್ಟನ್ನು ನಿಂಬೆ ಗಾತ್ರದ ಉಂಡೆಗಳನ್ನಾಗಿ ಮಾಡಿ.

* ನಂತರ ಬಾಳೆ ಎಲೆಯನ್ನು ತೆಗೆದುಕೊಂಡು ಅದರ ಮೇಲೆ ತುಪ್ಪವನ್ನು ಹಚ್ಚಿ ಮತ್ತು ಈ ಚೆಂಡುಗಳನ್ನು ಒಂದೊಂದಾಗಿ ಇರಿಸಿ ಅವುಗಳನ್ನು ಚಪ್ಪಟೆಯಾಗಿ ತಟ್ಟಿಕೊಳ್ಳಿ.

* ಒಂದು ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಅದರಲ್ಲಿ ಕರಿಯಲು ಬೇಕಾದಷ್ಟು ಎಣ್ಣೆಯನ್ನು ಹಾಕಿ ಎಣ್ಣೆ ಬಿಸಿಯಾದಾಗ ಪತಾಲನ್ನು ಹಾಕಿ ಸಣ್ಣ ಉರಿಯಲ್ಲಿ ಹುರಿಯಿರಿ.

* ಇದೇ ರೀತಿ ಎಲ್ಲಾ ಉಂಡೆಗಳನ್ನೂ ಎಣ್ಣೆಯಲ್ಲಿ ಕರಿದರೆ ರುಚಿಕರವಾದ ಕೇರಳ ಶೈಲಿಯ ಪಥಾಲ್ ರೆಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+