ಮಕ್ಕಳು ಮೊಬೈಲ್ ಹೆಚ್ಚು ಬಳಸುವುದಕ್ಕೆ ಇದೇ ಕಾರಣ!
ಮಕ್ಕಳು ಹೆಚ್ಚಾಗಿ ಹೊರಗೆ ಆಟವಾಡುವುದೇ ಇಲ್ಲ. ಯಾವಾಗ ನೋಡಿದರೂ ಫೋನ್‌ನಲ್ಲೇ ಇರುತ್ತಾರೆ ಎನ್ನುವುದು ಈಗಿನ ಬಹುತೇಕ ಪೋಷಕರ ದೂರಾಗಿದೆ. ಮಕ್ಕಳು ಯಾವಾಗ ನೋಡಿದರೂ ಮೊಬೈಲ್ ಬಳಸುತ್ತಿರುತ್ತಾರೆ. ಮೊಬೈಲ್ ಬಳಸಬೇಡಿ ಎಂದರೆ ಅಳುವುದಕ್ಕೆ ಶುರು ಮಾಡಿಕೊಳ್ಳುತ್ತಾರೆ ಎನ್ನುವುದು ಹಲವು ಪೋಷಕರ ದೂರು. ಆದರೆ ಮಕ್ಕಳು ಫೋನ್ ಯಾಕೆ ಬಳಸುತ್ತಾರೆ ಅವರು ಈ ಚಟ ಬೆಳೆಸಿಕೊಳ್ಳಲು ಕಾರಣ ಏನು ಎನ್ನುವ ಬಗ್ಗೆ ಯಾರೂ ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ. ಆದರೆ ಇದೀಗ ಹೊಸ ಅಧ್ಯಯನ ವರದಿಯೊಂದು ಮಕ್ಕಳು ಮೊಬೈಲ್ ಯಾಕೆ ಹೆಚ್ಚಾಗಿ ಬಳಸುತ್ತಾರೆ. ಈ ರೀತಿ ತಾಸುಗಟ್ಟಲೆ ಮೊಬೈಲ್ ಬಳಸುವುದರ ಹಿಂದೆ ಯಾವ ಆರೋಗ್ಯ ಸಮಸ್ಯೆ ಇರಬಹುದು ಎನ್ನುವ ಬಗ್ಗೆ ಹೊಸ ಹಾಗೂ ಆಘಾತಕಾರಿ ಅಂಶಗಳನ್ನು ತೆರೆದಿಟ್ಟಿದ್ದಾರೆ. ಅದರ ವಿವರ ಇಲ್ಲಿದೆ.
ಇತ್ತೀಚಿನ ದಿನಗಳಲ್ಲಿ ಮಕ್ಕಳು ಹೆಚ್ಚು ಮೊಬೈಲ್ ಬಳಸುತ್ತಿದ್ದಾರೆ. ಆಟವಾಡುವುದಿಲ್ಲ ಮನೆಯಿಂದ ಹೊರಗೆ ಹೋಗುವುದಕ್ಕೂ ತುಂಬಾನೇ ಯೋಚನೆ ಮಾಡುತ್ತಾರೆ ಅನ್ನೋದು ಎಲ್ಲಾ ಪೋಷಕರಲ್ಲೂ ಇರುವು ದೂರು. ಆದರೆ ಮಕ್ಕಳು ಹೆಚ್ಚು ಫೋನ್ ಬಳಸುತ್ತಿದ್ದರೆ. ಈ ಕಾಲದ ಮಕ್ಕಳೆಲ್ಲಾ ಇದೇ ರೀತಿ ಹೆಚ್ಚು ಫೋನ್ ಬಳಸುತ್ತಾರೆ. ಇದು ಮಾಮೂಲಿ ಅಂತ ಬಿಡುವುದಕ್ಕೆ ಹೋಗಬೇಡಿ. ಈ ರೀತಿ ಮಕ್ಕಳು ಹೆಚ್ಚು ಹೆಚ್ಚು ಪೋನ್ ಬಳಸುತ್ತಿದ್ದರೆ ಇದರ ಹಿಂದೆ ಬೇರೆ ಆರೋಗ್ಯ ಸಮಸ್ಯೆಗಳು ಸಹ ಇರುವ ಸಾಧ್ಯತೆ ಇದೆ ಎಂದು ಹೊಸ ಅಧ್ಯಯನ ವರದಿಯೊಂದು ಎಚ್ಚರಿಸಿದೆ. ಹೊಸ ಅಧ್ಯಯನ ವರದಿಯ ಪ್ರಕಾರ ಮಕ್ಕಳು ಹೆಚ್ಚು ಫೋನ್ ಬಳಸುತ್ತಿದ್ದರೆ ಏನು ಕಾರಣ ಎನ್ನುವ ಮಾಹಿತಿ ಇಲ್ಲಿದೆ.

ಈಗಿನ ಕಾಲದ ಮಕ್ಕಳೆಲ್ಲ ಮೊಬೈಲ್ ಹೆಚ್ಚು ಬಳಸುತ್ತಾರೆ. ಮೊಬೈಲ್‌ನಲ್ಲೇ ಮುಳುಗಿರುತ್ತಾರೆ ಎನ್ನುವುದು ತಪ್ಪು. ಮಕ್ಕಳು ಮೊಬೈಲ್ ಹೆಚ್ಚು ಬಳಸುತ್ತಿದ್ದಾರೆ ಎಂದರೆ ಅದಕ್ಕೆ ಬೇರೆಯ ಸಮಸ್ಯೆ ಸಹ ಇರಬಹುದು ಎಂದು ಅಧ್ಯಯನ ವರದಿಯೊಂದು ಎಚ್ಚರಿಕೆಯನ್ನು ಕೊಟ್ಟಿದೆ. ಜನರಲ್ ಆಫ್ ಆಟಿಸಂ ಮತ್ತು ಡೆವಲಪ್ಮೆಂಟ್ ಡಿಸಾರ್ಡ್ ಎನ್ನುವ ಅಧ್ಯಯನ ವರದಿಯಲ್ಲಿ ಈ ವಿಷಯ ಪ್ರಕಟವಾಗಿದೆ. ಈ ರೀತಿ ಹೆಚ್ಚು ಮೊಬೈಲ್ ಬಳಸುವ ಮಕ್ಕಳಲ್ಲಿ ಆತಂಕ ಹಾಗೂ ಖಿನ್ನತೆಯಿಂದ ಬಳಲುತ್ತಿರುವ ಸಾಧ್ಯತೆ ಇದೆ ಎನ್ನುವ ಆಘಾತಕಾರಿ ಅಂಶವನ್ನು ತೆರೆದಿಟ್ಟಿದೆ. ಮಕ್ಕಳು ಹೆಚ್ಚು ಸಮಯ ಮೊಬೈಲ್ ಬಳಸುವುದು ಹಾಗೂ ಆಟವಾಡದೆ ಇದ್ದರೆ ಅವರಲ್ಲಿ ಖಿನ್ನತೆ ಹಾಗೂ ಆತಂಕ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವರದಿ ಎಚ್ಚರಿಸಿದೆ.
ಯಾವ ಮಕ್ಕಳು ಹೆಚ್ಚು ದೈಹಿಕ ಕ್ರೀಡೆಗಳಲ್ಲಿ ಭಾಗವಹಿಸುತ್ತಾರೋ ಅವರು ಹೆಚ್ಚು ಆಕ್ಟಿವ್ ಆಗಿ ಇರುತ್ತಾರೋ ಅಂತವರಲ್ಲಿ ಈ ಸಮಸ್ಯೆಗಳು ಕಾಣಿಸಿಕೊಳ್ಳುವುದು ಕಡಿಮೆ. ಅದೇ ಯಾವ ಮಕ್ಕಳು ದೈಹಿಕ ಕ್ರೀಡೆಯಲ್ಲಿ ಭಾಗವಹಿಸದೆ ಹೆಚ್ಚು ಮೊಬೈಲ್ ಬಳಸುತ್ತಿರುತ್ತಾರೋ ಅವರಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ವರದಿ ಬಹಿರಂಗಪಡಿಸಿದೆ.
ಮಕ್ಕಳು ಹೆಚ್ಚು ದೈಹಿಕ ಕ್ರೀಡೆಗಳಲ್ಲಿ ಭಾಗವಹಿಸಬೇಕು. ಕನಿಷ್ಠ ವಾರದಲ್ಲಿ ಒಂದು ದಿನ ಕ್ರೀಡೆಯ ಅಥವಾ ದೈಹಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಮಕ್ಕಳು ಸಹ ಅತ್ಯಂತ ಚುರುಕಾಗಿ ಇರುತ್ತಾರೆ ಅಂತ ವರದಿ ಹೇಳಿದೆ. ಸಾಮಾನ್ಯವಾಗಿ ಮಕ್ಕಳು ದೈಹಿಕ ಚಟುವಟಿಕೆಗಳಲ್ಲಿ ಹೆಚ್ಚು ಭಾಗವಹಿಸದೆ ಇದ್ದರೆ ದೈಹಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿತ್ತು. ನಿಮ್ಮ ಮಕ್ಕಳು ಹೆಚ್ಚು ಮೊಬೈಲ್ ಬಳಸುತ್ತಿದ್ದರೆ ಈ ವಿಷಯಗಳನ್ನು ಗಮನಿಸಿ.












Click it and Unblock the Notifications