Liver: ಲಿವರ್ ಆರೋಗ್ಯ ಸಮಸ್ಯೆ: ಈ 5 ಮುನ್ಸೂಚನೆ ನಿರ್ಲಕ್ಷಿಸಬೇಡಿ!
Liver Health Problems: ಇತ್ತೀಚಿನ ದಿನಗಳಲ್ಲಿ ಹಲವರಲ್ಲಿ ಲಿವರ್‌ಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಈ ಐದು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡರೆ ನಿಮ್ಮ ಲಿವರ್ ಕೈಕೊಡುತ್ತಿದೆ ಎಂದೇ ಅರ್ಥ. ಬದಲಾದ ಜೀವನ ಶೈಲಿ ಹಾಗೂ ಆಹಾರ ಕ್ರಮಗಳಿಂದ ಹಲವರಲ್ಲಿ ಲಿವರ್ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಲಿವರ್ ಕೆಡುತ್ತಿದೆ ಎನ್ನುವುದಕ್ಕೆ ದೇಹದ ಆರೋಗ್ಯದಲ್ಲಿ ಎದುರಾಗುವ ಸಣ್ಣ ಸಣ್ಣ ಬದಲಾವಣೆಗಳ ಮೂಲಕ ತಿಳಿದುಕೊಳ್ಳಬಹುದು. ಪ್ರಾರಂಭದ ಹಂತದಲ್ಲಿ ಲಿವರ್‌ನಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಗಳನ್ನು ಸರಿಪಡಿಸಿಕೊಂಡರೆ ಸಾಕು. ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಲಿವರ್‌ನಲ್ಲಿ ಸಮಸ್ಯೆ ಇದೆ ಎಂದರೆ, ಅದು ಮೊದಲಿಗೆ ನಿಮ್ಮ ಚರ್ಚದ ಆರೋಗ್ಯದಲ್ಲಿ ಕಾಣಿಸಿಕೊಳ್ಳುತ್ತದೆ. ಚರ್ಮದ ಲಕ್ಷಣಗಳ ಆಧಾರದ ಮೇಲೆ ಲಿವರ್‌ನಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆಯೇ ಎಂದು ತಿಳಿದುಕೊಳ್ಳಬಹುದಾಗಿದೆ. ಅದೇನು ಎನ್ನುವ ಸಂಪೂರ್ಣ ವಿವರ ನೋಡೋಣ.

ಯಕೃತ್ತು (Liver) ದೇಹದ ಬಹು ಮುಖ್ಯ ಅಂಗಾಂಗಳಲ್ಲಿ ಒಂದಾಗಿದೆ. ಇದು ದೇಹದಲ್ಲಿ ಅನೇಕ ಪ್ರಮುಖ ಕಾರ್ಯಗಳನ್ನು ನಿರ್ವಹಿಸುತ್ತದೆ. ಜೀರ್ಣಕ್ರಿಯೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಪಿತ್ತರಸವನ್ನು ಉತ್ಪಾದಿಸುತ್ತದೆ, ಇದು ಕೊಬ್ಬನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ವಿಷಕಾರಿ ವಸ್ತುಗಳನ್ನು ದೇಹದಿಂದ ತೆಗೆದು ಹಾಕುವುದಕ್ಕೆ ಸಹಕಾರಿಯಾಗಿದೆ. ಪ್ರಮುಖ ಪೋಷಕಾಂಶಗಳಾದ ಗ್ಲುಕೋಸ್, ಜೀವಸತ್ವಗಳು ಹಾಗೂ ಇತರ ಪೋಷಕಾಂಶಗಳನ್ನು ಸಂಗ್ರಹಕ್ಕೆ ಸಹಕಾರಿಯಾಗಿದೆ.
ರಕ್ತ ಹೆಪ್ಪುಗಟ್ಟುವಿಕೆಗೆ ಅಗತ್ಯವಾದ ಪ್ರೋಟೀನ್‌ಗಳನ್ನು ಉತ್ಪಾದಿಸುತ್ತದೆ. ಅಲ್ಲದೇ ಮುಖ್ಯವಾಗಿ ಸೋಂಕಿನ ವಿರುದ್ಧ ಹೋರಾಡಲು ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
* ಕಾಮಾಲೆ: ಲಿವರ್‌ನಲ್ಲಿ ಆರೋಗ್ಯ ಸಮಸ್ಯೆ ಎದುರಾದರೆ ಅದರ ಮೊದಲ ಲಕ್ಷಣ ಕಾಮಲೆ ರೋಗವಾಗಿದೆ. ಲಿವರ್‌ನಲ್ಲಿ ಆರೋಗ್ಯ ಸಮಸ್ಯೆ ಎದುರಾದರೆ, ಚರ್ಮ ಮತ್ತು ಕಣ್ಣುಗಳ ಬಿಳಿಭಾಗದ ಹಳದಿ ಬಣ್ಣಕ್ಕೆ ತಿರುಗುತ್ತದೆ. ಹಾನಿಗೊಳಗಾದ ಲಿವರ್ ಹಳದಿ ವರ್ಣದ್ರವ್ಯವಾದ ಬಿಲಿರುಬಿನ್ ಎನ್ನುವ ಅಂಶವನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗದೆ ಈ ರೀತಿ ಸಂಭವಿಸುತ್ತದೆ. ಅದು ನಂತರ ರಕ್ತದ ಕಣ್ಣಗಳಲ್ಲಿ ಸೇರುವ ಸಾಧ್ಯತೆ ಇರುತ್ತದೆ.
* ನಿರಂತರ ತುರಿಕೆ: ಲಿವರ್‌ನ ಆರೋಗ್ಯ ಸಮಸ್ಯೆ ನಂತರ ಕಾಣಿಸಿಕೊಳ್ಳುವ ಮತ್ತೊಂದು ಆರೋಗ್ಯ ಸಮಸ್ಯೆ ಎಂದರೆ ಅದು ಚರ್ಮದಲ್ಲಿ ತುರಿಕೆ. ಇದು ಕೇವಲ ಒಣ ಚರ್ಮ ಸಮಸ್ಯೆ ಆಗಿರುವುದಿಲ್ಲ. ಲಿವರ್ ಸಮಸ್ಯೆಯಿಂದ ತುರಿಕೆ ತೀವ್ರವಾಗಿರುತ್ತದೆ. ದದ್ದು ಅಥವಾ ಚರ್ಮದ ನಿರ್ದಿಷ್ಟ ಭಾಗ ತುರಿಕೆಯಿಂದ ಕಪ್ಪು ಬಣ್ಣಕ್ಕೆ ಬದಲಾಗುವ ಸಾಧ್ಯತೆ ಇರುತ್ತದೆ. ಇದು ರಕ್ತದಲ್ಲಿ ಪಿತ್ತರಸ ಲವಣಗಳು ಮತ್ತು ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ನಿರಂತರವಾಗಿ ತುರಿಕೆ ಸಮಸ್ಯೆ ಎದುರಾಗುವ ಸಾಧ್ಯತೆ ಇರುತ್ತದೆ.
* ಹೊಟ್ಟೆ ನೋವು & ಕಾಲಿನ ಊತ: ಸಾಮಾನ್ಯವಾಗಿ ಲಿವರ್‌ನ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡರೆ ಹೊಟ್ಟೆ ನೋವು ಹಾಗೂ ಕಾಲುಗಳ ಭಾಗದಲ್ಲಿ ಊತ ಕಾಣಿಸಿಕೊಳ್ಳುತ್ತದೆ. ಅಲ್ಲದೇ ವಾಕರಿಕೆ ಹಾಗೂ ಆಗ್ಗಾಗ್ಗೆ ವಾಂತಿ ಬರುತ್ತದೆ. ದಣಿವು ಮತ್ತು ಆಯಾಸ ಹೆಚ್ಚಾಗುತ್ತದೆ.
* ಮೂತ್ರದ ಬಣ್ಣ ಬದಲಾವಣೆ: ಲಿವರ್ ಆರೋಗ್ಯದಲ್ಲಿ ಏರುಪೇರಾದರೆ ಮೊದಲು ಕಾಣಿಸಿಕೊಳ್ಳುವ ಸಮಸ್ಯೆ ಮೂತ್ರದ ಬಣ್ಣವು ಗಾಢ ಬಣ್ಣಕ್ಕೆ ತಿರುಗುತ್ತದೆ. ಅಲ್ಲದೇ ಮಲದ ಬಣ್ಣ ತಿಳಿ ಬಣ್ಣಕ್ಕೆ ತಿರುಗುವ ಸಾಧ್ಯತೆ ಇರುತ್ತದೆ.












Click it and Unblock the Notifications