Capsicum Chutney Recipe: ಕ್ಯಾಪ್ಸಿಕಂ ಪಲ್ಯ ತಿಂದು ಸಾಕಾಯಿತೆ, ಹಾಗಾದರೆ ಸಲುಭವಾಗಿ ಮಾಡುವ ಚಟ್ನಿ ಟ್ರೈ ಮಾಡಿ
ಕ್ಯಾಪ್ಸಿಕಂ (ದೊಣ್ಣೆ ಮೆಣಸಿನಕಾಯಿ) ಯನ್ನು ಪಲ್ಯ ಮಾಡಲು, ಸಲಾಡ್ ಮಾಡಲು, ಪಲಾವ್ ಮಾಡಲು ಹೀಗೆ ಹಲವು ರೀತಿಯಲ್ಲಿ ಬಲಸಲಾಗುತ್ತದೆ. ಡಯಟ್ ಫುಡ್‌ಗಳಲ್ಲಿ ಹೆಚ್ಚಾಗಿ ಬಳಸುವ ಸಲಾಡ್‌ಗಳಲ್ಲಿ ಕ್ಯಾಪ್ಸಿಕಂಗೆ ಪ್ರಮುಖ ಸ್ಥಾನವಿದೆ. ಕಲರ್ ಕಲರ್ ಕಾಣುವ ಕ್ಯಾಪ್ಸಿಕಂ ಎಲ್ಲರಿಗೂ ಇಷ್ಟವಾಗುತ್ತದೆ.
ಕ್ಯಾಪ್ಸಿಕಂನ ಹಲವು ವಿಧಗಳಲ್ಲಿ ಬಳಸಲಾಗುತ್ತದೆ. ಅದರಲ್ಲಿ ಕ್ಯಾಪ್ಸಿಕಂ ಚಟ್ನಿ ಕೂಡ ತುಂಬಾ ರುಚಿಯಾಗಿರುತ್ತದೆ. ತುಂಬಾ ಸುಲಭವಾಗಿ, ಚಟ್ ಪಟ್ ಎಂದು ತಯಾರಿಸಬಹುದಾದ ಈ ಡಿಶ್ ಅನ್ನು, ಬಿಸಿ ಬಿಸಿ ಅನ್ನ, ದೋಸೆ ಅಥವಾ ಇಡ್ಲಿಯೊಂದಿಗೆ ಸರ್ವ್ ಮಾಡಬಹುದು. ಕ್ಯಾಪ್ಸಿಕಂ ಚಟ್ನಿಯನ್ನು ಅತ್ಯಂತ ಕಡಿಮೆ ಪದಾರ್ಥಗಳನ್ನು ಬಳಸಿ ತಯಾರಿಸಬಹುದು. ಕ್ಯಾಪ್ಸಿಕಂ, ಹಸಿರು ಮೆಣಸಿನಕಾಯಿ, ಉಪ್ಪು, ಹುಣಸೆಹಣ್ಣು ಮತ್ತು ಕೆಲವೇ ಕೆಲವು ಪದಾರ್ಥಗಳನ್ನು ಬಳಸಿ ತಯಾರಿಸಬಹುದು. ಇದು ತುಂಬಾ ಸುಲಭ ಮತ್ತು ರುಚಿ ತುಂಬಾ ಒಳ್ಳೆಯದು.

ಕ್ಯಾಪ್ಸಿಕಂ ಚಟ್ನಿ ಮಾಡಲು ಬೇಕಾದ ಪದಾರ್ಥಗಳು:
* ಎರಡು ಕ್ಯಾಪ್ಸಿಕಂ
* ಎರಡು ಹಸಿರು ಮೆಣಸಿನಕಾಯಿಗಳು
* ಹುಣಸೆಹಣ್ಣು ರುಚಿಗೆ ತಕ್ಕಂತೆ
* ಒಂದು ಚಮಚ ಅಡುಗೆ ಎಣ್ಣೆ
* ನಿಮ್ಮ ರುಚಿಗೆ ತಕ್ಕಂತೆ ಉಪ್ಪು
* ಅರ್ಧ ಚಮಚ ಸಾಸಿವೆ ಕಾಳು
* ಒಂದು ಕೆಂಪು ಮೆಣಸಿನಕಾಯಿ
* ದೊಡ್ಡ ಚಿಟಿಕೆ ಇಂಗು
* ಒಗ್ಗರಣೆಗೆ ಕರಿಬೇವಿನ ಎಲೆಗಳು
* ಒಂದು ಚಮಚ ಅಡುಗೆ ಎಣ್ಣೆ

ಕ್ಯಾಪ್ಸಿಕಂ ಚಟ್ನಿ ತಯಾರಿಸುವುದು ಹೇಗೆ?
ಕ್ಯಾಪ್ಸಿಕಂ ಮತ್ತು ಹಸಿರು ಮೆಣಸಿನಕಾಯಿಗಳನ್ನು ಸಣ್ಣದಾಗಿ ಕತ್ತರಿಸಿ. ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಕತ್ತರಿಸಿದ ಹಸಿರು ಮೆಣಸಿನಕಾಯಿಗಳನ್ನು ಸೇರಿಸಿ. ಕತ್ತರಿಸಿದ ಕ್ಯಾಪ್ಸಿಕಂ ಜೊತೆಗೆ ಸೇರಿಸಿ. ಕ್ಯಾಪ್ಸಿಕಂ ಮೃದುವಾಗುವವರೆಗೆ ಫ್ರೈ ಮಾಡಿ. ಕೆಲವು ನಿಮಿಷಗಳ ಕಾಲ ಫ್ರೈ ಮಾಡಿ, ತಣ್ಣಗಾದ ನಂತರ ಅದನ್ನು ಮಿಕ್ಸಿ ಜಾರ್‌ಗೆ ವರ್ಗಾಯಿಸಿ.
ರುಚಿಗೆ ತಕ್ಕಷ್ಟು ಉಪ್ಪು ಮತ್ತು ಹುಣಸೆಹಣ್ಣು ಸೇರಿಸಿ. ಅಗತ್ಯವಾದ ನೀರನ್ನು ಸೇರಿಸಿ ನುಣ್ಣಗೆ ಪೇಸ್ಟ್ ಆಗಿ ರುಬ್ಬಿಕೊಳ್ಳಿ. ಎಣ್ಣೆ, ಸಾಸಿವೆ ಮತ್ತು ಕೆಂಪು ಮೆಣಸಿನಕಾಯಿ ಕಾಯಿ ಒಗ್ಗರಣೆ ತಯಾರಿಸಿ. ರುಬ್ಬಿದ ಪೇಸ್ಟ್ ಅನ್ನು ಅದಕ್ಕೆ ಸೇರಿಸಿ ಮತ್ತು ಕುದಿಯಲು ಇರಿಸಿ. ಕೆಲ ಕಾಲ ಬೇಯಿಸಿ ನಂತರ ಸ್ಟವ್ ಆಫ್ ಮಾಡಿ. ಬಳಿಕ ಬಿಸಿ ಬಿಸಿ ಅನ್ನ, ದೋಸೆ ಮತ್ತು ಇಡ್ಲಿಯೊಂದಿಗೆ ಬಡಿಸಿ.
(ಮಾಹಿತಿ: vegrecipesofkarnataka )












Click it and Unblock the Notifications