Banana Milkshake Recipe: ಬೇಸಿಗೆಯಲ್ಲಿ ಆರೋಗ್ಯಕರ ಬಾಳೆಹಣ್ಣಿನ ಮಿಲ್ಕ್ ಮಾಡುವುದು ಹೇಗೆ?
ಈ ಬಾರಿಯ ಬೇಸಿಗೆ ಎಂಥವರನ್ನು ಬೇವರುವಂತೆ ಮಾಡಿದೆ. ಫ್ಯಾನ್, ಎಸಿ ಇಲ್ಲದೆ ಜೀವನ ನಡೆಸುವುದೇ ಕಷ್ಟ ಎಂಬಂತಾಗಿದೆ ಸಿಟಿ ಜನರ ಜೀವನ. ಇನ್ನು ಹಳ್ಳಿಗಳಲ್ಲಿ ಜನ ಹೊಂಗೆ ಮರದ ನೆರಳನ್ನೇ ಶ್ರಯಿಸಬೇಕಿದೆ. ಇಂತಹ ಸ್ಥಿತಿಯಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ತುಂಬಾನೆ ಪ್ರಮುಖವಾದದ್ದು.
ನಾವು ತಿನ್ನುವ ಆಹಾರ ಯಾವುದು ಎಂಬ ಬಗ್ಗೆ ಹೆಚ್ಚು ಗಮನ ಹರಿಸಬೇಕಿದೆ. ಶಾಖ ಹೆಚ್ಚಿರುವ ಸಮಯದಲ್ಲಿ ಹೆಚ್ಚು ತಂಪಿನ ಆಹಾರ ಪದಾರ್ಥಗಳನ್ನು ಸೇವನೆ ಮಾಡಬೇಕು. ನೀರಿನ ಪದಾರ್ಥಗಳನ್ನು ಆದಷ್ಟು ತೆಗೆದುಕೊಳ್ಳಬೇಕು. ಗಂಜಿ, ಮಿಲ್ಕ್‌ಶೇಕ್, ಜ್ಯೂಸ್, ಪಾನಕಕ್ಕೆ ಆದ್ಯತೆ ನೀಡಬೇಕು. ಇದೇ ರೀತಿ ಆರೋಗ್ಯಕರ ಪದಾರ್ಥಗಳಲ್ಲಿ ಬಾಳೆಹಣ್ಣಿನ ಮಿಲ್ಕ್ ಶೇಕ್ ಕೂಡ ಒಂದು.

ಬಾಳೆಹಣ್ಣು ಮಿಲ್ಕ್‌ಶೇಕ್
ಬಾಳೆಹಣ್ಣು ಮಿಲ್ಕ್‌ಶೇಕ್ ಅನ್ನು ಬಾಳೆಹಣ್ಣು, ಸಕ್ಕರೆ, ಗೋಡಂಬಿ, ಕಡಲೆಕಾಯಿ ಮತ್ತು ಹಾಲನ್ನು ಬಳಸಿ ತಯಾರಿಸಲಾಗುತ್ತದೆ. ಬನಾನಾ ಮಿಲ್ಕ್‌ಶೇಕ್ ಬೇಸಿಗೆಯಲ್ಲಿ ತುಂಬಾ ಆರೋಗ್ಯಕರವಾದದ್ದು. ಇದನ್ನು ತಯಾರಿಸುವುದು ಸುಲಭ ಮತ್ತು ಕುಡಿಯಲು ಹೆಚ್ಚು ರುಚಿಕರವಾದ ಜ್ಯೂಸ್ ಆಗಿದೆ. ಬೇಸಿಗೆಯ ದಿನಗಳಲ್ಲಿ ಬಾಳೆಹಣ್ಣಿನ ಮಿಲ್ಕ್‌ಶೇಕ್ ಹೆಚ್ಚು ಮಾರಾಟವಾಗುವ ಮತ್ತು ಮನೆಗಳಲ್ಲಿ ಹೆಚ್ಚು ತಯಾರಿಸಲಾಗುವ ತಂಪು ಪಾನಿಯಾವಾಗಿದೆ.
ಬನಾನಾ ಮಿಲ್ಕ್‌ಶೇಕ್ ಮಾಡಲು ಬೇಕಾದ ಪದಾರ್ಥಗಳು:
* 4 ಸಣ್ಣ ಅಥವಾ 2 ದೊಡ್ಡ ಚೆನ್ನಾಗಿ ಮಾಗಿದ ಬಾಳೆಹಣ್ಣುಗಳು
* 1 ಕಪ್ ಪ್ರಿಡ್ಜ್‌ನಲ್ಲಿ ಇಟ್ಟು ತೆಗೆದ ಹಾಲು
* 4 ಟೀಸ್ಪೂನ್ ಸಕ್ಕರೆ (ರುಚಿಗೆ ತಕ್ಕಂತೆ ಹೊಂದಿಸಿ)
* ಸ್ವಲ್ಪ ಗೋಡಂಬಿ
* ಕಡಲೆಕಾಯಿ ಬೀಜಗಳು
* ಒಂದರಿಂದ ಎರಡು ಚಮಚ ಹಾರ್ಲಿಕ್ಸ್ (ಬೇಕಿದ್ದರೇ ಬಳಸಿ)

ಬನಾನಾ ಮಿಲ್ಕ್‌ಶೇಕ್ ಮಾಡುವುದು ಹೇಗೆ?
* ಒಂದು ಕಪ್ ಕಾಯಿಸಿದ ಹಾಲನ್ನು ತೆಗೆದುಕೊಂಡು ಅದನ್ನು ಫ್ರೀಜ್‌ನಲ್ಲಿ ಇಡಿ.
* ಕಡಲೆಕಾಯಿ ಬೀಜ ಹುರಿದು ಸಿಪ್ಪೆ ತೆಗೆಯಿರಿ. ಬಾಳೆಹಣ್ಣುಗಳನ್ನು ಸಿಪ್ಪೆ ತೆಗೆದು ಮಿಡಿಯಂ ಸೈಜ್‌ನಲ್ಲಿ ಕತ್ತರಿಸಿಟ್ಟಿಕೊಳ್ಳಿ.
* ಈಗ ಐಸ್ಡ್ ಹಾಲು ಸೇರಿದಂತೆ ಎಲ್ಲಾ ಪದಾರ್ಥಗಳನ್ನು ಮಿಕ್ಸಿ ಜಾರ್‌ಗೆ ಹಾಕಿ. ನುಣ್ಣಗೆ ರುಬ್ಬಿದ ನಂತರ ಅದನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ.
* ಈಗ ಬಾಳೆಹಣ್ಣಿನ ಮಿಲ್ಕ್‌ಶೇಕ್ ರೆಡಿಯಾಗಿದೆ. ಈ ತಂಪು ತಂಪಾದ ಬಾಳೆಹಣ್ಣಿನ ಮಿಲ್ಕ್‌ಶೇಕ್ ಕುಡಿಯಲು ಸಿದ್ಧ.












Click it and Unblock the Notifications