Lemon Juice Powder: ಈ ಬಿರು ಬೇಸಿಗೆಯ ಧಗೆಗೆ ಈ ಪೌಡರ್ ಇದ್ದರೇ ಒಂದೇ ಕ್ಷಣದಲ್ಲಿ ನಿಂಬೆ ಜ್ಯೂಸ್ ರೆಡಿ!

ಇದು ಬಿರು ಬೇಸಿಗೆಯ ಸಮಯ.. ಬಿಸಿಲಿನಿಂದ ದಣಿದು ಮನೆಗ ಎಬಂದವರಿಗೆ ತಣ್ಣಗಿನ ನಿಂಬೆ ಹಣ್ಣಿನ ಶರಬತ್ತು ನೀಡಿದರೇ ಹಾಯ್ ಎನಿಸುತ್ತದೆ. ಆದರೆ, ತಕ್ಷಣಕ್ಕೆ ನಿಂಬೆ ಶರಬತ್ತು ಮಾಡಲು ಸಮಯಬೇಕು. ಅದಕ್ಕೆ ಮೊದಲೇ ನಿಂಬೆ ಜ್ಯೂಸ್‌ನ ರೆಡಿ ಮಿಕ್ಸ್ ಪೌಡರ್ ಇದ್ದರೆ ಎಷ್ಟು ಚಂದ ಅಲ್ಲವೆ?

ಅದಕ್ಕೆ ಇಂದು ನಾವು ನಿಂಬೆ ಬ್ಯೂಸ್ ಪುಡಿ ಅಥವಾ ರೆಡಿ ಮಿಕ್ಸ್ ರೆಸಿಪಿಯನ್ನು ಹಂತ ಹಂತವಾಗಿ ತಿಳಿಡಸಿಕೊಡುವ ಪ್ರಯತ್ನ ಮಾಡುತ್ತಿದ್ದೇವೆ. ಇದಕ್ಕೆ ಬೇಕಿರುವ ಕೆಲವೆ ವಸ್ತುಗಳು. ನಿಂಬೆ ಹಣ್ಣಿನ ರಸ, ಸಕ್ಕರೆ, ಚಿಟಿಕೆ ಉಪ್ಪು ಮತ್ತು ಸ್ವಲ್ಪ ಶುಂಠಿ ಬಳಸಿ ನಿಂಬೆ ಜ್ಯೂಸ್ ರೆಡಿ ಮಿಕ್ಸ್ ಪೌಡರ್ ತಯಾರಿಸಿಕೊಳ್ಳಬಹುದು.

How to make lemon juice ready mix powder recipe step by step explanation

ಈ ರೆಸಿಪಿಗೆ ಉಪ್ಪು ಮತ್ತು ಶುಂಠಿ ನಿಮ್ಮ ಆಯ್ಕೆ. ಅಂದರೆ, ನೀವು ಅದನ್ನು ಬಳಸಬಹುದು ಅಥವಾ ಬಿಡಬಹುದು. ನೀವು ಏಲಕ್ಕಿಯನ್ನು ಕೂಡ ಸೇರಿಸಬಹುದು. ಈ ನಿಂಬೆ ಜ್ಯೂಸ್ ರೆಡಿ ಮಿಕ್ಸ್ ಪುಡಿಯನ್ನು ಒಮ್ಮೆ ಮಾಡಿಕೊಂಡರೇ ಒಂದು ವರ್ಷದವರೆಗೆ ಆರಾಮಾಗಿ ಬಳಸಬಹುದು. ನಿಮ್ಮ ಮನೆಯಲ್ಲಿ ನಿಂಬೆ ಹಣ್ಣು ಜಾಸ್ತಿ ಇದ್ದಾಗ.. ಬೇಸಿಗೆಯ ಬಿಸಿಲಿಗೆ ತಣ್ಣಗೆ ಏನಾದರೂ ಕುಡಿಯಬೇಕು ಎನಿಸಿದಾಗ, ಮನೆಗೆ ಅತಿಥಿಗಳು ಬಂದಾಗ, ಹೊರಗಡೆ ಪಿಕ್‌ನಿಕ್ ಅಥವಾ ಪ್ರಯಾಣ ಮಾಡುವಾಗ ಇದನ್ನು ಆರಾಮಾಗಿ ಬಳಸಬಹುದು.

ನಿಂಬೆ ಜ್ಯೂಸ್ ರೆಡಿ ಪೌಡರ್ ಮಾಡಲು 4 ರಿಂದ 5 ದಿನಗಳು ಬೇಕು. ಇದನ್ನು ಗಟ್ಟಿ ಸಕ್ಕರೆ ಅಥವಾ ಪುಡಿಮಾಡಿದ ಸಕ್ಕರೆಯೊಂದಿಗೆ ಬೆರೆಸಬಹುದು. ರೆಫ್ರಿಜರೇಟರ್ ಇಲ್ಲದೆ ದೀರ್ಘಕಾಲದವರೆಗೆ ಕೆಡದೆ ಉಪಯೋಗಯುಕ್ತವಾಗಿರುತ್ತದೆ.

ನಿಂಬೆ ಜ್ಯೂಸ್ ರೆಡಿ ಪೌಡರ್ ಮಾಡಲು ಬೇಕಾಗುವ ಪದಾರ್ಥಗಳು

* 4 ರಿಂದ 5 ನಿಂಬೆಹಣ್ಣು

* 1 ಕಪ್ ಸಕ್ಕರೆ

* ಚಿಟಿಕೆ ಉಪ್ಪು

* 1/2 ಚಮಚ ತುರಿದ ಶುಂಠಿ

How to make lemon juice ready mix powder recipe step by step explanation

ನಿಂಬೆ ಜ್ಯೂಸ್ ರೆಡಿ ಪೌಡರ್ ತಯಾರಿಸುವ ವಿಧಾನ

* ನಾಲ್ಕು ಮಧ್ಯಮ ಗಾತ್ರದ ನಿಂಬೆಹಣ್ಣುಗಳನ್ನು ತೆಗೆದುಕೊಳ್ಳಿ. ರಸವನ್ನು ಸುಲಭವಾಗಿ ಬರಲು ಅವುಗಳನ್ನು ಚೆನ್ನಾಗಿ ಉಜ್ಜಿಕೊಳ್ಳಿ.

* ರಸವನ್ನು ಹಿಂಡಿ ಮತ್ತು ಅಳತೆ ಮಾಡಿ.

* ನಿಂಬೆ ರಸವನ್ನು ಅಗಲವಾದ ತಟ್ಟೆಗೆ ಹಾಕಿಕೊಳ್ಳಿ.

* ನಿಂಬೆ ರಸಕ್ಕೆ ತಕ್ಕಂತೆ ಸಕ್ಕರೆಯ ಅಳತೆಯನ್ನು 4 ಪಟ್ಟು ಸೇರಿಸಿ. ಇಲ್ಲಿ ಸಕ್ಕರೆಯನ್ನು ಹೆಚ್ಚು ಕಮ್ಮಿ ಮಾಡಿಕೊಳ್ಳಬಹುದು.

* ಈ ಮಿಶ್ರಣಕ್ಕೆ ಒಂದು ಚಿಟಿಕೆ ಉಪ್ಪು ಸೇರಿಸಿ. (ಬೇಕಿದ್ದರೇ ಮಾತ್ರ)

* ಸಣ್ಣದಾಗಿ ಕೊಚ್ಚಿದ ಶುಂಠಿ ತುಂಡುಗಳನ್ನು ಸಹ ಸೇರಿಸಿ. (ಬೇಕಿದ್ದರೇ ಮಾತ್ರ)

* ಈ ಮಿಶ್ರಣವನ್ನು ಚೆನ್ನಾಗಿ ಒಣಗಿಸಲು ಬೇಗ ಒಣಗಲು ಫ್ಯಾನ್ ಕೆಳಗೆ ಇರಿಸಿ ಮತ್ತು ಬಿಸಿಲಿನಲ್ಲಿ ಇಡಬೇಡಿ.

* 7 ರಿಂದ 8 ಗಂಟೆಗಳ ನಂತರ ಮಿಶ್ರಣ ಸ್ವಲ್ಪ ದಪ್ಪವಾಗುತ್ತದೆ.

* ಒಂದು ದಿನದ ನಂತರ ಅದು ಹೆಚ್ಚು ದಪ್ಪವಾಗುತ್ತದೆ. ಬಳಿಕ ಮತ್ತೊಮ್ಮೆ ಚೆನ್ನಾಗಿ ಕೈ ಆಡಿಸಿ, ಮತ್ತೆ ಒಣಗಿಸಿ

* ಎರಡನೇ ದಿನದ ನಂತರ ಅದು ಒಣಗಲು ಪ್ರಾರಂಭಿಸುತ್ತದೆ.

* ಮೂರನೇ ದಿನ ಬಹುತೇಕ ಒಣಗಿರುತ್ತದೆ.

* ನಾಲ್ಕನೇ ದಿನ ಅದು ಪೂರ್ತಿ ಒಣಗುತ್ತದೆ.

* ಈ ಮಿಶ್ರಣವನ್ನು ಮಿಕ್ಸರ್ ಜಾರ್‌ಗೆ ಹಾಕಿ ನುಣ್ಣಗೆ ಪುಡಿ ಮಾಡಿ.

* ಇದನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿ ಗಟ್ಟಿಯಾಗಿ ಮುಚ್ಚು. ಈ ಪೌಟರ್ ಅನ್ನು ಬೇಕೆನಿಸಿದಾಗ ನೀರಿನಲ್ಲಿ ಹಾಕಿ ಕಲಕಿ ಕುಡಿಯಿರಿ. ಈ ಬೇಸಿಗೆಯಲ್ಲಿ ಒಂದೆರಡು ಐಸ್ ಕ್ಯೂಬ್ ತುಂಡುಗಳನ್ನು ಹಾಕಿ ತಣ್ಣಗೆ ಮಾಡಿಕೊಂಡು ನಿಂಬೆ ಜ್ಯೂಸ್ ಎಂಜಾಯ್ ಮಾಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+