Boiled Rice Ganji Recipe: ಕುಕ್ಕರ್‌ನಲ್ಲಿ ಕುಚಲಕ್ಕಿ ಗಂಜಿ ಮಾಡುವುದು ಹೇಗೆ..?
ಕುಚಲಕ್ಕಿ ಅನ್ನ ಆರೋಗ್ಯದ ಗಣಿ. ಕುಚಲಕ್ಕಿಯು ನಾವು ಸೇವಿಸುವ ಆಹಾರಗಳಲ್ಲಿಯೇ ಅತ್ಯಂತ ಪೌಷ್ಠಿಕವಾದ ಆಹಾರವಾಗಿದೆ. ಕರಾವಳಿ ಭಾಗದಲ್ಲಿ ಬಳಸುವ ಕುಚಲಕ್ಕಿ ಅನ್ನವನ್ನು ಈಗೀಗ ಎಲ್ಲಾ ಭಾಗಗಳಲ್ಲಿಯೂ ಬಳಸುತ್ತಿದ್ದಾರೆ. ಏಕೆಂದರೆ ಇದು ಆರೋಗ್ಯದ ದೃಷ್ಟಿಯಿಂದ ಅಧಿಕವಾದ ಪೌಷ್ಠಿಕವಾದ ಅಂಶಗಳನ್ನು ಹೊಂದಿದೆ.
ಕುಚಲಕ್ಕಿಯಲ್ಲಿ ಹೆಚ್ಚಿನ ನಾರಿನಂಶವಿರುವ ಕಾರಣದಿಂದ ಜೀರ್ಣವಾಗಲು ಅಧಿಕ ಶಕ್ತಿ ಮತ್ತು ಸಮಯ ತೆಗೆದುಕೊಳ್ಳುತ್ತದೆ. ಕುಚಲಕ್ಕಿಯಲ್ಲಿ ನಮ್ಮ ದೇಹಕ್ಕೆ ಬೇಕಾಗುವ ಶೇ.80% ರಷ್ಟು ಮ್ಯಾಂಗನೀಸ್ ಇರುತ್ತದೆ. ಜೊತೆಗೆ ಇದರಲ್ಲಿ ಕಾರ್ಬೋಹೈಡ್ರೇಟ್ಸ್ ಮತ್ತು ಪ್ರೋಟಿನ್ ಇರುತ್ತದೆ.

ಕುಚಲಕ್ಕಿಯ ಮುಖ್ಯವಾದ ಪ್ರಯೋಜನವೆಂದರೆ ತೂಕ ಇಳಿಸಲು ಇದು ಸಹಕಾರಿಯಾಗುತ್ತದೆ. ಈ ಅಕ್ಕಿಯಲ್ಲಿ ಕೊಬ್ಬನ್ನು ಕರಗಿಸುವ ಗುಣಗಳು ಮತ್ತು ಯಥೇಚ್ಛವಾದ ನಾರಿನಂಶವು ಇರುತ್ತದೆ. ಇದು ನಮ್ಮ ದೇಹದಲ್ಲಿನ ಕೊಬ್ಬನ್ನು ಕರಗಿಸುತ್ತದೆ. ಕುಚಲಕ್ಕಿಯು ಸೇವನೆಯಿಂದ ರಕ್ತನಾಳಗಳನ್ನು ಸದೃಢಗೊಳಿಸುತ್ತದೆ. ಇದರಿಂದ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಹಾಗೂ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಕುಚಲಕ್ಕಿಯಲ್ಲಿ ಸ್ವಾಭಾವಿಕವಾಗಿ ಎಣ್ಣೆಯಂಶಗಳು ಇದ್ದು, ನಿಮ್ಮ ದೇಹಕ್ಕೆ ಇದು ಉತ್ತಮವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಈ ಸ್ವಾಭಾವಿಕವಾದ ಎಣ್ಣೆಗಳು ನಿಮ್ಮ ದೇಹದಲ್ಲಿರುವ ಕೊಲೆಸ್ಟ್ರಾಲನ್ನು ಸಾಮಾನ್ಯ ಮಟ್ಟಕ್ಕೆ ಇಳಿಸಿ, ನಿಯಂತ್ರಣದಲ್ಲಿಡುತ್ತವೆ. ಇಷ್ಟೆಲ್ಲಾ ಆರೋಗ್ಯಕ್ಕೆ ಪ್ರಯೋಜನವಿರು ಕುಚಲಕ್ಕಿಯನ್ನು ಕರಾವಳಿ ಭಾಗದಲ್ಲಿ ಪ್ರತಿನಿತ್ಯ ಊಟದಲ್ಲಿ ಬಳಸಲಾಗುತ್ತದೆ.

ಸೌದೆ ಒಲೆಯಲ್ಲಿ ಪಾತ್ರೆಯಲ್ಲಿ ಮಾಡುವ ಕುಚಲಕ್ಕಿ ಅನ್ನ ದೇಹಕ್ಕೆ ಒಳ್ಳೆಯದು. ಆದರೆ ಕೆಲವೊಮ್ಮೆ ಅನಿವಾರ್ಯ ಕಾರಣಗಳಿಂದ ಕುಚಲಕ್ಕಿ ಅನ್ನವನ್ನು ಕುಕ್ಕರ್‌ನಲ್ಲಿ ಮಾಡಬೇಕಾಗುತ್ತದೆ. ಆದರೆ ಹೇಗೆ ಮಾಡುವುದು ಎಂದು ಕೆಲವರಿಗೆ ತಿಳಿದಿರುವುದಿಲ್ಲ. ಹೀಗಾಗಿ ಕುಕ್ಕರ್‌ನಲ್ಲಿ ಸುಲಭವಾಗಿ ಕುಚಲಕ್ಕಿ ಗಂಜಿ ಮಾಡುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ.
ಕುಚಲಕ್ಕಿ ಗಂಜಿ ಮಾಡಲು ಬೇಕಾಗುವ ಸಾಮಾಗ್ರಿಗಳು
ಕುಚಲಕ್ಕಿ- 1 ಕಪ್
ನೀರು- 4 ಕಪ್
ತುಪ್ಪ- 1/2 ಚಮಚ
ಉಪ್ಪು- ನಿಮ್ಮ ರುಚಿಗೆ ತಕ್ಕಷ್ಟು

ಕುಚಲಕ್ಕಿ ಗಂಜಿ ಮಾಡುವ ವಿಧಾನವೇನು..?
ಮೊದಲು ಕುಕ್ಕರ್‌ನಲ್ಲಿ ಒಂದು ಕಪ್ ಅಕ್ಕಿ ತೆಗೆದುಕೊಳ್ಳಿ. ಕನಿಷ್ಠ 3 ಬಾರಿ ಚೆನ್ನಾಗಿ ತೊಳೆಯಿರಿ. ಬಿಸಿನೀರಿನಿಂದ ಒಮ್ಮೆಯಾದರೂ ತೊಳೆದರೆ ಅಕ್ಕಿಯಲ್ಲಿರುವ ಎಣ್ಣೆ ಅಂಶ ಹೋಗುತ್ತದೆ. ಆದರೆ ಬಿಸಿನೀರಿನಲ್ಲಿ ತೊಳೆಯುವುದು ನಿಮ್ಮ ಆಯ್ಕೆಗೆ ಬಿಟ್ಟಿರುವುದು. ಆದರೆ ನೆನಪಿರಲಿ 3 ಬಾರಿ ಚೆನ್ನಾಗಿ ಅಕ್ಕಿಯನ್ನು ತೊಳೆಯಿರಿ. ಬಳಿಕ ಅಕ್ಕಿಗೆ 4 ಕಪ್ ನೀರು ಸೇರಿಸಿ ಬಳಿಕ ಕುಕ್ಕರ್ ಮುಚ್ಚಳವನ್ನು ಮುಚ್ಚಿ ಮತ್ತು 4-5 ಸೀಟಿಗಳನ್ನು ಮಾಡಿ.
ಬಳಿಕ ಕುಕ್ಕರ್‌ನ ಒತ್ತಡ ಕಡಿಮೆಯಾದ ಬಳಿಕ ಅನ್ನ ಬೆಂದಿರುವುದನ್ನು ಗಮನಿಸಿ. ನಿಮಗೆ ಮತ್ತಷ್ಟು ಅನ್ನ ಮೆತ್ತಗಾಗಬೇಕು ಎಂದರೆ ಮತ್ತೆ ಒಂದು ಲೋಟ ನೀರು ಸೇರಿಸಿ ಮತ್ತೆ 2-3 ಸೀಟಿಗಳನ್ನು ಮಾಡಿದರೆ ರುಚಿ ರುಚಿಯಾದ ಕುಚಲಕ್ಕಿ ಗಂಜಿ ಸಿದ್ಧವಾಗುತ್ತದೆ. ಈ ಗಂಜಿಗೆ ಉಪ್ಪು ತುಪ್ಪ ಹಾಗೂ ಉಪ್ಪಿನ ಕಾಯಿ ಸೇರಿಸಿ ಸವಿಯಬಹುದು. ಅಥವಾ ಅನ್ನ ಬೇಕು ಎಂದರೆ ಕುಕ್ಕರ್‌ನಲ್ಲಿರುವ ನೀರನ್ನು ಸೋಸಿ ಅನ್ನವನ್ನು ಇತರ ಸಾಂಬರ್‌ಗಳೊಂದಿಗೆ ಸವಿಯಬಹುದಾಗಿದೆ. ಆರೋಗ್ಯಕ್ಕೆ ಹಿತವಾಗಿರುವ ಕುಚಲಕ್ಕಿ ಅನ್ನವನ್ನು ವಾರಕ್ಕೆ ಕನಿಷ್ಠ ಮೂರು ದಿನವಾದರೂ ಸೇವಿಸುವುದು ಉತ್ತಮ.
-
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ












Click it and Unblock the Notifications