Instagram: ಏನೇ ಮಾಡಿದ್ರು ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಹೆಚ್ಚಾಗ್ತಿಲ್ವಾ? ಹೀಗೆ ಮಾಡಿ!
ಟಿಕ್ ಟಾಕ್ ಬ್ಯಾನ್ ಆದ ನಂತರ ಇನ್‌ಸ್ಟಾಗ್ರಾಮ್ ವಿಶ್ವದ ಅತ್ಯಂತ ಜನಪ್ರಿಯ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಒಂದಾಗಿದೆ. ಒಂದು ಬಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರಿರುವ ಇನ್‌ಸ್ಟಾಗ್ರಾಮ್ ಸದ್ಯ ಹಣ ಗಳಿಸುವ ವೇದಿಕೆಯಾಗಿಯೂ ಖ್ಯಾತಿ ಗಳಿಸಿದೆ. ಇದರಲ್ಲಿ ಫಾಲೋವರ್ಸ್ ಹೆಚ್ಚು ಇದ್ದಷ್ಟು ನಿಮ್ಮ ಪೋಸ್ಟ್ ಮತ್ತಷ್ಟು ಜನರಿಗೆ ತಲುಪಲಿದೆ.
ಆದರೆ, ಕೆಲವೊಮ್ಮೆ ನಾವು ಎಷ್ಟೇ ಚಂದದ ಪೋಸ್ಟ್ ಹಾಕಿದರೂ, ನಮ್ಮ ಕಂಟೆಂಟ್ ಎಷ್ಟೇ ಚೆನ್ನಾಗಿ ಇದ್ದರೂ ಕೂಡ ನಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳು ಸಾಕಷ್ಟು ಜನರಿಗೆ ತಲುವುವುದಿಲ್ಲ. ಇದಕ್ಕೆ ಕಾರಣ ಹಲವು. ಅವುಗಳಲ್ಲಿ ನಮ್ಮ ಫಾಲೋವರ್ಸ್ ಕಡಿಮೆ ಇರುವುದು ಕೂಡ ಮುಖ್ಯ ಕಾರಣ. ಹಾಗಾದರೆ ನಿಮ್ಮ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಹೆಚ್ಚಿಸಿಕೊಳ್ಳುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಯಿರಿ.

ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಹೆಚ್ಚಿಸುವುದು ಹೇಗೆ?
1. ನಿಮ್ಮ ಬಯೋ ಬಗ್ಗೆ ಇರಲಿ ಗಮನ
ನಿಮ್ಮ ಇನ್‌ಸ್ಟಾಗ್ರಾಮ್ ಪೇಜ್‌ಗೆ ಬಂದಾಗ ಜನರು ಮೊದಲು ನೋಡುವ ವಿಷಯವೆಂದರೆ ಆಕರ್ಷಕವಾಗಿರುವ ಬಯೋ. ಒಂದು ರೀತಿಯಲ್ಲಿ, ಇದು ನಿಮ್ಮ ಬ್ರ್ಯಾಂಡ್‌ನ ಮುಖಪುಟದಂತಿದೆ. ಬಯೋ ಜನರಿಗೆ ನೀವು ಏನು ಎಂಬುದರ ಕುರಿತು ಒಂದು ಕಲ್ಪನೆ ನೀಡುತ್ತದೆ. ಬಯೋ ನಿಮ್ಮ ವೆಬ್‌ಸೈಟ್‌ಗೆ ಲಿಂಕ್ ನೀಡುವ ವಿಷಯವನ್ನು ಸಹ ಒಳಗೊಂಡಿರಬೇಕು. ಪೇಜ್‌ಗೆ ಬರುವವರ ಆಸಕ್ತಿಯನ್ನು ಮತ್ತಷ್ಟು ಹೆಚ್ಚಿಸಲು ನಿಮ್ಮ ಬಯೋಗೆ ಸಂಬಂಧಿತ ಹ್ಯಾಶ್‌ಟ್ಯಾಗ್‌ಗಳನ್ನು ಸಹ ನೀವು ಸೇರಿಸಬಹುದು.
2. ಹ್ಯಾಶ್‌ಟ್ಯಾಗ್‌ಗಳನ್ನು ಸ್ಮಾರ್ಟ್ ಆಗಿ ಬಳಸಿ
ಹ್ಯಾಶ್‌ಟ್ಯಾಗ್‌ಗಳು ನಿಮ್ಮ ವಿಷಯವನ್ನು ಹೊಚ್ಚ ಹೊಸ ಫಾಲೋವರ್ಸ್‌ಗಳಿಗೆ ಪರಿಚಯಿಸಬಹುದು. ಟ್ರೆಂಡಿಂಗ್ ಹ್ಯಾಶ್‌ಟ್ಯಾಗ್‌ಗಳನ್ನು ಚೆನ್ನಾಗಿ ಬಳಸಿ. ಹೆಚ್ಚು ಸೂಕ್ತವಾದ ಬಳಕೆದಾರರು ನಿಮ್ಮ ಹ್ಯಾಶ್‌ಟ್ಯಾಗ್‌ಗಳನ್ನು ಕಂಡುಕೊಳ್ಳುತ್ತಾರೆ. ಜೊತೆಗೆ ನಿಮ್ ಪೋಸ್ಟ್‌ಗಳನ್ನು ನೋಡಿ ನಿಮ್ಮನ್ನು ಫಾಲೋ ಮಾಡಲು ಆರಂಭಿಸುತ್ತಾರೆ.
3. ಪೋಸ್ಟ್ ಮಾಡುವ ಸಮಯದ ಬಗ್ಗೆ ಇರಲಿ ಗಮನ
ಸರಿಯಾದ ಸಮಯದಲ್ಲಿ ನಿಮ್ಮ ಪೋಸ್ಟ್ ಮಾಡುವುದಿರಂದ ಹಲವು ಹೊಸಬರಿಗೆ ಅದು ಕಾಣಿಸುತ್ತದೆ. ಸ್ಪ್ರೌಟ್ ಸೋಶಿಯಲ್‌ನ ಸಂಶೋಧನೆಯ ಪ್ರಕಾರ, ಕೋವಿಡ್ ಪೂರ್ವದ ಯುಗದಲ್ಲಿ, ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲು ಉತ್ತಮ ಸಮಯವೆಂದರೆ ಸೋಮವಾರ, ಮಂಗಳವಾರ ಮತ್ತು ಶುಕ್ರವಾರ ಬೆಳಗ್ಗೆ 11 ಗಂಟೆಗೆ ಮತ್ತು ಮಂಗಳವಾರ ಮಧ್ಯಾಹ್ನ 2 ಗಂಟೆಗೆಯಾಗಿತ್ತು.
4. ಫಾಲೋವರ್ಸ್ ಅನ್ನು ಕದಿಯಬಹುದು!
ಹೌದು... ನಿಮ್ಮ ತರಹದ್ದೆ ಕಂಟೆಂಟ್ ಮಾಡುವ ಇನ್‌ಸ್ಟಾಗ್ರಾಮ್ ಬಳಕೆದಾರರ ಫಾಲೋವರ್ಸ್‌ಗಳನ್ನು ನೀವು ಕೂಡ ಕದಿಯಬಹುದು. ನಿಮ್ಮ ಪ್ರತಿಸ್ಪರ್ಧಿಗಳ ಜೊತೆಗೆ ರೀಲ್ಸ್ ಮಾಡುವುದು, ಪೋಟೋ ಹಂಚಿಕೊಳ್ಳುವ ಮೂಲಕ ನೀವು ಅನುಯಾಯಿಗಳನ್ನು ನಿಮ್ಮ ಕಡೆ ಆಕರ್ಷಿಸಬಹುದು.
5. ಸ್ಥಳೀಯರಿಗಾಗಿ ಜಿಯೋಟ್ಯಾಗ್‌ಗಳನ್ನು ಬಳಸಿ
ನಿಮ್ಮ ಪೋಸ್ಟ್ ಅಥವಾ ಸ್ಟೋರಿಗಳಲ್ಲಿ ನಿಮ್ಮ ಸ್ಥಳವನ್ನು ಟ್ಯಾಗ್ ಮಾಡಿ. ಈ ಮಾಡುವ ಮೂಲಕ, ಆ ಸ್ಥಳವನ್ನು ಹುಡುಕುವ ಜನರು ನಿಮ್ಮ ಪೋಸ್ಟ್‌ಗಳನ್ನು ನೋಡಬಹುದು. ಇದು ನಿಮ್ಮ ಫಾಲೋವರ್ಸ್‌ಗಳನ್ನು ಹೆಚ್ಚು ಮಾಡಲು ಸಹಾಯ ಮಾಡುತ್ತದೆ.

6. ಇನ್‌ಸ್ಟಾಗ್ರಾಮ್ ಸ್ಟೋರಿ ಬಳಸಿ
ಹೆಚ್ಚು ಹೆಚ್ಚು ಇನ್‌ಸ್ಟಾಗ್ರಾಮ್ ಸ್ಟೋರಿಗಳು ನಿಮ್ಮ ಅನುಯಾಯಿಗಳನ್ನು ಹೆಚ್ಚಿಸಲು ಮತ್ತು ನಿಮ್ಮ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸಲು ನಿಮಗೆ ಸಹಾಯ ಮಾಡಿಕೊಡುತ್ತದೆ. ಇದು ಫಾಲೋವರ್ಸ್ ಮತ್ತು ನಿಮ್ ನಡುವೆ ಉತ್ತಮ ಬಾಂಧವ್ಯ ಹೆಚ್ಚಿಸುತ್ತದೆ. ನಿಮ್ಮ ಬ್ಲಾಗ್‌ಗಳು, ನಿಮ್ಮ ಪೋಸ್ಟ್‌ಗಳು, ಪೋಸ್ಟ್ ಸಂಬಂಧಿತ ಇತರ ಸ್ಟೋರಿಗಳನ್ನು ಆಗ್ಗಾಗೆ ಅಪ್‌ಲೋಡ್ ಮಾಡುತ್ತಿರಿ.
7. ಪ್ರಮುಖ ಸ್ಟೋರಿಗಳನ್ನು ಹೈಲೈಟ್ ಮಾಡಿ
ಸ್ಟೋರಿ ಹೈಲೈಟ್ ಮಾಡುವುದು ಕೂಡ ಫಾಲೋವರ್ಸ್ ಪಡೆಯಲು ಸಹಾಯ ಮಾಡುತ್ತದೆ. ಈ ಫೀಚರ್ ನಿಮ್ಮ ಪುಟವನ್ನು ಫಾಲೋ ಮಾಡಲು ಇನ್‌ಸ್ಟಾಗ್ರಾಮ್ ಬಳಕೆದಾರರನ್ನು ಪ್ರೋತ್ಸಾಹಿಸುತ್ತದೆ. ಒಂದು ರೀತಿಯ ಆರ್ಕೈವ್ ಆಗಿರುವುದರಿಂದ, ಸುಲಭವಾದ ಬಳಕೆಗಾಗಿ ಸ್ಟೋರಿಗಳನ್ನು ವರ್ಗೀಕರಿಸುತ್ತದೆ.
8. ಇತ್ತೀಚಿನ ಟ್ರೆಂಡ್‌ಗಳೊಂದಿಗೆ ಅಪ್‌ಡೇಟ್ ಆಗಿ
ಇನ್‌ಸ್ಟಾಗ್ರಾಮ್‌ನಲ್ಲಿ ಯಾವಾಗಲು ಟ್ರೆಂಡಿಂಗ್ ಇರುವ ವಿಷಯಕ್ಕೆ ಹೆಚ್ಚು ಆದ್ಯತೆ ಇರುತ್ತದೆ. ಹೀಗಾಗಿ ನಾವು ಕೂಡ ಅಪ್‌್ಡೇಟ್ ಆಗುತ್ತಲೇ ಇರಬೇಕು. ಜನಪ್ರಿಯ ಟ್ರೆಂಡಿಂಗ್‌ನೊಂದಿಗೆ ನೀವು ಎಂಗೇಜ್ ಆಗಿದ್ದರೆ ನಿಮ್ಮ ಪುಟ ಕೂಡ ಎಂಗೇಜ್ ಆಗಿರುತ್ತದೆ. ಅದಕ್ಕೆ ಹೆಚ್ಚಿನ ಹ್ಯಾಶ್‌ಟ್ಯಾಗ್‌ಗಳನ್ನು ಹಾಕಿರಿ.
9. ಉತ್ತಮ ಗುಣಮಟ್ಟದ ಫೋಟೋ ಮತ್ತು ವೀಡಿಯೊ ಬಳಸಿ
ಇನ್‌ಸ್ಟಾಗ್ರಾಮ್‌ನಲ್ಲಿ ಅತ್ಯುನ್ನತ ಗುಣಮಟ್ಟದ ಚಿತ್ರಗಳನ್ನು ಬಳಸಬೇಕು. ಅದು ಒರಿಜಿನಲ್ ಮತ್ತು ಅಧಿಕೃತವಾಗಿರಬೇಕು. ಇದನ್ನು ಖಚಿತಪಡಿಸಿಕೊಳ್ಳಬೇಕು.ಉತ್ತಮ ಚಿತ್ರಗಳು ಫಾಲೋವರ್ಸ್ ಜೊತೆಗೆ ಉತ್ತಮ ಬಾಂಧವ್ಯ ಕಟ್ಟುತ್ತವೆ. ಇದು ಬಳಕೆದಾರರು ಹೆಚ್ಚು ಹೆಚ್ಚು ಫಾಲೋ ಮಾಡುವಂತೆ ಮಾಡುತ್ತವೆ. ಈ ಫೋಟೋ, ವಿಡಿಯೋಗಳಿಗೆ ಹಾಕುವ ಮಾಹಿತಿ ಚೆನ್ನಾಗಿರಬೇಕು.












Click it and Unblock the Notifications