Nandini Milk: ನೀಲಿ, ಕೇಸರಿ, ಕೆಂಪು ಎಲ್ಲಾ ನಂದಿನ ಹಾಲಿನ ಪಾಕೆಟ್ ಎಲ್ಲಕ್ಕೂ ಬಳಸಬೇಡಿ... ಜಾಣತನದಿಂದ ಆರಿಸಿ
ಬೆಂಗಳೂರು, ಜೂನ್. 22: ಕರ್ನಾಟಕದ ಹೆಮ್ಮೆ ನಮ್ಮ ನಂದಿನಿ ಹಾಲಿನ ಪಾಕೆಟ್ ಎಷ್ಟೊಂದು ಬಣ್ಣಗಳಲ್ಲಿ ಲಭ್ಯವಿದೆ. ಆದರೆ, ಯಾವ ಬಣ್ಣದ ಹಾಲು ಯಾವುದಕ್ಕೆ ಬಳಸಬೇಕು ಎಂಬ ಬಗ್ಗೆ ನಾವು ಯೋಚನೆ ಮಾಡುವುದೆ ಇಲ್ಲ. ಅಂಗಡಿಯಲ್ಲಿ ಯಾವ ಹಾಲು ನೀಡುತ್ತಾರೋ ಅದನ್ನು ತೆಗೆದುಕೊಂಡು ಬರುತ್ತೇವೆ. ಹಾಗಾದರೆ ಯಾವ ಹಾಲಿನ ಪಾಕೆಟ್ ಯಾವುದಕ್ಕೆ ಬಳಸಬೇಕು ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದು ವೈರಲ್ ಆಗುತ್ತಿದೆ. ಹಾಗಾದರೇ ಆ ಪೋಸ್ಟ್ ಹೇಳುವುದೇನು ನೋಡಿ.
1. ಕಾಯಿಸದೆ ಕುಡಿಯಲು: ಬೆಳಗ್ಗೆ ಎದ್ದು ಹಾಲು ಕಾಯಿಸಿ ಕುಡಿಯಲು ಸಮಯ ಇಲ್ಲದಿದ್ದರೇ ನಂದಿನಿ ಗುಡ್ ಲೈಫ್ ಮಿಲ್ಕ್ ಪ್ಯಾಕೆಟ್ ಬಳಸಬಹುದು. ಈ ಹಾಲನ್ನು ಪ್ಯಾಕೆಟಿಗೆ ಹಾಕುವ ಮುಂಚೆ 137 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ 4 ನಿಮಿಷಗಳ ತನಕ ಕಾಯಿಸಿ ತಕ್ಷಣವೇ ತಣ್ಣಗೆ ಮಾಡಿರುತ್ತಾರೆ. ಈ ಹಾಲಿನಲ್ಲಿ ಬ್ಯಾಕ್ಟೀರಿಯಾ ಬೆಳೆಯಯುವುದಿಲ್ಲ, ಹಾಲು ಒಡೆಯುವುದಿಲ್ಲ.

2. ಕಾಯಿಸಿ ಕುಡಿಯಲು: ಹಾಳು ಕಾಯಿಸಿಕೊಂಡು ಕುಡಿಯುವುದಕ್ಕೆ ನಂದಿನಿಯ ಯಾವ ಬಣ್ಣದ ಪ್ಯಾಕೆಟ್ ಬೇಕಾದರೂ ತರಬಹುದು.
3. ಕಾಫಿ ಅಥವಾ ಟೀ ಮಾಡಲು: ನಂದಿನಿಯ ಹಸಿರು ಬಣ್ಣದ ಪ್ಯಾಕೆಟ್- ಹೊಮೊಜಿನೈಸೆಡ್, ಪಾಸ್ಚರೀಕರಿಸಿದ ಹಸುವಿನ ಹಾಲು ತಂದು ಮಾಡಿದರೆ ಹಾಲು ಒದಗುತ್ತದೆ. ಇದರಿಂದ ಹೆಚ್ಚು ಕಾಫಿ ಅಥವಾ ಟೀ ಮಾಡಬಹುದು.
4. ಗಟ್ಟಿ ಕಾಫಿಯಾಗಲು: ನಂದಿನಿಯ ತುಸು ನೇರಳೆ ಬಣ್ಣದ ಪ್ಯಾಕೆಟ್ ಅಂದರೆ ನಂದಿನಿ ಸಮೃದ್ಧಿ ಪಾಸ್ಚರೀಕರಿಸಿದ ಹಾಲು ಬಳಸಬಹುದು. ಇದು ಗಟ್ಟಿ ಕಾಫಿ ಮಾಡಿಕೊಳ್ಳಲು ಉತ್ತಮ. ಪೂರ್ತಿ ಕೆನೆಯ ಅಂಶ ಈ ಹಾಲಿನಲ್ಲಿ ಇರೋ ಹಾಗೆ ಮಾಡಿರುತ್ತಾರೆ.
Watermelon coconut barfi: ಬರೀ ಕೊಬ್ಬರಿ ಮಿಠಾಯಿ ತಿಂದು ಬೇಸರವಾಗಿದ್ದರೇ ಈ ಕಲ್ಲಂಗಡಿ-ಕೊಬ್ಬರಿ ಬರ್ಫಿ ಒಮ್ಮೆ ಟ್ರೈ ಮಾಡಿ
5. ಗಟ್ಟಿ ಮೊಸರು ಮಾಡಲು: ಗಟ್ಟಿ ಮೊಸರು ಮಾಡಿಕೊಳ್ಳಲು ನಂದಿನಿಯ ಸ್ಪೆಶಲ್ ಹಸಿರು ಬಣ್ಣದ ಪ್ಯಾಕೆಟ್ ಅಂದರೆ ಸ್ಪೆಶಲ್ ಟೋನ್ಡ್ ಮಿಲ್ಕ್ ಪ್ಯಾಕೆಟ್ ತೆಗೆದುಕೊಳ್ಳಬಹುದು.
6. ಪಾಯಸ ಅಥವಾ ಹಾಲಿನಿಂದ ಮಾಡುವ ಸಿಹಿ ಪದಾರ್ಥಗಳಿಗೆ ನಂದಿನಿಯ ತುಸು ನೇರಳೆ ಬಣ್ಣದ ಪ್ಯಾಕೆಟ್ ಅಂದರೆ ನಂದಿನಿ ಸಮೃದ್ಧಿ ಬಳಸಬಹುದು.
7. ಪುಟ್ಟ ಮಕ್ಕಳಿಗೆ ನಂದಿನಿಯ ಹಸಿರು ಬಣ್ಣದ ಪ್ಯಾಕೆಟ್ ಹೊಮೊಜಿನೈಸೆಡ್, ಪಾಸ್ಚರೀಕರಿಸಿದ ಹಸುವಿನ ಹಾಲು ತಂದರೆ ಒಳ್ಳೆಯದು. ಬೇರೆಯ ಪ್ಯಾಕ್‌ಗಳಲ್ಲಿ ಹಸು ಹಾಲಿನ ಜೊತೆ ಎಮ್ಮೆ ಹಾಲು ಬೇರೆತಿರುತ್ತದೆ. ಇದು ಪೂರ್ತಿ ಹಸುವಿನ ಹಾಲು.
8. ಹಿರಿಯರಿಗೆ ನಂದಿನಿಯ ಗುಡ್ ಲೈಫ್ ಸ್ಲಿಮ್ಡ್ ಸ್ಕಿಮ್ ಮಿಲ್ಕ್ ಪ್ಯಾಕೆಟ್ ಕೊಡಬಹುದು. ಇದರಲ್ಲಿ ಹೆಸರೇ ಹೇಳುವಂತೆ ಕೊಬ್ಬಿನಂಶ ಕಡಿಮೆ ಇರುವುದರಿಂದ ವಯಸ್ಸಾದವರಿಗೆ ಜೀರ್ಣಿಸಿಕೊಳ್ಳಲು ಸುಲಭ. ಇನ್ನು, ಹಳದಿ/ಕಿತ್ತಳೆ ಬಣ್ಣದ ಪ್ಯಾಕೆಟ್ ನಲ್ಲಿಯೂ ಕೊಬ್ಬಿನಾಂಶ ಕಡಿಮೆ ಇರುತ್ತದೆ.

9. ಕೊಬ್ಬು ಇಳಿಸಲು: ಕೊಬ್ಬು ಕರಗಬೇಕು ಎನ್ನುವವರು ನಂದಿನಿಯ ಹಳದಿ/ಕಿತ್ತಳೆ ಬಣ್ಣದ ಪ್ಯಾಕೆಟ್ - ಪಾಸ್ಚರೀಕರಿಸಿದ ಡಬಲ್ ಟೋನ್ಡ್ ಮಿಲ್ಕ್ ಪ್ಯಾಕೆಟ್ ಬಳಸಬಹುದು.
10. ಬೆಳೆಯುವ ಮಕ್ಕಳಿಗೆ ಕಿತ್ತಳೆ ಬಣ್ಣದ ನಂದಿನಿಯ ಶುಭಂ ಪ್ಯಾಕೆಟ್ ತೆಗೆದುಕೊಳ್ಳಬಹುದು.
11. ಬರೀ ಹಸುವಿನ ಹಾಲು ಬೇಕು ಅನ್ನುವವರು ನಂದಿನಿಯ ಹಸಿರು ಬಣ್ಣದ ಪ್ಯಾಕೆಟ್- ಹೊಮೊಜಿನೈಸೆಡ್, ಪಾಸ್ಚರೀಕರಿಸಿದ ಹಸುವಿನ ಹಾಲು ತಂದರೆ ಒಳ್ಳೆಯದು.
12. ಫಿಟ್ನೆಸ್ ಬಗ್ಗೆ ಹೆಚ್ಚು ಕಾಳಜಿ ಇರುವವರು ನಂದಿನಿ ಸ್ಮಾರ್ಟ್ ಡಬಲ್ ಟೋನ್ಡ್ ಹೊಮೊಜಿನೈಸೆಡ್ ಮಿಲ್ಕ್ ಪ್ಯಾಕೆಟ್ ತೆಗೆದುಕೊಳ್ಳಬಹುದು.
13. ತುಂಬಾ ದಿನ ಇಡಲು: ನಂದಿನಿಯ ಗುಡ್ ಲೈಫ್ ಟೆಟ್ರಾ ಪ್ಯಾಕ್ 10 ದಿನದ ತನಕ ಹಾಗೆಯೇ ಇರಲಿದೆ. ಕಾಯಿಸುವುದೂ ಬೇಡ. ಟೆಟ್ರಾ ಪ್ಯಾಕಿನಲ್ಲಿ ಇರುವುದರಿಂದ ಹಾಲು ಒಡೆಯುವುದಿಲ್ಲ.
ಬರಹ: ಶಂಕರಯ್ಯ ಚಿಕ್ಕಮಠ್ (Shankarayya Chikkamath Facebook)












Click it and Unblock the Notifications