Watermelon coconut barfi: ಬರೀ ಕೊಬ್ಬರಿ ಮಿಠಾಯಿ ತಿಂದು ಬೇಸರವಾಗಿದ್ದರೇ ಈ ಕಲ್ಲಂಗಡಿ-ಕೊಬ್ಬರಿ ಬರ್ಫಿ ಒಮ್ಮೆ ಟ್ರೈ ಮಾಡಿ
ಕಾಲ ಯಾವುದೇ ಆಗಿರಲಿ ದಿನವಿಡೀ ನಮ್ಮನ್ನು ಹೈಟ್ರೂಟ್ ಆಗಿ ಇಟ್ಟುಕೊಳ್ಳಲು ನಾವು ಹೆಣಗಾಡುತ್ತಲೇ ಇರುತ್ತೇವೆ. ಅನೇಕ ರಾಜ್ಯಗಳಲ್ಲಿ ಹೀಟ್‌ವೇವ್ ಎಚ್ಚರಿಕೆಗಳನ್ನು ನೀಡಲಾಗಿದೆ. ಬೇಸಿಗೆ ಎಷ್ಟೇ ಕೆಟ್ಟದಾಗಿದ್ದರು ಕೂಡ ಹಣ್ಣುಗಳ ವಿಷಯದಲ್ಲಿ ನಾವದಕ್ಕೆ ಥ್ಯಾಂಕ್ಸ್ ಹೇಳಲೇಬೇಕು ಬಿಡಿ. ವಿವಿಧ ಬಗೆಯ ಹಣ್ಣುಗಳು ಬೇಸಿಗೆಯಲ್ಲಿ ಸಿಗುತ್ತವೆ. ಇವೆಲ್ಲಾ ನಮ್ಮನ್ನು ಹೆಚ್ಚು ತಂಪಾಗಿ ಇರಿಸುವಂತಹವು.
ಬಾಯಾರಿಕೆ ಹೋಗಲಾಡಿಸಿ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಮಾವಿನ ಹಣ್ಣು, ಕಲ್ಲಂಗಡಿ ಮತ್ತು ಲಿಚಿಗಳಂತಹ ಬೇಸಿಗೆಯ ಹಣ್ಣುಗಳನ್ನು ಹಾಗೆಯೇ ತಿಂದು ಬೇಸರವಾಗಿದ್ದರೇ ಹಲವು ಬಗೆಗಳಲ್ಲಿ ಅವುಗಳನ್ನು ಬಳಸಬಹುದು. ಹಲವು ಹೊಸ ಪ್ರಯೋಗಗಳ ಮೂಲಕ ಹಣ್ಣುಗಳನ್ನು ಸವಿಯಬಹುದು. ಅಂತಹದ್ದೆ ಒಂದು ಪ್ರಯೋಗ ಕಲ್ಲಂಗಡಿ-ಕೊಬ್ಬರಿ ಬರ್ಫಿ.

ಕಲ್ಲಂಗಡಿ ಹಣ್ಣು ಎಲ್ಲರಿಗೂ ಇಷ್ಟವಾಗುತ್ತದೆ. ಇದಕ್ಕೆ ಪೋಷಕಾಂಶಗಳ ಕಣಜ ತೆಂಗಿನಕಾಯಿ ಸೇರಿದರೆ ಮತ್ತಷ್ಟು ವಿಶೇಷವಾಗುತ್ತದೆ. ತೆಂಗಿನಕಾಯಿ ರುಚಿಯಷ್ಟೇ ನೀಡುವುದಿಲ್ಲ. ವಿಶಿಷ್ಟ ಪರಿಮಳ ಮತ್ತು ಸುವಾಸನೆಯನ್ನು ಖಾದ್ಯಕ್ಕೆ ನೀಡುತ್ತದೆ. ಮನೆಯಲ್ಲಿಯೇ ಸುಲಭವಾಗಿ ಈ ಕಲ್ಲಂಗಡಿ-ಕೊಬ್ಬರಿ ಬರ್ಫಿಯನ್ನು ತಯಾರು ಮಾಡಬಹುದು.
ಕಲ್ಲಂಗಡಿ-ಕೊಬ್ಬರಿ ಬರ್ಫಿ ಮಾಡಲು ಬೇಕಾದ ಪದಾರ್ಥಗಳು
* ಕಲ್ಲಂಗಡಿ ಹಣ್ಣಿನ ರಸ - 6 ರಿಂದ 7 ಕಪ್
* ಶುಂಠಿ 1 ಸಣ್ಣ ತುಂಡು
* ಸಕ್ಕರೆ - 130 ಗ್ರಾಂ ½ ಕಪ್
* ಕೆಲವು ಪುದೀನ ಎಲೆಗಳು
* ಕಾರ್ನ್ಸ್ಟಾರ್ಚ್ - 50 ಗ್ರಾಂ ಅಥವಾ 5 ಟೀಸ್ಪೂನ್
* ಸ್ವಲ್ಪ ನೀರು
* ರೋಸ್ ವಾಟರ್ - 1 ಟೀಸ್ಪೂನ್
* ಕೆಂಪು ಫುಡ್ ಕಲರ್- 2 ಹನಿಗಳು
* ನಿಂಬೆ - 1
* ಒಣಗಿದ ತೆಂಗಿನಕಾಯಿ - ½ ಕಪ್
ಕಲ್ಲಂಗಡಿ-ಕೊಬ್ಬರಿ ಬರ್ಫಿ ಮಾಡುವ ವಿಧಾನ:
ಕಲ್ಲಂಗಡಿ ರಸವನ್ನು ಮಾಡಿಕೊಂಡು ಅದನ್ನು ಚೆನ್ನಾಗಿ ಸೋಸಿಕೊಳ್ಳಿ. ನಂತರ ಅದನ್ನು ಕುದಿಯಲು ಇಡಿ. ಕುದಿಯುತ್ತಿರುವುದಕ್ಕೆ ಸ್ವಲ್ಪ ಸಕ್ಕರೆ ಸೇರಿಸಿ. ಕಲ್ಲಂಗಡಿಯಲ್ಲಿಯೇ ಸಿಹಿ ಇರುವ ಕಾರಣ ಎಷ್ಟು ಬೇಕೋ ಅಷ್ಟು ಮಾತ್ರ ಹಾಕಿಕೊಳ್ಳಿ. ಕಲ್ಲಂಗಡಿ ರಸ ಮತ್ತು ಸಕ್ಕರೆಯನ್ನು ಅರ್ಧಕ್ಕೆ ಇಳಿಸಿ. ನಂತರ ಪುದೀನಾ ಎಲೆಗಳನ್ನು ಸೇರಿಸಿ ಮತ್ತು ಸ್ವಲ್ಪ ಸಮಯ ಕುದಿಸಿದ ಬಳಿಕ ಪುದೀನಾ ಎಲೆಗಳನ್ನು ಹೊರತೆಗೆಯಿರಿ. ಒಂದು ಬಟ್ಟಲಿನಲ್ಲಿ ಕಾರ್ನ್ ಫ್ಲೋರ್ ಅನ್ನು ನೀರಿನ ಜೊತೆಗೆ ಕಲಸಿ ಗಂಟಿಲ್ಲದಂತೆ ಮಾಡಿಕೊಳ್ಳಿ, ಅದನ್ನು ಶುಂಠಿ ರಸದೊಂದಿಗೆ ಕಲ್ಲಂಗಡಿ ರಸಕ್ಕೆ ಸೇರಿಸಿ.

ಕಲ್ಲಂಗಡಿ ರಸವು ಪುಡಿಂಗ್ ರೀತಿಯಾದಾಗ, ರೋಸ್ ವಾಟರ್, ವೆನಿಲ್ಲಾ ಎಸೆನ್ಸ್‌ನ ಕೆಲವು ಹನಿಗಳು (ಬೇಕಿದ್ದರೇ ಮಾತ್ರ) ಮತ್ತು 2 ಹನಿ ರೆಡ್ ಫುಡ್ ಕಲರ್ ಸೇರಿಸಿ. ಅದರಲ್ಲಿ ಒಂದು ನಿಂಬೆ ಹಣ್ಣು ಹಿಂಡಿ. ನಂತರ ಪುಡಿಂಗ್ ಅನ್ನು ಟ್ರೇ ಮೇಲೆ ಸುರಿಯಿರಿ ಮತ್ತು ಸಮವಾಗಿ ಹರಡಿ. ಸುಮಾರು 6 ಗಂಟೆಗಳ ಕಾಲ ಫ್ರಿಡ್ಜ್‌ನಲ್ಲಿ ಇಡಿ. ಮಿಶ್ರಣ ಸೆಟ್ ಆದ ಮೇಲೆ ಬರ್ಫಿ ಆಕಾರದಲ್ಲಿ ಕತ್ತರಿಸಿ ಅದನ್ನು ಒಣಗಿದ ತೆಂಗಿನಕಾಯಿಯ ತುರಿಯಲ್ಲಿ ಚೆನ್ನಾಗಿ ಹರಡಿ. ಈಗ ಟೇಸ್ಟಿ, ಸಿಂಪಲ್, ಸಾಫ್ಟ್ ಕಲ್ಲಂಗಡಿ- ತೆಂಗಿನಕಾಯಿ ಬರ್ಫಿ ಸಿದ್ಧ.
(ರೆಸಿಪಿ: ಕುನಾಲ್ ಕಪೂರ್ )












Click it and Unblock the Notifications