Summer: ಹಳೆಯ ಮಣ್ಣಿನ ಪಾತ್ರೆಯಲ್ಲಿ ನೀರನ್ನು ತಂಪಾಗಿ ಇಡುವುದು ಹೇಗೆ? ಇಲ್ಲಿದೆ ಸರಳ ವಿಧಾನಗಳು
ಬೇಸಿಗೆ ಕಾಲ ಆರಂಭವಾಗುತ್ತಿದ್ದಂತೆ ತಣ್ಣೀರಿನ ಅವಶ್ಯಕತೆ ಹೆಚ್ಚಾಗುತ್ತದೆ. ಅನೇಕ ಜನರು ನೀರನ್ನು ತಂಪಾಗಿಸಲು ರೆಫ್ರಿಜರೇಟರ್‌ಗಳನ್ನು ಬಳಸುತ್ತಾರೆ. ಆದರೆ ಕೆಲವರು ಇನ್ನೂ ಮಣ್ಣಿನ ಮಡಕೆಗಳಿಂದ ನೀರನ್ನು ಕುಡಿಯಲು ಬಯಸುತ್ತಾರೆ. ಮಣ್ಣಿನ ಮಡಕೆಯಿಂದ ಕುಡಿಯುವ ನೀರು ನೈಸರ್ಗಿಕವಾಗಿ ತಂಪಾಗಿರುವುದು ಮಾತ್ರವಲ್ಲದೆ ಸಿಹಿ ರುಚಿಯನ್ನು ಸಹ ಹೊಂದಿರುತ್ತದೆ. ಆದರೆ ಕಾಲಾನಂತರದಲ್ಲಿ ಮಡಕೆ ಹಳೆಯದಾಗಿ ಇದರಲ್ಲಿ ನೀರು ತಂಪಾಗಿ ಇರುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಕೆಲವು ವಿಶೇಷ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ನಿಮ್ಮ ಹಳೆಯ ಮಡಿಕೆಯಲ್ಲಿರುವ ನೀರನ್ನು ತಂಪಾಗಿ ಇಡಬಹುದು. ಹಾಗಾದರೆ ಹಳೆಯ ಮಣ್ಣಿನ ಪಾತ್ರೆಯಲ್ಲಿ ನೀರನ್ನು ತಂಪಾಗಿ ಇಡುವುದು ಹೇಗೆ ಎಮದು ಈಗ ತಿಳಿಯೋಣ.
ಹಳೆಯ ಮಣ್ಣಿನ ಪಾತ್ರೆಯಲ್ಲಿ ನೀರನ್ನು ತಂಪಾಗಿ ಇಡುವುದು ಹೇಗೆ?
ಮನೆಯಲ್ಲಿ ಮಣ್ಣಿನ ಪಾತ್ರೆ ಹಳೆಯದಾಗಿದ್ದರೆ ಮತ್ತು ಅದರಲ್ಲಿ ಇರಿಸಲಾದ ನೀರು ತಣ್ಣಗಾಗದಿದ್ದರೆ, ಹೊಸ ಪಾತ್ರೆ ಖರೀದಿಸುವ ಅಗತ್ಯವಿಲ್ಲ. ನೀವು ಈ ಸರಳ ವಿಧಾನಗಳನ್ನು ಅನುಸರಿಸುವ ಮೂಲಕ ನೀರನ್ನು ತಂಪಾಗಿಸಬಹುದು. ಹಾಗಾದರೆ ಆ ವಿಧಾನಗಳು ಯಾವುವು ಎಂದು ಈಗ ತಿಳೀಯೋಣ.

ಮಣ್ಣಿನ ಪಾತ್ರೆಯನ್ನು ನೆನೆಸಿ
ಮನೆಯಲ್ಲಿ ಹಳೆಯ ಮಣ್ಣಿನ ಪಾತ್ರೆ ಇದ್ದರೆ ಅದನ್ನು ನೀರಿನಲ್ಲಿ ಚೆನ್ನಾಗಿ ನೆನೆಸಿ. ಆನಂತರ ಬೆಳಗ್ಗೆ ಅದರಲ್ಲಿ ನೀರನ್ನು ತುಂಬಿಸಿ ಇಟ್ಟರೆ ಇಡೀ ದಿನ ನೀರು ತಂಪಾಗಿರುತ್ತದೆ. ಈ ವಿಧಾನವನ್ನು ನಿತ್ಯಾ ಅನುಸರಿಸುವ ಮೂಲಕ ಹಳೆಯ ಮಣ್ಣಿನ ಮಡಿಕೆಯಲ್ಲಿ ನೀರನ್ನು ತಂಪಾಗಿ ಇಡಬಹುದು.
ಉಪ್ಪು ಮತ್ತು ಸ್ಕಾಚ್ ಬ್ರೈಟ್ ಬಳಸಿ
ಹಳೆಯ ಮಣ್ಣಿನ ಪಾತ್ರೆಯಲ್ಲಿ ಇಡೀ ದಿನ ನೀರು ತಂಪಾಗಿರಲು ಮಣ್ಣಿನ ಪಾತ್ರೆಯ ಹೊರಭಾಗದಲ್ಲಿ ಒಂದು ಟೀಚಮಚ ಉಪ್ಪನ್ನು ಸಿಂಪಡಿಸಿ ಲಘುವಾಗಿ ಉಜ್ಜಿ. ಇದು ಪಾತ್ರೆಯಲ್ಲಿ ಮುಚ್ಚಿಹೋಗಿರುವ ಸಣ್ಣ ರಂಧ್ರಗಳನ್ನು ತೆರೆಯುತ್ತದೆ. ಇದು ಆಮ್ಲಜನಕದ ಹರಿವನ್ನು ಸುಧಾರಿಸುತ್ತದೆ ಮತ್ತು ನೀರು ಮತ್ತೆ ತಣ್ಣಗಾಗಲು ಪ್ರಾರಂಭವಾಗುತ್ತದೆ.

ಒಳಭಾಗದ ಸ್ವಚ್ಛತೆ
ಹಳೆಯ ಮಣ್ಣಿನ ಪಾತ್ರೆಯೊಳಗೆ ಒಂದು ಚಮಚ ಉಪ್ಪು ಮತ್ತು ಸ್ವಲ್ಪ ನೀರು ಹಾಕಿ. ಆದರೆ ಒಳಭಾಗವನ್ನು ಉಜ್ಜಬೇಡಿ. ಒಳಗಿನ ರಂಧ್ರಗಳು ತೆರೆದುಕೊಳ್ಳಲು 15 ನಿಮಿಷಗಳ ಕಾಲ ಅದನ್ನು ಬಿಡಿ. 15 ನಿಮಿಷಗಳ ನಂತರ ಪಾತ್ರೆಯನ್ನು ಶುದ್ಧ ನೀರಿನಿಂದ ಮೂರರಿಂದ ನಾಲ್ಕು ಬಾರಿ ತೊಳೆಯಿರಿ, ಚೆನ್ನಾಗಿ ಒಣಗಿಸಿ ಮತ್ತು ನೀರಿನಿಂದ ತುಂಬಿಸಿ. ಇದರಿಂದ ನೀರು ಮತ್ತೆ ತಂಪಾಗಿರುತ್ತದೆ.
ಮಣ್ಣಿನ ಮಡಕೆ ತಂಪಾಗಿಡಲು ಹೆಚ್ಚುವರಿ ಸಲಹೆಗಳು:-
ಹಳೆಯ ಮಣ್ಣಿನ ಮಡಿಕೆಯನ್ನು ಹತ್ತಿ ಬಟ್ಟೆಯಿಂದ ಸುತ್ತಿಡುವುದರಿಂದ ನೀರನ್ನು ತಂಪಾಗಿಸಬಹುದು. ಅತಿಯಾದ ಶಾಖದಿಂದಾಗಿ ಮಡಕೆ ಕೂಡ ಬಿಸಿಯಾಗಲು ಪ್ರಾರಂಭಿಸುತ್ತದೆ. ಇದರಿಂದಾಗಿ ನೀರು ತಂಪಾಗಿರುವುದಿಲ್ಲ. ಅಂತಹ ಸಂದರ್ಭದಲ್ಲಿ ಮಡಕೆಯನ್ನು ಹತ್ತಿ ಬಟ್ಟೆಯಿಂದ ಸುತ್ತಿ ದಿನಕ್ಕೆ ಕೆಲವು ಬಾರಿ ಒದ್ದೆ ಮಾಡಿ. ಇದು ಪಾತ್ರೆಯಲ್ಲಿರುವ ನೀರನ್ನು ತಂಪಾಗಿರಿಸುತ್ತದೆ.

ಮಡಕೆಯನ್ನು ಸ್ಟ್ಯಾಂಡ್ ಮೇಲೆ ಇರಿಸಿ. ಮಡಕೆಯನ್ನು ನೇರವಾಗಿ ನೆಲದ ಮೇಲೆ ಇಡಬೇಡಿ. ಯಾಕೆಂದರೆ ಬಿಸಿ ಮೇಲ್ಮೈಯ ಸಂಪರ್ಕದಿಂದಾಗಿ ಅದು ಬಿಸಿಯಾಗಬಹುದು. ಮಡಕೆಯ ಕೆಳಗೆ ಸ್ಟ್ಯಾಂಡ್, ಮಣ್ಣಿನ ಮಡಕೆ ಅಥವಾ ಒದ್ದೆಯಾದ ಬಟ್ಟೆಯನ್ನು ಇಡುವುದರಿಂದ ನೀರು ತಂಪಾಗಿರುತ್ತದೆ.
ಮಡಕೆ ಖರೀದಿಸುವಾಗ ಪರಿಗಣಿಸಬೇಕಾದ ವಿಷಯಗಳು
ನೀರನ್ನು ತಂಪಾಗಿ ಇಡುವುದರಿಂದ ಯಾವಾಗಲೂ ಬಲವಾದ ಮಡಕೆಯನ್ನು ಖರೀದಿಸಿ. ಇದಕ್ಕಾಗಿ ಮಡಕೆ ಗಟ್ಟಿಯಾಗಿರುವುದನ್ನು ಪರೀಕ್ಷಿಸಲು ಅದನ್ನು ಲಘುವಾಗಿ ಟ್ಯಾಪ್ ಮಾಡಿ. ಜೋರಾಗಿ ಮತ್ತು ಸ್ಪಷ್ಟವಾದ ಶಬ್ದ ಬಂದರೆ ಅದು ಬಲವಾದ ಮಡಕೆಯಾಗಿರುತ್ತದೆ. ಈ ಸುಲಭ ವಿಧಾನಗಳೊಂದಿಗೆ ಬೇಸಿಗೆಯಲ್ಲೂ ಸಹ ಮಣ್ಣಿನ ಮಡಕೆಯಿಂದ ತಣ್ಣನೆಯ ನೀರನ್ನು ಕುಡಿಯಬಹುದು.











Click it and Unblock the Notifications