Summer Pet Care: ಬೇಸಿಗೆಯಲ್ಲಿ ಸಾಕುಪ್ರಾಣಿಗಳನ್ನು ಹೇಗೆ ಕಾಳಜಿ ವಹಿಸುವುದು? ಇಲ್ಲಿದೆ ಟಿಪ್ಸ್..!
ಇದು ಬೇಸಿಗೆ ಕಾಲ. ಬೇಸಿಗೆಯಲ್ಲಿ ಬಿಸಿಲು ಮತ್ತು ಶಾಖದಿಂದ ನಮ್ಮ ದೇಹವನ್ನು ಆರೋಗ್ಯವಾಗಿರಿಸಿಕೊಳ್ಳುವುದು ಬಹಳ ಮುಖ್ಯ. ನಮಗೆ ನಮ್ಮ ಆರೋಗ್ಯ ಮಾತ್ರವಲ್ಲ, ಸಾಕುಪ್ರಾಣಿಗಳ ಆರೋಗ್ಯವೂ ಚೆನ್ನಾಗಿಬೇಕು. ಸಾಕುಪ್ರಾಣಿಗಳ ಮೇಲೂ ಬಿಸಿಲು ಹೆಚ್ಚು ಪರಿಣಾಮ ಬೀರುತ್ತದೆ.
ಬೇಸಿಗೆ ಪ್ರಾರಂಭವಾದ ನಂತರ ಮಾನವರಂತೆಯೇ ಸಾಕುಪ್ರಾಣಿಗಳಿಗೂ ಚರ್ಮದ ಆರೈಕೆಯ ಅಗತ್ಯವಿರುತ್ತದೆ. ಮನುಷ್ಯರಂತೆ ಸಾಕುಪ್ರಾಣಿಗಳು ಬೆವರು ಮೂಲಕ ದೇಹದ ಶಾಖವನ್ನು ಕಳೆದುಕೊಳ್ಳುವುದಿಲ್ಲ. ಸಾಕುಪ್ರಾಣಿಗಳು ದೇಹದಲ್ಲಿರುವ 80%ರಷ್ಟು ಶಾಖವನ್ನು ಬಾಯಿಯ ಮೂಲಕ ಉಸಿರಾಟದ ಮೂಲಕ, ಮೂಗು, ಕಿವಿ, ಕೂದಲುಗಳ ಮೂಲಕ ಸಮತೋಲನಗೊಳ್ಳುತ್ತವೆ. ನಾಯಿ ಅಥವಾ ಬೆಕ್ಕಿನ ಚರ್ಮ ಮಾನವನ ಚರ್ಮಕ್ಕೆ ಹೋಲಿಸಿದರೆ ತುಂಬಾ ತೆಳ್ಳಗಿರುತ್ತದೆ.

ಸಾಕುಪ್ರಾಣಿಗಳಿಗೂ ಆರೋಗ್ಯಕರವಾದ ಬಿಸಿಲು ಬೇಕಾಗುತ್ತದೆ. ಆದರೆ ಅವುಗಳು ಹೆಚ್ಚು ಬಿಸಿಲನ್ನು ಸಹಿಸುವುದಿಲ್ಲ. ಹೀಗಾಗಿ ಬೇಸಿಗೆ ಬಿಸಿಲಿನಲ್ಲಿ ಒಂದೆಡೆ ಬಂದಿಸಬಾರದು. ಸಾಕುಪ್ರಾಣಿಗಳು ಸಕ್ರಿಯವಾಗಿ ಸ್ವಾತಂತ್ರ್ಯವಾಗಿ ಇದ್ದಷ್ಟು ತುಂಬಾ ಒಳ್ಳೆಯದು.
ಹೀಗಾಗಿ ಅವುಗಳಿಗೂ ಆಟಿಕೆಗಳನ್ನು ನೀಡಿ ಆಡಲು ಬಿಡಿ. ಮನುಷ್ಯರಿಗೆ ಮಾತ್ರವಲ್ಲ, ಸಾಕು ನಾಯಿಗಳಿಗೂ ಸಾಂದರ್ಭಿಕವಾಗಿ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳಬೇಕಾಗುತ್ತದೆ. ಒಂದು ವೇಳೆ ಬೇಸಿಗೆಯಲ್ಲಿ ಸಾಕು ನಾಯಿಯಲ್ಲಿ ಬದಲಾವಣೆ ಕಂಡು ಬಂದರೆ ತಕ್ಷಣ ಪಶುವೈದ್ಯರ ಬಳಿ ಕರೆದುಕೊಂಡು ಹೋಗಬೇಕು. ಹಾಗಾದರೆ ಬೇಸಿಗೆಯಲ್ಲಿ ಸಾಕುಪ್ರಾಣಿಗಳನ್ನು ರಕ್ಷಿಸುವುದು ಹೇಗೆ ಎನ್ನುವುದನ್ನು ತಿಳಿಯೋಣ.
ಬೇಸಿಗೆಯಲ್ಲಿ ಸಾಕುಪ್ರಾಣಿಗಳಿಗಾಗಿ ಸಲಹೆಗಳು:-
1. ಸಾಕು ನಾಯಿಗಳ ಮಾಲೀಕರು ಅವುಗಳ ಯೋಗಕ್ಷೇಮವನ್ನು ಸಹ ನೋಡಿಕೊಳ್ಳಬೇಕು. ಬೇಸಿಗೆಯಲ್ಲಿ ಸಾಕುಪ್ರಾಣಿಗಳಿಗೆ ಶಾಖವನ್ನು ನಿಭಾಯಿಸಲು ಸಹಾಯ ಮಾಡುವ ಆಹಾರವನ್ನು ನೀಡಬೇಕು. ಕಲ್ಲಂಗಡಿ, ಮಜ್ಜಿಗೆ, ತೆಂಗಿನಕಾಯಿ ನೀರು ಇತ್ಯಾದಿಗಳನ್ನು ಸಹ ಕಾಲಕಾಲಕ್ಕೆ ಪ್ರಾಣಿಗಳಿಗೆ ನೀಡಬೇಕು. ಮೊಸರು ಉತ್ತಮ ಪ್ರೋಬಯಾಟಿಕ್ ಆಹಾರವಾಗಿದೆ ಮತ್ತು ಇದನ್ನು ಬ್ರೌನ್ ರೈಸ್ ಮತ್ತು ಮಾಂಸದೊಂದಿಗೆ ಬೆರೆಸಬಹುದು.
2. ಬೆಳಿಗ್ಗೆ ಮತ್ತು ಸಂಜೆ ತಂಪಾದ ವಾತಾವರಣವಿದ್ದಾಗ ಅವುಗಳನ್ನು ಹೊರಗೆ ಆಡಲು ಬಿಡಿ ಅಥವಾ ಹೊರಗೆ ಕರೆದುಕೊಂಡು ಹೋಗಿ. ಇದು ನಿಮ್ಮನ್ನೂ ಆರೋಗ್ಯವಾಗಿರಿಸುತ್ತದೆ. ಉದ್ಯಾನವನಗಳಲ್ಲಿ ನೀವು ಕೂಡ ವಾಕ್ ಮಾಡಬಹುದು. ಸಾಕುಪ್ರಾಣಿಗಳು ನಿಮ್ಮ ಆರೋಗ್ಯಕ್ಕೂ ಸಹಾಯವಾಗಿವೆ.

3. ಬೇಸಿಗೆಯಲ್ಲಿ ಅತಿಯಾದ ಶಾಖವನ್ನು ತಪ್ಪಿಸಲು ಸಾಕುಪ್ರಾಣಿಗಳ ಕೂದಲನ್ನು ಉದ್ದ ಬಿಡಬೇಡಿ. ಅದನ್ನು ಸಾಧ್ಯವಾದಷ್ಟು ಟ್ರಿಮ್ ಮಾಡಬೇಕು. ನಾಯಿಯ ತಳಿಯನ್ನು ಅವಲಂಬಿಸಿ ಬೇಸಿಗೆಯಲ್ಲಿ ಅದರ ಹೇರ್ ಟ್ರಿಮ್ ಮಾಡಿ ಎಂದು ಪಶುವೈದ್ಯರು ಸಲಹೆ ನೀಡುತ್ತಾರೆ.
4. ಬೇಸಿಗೆಯ ಶಾಖವನ್ನು ತಪ್ಪಿಸಲು ಸಾಕುಪ್ರಾಣಿಗಳನ್ನು ಈಜಲು ಕರೆದೊಯ್ಯಿರಿ. ಅಥವಾ ನಗರಗಳಲ್ಲಿನ ಸಾಕುಪ್ರಾಣಿ ಸ್ನೇಹಿ ರೆಸಾರ್ಟ್‌ಗಳಿಗೆ ಅವುಗಳನ್ನು ಕರೆದೊಯ್ಯಿರಿ. ಈ ಎರಡೂ ವಿಧಾನಗಳು ಬೇಸಿಗೆಯ ಶಾಖದಿಂದ ನಿಮಗೆ ಮತ್ತು ನಿಮ್ಮ ಸಾಕುಪ್ರಾಣಿಗಳಿಗೆ ಪರಿಹಾರವನ್ನು ನೀಡುತ್ತದೆ.
5. ನಾಯಿಗಳಿಗೆ ಸಾಕಷ್ಟು ನೀರು ಕೊಡಬೇಕು. ಮನುಷ್ಯರಂತೆ ಅವುಗಳಿಗೂ ಸಾಕಷ್ಟು ನೀರು ಬೇಕು. ಪ್ರಾಣಿಗಳು ಹೆಚ್ಚು ನೀರು ಕುಡಿಯಬೇಕು. ಹೀಗಾಗಿ ಒಂದು ಬಟ್ಟಲನ್ನು ಸದಾ ನೀರಿನಿಂದ ತುಂಬಿಸಿ ಇಟ್ಟಿರಿ. ಇದರಿಂದ ಅದು ಬಾಯಾರಿಕೆಯಾದಾಗ ಕುಡಿಯುತ್ತದೆ. ಆಗಾಗ ನೀರು ತುಂಬಿಸಿ, ತುಂಬಾ ಹೊತ್ತು ನೀರು ಇಟ್ಟಿದ್ದರೆ ಅದನ್ನು ಬದಲಾಯಿಸಿ ಹೊಸ ನೀರನ್ನು ತುಂಬಿಸಿ ಇಡಿ.
6. ಬೇಸಿಗೆಯಲ್ಲಿ ಮಧ್ಯಾಹ್ನ ತುಂಬಾ ಬಿಸಿಯಾಗಿರುತ್ತದೆ. ಅಂತಹ ಸಮಯದಲ್ಲಿ ಹೊರಗೆ ಹೋಗಬಾರದು. ನಾಯಿಗಳು ಸಹ ಬಿಸಿಲಿನ ಬೇಗೆಗೆ ಒಳಗಾಗುತ್ತವೆ. ಇದು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಆದ್ದರಿಂದ ತಂಪಾದ ವಾತಾವರಣದಲ್ಲಿ ಸಾಕುಪ್ರಾಣಿಗಳು ಇರುವಂತೆ ನೋಡಿಕೊಳ್ಳುವುದು ಉತ್ತಮ.
7. ಸಾಕು ನಾಯಿಗಳಂತೆ ಬೆಕ್ಕುಗಳು ಸೂರ್ಯನ ಶಾಖವನ್ನು ಸಹಿಸುವುದಿಲ್ಲ. ಆದರೆ ಅವು ಕೆಲವೊಮ್ಮೆ ಸೂರ್ಯನನ್ನು ಇಷ್ಟಪಡುತ್ತವೆ. ಹಾಗಾಗಿ ಅವುಗಳಗೂ ಸೂಕ್ತ ತಂಪಾದ ಸ್ಥಳವನ್ನು ಒದಗಿಸಬೇಕು. ಅವುಗಳಿಗೆ ಹೆಚ್ಚು ನೀರು ಕೊಡಿ. ಸಾಕುಪ್ರಾಣಿಗಳನ್ನು ಹೈಡ್ರೀಕರಿಸಿ ಮತ್ತು ತಂಪಾಗಿ ಇಡಿ.
-
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ












Click it and Unblock the Notifications