Christmas Wine: ಮನೆಯಲ್ಲಿ ಮಾಡಬಹುದಾದ 5 ಸರಳ ಕ್ರಿಸ್‌ಮಸ್ ವೈನ್‌ಗಳು

ಡಿಸೆಂಬರ್‌ ತಿಂಗಳು ಅಂತ್ಯದ ದಿನಗಳು ಬರುತ್ತಿದ್ದಂತೆ ಎಲ್ಲಡೆ ಕ್ರಿಸ್‌ಮಸ್‌ ಹಾಗೂ ಹೊಸವರ್ಷಾಚರಣೆ ಸಿದ್ಧತೆ ಜೋರಾಗಿದೆ. ಕ್ರಿಸ್‌ಮಸ್‌ಗೆ ಕ್ಷಣಗಣನೆ ಆರಂಭವಾಗಿದ್ದು, ಎಲ್ಲೆಡೆ ಸಿದ್ಧತೆ ಜೋರಾಗಿದೆ. ಈಸ್ಟ್ ಇಂಡಿಯನ್ಸ್, ಮಂಗಳೂರಿನವರು, ಆಂಗ್ಲೋ-ಇಂಡಿಯನ್ನರು ಮತ್ತು ಗೋವಾದವರು ಸೇರಿದಂತೆ ಅನೇಕ ಕ್ರಿಶ್ಚಿಯನ್ ಸಮುದಾಯಗಳು ಕ್ರಿಸ್‌ಮಸ್‌ ಹಬ್ಬದ ಭಾಗವಾಗಿ ಹಣ್ಣಿನ ವೈನ್‌ಗಳನ್ನು ತಯಾರಿಸುತ್ತಾರೆ.

ಡಿಸೆಂಬರ್‌ ತಿಂಗಳ ಋತುಮಾನದಲ್ಲಿ ಬೆಳೆಯುವ ಹಣ್ಣುಗಳಿಗೆ ಅನುಗುಣವಾಗಿ ದಾಲ್ಚಿನ್ನಿ, ಮೆಣಸು ಮತ್ತು ಜಾಯಿಕಾಯಿಯಂತಹ ಮಸಾಲೆ ಪದಾರ್ಥಗಳನ್ನು ಬಳಸಿ ವೈನ್‌ಗಳನ್ನು ತಯಾರಿಸಲಾಗುತ್ತದೆ. ಈ ವೈನ್‌ಗಳು ಅನೇಕ ಕುಟುಂಬಗಳಿಗೆ ಕ್ರಿಸ್‌ಮಸ್‌ನ ಭಾಗವಾಗಿದೆ. ಸಮಯ ಕಳೆದಂತೆ ಸಂಪ್ರದಾಯವು ಕ್ಷೀಣಿಸುತ್ತಿದೆಯಾದರೂ, ಪ್ಲಮ್ ಕೇಕ್‌ ಹಾಗೂ ಒಂದು ಗ್ಲಾಸ್ ವೈನ್ ಇಲ್ಲದೆ ಕ್ರಿಸ್‌ಮಸ್ ಆಚರಣೆ ಅಪೂರ್ಣ ಎನ್ನುವುದು ಹಲವರ ಅಭಿಪ್ರಾಯ. ಹೀಗಾಗಿ ಮನೆಯಲ್ಲೇ ತಯಾರಿಸಬಹುದಾದ ಐದು ಸರಳ ವೈನ್‌ಗಳ ಬಗ್ಗೆ ಮಾಹಿತಿ ಇಲ್ಲಿದೆ.

Homemade Fruit Wines For A Very Merry Christmas

ಗ್ರೇಪ್‌ ವೈನ್‌

ಗ್ರೇಪ್‌ ವೈನ್‌ಗಳು ಅಂಗಡಿಗಳಲ್ಲಿ ಸಹ ಸಿಗುತ್ತದೆ. ಆದರೆ ಮನೆಯಲ್ಲಿ ತಯಾರಿಸಿದ ವೈನ್‌ಗಳು ಎಲ್ಲಾ ರುಚಿಯನ್ನು ಮೀರಿರುತ್ತದೆ. ಹೀಗಾಗಿ ಮನೆಯಲ್ಲೇ ಸುಲಭವಾಗಿ ಗ್ರೇಪ್‌ ವೈನ್‌ ಮಾಡಬಹುದಾಗಿದೆ.

ಗ್ರೇಪ್‌ ವೈನ್‌ಗೆ ಬೇಕಾಗುವ ಸಾಮಾಗ್ರಿಗಳು

1 ಕೆಜಿ ಕಪ್ಪು ದ್ರಾಕ್ಷಿ

650-800 ಗ್ರಾಂ ಸಕ್ಕರೆ

1 ಚಮಚ ಯೀಸ್ಟ್

1.5 ಲೀಟರ್ ನೀರು

1 ಚಮಚ ಗೋಧಿ ಕಾಳುಗಳು

ಗ್ರೇಪ್‌ ವೈನ್‌ ಮಾಡುವ ವಿಧಾನ

ದ್ರಾಕ್ಷಿಯನ್ನು ತೊಳೆದು ಒಣಗಿಸಿ ನಂತರ ಮಣ್ಣಿ ಅಥವಾ ಪಿಂಗಾಣಿ ಜಾರ್‌ನಲ್ಲಿ ಸಕ್ಕರೆ, ಯೀಸ್ಟ್, ನೀರು ಗೋಧಿ ಕಾಳುಗಳು ಹಾಕಿ ಗಟ್ಟಿಯಾಗಿ ಮುಚ್ಚಿಡಿ. ಒಂದು ವಾರದವರೆಗೆ ಮುಟ್ಟದೆ ಕತ್ತಲೆಯ ಸ್ಥಳದಲ್ಲಿ ಸಂಗ್ರಹಿಸಿ. ಮೂರು ವಾರಗಳವರೆಗೆ ಮರದ ಚಮಚದಿಂದ ಪ್ರತಿದಿನ ಅವುಗಳನ್ನು ಬೆರೆಸಿ. 24ನೇ ದಿನಕ್ಕೆ ವೈನ್‌ ಸಿದ್ಧವಾಗಿರುತ್ತದೆ. ಅದನ್ನು ಬಾಟಲಿಗೆ ಸುರಿದು ವೈನ್‌ ಮತ್ತು ಅದರಲ್ಲಿನ ಕರಗಿದ ವಸ್ತುಗಳನ್ನು ಬೇರೆ ಮಾಡಿದರೆ ಗ್ರೇಪ್‌ ವೈನ್‌ ಸಿದ್ಧವಾಗುತ್ತದೆ.

Homemade Fruit Wines For A Very Merry Christmas

ಆ್ಯಪಲ್‌ ವೈನ್‌

ಸೇಬು ಹಣ್ಣುಗಳು ರುಚಿಕರ ಹಾಗೂ ಇತರ ಹಣ್ಣುಗಳಿಗಿಂತ ಆರೋಗ್ಯಕರ. ಹೀಗಾಗಿ ಸೇಬು ಹಣ್ಣುಗಳಿಂದಲೂ ವೈನ್‌ ತಯಾರಿಸುತ್ತಾರೆ. ಸೇಬು ಹಣ್ಣಿನ ವೈನ್‌ ದುಬಾರಿಯಾರಿಯಾದರೂ ರುಚಿಕರವಾಗಿರುತ್ತದೆ.

ಆ್ಯಪಲ್‌ ವೈನ್‌ಗೆ ಬೇಕಾಗುವ ಸಾಮಾಗ್ರಿಗಳು

3 ಕೆಜಿ ಕೆಂಪು ಸೇಬುಗಳು

1.3 ಕೆಜಿ ಸಕ್ಕರೆ

400 ಗ್ರಾಂ ಒಣದ್ರಾಕ್ಷಿ

14 ಗ್ರಾಂ ಸಿಟ್ರಿಕ್ ಆಮ್ಲ

ವೈಟ್ ವೈನ್ ಯೀಸ್ಟ್

3.7 ಲೀಟರ್ ನೀರು

ಆ್ಯಪಲ್‌ ವೈನ್‌ ಮಾಡುವ ವಿಧಾನ

ಕತ್ತರಿಸಿದ ಒಣದ್ರಾಕ್ಷಿಗಳನ್ನು 10 ನಿಮಿಷಗಳ ಕಾಲ ಕುದಿಸಿ ಬಳಿಕ ತಣ್ಣಗಾಗಿಸಿದ ನಂತರ ಸಕ್ಕರೆ ಸೇರಿಸಿ. ಸೇಬುಗಳನ್ನು ಕತ್ತರಿಸಿ ಇದೇ ಮಿಶ್ರಣಕ್ಕೆ ಸೇರಿಸಿ ಒಂದು ಬ್ರೂಯಿಂಗ್ ಬಿನ್‌ಗೆ ಸುರಿದು 8 ಗಂಟೆಗಳ ಕಾಲ ಬಿಡಬೇಕು. ನಂತರ ಉಳಿದ ಪದಾರ್ಥಗಳನ್ನು ಸೇರಿಸಿ 5 ದಿನಗಳವರೆಗೆ ಬಿಡಿ. ಬಳಿಕ ಆ ಮಿಶ್ರಣವನ್ನು ಗಾಜಿನ ಜಾರಿಗೆ ವರ್ಗಾಯಿಸಿ 3 ವಾರಗಳವರೆಗೆ ತಂಪಾದ ಸ್ಥಳದಲ್ಲಿ ಸಂಗ್ರಹಿಸಬೇಕು. ಬಳಿಕ ಬಾಟಲಿಗೆ ಸುರಿದು ವೈನ್‌ ಮತ್ತು ಅದರಲ್ಲಿನ ಕರಗಿದ ವಸ್ತುಗಳನ್ನು ಬೇರೆ ಮಾಡಿದರೆ ಆ್ಯಪಲ್‌ ವೈನ್‌ ಸಿದ್ಧವಾಗುತ್ತದೆ.

Homemade Fruit Wines For A Very Merry Christmas

ಅನಾನಸ್ ವೈನ್

ಹುಳಿ ಸಿಹಿ ಎರಡೂ ರುಚಿ ಇರುವ ಅನಾನಸ್ ಅಥವಾ ಪರಂಗಿ ಹಣ್ಣಿನಿಂದ ಮಾಡಿದ ವೈನ್‌ ಅದ್ಭುತವಾದ ರುಚಿಯನ್ನು ನೀಡುತ್ತದೆ. ಈ ಹಣ್ಣಿನಲ್ಲಿರುವ ಕಿಣ್ವಗಳು ವೈನ್‌ಗೆ ಬೇರೆಯೇ ರುಚಿಯನ್ನು ನೀಡುತ್ತದೆ.

ಅನಾನಸ್ ವೈನ್‌ಗೆ ಬೇಕಾಗುವ ಸಾಮಾಗ್ರಿಗಳು

1.3 ಕೆಜಿ ಅನಾನಸ್

900 ಗ್ರಾಂ ಸಕ್ಕರೆ

400 ಗ್ರಾಂ ಒಣದ್ರಾಕ್ಷಿ

ವೈಟ್ ವೈನ್ ಯೀಸ್ಟ್

ಅನಾನಸ್ ವೈನ್‌ ಮಾಡುವ ವಿಧಾನ

ಅನಾನಸ್ ಮತ್ತು ಒಣದ್ರಾಕ್ಷಿಗಳನ್ನು ಕತ್ತರಿಸಿ ಬ್ರೂಯಿಂಗ್ ಬಿನ್‌ಗೆ ಸೇರಿಸಿ. ಮತ್ತೊಂದೆಡೆ ನೀರನ್ನು ಕುದಿಸಿ ಸಕ್ಕರೆ ಕರಗಿಸಿ, ಅದನ್ನು 10 ನಿಮಿಷಗಳ ಕಾಲ ತಣ್ಣಗಾಗಲು ಬಿಡಿ. 12 ಗಂಟೆಗಳ ನಂತರ ಹಣ್ಣಿನ ಮಿಶ್ರಣಕ್ಕೆ ಉಳಿದ ಸಾಮಾಗ್ರಿಗಳನ್ನು ಸೇರಿಸಿ 24 ಗಂಟೆಗಳ ಕಾಲ ಬಿಡಿ. ಬಳಿಕ ಈ ಮಿಶ್ರಣವನ್ನು ಗಾಜಿನ ಜಾರಿನಲ್ಲಿ ಹಾಕಿ. ಬಳಿಕ ಒಂದು ತಿಂಗಳು ತಂಪಾದ ಕತ್ತಲೆ ಇರುವ ಸ್ಥಳದಲ್ಲಿ ಇಡಬೇಕು.

Homemade Fruit Wines For A Very Merry Christmas

ಸ್ಟ್ರಾಬೆರಿ ವೈನ್‌

ಸ್ಟ್ರಾಬೆರಿ ಹಣ್ಣುಗಳಿಂದ ಸಹ ವೈನ್‌ ತಯಾರಿಸಬಹುದಾಗಿದೆ. 3 ಕೆಜಿ ಸ್ಟ್ರಾಬೆರಿಗಳು, 7 ಲೀಟರ್ ನೀರು, ½ ಚಮಚ ನಿಂಬೆ ರಸ, 2 ಚಮಚ ವೈನ್ ಯೀಸ್ಟ್, 2 ಕೆಜಿ ಸಕ್ಕರೆಯಿಂದ ಸ್ಟ್ರಾಬೆರಿ ಹಣ್ಣಿನ ವೈನ್ ತಯಾರಿಸಬಹುದಾಗಿದೆ.

ಸ್ಟ್ರಾಬೆರಿ ವೈನ್‌ ಮಾಡುವ ವಿಧಾನ

ಸ್ಟ್ರಾಬೆರಿಗಳನ್ನು ಸ್ವಚ್ಛಗೊಳಿಸಿ ಜಾರಿನಲ್ಲಿ ಇಟ್ಟುಕೊಳ್ಳಿ. ಬಳಿಕ ಕುದಿಯುವ ನೀರನ್ನು ಸುರಿದು 10 ನಿಮಿಷಗಳ ಕಾಲ ಮುಚ್ಚಿಡಿ. ಈ ಮಿಶ್ರಣಕ್ಕೆ ನಿಂಬೆ ರಸ ಸೇರಿಸಿ ವೈನ್ ಯೀಸ್ಟ್ ಸೇರಿಸಿ ತಣ್ಣಗಾಗಲು ಬಿಡಿ. ಬಳಿಕ ಜಾರನ್ನು ಮುಚ್ಚಿ ತಂಪಾದ ಸ್ಥಳದಲ್ಲಿ ಇರಿಸಿ. ಒಂದು ವಾರದ ನಂತರ, ಸಕ್ಕರೆ ಸೇರಿಸಿ, ಒಮದು ವಾರದವರೆಗೆ ಹೀಗೆ ಸಕ್ಕರೆಯನ್ನು ಬೆರೆಸಿ ಎರಡನೇ ವಾರದ ನಂತರ ಈ ಮಿಶ್ರಣವನ್ನು ಗಾಜಿನ ಬಾಟಲಿಗೆ ಸುರಿದು ತಿಂಗಳು ಕಳೆದರೆ ಸ್ಟ್ರಾಬೆರಿ ವೈನ್‌ ಸಿದ್ಧವಾಗುತ್ತದೆ.

ಬನಾನಾ ವೈನ್

ಅತ್ಯಂತ ಸುಲಭ ಮತ್ತು ಬೇಗ ಆಗುವ ವೈನ್‌ ಎಂದರೆ ಬನಾನ ವೈನ್‌. ಈ ವೈನ್‌ ಸಿದ್ಧವಾಗಲು ಕನಿಷ್ಠ ಕೆಲವು ವಾರಗಳನ್ನು ತೆಗೆದುಕೊಳ್ಳುತ್ತದೆ. ಹಾಗೂ ಈ ಸರಳವಾದ ಬಾಳೆಹಣ್ಣಿನ ವೈನ್ ಅನ್ನು ಕೇವಲ ಒಂದು ರಾತ್ರಿಯಲ್ಲಿ ತಯಾರಿಸಬಹುದು.

ಬನಾನಾ ವೈನ್‌ಗೆ ಬೇಕಾಗುವ ಸಾಮಾಗ್ರಿಗಳು

2 ಕೆಜಿ ಬಾಳೆಹಣ್ಣು

1 ಕೆಜಿ ಕಂದು ಸಕ್ಕರೆ

1 ಚಮಚ ಯೀಸ್ಟ್

3 ಒಣಗಿದ ಕೆಂಪು ಮೆಣಸಿನಕಾಯಿಗಳು

5 ಏಲಕ್ಕಿ ಕಾಳುಗಳು

5 ಲವಂಗ

2 ದಾಲ್ಚಿನ್ನಿ ತುಂಡುಗಳು

ಶುಂಠಿಯ ಸಣ್ಣ ತುಂಡು

2 ಲೀಟರ್ ನೀರು

ಬನಾನಾ ವೈನ್‌ ಮಾಡುವ ವಿಧಾನ

ಎರಡು ಲೀಟರ್ ನೀರನ್ನು ಕುದಿಸಿ ಮತ್ತು ತಣ್ಣಗಾಗಲು ಬಿಡಿ. ಒಣಗಿದ ಕೆಂಪು ಮೆಣಸಿನಕಾಯಿ, ಏಲಕ್ಕಿ, ಲವಂಗ, ದಾಲ್ಚಿನ್ನಿ ಮತ್ತು ಶುಂಠಿಯನ್ನು ಪುಡಿಮಾಡಿ ಮಿಶ್ರಣ ಮಾಡಿ. ಒಂದು ಕ್ಲೀನ್ ಜಾರ್ ತೆಗೆದುಕೊಂಡು ಬಾಳೆಹಣ್ಣುಗಳು, ಸಕ್ಕರೆ, ಪುಡಿಮಾಡಿದ ಮಸಾಲಾ ಮಿಶ್ರಣ ಮತ್ತು ಯೀಸ್ಟ್ ಸೇರಿಸಿ. ನೀರು ಸುರಿದು ಚೆನ್ನಾಗಿ ಬೆರೆಸು ಗಟ್ಟಿಯಾಗಿ ಮುಚ್ಚಿಟ್ಟು ಒಂದು ರಾತ್ರಿ ಇಡಿ .ಮರುದಿನ ಬೆಳಿಗ್ಗೆ ವೈನ್ ಅನ್ನು ಶೋಧಿಸಿ ಗಾಜಿನ ಬಾಟಲಿಗಳಲ್ಲಿ ಸಂಗ್ರಹಿಸಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+