Back Pain: ಬೆನ್ನು ನೋವು ಕುಳಿತು ಕೆಲಸ ಮಾಡುವವರನ್ನೇ ಹೆಚ್ಚು ಕಾಡುವುದೇಕೆ?

ಶ್ರಮದ ಕೆಲಸ ಮಾಡುವವರಿಗಿಂತ ಹೆಚ್ಚಾಗಿ ಕುಳಿತು ಕೆಲಸ ಮಾಡುವವರನ್ನು ಬೆನ್ನು ನೋವು ಜಾಸ್ತಿಯಾಗಿ ಕಾಡುತ್ತಿರುವುದು ಹೆಚ್ಚಾಗಿ ಕಂಡು ಬರುತ್ತದೆ. ಸದಾ ಕಂಪ್ಯೂಟರ್ ಮುಂದೆ ಕತ್ತು ಬಗ್ಗಿಸಿ ಕುಳಿತು ಕೊಂಡು ಕೆಲಸ ಮಾಡುವವರಿಗೆ ಬೆನ್ನು ನೋವು ತುಸು ಹೆಚ್ಚಾಗಿಯೇ ಕಂಡು ಬರುತ್ತಿದ್ದು, ಅಯ್ಯೋ ಸಾಕಪ್ಪಾ ಎನ್ನುವಂತೆ ಮಾಡಿಬಿಡುತ್ತದೆ. ಇದಕ್ಕೆ ಕಾರಣಗಳೇನು ಎಂಬುದನ್ನು ನೋಡುತ್ತಾ ಹೋದರೆ ನಾವೇ ಕಾರಣ ಎಂಬ ಉತ್ತರ ಸಿಗುತ್ತದೆ.

ಸಾಮಾನ್ಯವಾಗಿ ಹೊರಗೆ ಶ್ರಮದ ಕೆಲಸ ಮಾಡುವವರಿಗೆ ಆಫೀಸಿನಲ್ಲಿ ಫ್ಯಾನ್ ಕೆಳಗೆ ಕುಳಿತು ಕೆಲಸ ಮಾಡುವವರನ್ನು ನೋಡಿದಾಗ ತಮಗೂ ಅಂಥ ಕೆಲಸ ಸಿಕ್ಕಿದ್ದರೆ ಚೆನ್ನಾಗಿರುತ್ತಿತ್ತು ಎಂಬ ಆಲೋಚನೆ ಬರುವುದು ಸಹಜ. ಆದರೆ ಒಂದೆಡೆ ಕುರ್ಚಿಯಲ್ಲಿ ಕುಳಿತು ಕೆಲಸ ಮಾಡುವವರ ಕಷ್ಟಗಳು ಅವರಿಗಷ್ಟೇ ಗೊತ್ತಿರುತ್ತದೆ. ಬೆನ್ನುನೋವು, ಮಲಬದ್ಧತೆ, ಬಿಪಿ ಶುಗರ್, ಮೂಲವ್ಯಾಧಿ ಹೀಗೆ ಹಲವು ಸಮಸ್ಯೆಗಳು ಮುತ್ತಿಕೊಂಡಿರುತ್ತವೆ. ಏಕೆ ಹೀಗೆ?

Health tips Why Does Back Pain Effect Those Who Sit And Work More

ಏಕೆಂದರೆ ಒಂದೇ ಕಡೆ ಕುಳಿತು ದೈಹಿಕ ಶ್ರಮವಿಲ್ಲದೆ ಮಾಡುವ ಕೆಲಸಗಳು ನಮಗೆ ಗೊತ್ತಿಲ್ಲದಂತೆ ಹಲವು ತೊಂದರೆಗಳನ್ನು ತಂದೊಡ್ಡುತ್ತದೆ. ಕುರ್ಚಿಗೆ ಅಂಟಿಕೊಂಡು ಕುಳಿತು ಕೆಲಸ ಮಾಡುವವರನ್ನು ಮೊದಲಿಗೆ ಅಪ್ಪಿ ಕೊಳ್ಳುವ ತೊಂದರೆ ಯಾವುದೆಂದರೆ ಅದು ಬೆನ್ನು ನೋವು. ಬಹಳಷ್ಟು ಮಂದಿ ಬೆನ್ನು, ಕತ್ತು ನೋವಿನ ಬಗ್ಗೆ ಮಾತನಾಡುತ್ತಾರೆ. ಹಲವು ಸಲ ಈ ನೋವಿನ ತೀವ್ರತೆ ಹೇಗಿರುತ್ತದೆಯೆಂದರೆ ಅದು ಕೂರಲು, ನಿಲ್ಲಲು, ಮಲಗಲು ಬಿಡದೆ ಕಾಡುತ್ತದೆ.

ಬೆನ್ನುನೋವಿಗೆ ಹಲವು ಕಾರಣಗಳು

ಸದಾ ಕೆಲಸದ ಒತ್ತಡದಲ್ಲಿಯೇ ಕಳೆಯುವ ನಾವು ಕುಳಿತಲ್ಲೇ ಫ್ಯಾನ್ ಕೆಳಗೆ, ಎಸಿ ರೂಂನಲ್ಲಿ ಕೆಲಸ ಮಾಡಿದರೂ ದೈಹಿಕವಾಗಿ ಶ್ರಮವಿಲ್ಲದೆ ಆರಾಮ ಎನಿಸಿದರೂ ಮಾನಸಿಕವಾಗಿ ಮತ್ತು ಆರೋಗ್ಯದ ದೃಷ್ಠಿಯಿಂದ ಒಂದಷ್ಟು ಸಮಸ್ಯೆಗಳನ್ನು ನಾವು ಮೈಮೇಲೆ ಎಳೆದುಕೊಳ್ಳಬೇಕಾಗುತ್ತದೆ. ಅದರಲ್ಲೂ ಬೆನ್ನು ನೋವು ಆರಂಭವಾದರಂತು ಅದು ಬೆಂಬಿಡದೆ ಕಾಡುತ್ತದೆ. ಈ ಬೆನ್ನು ಮತ್ತು ಕತ್ತು ನೋವು ಏಕೆ ಬರುತ್ತದೆ ಎಂಬುದರ ಬಗ್ಗೆ ಹಲವು ಕಾರಣಗಳನ್ನು ನೀಡಬಹುದಾಗಿದೆ.

Health tips Why Does Back Pain Effect Those Who Sit And Work More

ನಾವು ಕುಳಿತು ಮಾಡುವ ಕೆಲಸದಲ್ಲಿನ ಭಂಗಿಯ ಬಗ್ಗೆ ನಿರ್ಲಕ್ಷ್ಯ, ಅಶಿಸ್ತು ಮತ್ತು ಕೆಲಸಕ್ಕೆ ತಕ್ಕಂತೆ ಪೀಠೋಪಕರಣಗಳನ್ನು ಬಳಸಿಕೊಳ್ಳದಿರುವುದು ಹೀಗೆ ಹಲವು ವಿಷಯಗಳು ನಮಗೆ ಬೆನ್ನು ನೋವನ್ನು ತರಬಹುದು. ಇನ್ನು ಕೆಲವೊಮ್ಮೆ ವಯಸ್ಸಿನ ಕಾರಣಗಳು, ಹೊಟ್ಟೆಯ ಮಾಂಸಖಂಡಗಳ ಶಕ್ತಿ ಕುಗ್ಗುವಿಕೆ ಮತ್ತು ಮೂಳೆಯ ಸವೆತವೂ ಕೂಡ ಬೆನ್ನು ನೋವಾಗಿ ಕಾಡಬಹುದು.

ನೋವು ಶಮನಕಾರಿ ಮಾತ್ರೆ ಒಳ್ಳೆಯದಲ್ಲ

ಹೆಚ್ಚಿನ ಜನ ಬೆನ್ನು ನೋವು ಶಮನಕ್ಕಾಗಿ ಫಿಸಿಯೋಥೆರಪಿ ಮಾಡಿಸಿಕೊಳ್ಳುತ್ತಾರೆ. ಇನ್ನು ಕೆಲವರು ಬಿಗಿಪಟ್ಟಿಕಟ್ಟಿಕೊಳ್ಳುತ್ತಾರೆ. ತೈಲ, ನೋವು ನಿವಾರಕ ಕ್ರೀಮ್ ಹಚ್ಚಿಕೊಳ್ಳುವುದು, ನೋವು ಶಮನಕಾರಿ ಮಾತ್ರೆ ಸೇವಿಸುವುದು ಮೊದಲಾದ ಸ್ವಯಂ ಚಿಕಿತ್ಸೆಗಳನ್ನು ಹೆಚ್ಚಿನವರು ಮಾಡುತ್ತಾರೆ. ಆದರೆ ನಮಗೆ ಬೆನ್ನುನೋವು ಕಾಣಿಸಿಕೊಂಡಾಗ ಮೊದಲಿಗೆ ವೈದ್ಯರನ್ನು ಕಂಡು ಬೆನ್ನು ನೋವು ಏಕೆ ಬಂದಿದೆ ಎಂಬುದನ್ನು ಕಂಡು ಹಿಡಿದು ಬಳಿಕ ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆದುಕೊಳ್ಳುವುದು ಒಳ್ಳೆಯದು.

ಹೆಚ್ಚಿನವರು ನೋವು ಕಾಣಿಸಿಕೊಂಡಾಗ ಯಾವುದೋ ನೋವು ಶಮನಕಾರಿ ಮಾತ್ರೆ ಸೇವಿಸಿ ತಾತ್ಕಾಲಿಕ ರಿಲೀಫ್ ಪಡೆಯುತ್ತಾರೆ. ಇದು ಒಳ್ಳೆಯದಲ್ಲ. ಇದರಿಂದ ಶರೀರಕ್ಕೆ ಅಡ್ಡಪರಿಣಾಮಗಳಾಗಬಹುದು. ಹೀಗಾಗಿ ನೋವು ಕಾಣಿಸಿಕೊಂಡಾಗ ನೋವು ಶಮನಕ್ಕಾಗಿ ಮಾತ್ರೆ, ಕ್ರೀಮ್, ಸ್ಪ್ರೇ ಮಾಡಿಕೊಳ್ಳುವ ಬದಲಿಗೆ ನೋವು ಏಕೆ ಬಂದಿದೆ ಎಂಬುದನ್ನು ಅರಿತು ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯುವುದು ಜಾಣತನ. ಇದರೊಂದಿಗೆ ಗಂಟೆಗಟ್ಟಲೆ ಒಂದೇ ಕಡೆ ಕುಳಿತು ಕೆಲಸ ಮಾಡುವವರು ಆಗಾಗ್ಗೆ ಎದ್ದು ನಿಲ್ಲುವುದು, ನಡೆದಾಡುವುದು ಮಾಡಬೇಕು.

ಬೆನ್ನು ನೋವನ್ನು ಹಗುರವಾಗಿ ಪರಿಗಣಿಸದಿರಿ

ಇನ್ನು ಕೂರುವ ಭಂಗಿಯಲ್ಲಿಯೂ ಬದಲಾವಣೆ ಮಾಡುತ್ತಿರಬೇಕು. ಒಂದೇ ಭಂಗಿಯಲ್ಲಿ ಕೂರದೆ ಆಗಾಗ್ಗೆ ಬದಲಿಸುತ್ತಿರಬೇಕು ಇದರಿಂದ ಸ್ವಲ್ಪ ಮಟ್ಟಿಗಿನ ವ್ಯಾಯಾಮ ಮಾಡಿದಂತೆಯೂ ಆಗುತ್ತದೆ. ಎತ್ತರಕ್ಕೆ ತಕ್ಕಂತೆ ತೂಕವನ್ನು ಸರಿದೂಗಿಸಿಕೊಳ್ಳಬೇಕು. ಬೆಳಗ್ಗೆ ವಾಕಿಂಗ್ ಮಾಡುವ ಅಭ್ಯಾಸ ಮಾಡಿಕೊಂಡರೆ ಉತ್ತಮವಾಗುತ್ತದೆ. ಒಂದೇ ಕೈನಿಂದ ಹೆಚ್ಚಿನ ಭಾರ ಎತ್ತುವುದನ್ನು ಮಾಡಬಾರದು. ವ್ಯಾಯಾಮದ ಜತೆಗೆ ಯೋಗ ಮಾಡುದನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಇನ್ನೂ ಒಳ್ಳೆಯದೇ.

ಇನ್ನು ವಿಶ್ರಾಂತಿಗೆ ಹೆಚ್ಚು ಗಮನಕೊಡಬೇಕು. ಮಲಗುವಾಗಲೂ ಕೂಡ ಎಚ್ಚರಿಕೆ ವಹಿಸಬೇಕು. ತುಂಬಾ ಸಲ ಮಲಗುವಾಗ ಆಗುವ ಚಿಕ್ಕ ಎಡವಟ್ಟು ಬೆನ್ನು ಮತ್ತು ಕತ್ತು ನೋವನ್ನು ತರಿಸುವ ಸಾಧ್ಯತೆಯಿರುತ್ತದೆ. ಬೆನ್ನು ನೋವು ಕೇವಲ ಕುಳಿತು ಕೆಲಸ ಮಾಡುವವರನ್ನು ಮಾತ್ರ ಬಾಧಿಸಲ್ಲ. ಇತರೆ ಕೆಲಸ ಮಾಡುವವರನ್ನೂ ಕಾಡ ಬಹುದು. ಆದರೆ ಬೆನ್ನು ನೋವೆಂದು ಹಗುರವಾಗಿ ಪರಿಗಣಿಸದೆ ವೈದ್ಯರನ್ನು ಕಂಡು ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದರಿಂದ ನೋವನ್ನು ತಡೆಗಟ್ಟಿ ಆರೋಗ್ಯವಾಗಿರಲು ಸಾಧ್ಯವಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+