Pineapple: ಅನಾನಸ್ ಸೇವನೆಯಿಂದ ಏನೆಲ್ಲ ಲಾಭವಿದೆ ಗೊತ್ತಾ?
ಸಿಗರೇಟ್ ಸೇವನೆಯಿಂದ ಆರೋಗ್ಯ ಸಮಸ್ಯೆ ಮಾಡಿಕೊಂಡವರು, ಯಕೃತ್ ತೊಂದರೆ, ಅಜೀರ್ಣದ ಸಮಸ್ಯೆಯಿಂದ ಬಳಲುವವರು ಅನಾನಸ್ ಹಣ್ಣನ್ನು ಸೇವಿಸುತ್ತಾ ಬಂದರೆ ಚೇತರಿಕೆ ಕಂಡು ಕೊಳ್ಳಲು ಸಾಧ್ಯವಾಗುತ್ತದೆ. ಸಾಮಾನ್ಯವಾಗಿ ಎಲ್ಲ ಹಣ್ಣುಗಳಲ್ಲಿಯೂ ದೇಹಕ್ಕೆ ಪೋಷಕ ಶಕ್ತಿಯನ್ನು ಒದಗಿಸುವ ಔಷಧೀಯ ಗುಣಗಳಿದ್ದು, ಇದನ್ನರಿತು ಆಯಾಯ ಸಂದರ್ಭಕ್ಕೆ ತಕ್ಕಂತೆ ಹಣ್ಣುಗಳನ್ನು ಸೇವಿಸುವುದು ಜಾಣತನವಾಗಿದೆ.
ಅನಾನಸ್ ಯಾವುದೆಲ್ಲ ಆರೋಗ್ಯದ ಸಮಸ್ಯೆಗಳಿಗೆ ಪರಿಹಾರವಾಗಿದೆ ಎಂಬುದನ್ನು ನೋಡುವುದಾದರೆ ಉರಿಮೂತ್ರದಿಂದ ಬಳಲುವವರಿಗೆ ಇದು ಪ್ರಯೋಜನಕಾರಿಯಾಗಿದೆ. ಉರಿಮೂತ್ರದ ಸಮಸ್ಯೆ ಮತ್ತು ಸಮರ್ಪಕವಾಗಿ ಮೂತ್ರ ವಿಸರ್ಜನೆಯಾಗದ ಸಮಸ್ಯೆಯಿಂದ ಬಳಲುವವರು ಹಣ್ಣನ್ನು ಸೇವಿಸುತ್ತಾ ಬಂದರೆ ಸಮಸ್ಯೆಗೆ ಪರಿಹಾರ ದೊರಕಲಿದೆ.

ದೇಹಕ್ಕೆ ಸರಿಯಾದ ಜೀವಸತ್ವ ದೊರೆಯದೆ ವಸಡಿನ ರಕ್ತಸ್ರಾವದಿಂದ ಬಳಲುವವರಿಗೂ ಇದು ಪ್ರಯೋಜನಕಾರಿಯಾಗಿದೆ. ಯಕೃತ್ ತೊಂದರೆ, ಅಜೀರ್ಣದ ಸಮಸ್ಯೆಯನ್ನು ಅನುಭವಿಸುವವರು ಅನಾನಸ್ ಹಣ್ಣಿಸ ರಸದೊಂದಿಗೆ ಸ್ವಲ್ಪ ಜೇನುತುಪ್ಪ ಬೆರೆಸಿ ಸೇವಿಸುತ್ತಾ ಬಂದರೆ ಪರಿಹಾರ ದೊರೆಯುತ್ತದೆ.
ಕಾಮಾಲೆ ರೋಗಕ್ಕೂ ರಾಮಬಾಣ
ಕಾಮಾಲೆ ರೋಗವನ್ನು ದೂರ ಮಾಡಬೇಕಾದರೆ ಅನಾನಸ್ ಹಣ್ಣನ್ನು ಸಣ್ಣ ತುಂಡುಗಳನ್ನಾಗಿ ಮಾಡಿ ಅದನ್ನು ಜೇನುತುಪ್ಪದಲ್ಲಿ ವಾರಗಳ ಕಾಲ ನೆನೆಸಿಟ್ಟು ದಿನಕ್ಕೆರಡು ಬಾರಿ ಸೇವಿಸಬಹುದಾಗಿದೆ. ಸಿಗರೇಟ್ ಸೇವಿಸುವುದರಿಂದಾಗುವ ತೊಂದರೆಗಳನ್ನು ಸರಿಪಡಿಸ ಬಹುದಾಗಿದೆ. ಗಂಟಲು ರೋಗಗಳಿಗೂ ಉತ್ತಮ ಔಷಧಿಯಾಗಿದೆ. ರಕ್ತ ಹೀನತೆ, ಹೊಟ್ಟೆತೊಳೆಸುವಿಕೆ, ತಲೆಸುತ್ತು ಮುಂತಾದ ಸಮಸ್ಯೆಗಳಿಗೂ ಇದು ರಾಮಬಾಣವಾಗಿದೆ.

ಹಣ್ಣಿನ ರಸವನ್ನು ಲೇಪನ ಮಾಡುವುದರಿಂದ ಕಜ್ಜಿತುರಿಕೆಯಂತಹ ಚರ್ಮರೋಗವು ನಿಯಂತ್ರಣಕ್ಕೆ ಬರಲಿದೆ. ಅನಾನಸ್ ಹೆಚ್ಚು ತೇವಾಂಶ ಹೊಂದಿದ್ದು, ದಾಹವನ್ನು ನಿಗ್ರಹಿಸುತ್ತದೆ. 100 ಗ್ರಾಂ ಅನಾನಸ್ ಹಣ್ಣಿನಲ್ಲಿ ಏನೆಲ್ಲ ಪೋಷಕಾಂಶವಿದೆ ಎಂದರೆ 87.8.ಗ್ರಾಂ ತೇವಾಂಶವಿದೆಯಂತೆ. ಇನ್ನು ಇತರೆ ಪೋಷಕಾಂಶಗಳು ಇದರಲ್ಲಿದೆ.
ಆರೋಗ್ಯ ವೃದ್ಧಿಗೆ ಹಣ್ಣುಗಳು ಸಹಕಾರಿ
ಅದು ಯಾವುದೆಂದರೆ, ಸಸಾರಜನಕ 0.4 ಮಿ.ಗ್ರಾಂ, ಮೇದಸ್ಸು 0.1 ಗ್ರಾಂ, ಖನಿಜಾಂಶ 0.4 ಕಾರ್ಬೋಹೈಡ್ರೇಟ್ 19.8 ಗ್ರಾಂ, ಕ್ಯಾಲ್ಸಿಯಂ 20 ಮಿ.ಗ್ರಾಂ, ಕಬ್ಬಿಣ 1.2 ಮಿ.ಗ್ರಾಂ, ರೋಬೋಪ್ಲಾವಿನ್ 0.12ಮಿ.ಗ್ರಾಂ, ಪಾಸ್ಪರಸ್ 9.0ಮಿ.ಗ್ರಾಂ, ಥಿಯಾಮಿನ್ 0.2ಮಿ.ಗ್ರಾಂ, ನಿಯಾಸಿನ್ 0.1 ಮಿ.ಗ್ರಾಂ ಮತ್ತು ಸಿ ಜೀವಸತ್ವ 39 ಮಿ.ಗ್ರಾಂ ಇದೆಯಂತೆ.
ಇದೆಲ್ಲವನ್ನು ಗಮನಿಸಿದೆ ಅನಾನಸ್ ಆರೋಗ್ಯದ ದೃಷ್ಠಿಯಿಂದ ಉತ್ತಮವಾಗಿದ್ದು, ಪ್ರತಿನಿತ್ಯ ಸೇವಿಸುವುದರಿಂದ ಒಂದಷ್ಟು ಆರೋಗ್ಯವನ್ನು ಹೊಂದಲು ಸಾಧ್ಯವಾಗಲಿದೆ. ಹಣ್ಣುಗಳು ಮನುಷ್ಯನ ಆರೋಗ್ಯದ ದೃಷ್ಠಿಯಿಂದ ಉಪಯೋಗಕಾರಿ ಹೀಗಾಗಿ ಬಾಯಿ ರುಚಿಗೆ ಬೇರೆ ಪದಾರ್ಥಗಳನ್ನು ಸೇವಿಸಿ ಆರೋಗ್ಯ ಹಾಳು ಮಾಡಿಕೊಳ್ಳುವ ಬದಲಿಗೆ ವಿವಿಧ ಹಣ್ಣುಗಳನ್ನು ಸೇವಿಸಿ ಆರೋಗ್ಯ ವೃದ್ಧಿ ಮಾಡಿಕೊಳ್ಳುವುದು ಒಳ್ಳೆಯದು.
ಎಲ್ಲ ಕಾಲದಲ್ಲೂ ಸಿಗುವ ಅನಾನಸ್
ಇನ್ನು ಯಾವುದೇ ಹಣ್ಣು ಸೇವನೆ ಮಾಡುವ ಸಂದರ್ಭ ಕೆಲವೊಂದು ವಿಷಯಗಳನ್ನು ಅರಿತುಕೊಳ್ಳಬೇಕು. ದೇಹಕ್ಕೆ ಒಗ್ಗುವ ಮತ್ತು ಅದರಲ್ಲಿರುವ ಆರೋಗ್ಯಕಾರಿ ಗುಣಗಳನ್ನು ತಿಳಿದುಕೊಂಡು ಸೇವಿಸಬೇಕಾಗುತ್ತದೆ. ದೇಹಕ್ಕೆ ಉಷ್ಣ ಹೆಚ್ಚಾದಾಗ ಉಷ್ಣ ಗುಣದ ಹಣ್ಣುಗಳನ್ನು ಸೇವಿಸುವುದು ಒಳ್ಳೆಯದಲ್ಲ. ಈ ಸಂದರ್ಭ ತಂಪು ಗುಣದ ಹಣ್ಣನ್ನು ಸೇವಿಸಬೇಕಾಗುತ್ತದೆ. ಕೆಲವು ಹಣ್ಣುಗಳು ನಿರ್ಧಿಷ್ವ ಋತುಮಾನದಲ್ಲಿ ಮಾತ್ರ ಸಿಗುತ್ತವೆ. ಆದರೆ ಅನಾನಸ್ ಎಲ್ಲ ಕಾಲದಲ್ಲಿಯೂ ಫಸಲು ಬಿಡುವುದರಿಂದ ಜನರ ಕೈಗೆ ಸುಲಭವಾಗಿ ಸಿಗುತ್ತದೆ. ಹೆಚ್ಚಿನ ದರವೂ ಇಲ್ಲದೆ ಕೈಗೆ ಎಟಕುವ ಬೆಲೆಗೆ ದೊರೆಯುತ್ತದೆ.
ಇನ್ನು ಮನೆಯ ಹಿತ್ತಲಲ್ಲಿ ಜಾಗವಿದ್ದರೆ ತಾವೇ ಮನೆಯಲ್ಲಿಯೇ ಬೆಳೆಸಲು ಸಾಧ್ಯವಾಗಲಿದೆ. ಅನಾನಸ್ ಹಣ್ಣು ಎಲ್ಲ ಕಾಲದಲ್ಲಿ, ಎಲ್ಲ ಕಡೆಗಳಲ್ಲೂ ದೊರೆಯುವುದರಿಂದ ಅದನ್ನು ನೇರವಾಗಿ ಅಥವಾ ಪಾನೀಯ, ಆಹಾರ ತಿನಿಸುಗಳಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ. ಇದರ ಮಹತ್ವವನ್ನು ಅರಿತು ಅದರಂತೆ ಬಳಸುವುದರಿಂದ ಆರೋಗ್ಯದ ದೃಷ್ಟಿಯಿಂದ ಅನುಕೂಲವಾಗಲಿದೆ ಎಂಬುದಂತು ಸತ್ಯ.
-
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ?












Click it and Unblock the Notifications