Breastfeeding: ಹಾಲುಣಿಸುವ ಅಮ್ಮಂದಿರು ತಿಳಿದುಕೊಂಡಿರಬೇಕಾದ ವಿಚಾರಗಳೇನು?

ಇವತ್ತಿಗೂ ಪ್ರತಿಯೊಂದು ವಿಚಾರದಲ್ಲಿ ತಪ್ಪು ಕಲ್ಪನೆಗಳಿವೆ. ಅವುಗಳಿಗೆ ವೈಜ್ಞಾನಿಕವಾಗಿ ಯಾವುದೇ ರೀತಿಯ ಆಧಾರಗಳು ಇಲ್ಲವಾದರೂ ಬಾಯಿಂದ ಬಾಯಿಗೆ ಹರಿದಾಡುತ್ತಲೇ ಇರುತ್ತವೆ. ಇದಕ್ಕೆ ಹಾಲುಣಿಸುವ ಮಹಿಳೆಯರು ಹೊರತಾಗಿಲ್ಲ. ಕಲ್ಪನೆಗಳು ಮತ್ತು ಅದಕ್ಕೆ ವಾಸ್ತವದಲ್ಲಿರುವ ಉತ್ತರಗಳನ್ನು ತುಲನೆ ಮಾಡಿ ನೋಡಿದರೆ, ಹಿಂದಿನ ಕಾಲದಲ್ಲಿ ಯಾರೋ ಹೇಳಿದ ಮಾತುಗಳು ಅದು ಒಬ್ಬರಿಂದ ಮತ್ತೊಬ್ಬರಿಗೆ ಹರಡಿ ಜನರ ಮನದಲ್ಲಿ ಇಂದಿಗೂ ಉಳಿದುಕೊಂಡಿರುವುದನ್ನು ನಾವು ಕಾಣಬಹುದು.

ಹಾಲುಣಿಸುವ ಅನೇಕ ಮಹಿಳೆಯರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಾಲು ಉತ್ಪತ್ತಿಯಾಗುವುದಿಲ್ಲ ಎಂಬ ಮಾತುಗಳಿವೆ. ಆದರೆ ಆಧುನಿಕ ವೈದ್ಯಲೋಕ ಇದನ್ನು ಒಪ್ಪುವುದಿಲ್ಲ. ಅವರ ಪ್ರಕಾರ ಮಹಿಳೆಯರು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಹಾಲನ್ನು ಉತ್ಪಾದಿಸುತ್ತಾರೆ. ಬಹುಪಾಲು ಶಿಶುಗಳು ನಿಧಾನವಾಗಿ ತೂಕಗಳಿಸುವ ಅಥವಾ ಕಳೆದುಕೊಳ್ಳುತ್ತವೆ. ಇದಕ್ಕೆ ಸಾಕಷ್ಟು ಹಾಲು ಇಲ್ಲ ಎಂಬುದಲ್ಲ. ಬದಲಿಗೆ ತಾಯಿ ಬಳಿಯಿರುವ ಹಾಲು ಮಗುವಿಗೆ ಸಮರ್ಪಕವಾಗಿ ದೊರಕುತ್ತಿಲ್ಲ ಎನ್ನುವುದೇ ಮುಖ್ಯ ಕಾರಣವಂತೆ.

Health tips What Are The Main Things Breastfeeding Moms Should Know

ಇನ್ನು ಸ್ವಲ್ಪ ಮುಂದೆ ಹೋಗಿ ಹೇಳುವುದಾದರೆ ಮಕ್ಕಳು ತೂಕ ಕಳೆದುಕೊಳ್ಳಲು ತಾಯಿಹಾಲಿನ ಉತ್ಪಾದನೆ ಕಡಿಮೆಯಾಗಿರುವುದಲ್ಲ. ಬದಲಿಗೆ ಸರಿಯಾಗಿ ಸ್ತನಪಾನ ಮಾಡಿಸದಿರುವುದು, ವಿಳಂಬವಾಗಿ ಹಾಲುಣಿಸುವುದು, ಆಗಾಗ ಹಾಲುಣಿಸದಿರುವುದಂತೆ. ಹಾಲುಣಿಸುವ ತಾಯಂದಿರು ಸ್ತನದಲ್ಲಿ ಹಾಲು ತುಂಬಲು ಸಮಯ ನೀಡಬೇಕು ಎಂಬುದು ಸರಿಯಲ್ಲ. ಏಕೆಂದರೆ ಮಗು ಹಾಲುಕುಡಿಯುತ್ತಿದ್ದಂತೆಯೇ ಸ್ತನದಲ್ಲಿ ಹಾಲು ಉತ್ಪತ್ತಿಯಾಗುತ್ತಲೇ ಇರುತ್ತದೆ. ಹಾಗಾಗಿ ನಿರ್ದಿಷ್ಟ ಸಮಯವನ್ನು ಕಾಯುವ ಅಗತ್ಯವಿಲ್ಲ.

ಸ್ತನ್ಯಪಾನ ತಂತ್ರ ಬದಲಾಯಿಸಿಕೊಳ್ಳಬೇಕು

ಹಾಲುಣಿಸುವ ತಾಯಂದಿರು ಗ್ಯಾಸ್ಟಿಕ್ ಉಂಟಾಗುವಂತಹ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಮಗುವಿನ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ನಂಬಲಾಗುವುದಿಲ್ಲ. ಎದೆಹಾಲು ರಕ್ತದ ಹರಿವಿನಲ್ಲಿರುವ ಅಂಶಗಳಿಂದ ತಯಾರಾಗುತ್ತದೆ ಹೊರತು ಹೊಟ್ಟೆಯಲ್ಲಿರುವ ಪದಾರ್ಥಗಳಿಂದಲ್ಲ. ಆದ್ದರಿಂದ ಬಹುತೇಕ ಮಕ್ಕಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ತಾಯಿ ಆಹಾರ ಪದ್ಧತಿಯನ್ನು ತ್ಯಜಿಸುವುದಕ್ಕಿಂತ ಸ್ತನಪಾನ ತಂತ್ರವನ್ನು ಬದಲಾಯಿಸಿಕೊಳ್ಳುವುದು ಉತ್ತಮ.

Health tips What Are The Main Things Breastfeeding Moms Should Know

ಮಗುವಿಗೆ ಅತಿಸಾರ ಅಥವಾ ವಾಂತಿಯಾಗುತ್ತಿದ್ದರೆ ತಾಯಿ ಸ್ತನಪಾನ ನಿಲ್ಲಿಸುವ ಅಗತ್ಯವಿಲ್ಲ. ಮಗುವಿನ ಕರುಳು ಸೋಂಕಿಗೆ ಎದೆಹಾಲು ಅತ್ಯುತ್ತಮ ಆಹಾರ. ಸ್ವಲ್ಪ ಸಮಯದವರೆಗೂ ಇತರೆ ಗಟ್ಟಿ ಆಹಾರವನ್ನು ನಿಲ್ಲಿಸುವುದು ಒಳ್ಳೆಯದು. ಆದರೆ ಹಾಲುಕುಡಿಸುವುದನ್ನು ಮಾತ್ರ ನಿಲ್ಲಿಸದೆ ಮುಂದುವರೆಸಬೇಕು. ರಾತ್ರಿವೇಳೆ ಹಾಲುಣಿಸುವುದು ಮುಖ್ಯವಲ್ಲ ಎನ್ನುವವರಿದ್ದಾರೆ. ಆದರೆ ಇದು ತಪ್ಪು ಕಲ್ಪನೆ. ಏಕೆಂದರೆ ಹಾಲು ಉತ್ಪಾದನೆಗೆ ಕಾರಣವಾದ ಹಾರ್ಮೋನ್ಗಳು ರಾತ್ರಿ ವೇಳೆಯಲ್ಲಿ ಗರಿಷ್ಠ ಪ್ರಮಾಣದಲ್ಲಿರುತ್ತವೆ. ಇವುಗಳ ಉತ್ಪಾದನೆಗಾಗಿ ರಾತ್ರಿ ವೇಳೆ ಸ್ತನಪಾನ ಮಾಡಿಸುವುದು ಅಗತ್ಯ.

ಸಮಸ್ಯೆಗಳಿಗೆ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ

ಹಾಲುಣಿಸುವಾಗ ಸ್ತನಗಳನ್ನು ಬದಲಾಯಿಸಬೇಕು ಎಂಬುದಾಗಿ ಕೆಲವರು ಹೇಳುತ್ತಾರೆ. ಆದರೆ ಅದನ್ನು ಒಪ್ಪಲು ಸಾಧ್ಯವಿಲ್ಲ. ಏಕೆಂದರೆ ಶಿಶು ಮೊದಲನೆಯ ಸ್ತನವನ್ನು ಪೂರ್ಣಗೊಳಿಸಲು ಅವಕಾಶ ನೀಡಬೇಕು. ಹಾಲುಣಿಸುವಾಗ ಬರುವ ಮೊದಲ ಹಾಲನ್ನು ಎಂದು ಕರೆಯುತ್ತಾರೆ. ಇದು ನೀರಿನ ರೂಪದಲ್ಲಿದ್ದು, ಕೊಬ್ಬಿನ ಅಂಶ ಕಡಿಮೆ ಇರುತ್ತದೆಯಲ್ಲದೆ, ಮಗುವಿನ ದಾಹವನ್ನು ಕಡಿಮೆ ಮಾಡುತ್ತದೆ.

ಆ ನಂತರ ಬರುವ ಹಾಲು ಹೆಚ್ಚು ಕೊಬ್ಬಿನಾಂಶದಿಂದ ಕೂಡಿರುತ್ತದೆ. ಇದು ಮಗುವಿನ ಹಸಿವನ್ನು ಇಂಗಿಸುತ್ತದೆ. ದೇಹಕ್ಕೆ ಹೆಚ್ಚಿನ ಕ್ಯಾಲೋರಿಯನ್ನು ಒದಗಿಸುತ್ತದೆ. ಇದೆಲ್ಲಕ್ಕಿಂತ ಮಗುವಿಗೆ ಹಾಲುಣಿಸುವ ತಾಯಂದಿರು ಅವರಿವರು ಹೇಳುವ ಸಲಹೆಗಳನ್ನು ಕೇಳಿ ಸಮಸ್ಯೆಗಳನ್ನು ಸೃಷ್ಠಿಸಿಕೊಳ್ಳುವುದಕ್ಕಿಂತ ವೈದ್ಯರನ್ನು ಸಂಪರ್ಕಿಸಿ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದು ತಮ್ಮ ಮತ್ತು ಮಗುವಿನ ಆರೋಗ್ಯದ ದೃಷ್ಠಿಯಿಂದ ಒಳ್ಳೆಯದು ಎಂಬುವುದನ್ನು ಮರೆಯಬಾರದು. ಇನ್ನು ಹಾಲುಣಿಸುವ ತಾಯಂದಿರು ಕೂಡ ತಮ್ಮ ಆರೋಗ್ಯದ ಕಡೆಯೂ ಹೆಚ್ಚಿನ ನಿಗಾವಹಿಸುವುದು ಅಗತ್ಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+