Arthritis: ಸಂಧಿವಾತ ಕಾಡಲು ಕಾರಣಗಳೇನು? ಇದರ ನಿಯಂತ್ರಣ ಹೇಗೆ?

ವಾತಾವರಣ ಬದಲಾಗುತ್ತಿದ್ದಂತೆಯೇ ಹಲವು ರೀತಿಯ ಕಾಯಿಲೆಗಳು ಕಾಡುವುದು ಸಹಜ. ಕೆಲವು ಕಾಯಿಲೆಗಳು ಮನುಷ್ಯನಲ್ಲಿದ್ದರೂ ಅದು ವಾತಾವರಣಕ್ಕೆ ತಕ್ಕಂತೆ ಉಲ್ಭಣವಾಗುತ್ತವೆ. ಹೀಗಾಗಿ ಆಯಾಯ ಸಂದರ್ಭಕ್ಕೆ ತಕ್ಕಂತೆ ಉಲ್ಭಣವಾಗುವ ಕೆಲವು ಕಾಯಿಲೆಗಳ ಪೈಕಿ ಸಂಧಿವಾತವೂ ಒಂದಾಗಿದ್ದು, ಇದು ಚಳಿಗಾಲದಲ್ಲಿ ಜಾಸ್ತಿಯಾಗಿರುತ್ತದೆ. ಹೀಗಾಗಿ ಮುಂದೆ ಬರಲಿರುವ ಚಳಿಗಾಲಕ್ಕೆ ಸಂಧಿವಾತದಿಂದ ಬಳಲುವವರು ಈಗಿನಿಂದಲೇ ಎಚ್ಚರಿಕೆ ವಹಿಸುವುದು ಬಹು ಮುಖ್ಯವಾಗಿದೆ.

ಈ ಸಂಧಿವಾತ ಕಾಯಿಲೆ ಸಾಮಾನ್ಯವಾಗಿ ಮಹಿಳೆಯರಲ್ಲಿ ಹೆಚ್ಚಾಗಿ ಕಾಡುತ್ತದೆ. ಇನ್ನು ಶಿಸ್ತಿನ ಜೀವನ ಇಲ್ಲದ ಧೂಮಪಾನ ಮಾಡುವ ಗಂಡಸರಲ್ಲಿಯೂ ಹೆಚ್ಚಾಗಿ ಕಂಡು ಬರುತ್ತದೆ. ಸಂಧಿವಾತವನ್ನು ಶಾಶ್ವತವಾಗಿ ಗುಣಪಡಿಸಲಾಗದಿದ್ದರೂ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಿದರೆ ನಿಯಂತ್ರಿಸಬಹುದಾಗಿದೆ ಎನ್ನುತ್ತಾರೆ ಸಂಧಿವಾತ ಸಲಹಾ ತಜ್ಞೆ ಡಾ.ಕೆಎನ್ ಸಂಗೀತ. ಅವರು ನೀಡಿರುವ ಒಂದಷ್ಟು ಉಪಯುಕ್ತ ಮಾಹಿತಿ ಇಲ್ಲಿದೆ.

Health Tips What Are The Causes Of Arthritis

ಸಂಧಿವಾತ ಎನ್ನುವುದು ಕೀಲುಗಳ ಉರಿಯೂತವಾಗಿದೆ.

ಇದು ಬಾವು ಮತ್ತು ಗಡುಸಾಗುವಿಕೆಯಿಂದ ಕೂಡಿದ ಕೀಲು ನೋವಿನ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಇದನ್ನು ಆರಂಭದಿಂದಲೂ ನಿರ್ಲಕ್ಷಿಸದೆ ಬೇಗನೆ ಚಿಕಿತ್ಸೆ ನೀಡಿದರೆ ಉತ್ತಮ. ಇಲ್ಲದೆ ಹೋದರೆ ರೋಗಿಯನ್ನು ಇನ್ನಿಲ್ಲದಂತೆ ಕಾಡಬಹುದು. ಇಲ್ಲಿ ಮುಖ್ಯವಾದ ವಿಷಯ ಏನೆಂದರೆ ಸಂಧಿವಾತ ಪುರುಷರಿಗಿಂತ ಮಹಿಳೆಯರಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆಯಂತೆ.

ಹಲವು ವಿಧದಲ್ಲಿ ಕಾಡುವ ಸಂಧಿವಾತ

ಸಂಧಿವಾತವನ್ನು ಆರಂಭದಿಂದಲೇ ಪತ್ತೆ ಹಚ್ಚಿ ಚಿಕಿತ್ಸೆ ಪಡೆಯದೆ ಹೋದರೆ ಕೈ, ಪಾದ, ಮಣಿಕಟ್ಟು, ಭುಜಗಳು, ಮೊಣಕಾಲು ಮತ್ತು ಪಾದದ ಸಣ್ಣಕೀಲುಗಳಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಬೆನ್ನೆಲುಬುಗೂ ತೊಂದರೆಯಾಗುವ ಸಾಧ್ಯತೆಯೂ ಇದೆ. ಸಂಧಿವಾತಕ್ಕೆ ಧೂಮಪಾನ ಒಂದು ಪ್ರಮುಖ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ. ನಿತ್ಯದ ವ್ಯಾಯಾಮ, ನಡೆಯುವುದು, ದೇಹದ ತೂಕ ಇಳಿಸಿಕೊಳ್ಳುವುದರಿಂದ ಸಂಧಿವಾತದ ನೋವನ್ನು ಕಡಿಮೆ ಮಾಡಿಕೊಳ್ಳಬಹುದು.

Health Tips What Are The Causes Of Arthritis

ನೋವು, ಗಡುಸಾಗುವಿಕೆ, ಬಾವು, ಕೆಂಪಾಗುವುದು ಮತ್ತು ಚಲನೆಯ ವ್ಯಾಪ್ತಿ ಕಡಿಮೆಯಾಗುವುದು ಮೊದಲಾದ ಲಕ್ಷಣಗಳ ಮೂಲಕ ಯಾವ ವಿಧದ ಸಂಧಿವಾತ ಎಂಬುದನ್ನು ಹೇಳಬಹುದಾಗಿದೆ. ಹಲವು ರೀತಿಯ ಸಂಧಿವಾತಗಳಿದ್ದರೂ, ಎರಡು ಸಾಮಾನ್ಯ ರೂಪಗಳೆಂದರೆ ಅಸ್ಥಿ ಸಂಧಿವಾತ ಮತ್ತು ರ್ಯು ಮಟಾಯ್ಡ್ ಸಂಧಿವಾತಗಳು. ಇವು ಕೀಲುಗಳಿಗೆ ಬೇರೆ ಬೇರೆ ರೀತಿಯಲ್ಲಿ ಹಾನಿಯುಂಟು ಮಾಡಬಹುದು. ಗೌಟಿ ಸಂಧಿವಾತ, ಸೋರಿಯಾಟಿಕ್ ಸಂಧಿವಾತ, ಸ್ಪಾಂಡಿಲೊ ಸಂಧಿವಾತ, ಪ್ರತಿಕ್ರಿಯಾತ್ಮಕ ಸಂಧಿವಾತಗಳು ಕಾಣಿಸಿಕೊಳ್ಳುವುದು ಕಡಿಮೆ.

ಸೋಂಕುಗಳು ಸಂಧಿವಾತಕ್ಕೆ ಕಾರಣ

ಸೋಂಕು ಕೂಡ ಸಂಧಿವಾತಕ್ಕೆ ಕಾರಣವಾಗ ಬಹುದು, ಇದಕ್ಕೊಂದು ಉದಾಹರಣೆ ಎಂದರೆ ಚಿಕುನ್ ಗುನ್ಯಾ ಸಂಧಿವಾತವಾಗಿದೆ. ಅತ್ಯಂತ ಸಾಮಾನ್ಯವಾದ ಅಸ್ಥಿ ಸಂಧಿವಾತದಲ್ಲಿ ಕೀಲುಗಳ ಮೃದುವಾದ ಎಲುಬುಗಳಿಗೆ ಮತ್ತು ಕೀಲಾಗಿ ರೂಪುಗೊಳ್ಳುವ ಮೂಳೆಗಳ ತುದಿಯಲ್ಲಿ ದೃಢವಾದ, ನುಣುಪಾದ ಲೇಪನಕ್ಕೆ ಸಹಜ ಹಾನಿಯಾಗುತ್ತದೆ. ಮೃದುವಾದ ಎಲುಬುಗಳು ಮೂಳೆಗಳ ತುದಿಯನ್ನು ಮೆದುವಾಗಿಸುತ್ತವೆ ಮತ್ತು ಯಾವುದೇ ಘರ್ಷಣೆಯಿಲ್ಲದ ಕೀಲಿನ ಚಲನೆಗೆ ಅನುವು ಮಾಡಿಕೊಡುತ್ತವೆ.

ಮೂಳೆ ತಿರುಗುವುದರ ಪರಿಣಾಮವಾಗಿ ಹೆಚ್ಚಿನ ಹಾನಿಯಾಗಬಹುದು, ಇದರಿಂದ ನೋವಾಗುವುದರ ಜೊತೆಗೆ ಚಲನೆಗೆ ಅಡ್ಡಿಯಾಗಬಹುದು. ಈ ಸಹಜ ಹಾನಿ ಹಲವಾರು ವರ್ಷಗಳಲ್ಲಿ ಆಗಬಹುದು ಮತ್ತು ಇಡೀ ಕೀಲಿಗೆ ಹಾನಿಯಾಗಬಹುದು. ರ್ಯು ಮಟಾಯ್ಡ್ ಸಂಧಿವಾತದಲ್ಲಿ ಕೀಲಿನ ಕ್ಯಾಪ್ಸೂಲ್ ನ ಒಳಪದರದ ಮೇಲೆ ದೇಹದ ರೋಗ ನಿರೋಧಕ ಶಕ್ತಿ ದಾಳಿ ಮಾಡುತ್ತದೆ.

ಬಿಸಿನೀರ ಬಳಕೆಯಿಂದ ನೋವು ನಿವಾರಣೆ

ಈ ರೋಗ ಪ್ರಕ್ರಿಯೆ ನಿಧಾನವಾಗಿ ಮೃದು ಎಲುಬುಗಳನ್ನು ಮತ್ತು ನಿರ್ಧಿಷ್ಟ ಜಾಗದೊಳಗಿನ ಎಲುಬನ್ನು ನಾಶಪಡಿಸಬಹುದು. ಇದಕ್ಕೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡದೇ ಹೋದರೆ ಇದು ಶ್ವಾಸಕೋಶ, ನರಗಳು, ಚರ್ಮ, ಕಣ್ಣುಗಳನ್ನೂ ಕೂಡ ಬಾಧಿಸುವ ಸಾಧ್ಯತೆ ಹೆಚ್ಚಿರುತ್ತದೆ. ಶಿಸ್ತಿಯಿಲ್ಲದ ಜೀವನಶೈಲಿ, ಕುಟುಂಬದ ಹಿನ್ನೆಲೆ, ವಯಸ್ಸು, ಮಿತಿಮೀರಿ ಆಲ್ಕೋಹಾಲ್ ಸೇವಿಸುವುದು, ಹಳೆಯ ಕೀಲು ನೋವುಗಳು ಮತ್ತು ಬೊಜ್ಜು. ಗಂಭೀರವಾದ ಸಂಧಿವಾತಕ್ಕೆ ಕಾರಣವಾಗಬಹುದು.

ಇನ್ನು ಸಂಧಿವಾತ ಯಾವುದೇ ವಯಸ್ಸು, ಲಿಂಗ, ಜನಾಂಗ, ಅಥವಾ ಯಾವುದೇ ಸಾಮಾಜಿಕ-ಆರ್ಥಿಕ ಪರಿಸ್ಥಿತಿಯಲ್ಲೂ ಬರಬಹುದು. ಆದರೂ ಕೆಲವು ತರಹದ ಸಂಧಿವಾತಗಳು ಸಾಮಾಜಿಕ- ಆರ್ಥಿಕವಾಗಿ ಮೇಲಿನ ಸ್ಥಾನದಲ್ಲಿರುವವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಒಟ್ಟಾರೆ, ಸಂಧಿವಾತ ಹೆಂಗಸರಲ್ಲಿ ಸಾಮಾನ್ಯವಾಗಿದೆ. ಮುಂಜಾನೆ ಮತ್ತು ಚಳಿಗಾಲದಲ್ಲಿ ಸಂಧಿವಾತದ ನೋವು ತೀವ್ರವಾಗಿರುತ್ತದೆ. ಹೀಗಾಗಿ, ಬಿಸಿನೀರಿನ ಶಾಖ, ಬಿಸಿನೀರಲ್ಲಿ ಕೈ ಅಥವಾ ಕಾಲನ್ನು ಮುಳುಗಿಸುವುದು, ಬಿಸಿ ನೀರಸ್ನಾನ ಮಾಡುವುದು ಒಳ್ಳೆಯದು.

ಆರಂಭದಲ್ಲಿಯೇ ಚಿಕಿತ್ಸೆ ಪಡೆಯುವುದು ಸೂಕ್ತ

ತೀವ್ರವಾದ ಸಂಧಿವಾತದಲ್ಲಿ ಕೀಲುಗಳು ಬೆಚ್ಚಗಿದ್ದರೆ ಕೋಲ್ಡ್ ಪ್ಯಾಕ್ ಮಾಡಬಹುದಾಗಿದೆ. ವ್ಯಾಯಾಮ ಒಳ್ಳೆಯದಾದರೂ ನೋವು ತೀವ್ರವಿದ್ದಾಗ ಮಾಡುವುದು ಒಳ್ಳೆಯದಲ್ಲ. ಹಲವು ಕೀಲುಗಳಲ್ಲಿ ನೋವಿದ್ದಾಗ ಫಿಸಿಯೋಥೆರಪಿಯಲ್ಲಿ ಸೂಚಿಸುವ ವ್ಯಾಕ್ಸ್ ಬಾತ್ ನೆರವಿಗೆ ಬರಬಹುದು. ಒಟ್ಟಾರೆಯಾಗಿ ಹೇಳಬೇಕೆಂದರೆ ಸಂಧಿವಾತ ಕಾಣಿಸಿಕೊಂಡ ಆರಂಭದಲ್ಲಿಯೇ ತಜ್ಞವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಮತ್ತು ವೈದ್ಯರು ಹೇಳಿದ ಕ್ರಮಗಳನ್ನು ತಮ್ಮ ನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+