ಆರೋಗ್ಯದ ಮೇಲೆ ಪರಿಣಾಮ ಬೀರುವ ‘ಪ್ಲೂ’ನ್ನು ತಡೆಯುವುದು ಹೇಗೆ?

ಹವಾಮಾನ ಬದಲಾದಾಗಲೆಲ್ಲ ನಮ್ಮ ದೇಹದ ಮೇಲೆ ಏನಾದರೊಂದು ಪರಿಣಾಮ ಬೀರುತ್ತಲೇ ಇರುತ್ತದೆ. ಇದೀಗ ರಣ ಬಿಸಿಲು ಬಾಧಿಸಲಾರಂಭಿಸಿದ್ದು, ಹಲವು ಸಾಂಕ್ರಾಮಿಕ ರೋಗಗಳನ್ನು ಎಳೆದು ತಂದರೂ ಅಚ್ಚರಿಯಿಲ್ಲ. ಬೇಸಿಗೆಯಲ್ಲಿ ವಿವಿಧ ಕಾಯಿಲೆಗಳು ಕಾಡುವುದು ಸಾಮಾನ್ಯ. ಹೀಗಾಗಿ ಆರೋಗ್ಯದತ್ತ ಹೆಚ್ಚಿನ ಆದ್ಯತೆಯನ್ನು ನೀಡಬೇಕಾಗುತ್ತದೆ. ಅದರಲ್ಲೂ ಇದೀಗ ಪ್ಲೂ ಕಾಡಲಾರಂಭಿಸಿದ್ದು ಆತಂಕಕ್ಕೀಡು ಮಾಡುತ್ತಿದೆ. ಮೇಲ್ನೋಟಕ್ಕೆ ಇದು ಶೀತದಂತೆ ಕಂಡು ಬಂದರೂ ಇದಕ್ಕೆ ಚಿಕಿತ್ಸೆ ಪಡೆಯದೆ ಹೋದರೆ ಆರೋಗ್ಯದ ಮೇಲೆ ಕಿರಿಕಿರಿ ಮಾಡುವುದಲ್ಲದೆ, ದೈನಂದಿನ ಜೀವನ ಮತ್ತು ಕೆಲಸ ಕಾರ್ಯಕ್ಕೆ ಅಡ್ಡಿ ಮಾಡುವುದರಲ್ಲಿ ಎರಡು ಮಾತಿಲ್ಲ.

ಇನ್ನು ಈ ಪ್ಲೂ ಬಗ್ಗೆ ಹೆಚ್ಚಿನವರಿಗೆ ಗೊತ್ತೇ ಇಲ್ಲ ಎನ್ನಬಹುದು. ಅಯ್ಯೋ ಶೀತ ತಾನೆ ಏನೂ ಆಗಲ್ಲ ಎಂಬ ನಿರ್ಲಕ್ಷ್ಯದಿಂದ ಬಾಧಿತ ವ್ಯಕ್ತಿ ತನ್ನ ದೈನಂದಿನ ಕೆಲಸ ಕಾರ್ಯಗಳಿಗೆ ಹೋಗುತ್ತಿರುತ್ತಾನೆ. ಆದರೆ ಆತನಿಂದ ಸುತ್ತಮುತ್ತ ಕೆಲಸ ಮಾಡುವವರಿಗೆ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಪ್ಲೂ ಕಾಣಿಸಿಕೊಂಡ ತಕ್ಷಣ ವೈದ್ಯರಿಗೆ ತೋರಿಸಿ ಲಸಿಕೆ ಪಡೆದುಕೊಂಡರೆ ಒಳ್ಳೆಯದು ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.

Health Tips Preventing Flu and Other Infectious Diseases This Summer

ಈ ಬಗ್ಗೆ ಸ್ವಲ್ಪ ಎಚ್ಚರ ವಹಿಸಿದರೆ ಅದರಿಂದ ದೂರವಿರಲು ಸಾಧ್ಯವಾಗಲಿದೆ. ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದಾದ ಪ್ಲೂ ಬಗ್ಗೆ ತಜ್ಞರು ಏನು ಹೇಳುತ್ತಾರೆ ಎಂಬುದನ್ನು ನೋಡಿದ್ದೇ ಆದರೆ ಅಬಾಟ್ ಇಂಡಿಯಾದ ವೈದ್ಯಕೀಯ ನಿರ್ದೇಶಕ ಡಾ. ಜೆಜೊ ಕರಂಕುಮಾರ್ ಹೇಳುವ ಪ್ರಕಾರ 'ಫ್ಲೂ' ನಾವು ಮಾಡುವ ಕೆಲಸದ ಮೇಲೆ ಮೊದಲ ಪರಿಣಾಮ ಬೀರುವ ಮೂಲಕ. ಉತ್ಪಾದಕತೆಗೆ ತೊಡಕುಂಟು ಮಾಡುತ್ತದೆಯಂತೆ.

ಭಾರತದಲ್ಲಿ ಈಗಾಗಲೇ ಸಾಂಕ್ರಾಮಿಕ ರೋಗಗಳಿಂದ ಹಲವು ರೀತಿಯ ಸಂಕಷ್ಟವನ್ನು ಎದುರಿಸಿ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದೇವೆ ಹೀಗಿರುವಾಗ ಈಗ ಕಾಣಿಸಿಕೊಳ್ಳುತ್ತಿರುವ ಪ್ಲೂ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಜತೆಗೆ ಲಸಿಕೆ ಪಡೆಯುವುದರ ಮೂಲಕ ಇತಿಶ್ರೀ ಹಾಡುವ ಅಗತ್ಯತೆಯನ್ನು ವ್ಯಕ್ತಪಡಿಸುತ್ತಾರೆ. ಅಲ್ಲದೆ, ಭಾರತದಲ್ಲಿ ಫ್ಲೂ ಲಸಿಕೆಯ ಸ್ವೀಕಾರತೆ ಇನ್ನೂ ಆರಂಭಿಕ ಹಂತದಲ್ಲಿದೆ. ಈ ನಿಟ್ಟಿನಲ್ಲಿ ಜಾಗೃತಿ ಹೆಚ್ಚಬೇಕಿದೆ. ಜನರು ಈ ಕುರಿತು ಹೆಚ್ಚಿನ ಅರಿವು ಪಡೆದುಕೊಳ್ಳುವುದರಿಂದ ಫ್ಲೂನಿಂದ ರಕ್ಷಣೆ ಪಡೆಯಬಹುದು ಎಂದು ಹೇಳಿದ್ದಾರೆ.

Health Tips Preventing Flu and Other Infectious Diseases This Summer

ಪ್ಲೂ ಕುರಿತಂತೆ ತಜ್ಞ ವೈದ್ಯರು ಹೇಳುವುದೇನು?

ಫ್ಲೂಗೆ ಲಸಿಕೆ ಪಡೆಯುವುದು ನಿಮ್ಮನ್ನು ರಕ್ಷಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮುಖ್ಯವಾಗಿದೆ ಎಂದು ಬೆಂಗಳೂರಿನ ಅಪೋಲೊ ಸ್ಪೆಶಾಲಿಟಿ ಆಸ್ಪತ್ರೆಯ ಇಂಟರ್‌ವೆನ್ಷನಲ್ ಪಲ್ಮನಾಲಜಿ ಮತ್ತು ಕ್ರಿಟಿಕಲ್ ಕೇರ್ ಮೆಡಿಸಿನ್‌ ವಿಭಾಗದ ಹೆಚ್‌ಓಡಿ ಡಾ. ರವೀಂದ್ರ ಮೆಹ್ತಾ ಹೇಳಿದ್ದಾರೆ. ಅಲ್ಲದೆ ಫ್ಲೂಗೆ ಲಸಿಕೆ ಸುರಕ್ಷಿತವಾಗಿದೆ, ಪರಿಣಾಮಕಾರಿಯಾಗಿದೆ. ವಿಶೇಷವಾಗಿ ಪ್ರತೀ ವರ್ಷವೂ ಆಯಾ ವರ್ಷದ ವೈರಸ್ ತಳಿಗಳಿಗೆ ಹೊಂದಿಕೊಳ್ಳುವಂತೆ ನವೀಕರಿಸಲ್ಪಡುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಫ್ಲೂ ವೈರಸ್‌ಗಳ ಮೇಲೆ ಹೆಚ್ಚು ನಿಗಾ ಇಡುತ್ತದೆ ಮತ್ತು ಇನ್ಫ್ಲುಯೆಂಜಾ ಸೀಸನ್ ಗೆ ತಕ್ಕಂತೆ ವರ್ಷಕ್ಕೆ ಎರಡು ಬಾರಿ ಲಸಿಕೆಯನ್ನು ನವೀಕರಿಸುತ್ತದೆ.

ವರ್ಷಕ್ಕೊಮ್ಮೆ ಒಂದು ಶಾಟ್ ಲಸಿಕೆ ತೆಗೆದುಕೊಳ್ಳುವುದರಿಂದ ಫ್ಲೂನ ತೀವ್ರತೆಯನ್ನು ಗಣನೀಯವಾಗಿ ಕಡಿಮೆ ಮಾಡಬಹುದಾಗಿದೆ ಮತ್ತು ನ್ಯುಮೋನಿಯಾದಂತಹ ಗಂಭೀರ ಸಮಸ್ಯೆ ಉಂಟಾಗುವುದನ್ನು ತಡೆಯಬಹುದು. ಲಸಿಕೆ ಪಡೆಯುವ ಮೂಲಕ, ನೀವು ನಿಮ್ಮನ್ನು ಮಾತ್ರವಲ್ಲದೆ ನಿಮ್ಮ ಸುತ್ತಲಿನವರೂ ಸುರಕ್ಷಿತವಾಗಿರಲು ಸಹಾಯ ಮಾಡುತ್ತೀರಿ ಎಂಬ ಅಭಿಪ್ರಾಯವನ್ನು ಹೊರಹಾಕಿದ್ದಾರೆ. ಭಾರತದಲ್ಲಿ ಸಬ್‌ಟೈಪ್ ಎ(ಎಚ್1ಎನ್1) ಮತ್ತು ಎ(ಎಚ್3ಎನ್2) ಲಭ್ಯವಿರುವುದಾಗಿ ತಿಳಿಸಿದ್ದಾರೆ. ಲಸಿಕೆ ಪಡೆಯುವುದು ನಂತರದ ವಿಚಾರ. ಆದರೆ ಅದಕ್ಕೂ ಮುನ್ನ ಪ್ಲೂ ನಮ್ಮನ್ನು ಕಾಡದಂತೆ ಎಚ್ಚರ ವಹಿಸುವುದು ಬಹುಮುಖ್ಯವಾಗಿದೆ.

ಪ್ಲೂ ಬಾರದಂತೆ ತಡೆಯಲು ಏನು ಮಾಡಬೇಕು?

ಹಾಗಾದರೆ ಪ್ಲೂ ನಮ್ಮನ್ನು ಬಾಧಿಸದಂತೆ ಯಾವ ಕ್ರಮ ಕೈಗೊಳ್ಳಬೇಕು ಎಂಬುದನ್ನು ನೋಡಿದ್ದೇ ಆದರೆ, ಕೆಲಸದ ಸ್ಥಳದಲ್ಲಿ ಸುರಕ್ಷಿತವಾಗಿರಲು, ನಿಯಮಿತವಾಗಿ ಕೈ ತೊಳೆಯುತ್ತಿರಬೇಕು ಮತ್ತು ಕೆಮ್ಮುವಾಗ ಅಥವಾ ಸೀನುವಾಗ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳುವ ಅಭ್ಯಾಸ ಮಾಡಬೇಕು. ಒಂದು ವೇಳೆ ಅನಾರೋಗ್ಯ ಪೀಡಿತರಾಗಿದ್ದರೆ ಫ್ಲೂ ಹರಡದಂತೆ ತಡೆಯಲು ಮನೆಯಲ್ಲಿಯೇ ಇರುವುದು ಒಳ್ಳೆಯದು. ಕೆಲಸದ ಸ್ಥಳಗಳಲ್ಲಿ ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದು ಮತ್ತು ಪ್ರತೀ ವರ್ಷ ಲಸಿಕೆ ಪಡೆಯುವುದು ಸೂಕ್ತವಾಗಿದೆ.

ಪ್ಲೂಗೆ ಪ್ರತೀ ವರ್ಷ ಪ್ರಪಂಚದಾದ್ಯಂತ ಕೋಟ್ಯಂತರ ಜನರು ಒಳಗಾಗುತ್ತಾರೆ. ಪ್ರತೀ ವರ್ಷ 100 ಕೋಟಿಗಿಂತಲೂ ಹೆಚ್ಚು ಫ್ಲೂ ಪ್ರಕರಣ ಕಾಣಿಸಿಕೊಳ್ಳುವುದರೊಂದಿಗೆ 3 ರಿಂದ 5 ಮಿಲಿಯನ್ ಮಂದಿ ಗಂಭೀರ ಪರಿಸ್ಥಿತಿ ಎದುರಿಸುತ್ತಾರಂತೆ ಸಾಮಾನ್ಯವಾಗಿ ಫ್ಲೂ ಅನ್ನು ಶೀತ ಎಂದು ಭಾವಿಸಲಾಗುತ್ತದೆ. ಆದರೆ ಅದು ಫ್ಲೂ ಆಗಿದ್ದು ಒಬ್ಬರಿಂದ ಮತ್ತೊಬ್ಬರಿಗೆ ಬಹುಬೇಗ ಹರಡುವುದರೊಂದಿಗೆ ದೈನಂದಿನ ಜೀವನ ಮತ್ತು ಕೆಲಸ ಕಾರ್ಯನ್ನು ಅಡ್ಡಿಪಡಿಸುತ್ತದೆ. ಹೀಗಾಗಿ ಅದರ ಬಗ್ಗೆ ಎಚ್ಚೆತ್ತುಕೊಂಡು ಸೂಕ್ತ ಚಿಕಿತ್ಸೆ ಪಡೆಯುವುದು ಒಳ್ಳೆಯದು. ಹಾಗೆಯೇ ಅದು ಬರದಂತೆ ಎಚ್ಚರ ವಹಿಸುವುದು ಕೂಡ ಅಗತ್ಯವೇ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+