Get Updates
Get notified of breaking news, exclusive insights, and must-see stories!

Lip Kiss Benefits: ಈ ಕಿಸ್‌ (ಚುಂಬನ)ನಿಂದ ಏನೆಲ್ಲಾ ಹಿತಕರ ಪ್ರಯೋಜನೆಗಳಿವೆ ಗೊತ್ತಾ? ಇಲ್ಲಿದೆ ಇಂಚಿಂಚು ಮಾಹಿತಿ

Lip Kiss Benefits: 'ಕಿಸ್‌' ಪದ ಕೇಳಿದರೆ ಸಾಕು ತುಂಬಾ ಜನ ಹಿಂಜರಿಕೆ ಪಟ್ಟುಕೊಳ್ಳುತ್ತಿದ್ದಾರೆ. ಇನ್ನೂ ಕೆಲಸವರು ಕೆಟ್ಟದಾಗಿ ಬಿಂಬಿಸುತ್ತಾರೆ. ಆದರೆ, ಇದರಿಂದ ತುಂಬಾ ಪ್ರಯೋಜನೆಗಳಿವೆ ಎಂದು ಹೇಳುತ್ತಾರೆ ತಜ್ಞರು. ಹಾಗಾದ್ರೆ, ಯಾವೆಲ್ಲಾ ಪ್ರಯೋಜನೆಗಳಿವೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಸಾಮಾನ್ಯವಾಗಿ ಈ ಕಿಸ್‌ ಎಂಬ ಶಬ್ಧ ಕೇಳಿದರೆ ಸಾಕು ಕೆಲವರು ಈ ಕೆಲಸ ಮಾಡಿದ್ದರೂ ಸಹ ತಾವೇನು ಮಾಡಿಲ್ಲವೆಂಬಂತೆ ನಾಚಿ ನೀರಾಗುತ್ತಾರೆ. ತಜ್ಞರು ಪ್ರಕಾರ, ಚುಂಬನದಿಂದ ತುಂಬಾ ಆರೋಗ್ಯಕರ ಪ್ರಯೋಜನಗಳಿವೆ. ಹಾಗಾದ್ರೆ ಯಾವೆಲ್ಲಾ ಪ್ರಯೋಜನಗಳಿವೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ಇಲ್ಲಿದೆ ನೋಡಿ.

Health and Emotional Benefits of Lip Kiss What Experts Say

ಕಾಲ ಬದಲಾದಂತೆಲ್ಲ ಜನರು ಸಹ ಆ ಬದಲಾವಣಿಗೆ ತಕ್ಕಂತೆ ತಮ್ಮನ್ನು ತಾವು ಹೊಂದಿಕೊಳ್ಳುತ್ತಾ ಹೋಗುತ್ತಿದ್ದಾರೆ. ಜೀವನದಲ್ಲಿ ಪ್ರೀತಿ ತುಂಬಾ ಮುಖ್ಯವಾಗಿದೆ. ಇದನ್ನು ವ್ಯಕ್ತಪಡಿಸಲು ಸುಮಾರು ದಾರಿಗಳಿವೆ. ಅದರಲ್ಲೂ ಚುಂಬನವು ಅತ್ಯಂತ ಪ್ರಮುಖ ಆದದ್ದಾಗಿದ್ದು, ಇದು ಪರಿಣಿತ ವೈದ್ಯರ ಪ್ರಕಾರ, ದಂತಪತಿಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ತುಂಬಾ ಉಪಯುಕ್ತ ಮಾರ್ಗವಾಗಿದೆ.

ಚುಂಬನ ಅಂದ್ರ ಸಾಕು ಬಹುತೇಕ ಮಂದಿ ತಪ್ಪಾಗಿ ಪರಿಗಣಿಸುತ್ತಾರೆ. ಹಾಗೂ ಬೇರೆ ಬೇರೆ ಕೆಟ್ಟ ಅರ್ಥಗಳನ್ನು ಕೊಡುವವರೂ ಇದ್ದಾರೆ. ಆದರೆ, ಇದರಿಂದ ಏನೆಲ್ಲಾ ಪ್ರಯೋಜನೆಗಳಿವೆ ಎಂದು ನೀವು ತಿಳಿಯಲೇಬೇಕಾದ ಪ್ರಮುಖ ಅಂಶಗಳು ಇಲ್ಲಿವೆ ನೋಡಿ.

ಇಲ್ಲಿದೆ ಪ್ರಯೋಜನಗಳ ಪಟ್ಟಿ

* ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ
* ತಲೆನೋವು ನಿವಾರಣೆ
* ಹೆಚ್ಚು ಲಾಲಾರಸ ಉತ್ಪತ್ತಿಗೆ ಸಹಕಾರಿ
* ಒತ್ತಡ ನಿವಾರಣೆ ಮಾಡುತ್ತದೆ
* ಪ್ರೀತಿ ಪಾತ್ರರ ಜೊತೆಗಿನ ಉತ್ತಮ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ
* ಸೌಂದರ್ಯ ಕಾಪಾಡಲು ಸಹಕಾರಿ

* ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ: ಮನಸ್ಸು ಒತ್ತಡದಲ್ಲಿರುವಂತಹ ಸಂದರ್ಭದಲ್ಲಿ ನಿಮ್ಮ ಪ್ರೀತಿ ಪಾತ್ರರೊಂದಿಗೆ (ಪ್ರಿಯಕರ, ಪ್ರೇಯಸ್ಸಿ, ದಂಪತಿ) ಚುಂಬನ ಮಾಡುವುದು ಉತ್ತಮ. ಇದರಿಂದ ನಿಮ್ಮ ಹೃದಯ ಬಡಿತವನ್ನು ಆರೋಗ್ಯಕರ ರೀತಿಯಲ್ಲಿ ಕಾಪಾಡಿಕೊಳ್ಳಬಹುದು. ಅಲ್ಲದೆ, ನಿಮ್ಮ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ನಿಮ್ಮ ರಕ್ತನಾಳಗಳನ್ನು ಹಿಗ್ಗಿಸುತ್ತದೆ. ಆಗ ರಕ್ತವು ನಿಮ್ಮ ಎಲ್ಲಾ ಪ್ರಮುಖ ಅಂಗಗಳಿಗೆ ತಲುಪುತ್ತದೆ ಎಂದು ಎಂದು ವರದಿಗಳಿ ಹೇಳುತ್ತವೆ.

* ತಲೆನೋವು ನಿವಾರಣೆ: ನಿಮಗೆ ತಲೆನೋವು ಅಥವಾ ಮುಟ್ಟಿನ ಸೆಳೆತ ಇದ್ದರೆ ಚುಂಬನವು ಅದ್ಭುತವಾದ ಮಾರ್ಗವಾಗಿದೆ. ಇದರಿಂದ ಉಂಟಾಗುವ ರಕ್ತನಾಳದ ವಿಸ್ತರಣೆಯು ನಿಜವಾಗಿಯೂ ನಿಮ್ಮ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಅಂತಲೂ ವರದಿಗಳು ಹೇಳುತ್ತವೆ.

* ಹೆಚ್ಚು ಲಾಲಾರಸ ಉತ್ಪತ್ತಿಗೆ ಸಹಕಾರಿ: ಚುಂಬನದ ಸಂದರ್ಭದಲ್ಲಿ ನಿಮ್ಮ ಬಾಯಿಯಲ್ಲಿ ಹೆಚ್ಚು ಲಾಲಾರಸ ಉದ್ಪತ್ತಿ ಆಗುತ್ತದೆ. ಇದರಿಂದ ನಿಮ್ಮ ಆರೋಗ್ಯಕ್ಕೆ ತುಂಬಾ ಸಹಕಾರಿ ಆಗಲಿದೆ. ಇದು ನಿಮ್ಮ ಹಲ್ಲುಗಳ ಮೇಲಿನ ಇರು ಆಹಾರ ಪದಾರ್ಥಗಳ ಅಂಶಗಳು ತೊಲಗಲು ಸಹಾಯ ಮಾಡುತ್ತದೆ. ಇದರಿಂದ ನೀವು ಬಾಯಲ್ಲಿ ನೀರು ಹಾಕಿ ಗ್ಲಾಂರ್ಗಿಂಗ್‌ ಮಾಡುವುದು ಸಹ ತಪ್ಪಿದಂತಾಗಲಿದ್ದು, ಲಾಲಾರಸವು ಉಳಿತಾಯ ಆದಂತಾಗುತ್ತದೆ ಎಂದು ವರದಿಗಳಿಂದ ತಿಳಿದುಬಂದಿದೆ.

* ಒತ್ತಡ ತಪ್ಪಿಸುತ್ತದೆ: ಕಚೇರಿ ಕೆಲಸ ಅಥವಾ ಇನ್ನಿತರೆ ಒತ್ತಡಕ್ಕೊಳಗಾಗುತ್ತಿದ್ದರೆ, ನಿಮಗೆ ಸ್ವಲ್ಪ ಸಮಯಗಳ ಕಾಲ ನಿಮ್ಮ ಪ್ರೀತಿ ಪಾತ್ರರೊಂದಿಗೆ ಅಂದರೆ (ಪ್ರೇಯಸಿ, ಪ್ರಿಯಕರ, ದಂಪತಿ) ಜೊತೆಗೆ ಕಾಲ ಕಳೆಯುವುದು ಉತ್ತಮ. ಈ ವೇಳೆ ಚುಂಬಿಸುವುದು ಕೂಡ ಒತ್ತಡ ನಿವಾರಣೆ ಮಾಡಬಲ್ಲದು. ಇದರಿಂದ ಮೆದುಳಿನ ಮೇಲೆ ಬೀರುವ ಒತ್ತಡದ ಪ್ರಭಾವವನ್ನು ತಪ್ಪಿಸುತ್ತದೆ ಅಂತಲೂ ಡೆಮಿರ್ಜಿಯನ್ ಈ ಹಿಂದೆ ಈಗಾಗಲೇ ಹೇಳಿದ್ದಾರೆ.

* ಸೌಂದರ್ಯ ಕಾಪಾಡಲು ಸಹಕಾರಿ: ಚುಂಬನವು ಕುತ್ತಿಗೆ ಮತ್ತು ದವಡೆಯ ಭಾಗವನ್ನು ಸೌಂದರ್ಯವಾಗಿ ಇಡಲು ಸಹಾಯ ಮಾಡುತ್ತದೆ. ಇದು ವಯಸ್ಸಾದವರಂತೆ ಕಾಣುವವರಿಗೆ ಉತ್ತಮ ಮಾರ್ಗ. ಅಲ್ಲದೆ, ನಿಮ್ಮ ಬಾಯಿಯು ಹಲವಾರು ಮುಖದ ಸ್ನಾಯುಗಳನ್ನು ಹೊಂದಿದೆ. ಚುಂಬನದಲ್ಲಿ ತೊಡಗಿಸಿಕೊಂಡಾಗ, ನೀವು ಅವುಗಳನ್ನು ಬಿಗಿಗೊಳಿಸಬಹುದು ಎಂದು ಅಂತಲೂ ತಿಳಿಸಿದ್ದಾರೆ.

* ಉತ್ತಮ ಹೊಂದಾಣಿಕೆಗೆ ಮಾರ್ಗ: ಬೆತ್ತಲೆ ಮತ್ತು ಭಾವನಾತ್ಮಕವಾಗಿ ತೊಡಗಿಸಿಕೊಳ್ಳುವ ಮೊದಲು ಲೈಂಗಿಕ ಹೊಂದಾಣಿಕೆಗಾಗಿ ಸಂಭಾವ್ಯ ಲೈಫ್‌ ಪಾರ್ಟ್ನರ್‌ ಆಗುವವರನ್ನು ಪರೀಕ್ಷಿಸಲು ಇದು ಅತ್ಯುತ್ತಮ ಮಾರ್ಗವಾಗಿದೆ ಅಂತಲೂ ಹೇಳಿದ್ದಾರೆ. ಆದರೆ ನಿಮ್ಮ ಮೊದಲ ಬಾರಿ ಲಿಪ್‌ಲಾಕ್ ಉತ್ತಮ ಎನಿಸಿದರೆ ಮಾತ್ರ ನಿಮ್ಮ ನಡುವಿನ ಬಾಂದವ್ಯ ಉತ್ತಮವಾಗಿದೆ ಹಾಗೂ ಇವರೇ ಸರಿಯಾದ ಜೋಡಿ ಎನ್ನುವ ಸಂಕೇತವನ್ನು ಸೂಚಿಸುತ್ತದೆ ಅಂತಲೂ ತಿಳಿಸಿದ್ದಾರೆ. ಕೆಲವೊಮ್ಮೆ ಕೆಲವರು ಮೊದಲ ಚುಂಬನದ ವೇಳೆ ಮುಜುಗರಕ್ಕೆ ಳಗಾಗುತ್ತಾರೆ ಎಂದೂ ಹೇಳಿದ್ದಾರೆ.

ಒಟ್ಟನಲ್ಲಿ ಹೇಳುವುದಾದರೆ, ಒಂದು ಚುಂಬನದಿಂದ ಪ್ರೀತಿ (ಪ್ರೇಯಸಿ, ಪ್ರಿಯಕರ, ದಂಪತಿ) ಪಾತ್ರರೊಂದಿಗೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಳ್ಳಬಹುದು. ಅದರಲ್ಲೂ ಅಣೆಗೆ ಮುತ್ತಿಡುವುದು ಕೂಡ ನಿಮ್ಮ ಬಾಂಧವ್ಯವವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಹೀಗೆ ಚುಂಬನವು ವಿವಿಧ ಪ್ರಯೋಜನಗಳನ್ನು ನೀಡುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+