Hair Tips: ಕೂದಲು ಆಕರ್ಷಕವಾಗಿ ಕಾಣಲು ಒಂದು ಸಿಂಪಲ್ ಮನೆ ಮದ್ದು
ಕೂದಲು ದಟ್ಟವಾಗಿ ಆಕರ್ಷಕವಾಗಿ ಇರಬೇಕು ಅನ್ನೋದು ಪ್ರತಿಯೊಬ್ಬರ ಆಸೆ. ಇದಕ್ಕಾಗಿ ಹಲವಾರು ಬಗೆಯ ಶಾಂಪೂ, ಕಂಡೀಷನರ್, ಬಗೆ ಬಗೆಯ ಎಣ್ಣೆ, ಅತಿಯಾದ ರಾಸಾಯಾನಿಕಗಳನ್ನು ಬಳಕೆ ಮಾಡುತ್ತಾರೆ ಜನ. ಆದರೆ ಇದರಿಂದ ಕೂದಲಿನ ಸಮಸ್ಯೆಗಳು ಕಡಿಮೆಯಾಗುವುದಕ್ಕಿಂತ ಹೆಚ್ಚಾಗುವುದೇ ಹೆಚ್ಚು. ಹೀಗೆ ಕೂದಲು ಉದುರುವುದು, ತಲೆ ಹೊಟ್ಟು, ಬಿಳಿ ಕೂದಲು ಇನ್ನಿತರ ಸಮಸ್ಯೆಗಳನ್ನು ಎದುರಿಸುವವವರೂ ಸರಳವಾಗಿ ಮನೆಯಲ್ಲೇ ಪರಿಹಾರ ಕಂಡುಕೊಳ್ಳಬಹುದು. ಅದಕ್ಕಾಗಿ ಒಂದು ಸಿಂಪಲ್ ಮನೆ ಮದ್ದು ಇಲ್ಲಿದೆ.
ಸಾಮಾನ್ಯವಾಗಿ ಕೂದಲಿನ ಸಮಸ್ಯೆಗಳಿಗೆ ಹಲವಾರು ಕಾರಣಗಳಿರುತ್ತವೆ. ಆ ಕಾರಣ ಗುರುತಿಸಿ ಪರಿಹಾರ ಕಂಡುಹಿಡಿಯಬೇಕು. ಇದಕ್ಕಾಗಿ ಕೆಲ ಸಲಹೆಯನ್ನು ನಾವು ನಿಮಗೆ ನೀಡುತ್ತೇವೆ. ಇದರಿಂದ ನಿಮ್ಮ ಎಲ್ಲಾ ಕೂದಲಿನ ಸಮಸ್ಯೆಗಳು ದೂರವಾಗುತ್ತವೆ. ಹಾಗಾದರೆ ಮನೆಯಲ್ಲಿ ಕೂದಲಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಏನು ಮಾಡಬೇಕು?

ಕೂದಲಿನ ಆರೈಕೆಗೆ ಕೊಬ್ಬರಿ ಎಣ್ಣೆ ತುಂಬಾ ಪ್ರಮುಖ ಪಾತ್ರವಹಿಸುತ್ತದೆ. ಇದರೊಂದಿಗೆ ಕೆಲ ಪದಾರ್ಥಗಳನ್ನು ಬಳಸುವ ಮೂಲಕ ತುಂಬಾ ಸುಲಭವಾಗಿ ಕೂದಲು ಉದುರುವಿಕೆ, ತುಂಡಾಗುವುದು ಮತ್ತು ತಲೆಹೊಟ್ಟನ್ನು ನಿವಾರಣೆ ಮಾಡಬಹುದು. ಆದರೆ ಮನೆ ಮದ್ದನ್ನು ಬಳಕೆ ಮಾಡಲು ತುಂಬಾ ತಾಳ್ಮೆ ಅಗತ್ಯ. ತಕ್ಷಣಕ್ಕೆ ಇದು ಫಲಿತಾಂಶವನ್ನು ನೀಡುವುದಿಲ್ಲ. ಕೆಲ ವಾರಗಳ ಕಾಲ ಬಳಸಿದರೆ ಮಾತ್ರ ಫಲಿತಾಂಶ ಖಚಿತ. ಅದು ಕೂಡ ಶಾಶ್ವತವಾದ ಪರಿಹಾರ ಸಿಗಲಿದೆ. ಹಾಗಾದರೆ ಕೊಬ್ಬರಿ ಎಣ್ಣೆಯೊಂದಿಗೆ ಯಾವ ಪದಾರ್ಥಗಳನ್ನು ಬಳಸಿ ಹೇಗೆ ಕೂದಲಿಗೆ ಅನ್ವಯಿಸಬೇಕು ಎಂದು ತಿಳಿಯೋಣ.
ಒಂದು ಬಟ್ಟಲು ಕೊಬ್ಬರಿ ಎಣ್ಣೆಗೆ ಒಂದು ಹಿಡಿ ಕರಿಬೇವನ್ನು ಹಾಕಿ, ಒಂದು ಟೇಬಲ್ ಸ್ಟೋನ್ ಮೆಂತೆಯನ್ನು ಹಾಕಿ ಚೆನ್ನಾಗಿ ಕುದಿಸಿ. ಇದರ ಜೊತೆಗೆ ದಾಸವಾಳದ ಎಲೆ ಹಾಕಿ ಬಿಸಿ ಮಾಡಿ. ಇದನ್ನು ಬಿಸಿ ಮಾಡುವಾಗ ಗಮ ಗಮಿಸುತ್ತದೆ. ಬಳಿಕ ಇದನ್ನು ತಣ್ಣಗಾಗಲು ಬಿಡಿ. ನಂತರ ಒಂದು ಚಿಕ್ಕ ಬಟ್ಟಲಿನಲ್ಲಿ ಈ ಎಣ್ಣೆಯನ್ನು ಹಾಕಿಕೊಂಡು ಕಾಟನ್‌ನಿಂದ ನೆತ್ತಿಗೆ ಹಚ್ಚಿಕೊಳ್ಳಿ.
ಎಲ್ಲೂ ಕೂಡ ತಲೆ ಒಣಗಿರದಂತೆ ತಲೆಯ ತುಂಬಾ ಈ ಎಣ್ಣೆಯನ್ನು ಚೆನ್ನಾಗಿ ಹಚ್ಚಿ. ಕೂದಲಿಗೂ ಸವರಿಕೊಳ್ಳಿ. ಅವಶ್ಯಕತೆ ಇದ್ದಲ್ಲಿ ತಲೆಯನ್ನು ನಿಧಾನವಾಗಿ ಮಸಾಜ್ ಮಾಡಿಕೊಳ್ಳಿ. ತಲೆಯನ್ನು ನೀರಿನಂತೆ ಎಣ್ಣೆಯಿಂದ ಒದ್ದೆ ಮಾಡಿಕೊಳ್ಳಿ. ಹೆಚ್ಚುವರಿಯಾದರೂ ಪರವಾಗಿಲ್ಲ. ಈ ಎಣ್ಣೆಯನ್ನು ಹಚ್ಚಿ ರಾತ್ರಿ ಇಡೀ ಬಿಡಬೇಕು. ಈ ಎಣ್ಣೆ ಹಚ್ಚುವಾಗ ಯಾವುದೇ ಎಣ್ಣೆಯನ್ನು ಬಳಸಬೇಡಿ.
ತಲೆಗೆ ಒಂದು ಶವರ್ ಕ್ಯಾಪ್ ಹಾಕಿ ಮಲಗಿ. ಬೆಳಿಗ್ಗೆ ಎದ್ದು ನೀವು ಪ್ರತೀ ಬಾರಿ ಬಳಸುವ ಶಾಂಪುವನ್ನು ಬಳಸಿ ತಲೆಯನ್ನು ಕೊಂಚ ಬಿಸಿ ನೀರಿನಿಂದ ತೊಳೆಯಿರಿ. ಇದೇ ರೀತಿ ವಾರಕ್ಕೆ ಮೂರು ಅಥವಾ ಎರಡು ಬಾರಿ ಮಾಡುವುದು ತುಂಬಾ ಉತ್ತಮ ಫಲಿತಾಂಶವನ್ನು ನೀಡುತ್ತದೆ. ಇದೇ ರೀತಿ ತಪ್ಪದೇ ಮೂರು ತಿಂಗಳಾದರೂ ಮಾಡಬೇಕು. ಬಳಿಕವಷ್ಟೇ ಇದರಿಂದ ಉತ್ತಮ ಫಲಿತಾಂಶವನ್ನು ನೀವು ಕಾಣಲು ಸಾಧ್ಯವಾಗುತ್ತದೆ.

ಇದರಿಂದ ಕೂದಲ ಆರೋಗ್ಯ ಸುಧಾರಿಸಲಿದೆ. ಕೂದಲಿನ ಸಮಸ್ಯೆಗಳು ದೂರವಾಗುತ್ತವೆ. ಕೂದಲು ಉದುರುವುದು, ತಲೆಹೊಟ್ಟು, ಬಿಳಿಯಾಗುವುದು ಸಮಸ್ಯೆಗಳು ಇರುವುದಿಲ್ಲ. ಈ ಸುಲಭವಾದ ಟಿಪ್ಸ್ ಅನ್ನು ಮನೆಯಲ್ಲಿ ನೀವೊಮ್ಮೆ ಟ್ರೈ ಮಾಡಿ. ಇದರಿಂದ ನಿಮ್ಮ ಕೂದಲು ಎಲ್ಲರಿಗಿಂತೂ ದಟ್ಟವಾಗಿ ಆಕರ್ಷಕವಾಗಿ ಕಾಣಿಸುವುದರಲ್ಲಿ ಅನುಮಾನವೇ ಇಲ್ಲ.












Click it and Unblock the Notifications