Get Updates
Get notified of breaking news, exclusive insights, and must-see stories!

Bangda Fish Health Benefits: ಅಹ್ಹಾ.. ರುಚಿಗೆ ಮಾತ್ರ ಅಲ್ಲ ರೀ ಈ ಬಂಗುಡೆ ಮೀನು.. ಆರೋಗ್ಯಕ್ಕೂ ಅಷ್ಟೇ ಒಳ್ಳೆಯದು

ಮೀನು ತಿನ್ನುವವರು ತುಂಬಾ ಬುದ್ಧಿವಂತರಾಗಿರುತ್ತಾರೆ ಎಂಬ ಮಾತನ್ನ ನೀವು ಕೇಳಿರುತ್ತೀರಾ, ಬಹುತೇಕ ಮಾಂಸಾಹಾರಿ ಜನರು ಮೀನುಗಳನ್ನ ಇಷ್ಟ ಪಟ್ಟು ತಿನ್ನುತ್ತಾರೆ. ಕರಾವಳಿ ಭಾಗದಲ್ಲಿಯೂ ಮೊದಲ ಆಹಾರ ಎಂದರೇ ಅದು ಮೀನು.

ಇನ್ನೂ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಇರುವವರೂ ಬಂಗುಡೆ ಮೀನುಗಳನ್ನ ತಿನ್ನುತ್ತಾರೆ. ಬಂಗುಡೆ ಮೀನುಗಳನ್ನು ಫ್ರೈ ಮಾಡಿ ಅಥವಾ ಬೇಯಿಸಿ ಕೂಡ ಸೇವನೆ ಮಾಡಬಹುದು. ಇವುಗಳಲ್ಲಿ ಅತ್ಯಧಿಕ ಪ್ರಮಾಣದ ಒಮೆಗಾ 3 ಫ್ಯಾಟಿ ಆಸಿಡ್ ಅಂಶಗಳ ಪ್ರಮಾಣ ಕಂಡುಬರುತ್ತದೆ.

amazing-health-benefits

ಬಂಗುಡೆ ಮೀನು ತಿನ್ನುವುದರಿಂದ ಕೂದಲಿನ ಆರೋಗ್ಯವನ್ನು ಸುಧಾರಿಸುವುದು, ಚರ್ಮವನ್ನು ರಕ್ಷಿಸುವುದು, ವಯಸ್ಸಿಗೆ ಸಂಬಂಧಿಸಿದ ಮ್ಯಾಕ್ಯುಲರ್ ಡಿಜೆನರೇಶನ್ ಅನ್ನು ತಡೆಗಟ್ಟುವುದು, ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವುದು ಮಾತ್ರವಲ್ಲ. ಇನ್ನೂ ಹಲವು ಉಪಯೋಗಗಳನ್ನ ಹೊಂದಿದೆ. ಹಾಗಾದರೇ ಬಂಗುಡೆ ಮೀನು ತಿನ್ನುವುದರಿಂದ ಆಗುವ ಪ್ರಯೋಜಗಳ ಬಗ್ಗೆ ತಿಳಿದುಕೊಳ್ಳಬೇಕಾ? ಈ ಲೇಖನವನ್ನ ಒಮ್ಮೆ ಓದಿ.

ಬಂಗುಡೆ ಮೀನು ತಿನ್ನುವುದರಿಂದ ಆರೋಗ್ಯದ ಪ್ರಯೋಜನಗಳು ಇಲ್ಲಿವೆ

ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ

ಬಂಗುಡೆ ಮೀನು ಉತ್ತಮ ಪ್ರಮಾಣದ ಆರೋಗ್ಯಕರ ಕೊಬ್ಬನ್ನು ಹೊಂದಿರುತ್ತದೆ, ಅವುಗಳೆಂದರೆ ಮೊನೊಸಾಚುರೇಟೆಡ್ ಕೊಬ್ಬಿನಾಮ್ಲಗಳು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ, ಜೊತೆಗೆ ಮಧುಮೇಹಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ . ಈ ಮೀನನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದಲ್ಲಿನ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಇದರಿಂದ ನಿಮ್ಮ ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ.

ರಕ್ತತದ ಒತ್ತಡವನ್ನ ಕಡಿಮೆ ಮಾಡುತ್ತದೆ.

ನೀವು ಮಾಂಸಾಹಾರಿ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ, ನಿಮ್ಮ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಬಂಗುಡೆ ಮೀನುಗಳನ್ನು ಪ್ರತಿದಿನ ಸೇವಿಸಿ . ಈ ಮೀನಿನಲ್ಲಿರುವ ಹೆಚ್ಚಿನ ಮಟ್ಟದ ಪೊಟ್ಯಾಸಿಯಮ್ ಸಾಮಾನ್ಯ ರಕ್ತದೊತ್ತಡವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಜೊತೆಗೆ ಪರಿಸ್ಥಿತಿಗೆ ಸಂಬಂಧಿಸಿದ ಆರೋಗ್ಯ ತೊಡಕುಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಸಂಧಿವಾತದ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ

ಹೌದು, ಬಂಗುಡೆ ಮೀನಿ ಉರಿಯೂತದ ಸಂಯುಕ್ತಗಳನ್ನು ಹೊಂದಿದೆ. ಇದು ಸಂಧಿವಾತದಿಂದ ಬಳಲುತ್ತಿರುವ ಜನರಲ್ಲಿ ಕೀಲು ನೋವು ಮತ್ತು ಸ್ನಾಯುಗಳ ಬಿಗಿತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಯಾರಿಗೆ ಈಗಾಗಲೇ ಕೀಲುನೋವು, ಮಾಂಸಖಂಡಗಳ ಸೆಳೆತ, ಮಂಡಿ ನೋವು ಇರುತ್ತದೆ ಅಂತಹವರು ತಮ್ಮ ಆಹಾರ ಪದ್ಧತಿಯಲ್ಲಿ ಬಾಂಗಡ ಮೀನುಗಳನ್ನು ಸೇರಿಸಿ ಸೇವನೆ ಮಾಡುವ ಅಭ್ಯಾಸ ಇಟ್ಟುಕೊಳ್ಳುವುದು ಒಳ್ಳೆಯದು.

ಹೃದಯದ ಆರೋಗ್ಯವನ್ನ ಹೆಚ್ಚಿಸುತ್ತದೆ

ಇಗೀನ ಕಾಲದ ಆಹಾರ ಪದ್ದತಿಯಿಂದಾಗಿ ರಕ್ತದ ಒತ್ತಡ ಮತ್ತು ಹೃದಯದ ಕಾಯಿಲೆ ಯಾವ ಸಮಯದಲ್ಲಿ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹೀಗಾಗಿ ಈ ಬಂಗುಡೆ ಮೀನು ತಿನ್ನುವುದರಿಂದ ಹೃದಯದ ಆರೋಗ್ಯವನ್ನ ಕಾಪಾಡುವಲ್ಲಿ ಸಹಾಯವಾಗಿದೆ. ಈ ಮೀನಿನಲ್ಲಿ ಸ್ಯಾಚುರೇಟೆಡ್ ಕೊಬ್ಬಿನ ಪ್ರಮಾಣ ತುಂಬಾ ಕಡಿಮೆ ಇರುತ್ತದೆ. ಹೃದಯದ ಯಾವುದೇ ತೊಂದರೆಗಳನ್ನು, ಪಾರ್ಶ್ವವಾಯು, ಹೃದಯಘಾತ, ಅತೆರೋಸ್ಕ್ಲೇರೋಸಿಸ್ ಮತ್ತು ಇನ್ನಿತರ ಆರೋಗ್ಯ ಸಮಸ್ಯೆಗಳಿಗೆ ಬಂಗುಡೆ ಮೀನುಗಳು ರಾಮಬಾಣವಾಗಿದೆ.

ಚರ್ಮದ ಆರೈಕೆಗಾಗಿ

ಬಂಗುಡೆ ಮೀನಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳನ್ನ ಹೊಂದಿದೆ. ಈ ಮೀನು ತಿನ್ನುವುದರಿಂದ ನೀವು ತ್ವಚೆಯ ಅಗತ್ಯಗಳನ್ನು ಕಾಳಜಿ ವಹಿಸಬಹುದು. ಇದು ದೇಹದೊಳಗೆ ಉತ್ಕರ್ಷಣ ನಿರೋಧಕಗಳಾಗಿ ಕಾರ್ಯನಿರ್ವಹಿಸಬಹುದು. ಇನ್ನೂ ಸುಕ್ಕುಗಳು ಮತ್ತು ವಯಸ್ಸಿನ ಕಲೆಗಳನ್ನ ಕಡಿಮೆ ಮಾಡಲು ಮತ್ತು ಸೋರಿಯಾಸಿಸ್ ಮತ್ತು ಎಸ್ಜಿಮಾದಂತಹ ಕೆಲವು ಉರಿಯೂತದ ಪರಿಸ್ಥಿತಿಗಳನ್ನು ನಿವಾರಿಸಲು ಸಹಾಯ ಮಾಡತ್ತದೆ.

ಕೂದಲು ಆರೈಕೆಗಾಗಿ ಬಂಗುಡೆ ಮೀನು ಸೇವಿಸಿ

ಈ ಮೀನಿನಲ್ಲಿ ಪ್ರೋಟೀನ್, ಕಬ್ಬಿಣ, ಸತು ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳಂತಹ ಕೂದಲಿನ ಆರೈಕೆಗೆ ನಿರ್ಣಾಯಕವಾಗಿರುವ ಅನೇಕ ಪೋಷಕಾಂಶಗಳಿವೆ. ನಿಮ್ಮ ಆಹಾರದಲ್ಲಿ ಈ ಪೋಷಕಾಂಶಗಳ ನಿಯಮಿತ ಪ್ರಮಾಣವು ನಿಮ್ಮ ಕೂದಲಿನ ಹೊಳಪು ಮತ್ತು ನೋಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ, ಹಾಗೆಯೇ ಕೂದಲಿನ ಎಳೆಗಳನ್ನು ಬಲಪಡಿಸುತ್ತದೆ ಮತ್ತು ತಲೆಹೊಟ್ಟು ಮುಂತಾದ ಕೂದಲು ಸಮಸ್ಯೆಗ ಸಹಾಯಕವಾಗಿದೆ.

ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ

ಹೌದು, ಬಂಗುಡೆ ಮೀನಿನಲ್ಲಿ ಕೊಲೆಸ್ಟ್ರಾಲ್‌ ಮಟ್ಟವನ್ನ ಕಡಿಮೆ ಮಾಡುವಂತಹ ಗುಣವನ್ನ ಹೊಂದಿದೆ. ಈ ಮೀನಿನಲ್ಲಿ ಒಮೆಗಾ-3 ಕೊಬ್ಬಿನಾಮ್ಲವನ್ನ ಈ ಮೀನು ಹೊಂದಿದ್ದು, ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಸಹಾಯಕವಾಗುತ್ತದೆ. ಅಲ್ಲದೇ ದೇಹದಲ್ಲಿ ಕೊಲೆಸ್ಟ್ರಾಲ್ ಸಮತೋಲನವನ್ನು ಸುಧಾರಿಸಬಹುದು. ಈ ಮೀನನ್ನು ನಿಯಮಿತವಾಗಿ ಸೇವಿಸುವುದರಿಂದ ಹೃದಯಾಘಾತ, ಪಾರ್ಶ್ವವಾಯು ಮತ್ತು ಪರಿಧಮನಿಯ ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ತೂಕ ನಷ್ಟಕ್ಕೆ ಸಹಾಯಕ

ಬಂಗುಡೆ ಮೀನು ಹಲವು ಆರೋಗ್ಯಕರ ಗುಣಗಳನ್ನ ಹೊಂದಿದೆ. ಹೀಗಾಗಿ ಹಲವು ಜನರು ಈ ಮೀನನ್ನ ಹೆಚ್ಚಾಗಿ ತಮ್ಮ ಆಹಾರದಲ್ಲಿ ಬಳಸುತ್ತಾರೆ. ಬಂಗುಡೆ ಮೀನುಗಳು ಹೆಚ್ಚಿನ ಮಟ್ಟದ ಕ್ಯಾಲೊರಿಗಳನ್ನು ಹೊಂದಿದ್ದು, ದೊಡ್ಡ ಪ್ರಮಾಣದ ಪ್ರೋಟೀನ್ ಅನ್ನು ಒದಗಿಸುತ್ತದೆ. ಇದು ಚಯಾಪಚಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಇದು ಅತಿಯಾಗಿ ತಿನ್ನುವುದನ್ನು ತಡೆಯಲು ಸಹಾಯ ಮಾಡುತ್ತದೆ. ಇದರಲ್ಲಿಯುವ ಆರೋಗ್ಯಕರ ಅಂಶಗಳು ನಿಮ್ಮ ತೂಕವನ್ನ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+