Drakshi Mosaranna Recipe: ಇದು ಮಾಮೂಲಿ ಅಲ್ಲ ಬೇಸಿಗೆಗೆ ಆರೋಗ್ಯದ ಜೊತೆಗೆ ದೇಹವನ್ನು ತಂಪಾಗಿಡುವ ದ್ರಾಕ್ಷಿ ಮೊಸರನ್ನ..!

ಬೇಸಿಗೆ ಇನ್ನೂ ಆರಂಭವಾಗಿಲ್ಲ. ಅದಾಗಲೇ ಬಿಸಿಲು ನೆತ್ತಿಸುಡಲು ಆರಂಭಿಸಿದೆ. ಬೆಳಗ್ಗೆ ಎಂಟು ಗಂಟೆ ಆಗುವಷ್ಟರಲ್ಲಿ ಬಿಸಿಲ ಬಿಸಿ ಮೈತಾಗುತ್ತಿದೆ. ಹೀಗೆ ಚಳಿಗಾಲದಿಂದ ಬೇಸಿಗೆ ಕಾಲಕ್ಕೆ ಒಗ್ಗಿಕೊಳ್ಳುವುದು ಸ್ವಲ್ಪ ಕಷ್ಟವೇ ಸರಿ. ಈ ಬೇಸಿಗೆ ಕಾಲದಲ್ಲಿ ದೇಹವನ್ನು ತಂಪಾಗಿಡುವ ಆಹಾರ ಸೇವನೆ ಮಾಡುವುದು ತುಂಬಾ ಮುಖ್ಯ. ಹೀಗಾಗಿ ನೀವು ನಿಮ್ಮ ನಿತ್ಯ ಮಧ್ಯಾಹ್ನದ ಊಟಕ್ಕೆ ಆರೋಗ್ಯದ ಜೊತೆಗೆ ದೇಹವನ್ನು ತಂಪಾಗಿಡುವ ಆಹಾರವನ್ನು ಸೇವಿಸಲು ಪ್ರಯತ್ನಿ.

ಸಾಮಾನ್ಯವಾಗಿ ನೀವೆಲ್ಲಾ ಮೊಸರನ್ನವನ್ನು ತಿಂದಿರಬಹುದು. ಆದರೆ ಮೊಸರನ್ನ ಅಂದತಕ್ಷಣ ಅದರಲ್ಲಿ ಅನ್ನ ಬಿಟ್ಟರೆ ಮೊಸರು ಮಾತ್ರ ಇರುತ್ತದೆ. ಇದರಿಂದ ನಮಗೆ ತಿನ್ನಲು ಮನಸ್ಸಾಗುವುದಿಲ್ಲ ಎನ್ನುವವರೇ ಹೆಚ್ಚು. ಹೀಗೆನ್ನುವವರಿಗೆ ನಾವು ಒಂದು ಸ್ಪೆಷಲ್ ರೆಸಿಪಿ ಹೇಳಿಕೊಡುತ್ತೇವೆ. ಅದು ದ್ರಾಕ್ಷಿ ಮೊಸರನ್ನ.

 Drakshi Mosaranna Recipe: How to make Grape Curd Rice at home in kannada

ಅಯ್ಯೋ ಅದೇನು ಈಝಿ ಬಿಡಿ, ಮೊಸರು ಅನ್ನಕ್ಕೆ ದ್ರಾಕ್ಷಿ ಹಾಕಿದರೆ ಆಯ್ತು ಅಂತ ಇದನ್ನು ಓದದೇ ಸುಮ್ಮನಾಗಿಬಿಡಬೇಡಿ. ಇದನ್ನು ನೀವು ಮನೆಯಲ್ಲಿ ತಯಾರಿಸಿ ಮಧ್ಯಾಹ್ನದ ಊಟಕ್ಕೆ ತಿಂದು ನೋಡಿ. ಮತ್ತೆ ಮತ್ತೆ ಮನೆಯಲ್ಲಿ ತಯಾರಿಸುವುದರಲ್ಲಿ ಅನುಮಾನವೇ ಇಲ್ಲ. ಜೊತೆಗೆ ಮನೆಯವರ ಮೆಚ್ಚುಗೆಯನ್ನೂ ನೀವು ಪಡೆಯುತ್ತೀರಿ.

ಹಾಗಾದರೆ ರುಚಿಯೊಂದಿಗೆ ಆರೋಗ್ಯಕ್ಕೂ ತುಂಬಾ ಒಳ್ಳೆಯದಾದ ದ್ರಾಕ್ಷಿ ಮೊಸರನ್ನ ತಯಾರಿಸುವುದು ಹೇಗೆ ಅನ್ನೋದನ್ನು ತಿಳಿಯೋಣ.

 Drakshi Mosaranna Recipe: How to make Grape Curd Rice at home in kannada

ದ್ರಾಕ್ಷಿ ಮೊಸರನ್ನು ತಯಾರಿಸುವ ವಿಧಾನ:

* ದ್ರಾಕ್ಷಿ ಒಂದು ಕಪ್

* ಅಕ್ಕಿ ಒಂದು ಕಪ್

* ಮೊಸರು ಅರ್ಧ ಲೀಟರ್

* ಈರುಳ್ಳಿ ಒಂದು

* ಹಸಿ ಮೆಣಸಿನಕಾಯಿ ಮೂರು

* ಜೀರಿಗೆ ಕಾಲ್ ಚಮಚ

* ಸಾಸಿವೆ ಕಾಲ್ ಚಮಚ

* ಕರಿಬೇವು ಸ್ವಲ್ಪ

* ಕೊತ್ತೊಂಬರಿ ಸೊಪ್ಪು ಸ್ವಲ್ಪ

* ಎಣ್ಣೆ

* ದಾಳಿಂಬೆ ಅರ್ಧ ಕಪ್

* ಸೌತೇಕಾಯಿ ಒಂದು

* ಗೋಡಂಬಿ ಹತ್ತು

*ಉಪ್ಪು

*ಒಣ ಮೆಣಸಿನಕಾಯಿ ಎರಡು

 Drakshi Mosaranna Recipe: How to make Grape Curd Rice at home in kannada

ತಯಾರಿಸುವ ವಿಧಾನ:

* ಮೊದಲಿಗೆ ಒಂದು ಕುಕ್ಕರ್‌ನಲ್ಲಿ ಒಂದು ಕಪ್ ಚೆನ್ನಾಗಿ ತೊಳೆದ ಅಕ್ಕಿಯನ್ನು ಹಾಕಿ. ಇದಕ್ಕೆ ಐದು ಕಪ್ ನೀರು ಹಾಕಿ ಕುಕ್ಕರ ಮುಚ್ಚಳ ಮುಚ್ಚಿ ಮೂರು ವಿಸಿಲ್ ಆಗುವವರೆಗೂ ಬಿಡಿ. ವಿಸಿಲ್ ಆದ ಬಳಿಕ ಹಬೆ ಹೋದ ನಂತರ ಮುಚ್ಚಳ ತೆಗೆದು ಅನ್ನವನ್ನು ಒಂದು ಪಾತ್ರೆಗೆ ಹಾಕಿ ತಣ್ಣಗಾಗಲು ಬಿಡಿ.

* ಒಲೆಯ ಮೇಲೆ ಒಂದು ಪ್ರತ್ಯೇಕ ಪಾತ್ರೆಯನ್ನು ಇಟ್ಟು ನಾಲ್ಕು ಸ್ಪೂನ್ ಎಣ್ಣೆ ಹಾಕಿ ಸ್ವಲ್ಪ ಬಿಸಿ ಮಾಡಿ.

* ನಂತರ ಇದಕ್ಕೆ ಜೀರಿಗೆ ಸಾಸಿವೆ ಚಟಪಟ ಅಂದ ಬಳಿಕ, ಸಣ್ಣಕೆ ಹೆಚ್ಚಿದ ಹಸಿ ಮೆಣಸಿನಕಾಯಿ ಹಾಕಿ ಚೆನ್ನಾಗಿ ಬಾಡಿಸಿ. ಜೊತೆಗೆ ಇದಕ್ಕೆ ಒಣ ಮೆಣಸಿನಕಾಯಿ ಹಾಕಿ.

* ಇದರ ನಂತರ ಈರುಳ್ಳಿ ಹಾಕಿ ಕೆಂಪಾಗುವವರೆಗೆ ಹುರಿಯಿರಿ. ಬಳಿಕ ಕರಿಬೇವು ಹಾಕಿ ಚೆನ್ನಾಗಿ ಬಾಡಿಸಿ. ಕೊತ್ತೊಂಬರಿ ಸೊಪ್ಪನ್ನು ಗ್ಯಾಸ್ ಆಫ್ ಮಾಡಿದ ಬಳಿಕ ಹಾಕಿ. ಇದಕ್ಕೆ ಉಪ್ಪು ಹಾಕಿ ಒಗ್ಗರಣೆ ತಣ್ಣಗಾಗಲು ಬಿಟ್ಟುಬಿಡಿ.

* ಮತ್ತೊಂದು ಪ್ರತ್ಯೇಕ ಪಾತ್ರೆಯಲ್ಲಿ ಗೊಂಡಂಬಿಯನ್ನು ಸ್ವಲ್ಪ ಕೆಂಪಾಗುವವರೆಗೆ ಹುರಿದಿಟ್ಟುಕೊಳ್ಳಿ.

* ಇನ್ನೂ ದಾಳಿಂಬೆಯನ್ನು ಚೆನ್ನಾಗಿ ಬಿಡಿಸಿಕೊಳ್ಳಿ, ದ್ರಾಕ್ಷಿಯನ್ನು ತೊಳೆದು ಒಂದರಲ್ಲಿ ಎರಡು ಅಥವಾ ಮೂರು ಭಾಗ ಮಾಡಿ, ಸೌತೇಕಾಯಿಯನ್ನು ತುರಿದು ಇಟ್ಟುಕೊಳ್ಳಿ.

* ಇದೆಲ್ಲ ಆದ ಬಳಿಕ ಕುಕ್ಕರ್‌ನಲ್ಲಿರುವ ಅನ್ನವನ್ನು ಸ್ವಲ್ಪ ಸ್ವಲ್ಪ ನೀರು ಹಾಕಿ ಮೃದುವಾಗಿಸಿಕೊಳ್ಳಬೇಕು. ಇದು ಸಂಪೂರ್ಣವಾಗಿ ಆರಿದ ನಂತರ ಇದಕ್ಕೆ ಮೊಸರು ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕಲಸಿ ಇಟ್ಟುಕೊಳ್ಳಿ. ಇದು ಸ್ವಲ್ಪ ಗಟ್ಟಿಯಾಗಿ ದೋಸೆ ಹಿಟ್ಟಿನ ಹದಕ್ಕೆ ಬರಬೇಕು ಹಾಗೆ ಕಲಸಿ. ಆದರೆ ಅನ್ನ ತೀರಾ ಮುದ್ದೆಯಾಗದಂತೆ ನೋಡಿಕೊಳ್ಳಿ. ಇದು ಮೊಸರನ್ನದ ರುಚಿಯನ್ನು ಹೆಚ್ಚಿಸುತ್ತದೆ.

* ಬಳಿಕ ಇದಕ್ಕೆ ತಯಾರಿಸಿ ಇಟ್ಟುಕೊಂಡ ಒಗ್ಗರಣೆ ಹಾಕಿ ಕಲಸಿ. ನಂತರ ಬಿಡಿಸಿದ ದಾಳಿಂಬೆ, ದ್ರಾಕ್ಷಿ, ತುರಿದ ಸೌತೇಕಾಯಿ ಹಾಕಿ ಕಲಸಿ. ಸ್ವಲ್ಪ ಹೊತ್ತು ಫ್ರಿಡ್ಜ್‌ ಅಲ್ಲಿ ಇಡಿ.

* ಇದನ್ನು ತಿನ್ನುವಾಗ ಗೋಡಂಬಿಯನ್ನು ಹಾಕಿಕೊಂಡು ತಿಂದರೆ ಆಹಾ.... ನೀವು ಎಂದೂ ಕೂಡ ಇದರ ರುಚಿಯನ್ನು ನೋಡಿರಲು ಸಾಧ್ಯವೇ ಇಲ್ಲ. ಬೇಸಿಗೆ ಕಾಲದಲ್ಲಿ ಇದು ತಿನ್ನಲು ರುಚಿ ಮಾತ್ರವಲ್ಲದೆ ಆರೋಗ್ಯಕರವಾಗಿಯೂ ಹಾಗೂ ದೇಹವನ್ನು ತಂಪಾಗಿಡುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+