ಪುಷ್..... ಅಂತ ಕೋಕಾ ಕೋಲಾ ಬಾಟಲ್ ತೆಗೆದು ಸ್ಟೈಲಾಗಿ ಗಟಗಟ ಅಂತ ಕುಡಿಯೋ ಹುಡುಗರೇ ಇದನ್ನು ಓದಿ.....
ವಿಶ್ವದ ಅತ್ಯಂತ ಜನಪ್ರಿಯ ತಂಪು ಪಾನೀಯಗಳಲ್ಲಿ ಒಂದಾದ ಕೋಕಾ-ಕೋಲಾದ ರುಚಿ ನಮಗೆಲ್ಲರಿಗೂ ತಿಳಿದಿದೆ. ಆದರೆ ನಮ್ಮ ನೆಚ್ಚಿನ ಪಾನೀಯವು ನಮ್ಮ ದೇಹಕ್ಕೆ ಎಷ್ಟು ಪ್ರಯೋಜನಕಾರಿಯಾಗಿದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಕೋಕಾ ಕೋಲಾವನ್ನು ಹೆಚ್ಚು ಕುಡಿಯುವುದು ದೇಹಕ್ಕೆ ಒಳ್ಳೆಯದಲ್ಲ ಎನ್ನುವುದು ನಮಗೆ ತಿಳಿದಿದೆ. ಆದರೆ ಇದರಿಂದ ನಮ್ಮ ದೇಹಕ್ಕೆ ನಿಜವಾಗಿ ಏನಾಗುತ್ತದೆ? ಈ ಬಗ್ಗೆ ತಿಳಿಯೋಣ.
ಕೋಕಾ ಕೋಲಾದ ಬಾಟಲಿಗಳನ್ನು ಒಂದೇ ಬಾರಿಗೆ ಖಾಲಿ ಮಾಡಿದರೆ ಅದು ನಮ್ಮ ಆರೋಗ್ಯಕ್ಕೆ ಹಾನಿಕಾರಕ ಎಂದು ನಮಗೆಲ್ಲರಿಗೂ ತಿಳಿದಿದೆ. ಹಾಗಾದರೆ ಕೋಕ್ ಅನ್ನು ಸೇವಿಸಿದ ನಂತರ ನಮ್ಮ ದೇಹಕ್ಕೆ ನಿಜವಾಗಿಯೂ ಏನಾಗುತ್ತದೆ? ಇದು ನಮ್ಮೆಲ್ಲರಿಗೂ ಕಾಡುವಂತಹ ಪ್ರಶ್ನೆ.

ಜನರು ದಿನಕ್ಕೆ ಕೇವಲ ಆರು ಚಮಚ ಸಕ್ಕರೆಯನ್ನು ಸೇವಿಸಬೇಕೆಂದು ಶಿಫಾರಸು ಮಾಡಲಾಗಿದೆ. ಆದರೆ ಕೋಕಾ ಕೋಲಾ ಇದಕ್ಕಿಂತ ಹೆಚ್ಚಿನ ಸಕ್ಕರೆ ಅಂಶವನ್ನು ನಮ್ಮ ದೇಹಕ್ಕೆ ನೀಡುತ್ತದೆ ಎಂದು ವೈದ್ಯರು ಹೇಳುತ್ತಾರೆ. ಮೆಡಿಕಲ್ ನ್ಯೂಸ್ ಟುಡೇ ಪ್ರಕಾರ, "ಕೋಕಾ-ಕೋಲಾದ ಹೆಚ್ಚಿನ ಸಕ್ಕರೆ ಅಂಶವು ವ್ಯಕ್ತಿಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಮಿತಿ ಮೀರಿ ಕೋಕಾ ಕೋಲಾ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ'' ಎನ್ನುತ್ತಾರೆ ವೈದ್ಯರು.
330 ಮಿಲಿ ಕೋಕ್ ಒಂದು ಗಂಟೆಯೊಳಗೆ ದೇಹಕ್ಕೆ ಏನು ಮಾಡುತ್ತದೆ ಎಂದು ವೈದ್ಯರು ವಿವರಣೆ ನೀಡಿದ್ದಾರೆ. ಇದು ಹೆರಾಯಿನ್‌ನಂತೆಯೇ ಮನುಷ್ಯನ ದೇಹದ ಮೇಲೆ ಪರಿಣಾಮ ಬೀರುತ್ತದೆ. ಕೇವಲ 20 ನಿಮಿಷಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟ ಭಾರಿ ಏರಿಕೆಯಾಗಲಿದೆ. ಇದು ಇನ್ಸುಲಿನ್ ಸ್ಪೈಕ್ ಅನ್ನು ಉಂಟುಮಾಡುತ್ತದೆ. ಜೊತೆಗೆ ಹೆಚ್ಚು ಸಕ್ಕರೆಯನ್ನು ಕೊಬ್ಬಾಗಿ ಪರಿವರ್ತಿಸುತ್ತದೆ.
40 ನಿಮಿಷಗಳ ನಂತರ ದೇಹವು ಕೋಕ್‌ನಿಂದ ಎಲ್ಲಾ ಕೆಫೀನ್ ಅನ್ನು ಹೀರಿಕೊಳ್ಳುತ್ತದೆ. ಇದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಜೊತೆಗೆ ಇದು ನಿದ್ರೆಯನ್ನು ತಡೆಯುತ್ತದೆ. ಹೆಚ್ಚು ಹಸಿವನ್ನು ಉಂಟು ಮಾಡುತ್ತದೆ. ಐದು ನಿಮಿಷಗಳ ನಂತರ ಡೊಪಾಮೈನ್ ಉತ್ಪತ್ತಿಯಾಗುತ್ತದೆ. "ಕೋಕಾ-ಕೋಲಾ ಈ ಕೇಂದ್ರಗಳನ್ನು ಉತ್ತೇಜಿಸುವ ವಿಧಾನವು ಹೆರಾಯಿನ್‌ನ ಪರಿಣಾಮಗಳಿಗೆ ಹೋಲಿಸಬಹುದು. ಇದು ವ್ಯಕ್ತಿಯನ್ನು ಮತ್ತೊಂದು ಬಾಟಲ್ ಕೋಕಾ ಕೋಲಾ ಕುಡಿಯಲು ಪ್ರಚೋದಿಸುತ್ತದೆ'' ಎಂದು ಮೆಡಿಕಲ್ ನ್ಯೂಸ್ ಟುಡೇ ಹೇಳುತ್ತದೆ.
ಕೋಕ್ ಸಂಸ್ಕರಿಸಿದ ಲವಣಗಳು ಮತ್ತು ಕೆಫೀನ್‌ನಿಂದ ತುಂಬಿರುತ್ತದೆ. ಹೀಗಾಗಿ ಸಕ್ಕರೆ ಮತ್ತು ಕೆಫೀನ್ ಹೆಚ್ಚಾಗುವುದರಿಂದ ಇದನ್ನು ಮಿತವಾಗಿ ಬಳಸಿದರೆ ಒಳ್ಳೆಯದು. ಆದರೆ ಹೆಚ್ಚು ಕುಡಿಯುವುದು ಯಾರಿಗೂ ಒಳ್ಳೆಯದಲ್ಲ ಎಂದು ತಜ್ಞರು ಹೇಳುತ್ತಾರೆ.
ಈ ಬಗ್ಗೆ ಕೋಕಾ ಕೋಲಾ ಕಂಪನಿಯೇ ಮಾಹಿತಿ ಹಂಚಿಕೊಂಡಿದೆ. ವರದಿ ಹೀಗೆ ಹೇಳುತ್ತದೆ: "ಎಲ್ಲಾ ಆಹಾರ ಮತ್ತು ಪಾನೀಯಗಳಂತೆ ಸಕ್ಕರೆಯ ಅಂಶ ತಂಪು ಪಾನೀಯಗಳಲ್ಲೂ ಇರುತ್ತದೆ. ಹೀಗಾಗಿ ಸಮತೋಲಿತವಾಗಿ ಇದನ್ನು ಸೇವಿಸಬಹುದು. ನಮ್ಮ ಕಂಪನಿಯು ಕಡಿಮೆ ಸಕ್ಕರೆ ಅಥವಾ ಕ್ಯಾಲೊರಿಗಳಿಲ್ಲದ ವಿವಿಧ ರುಚಿಕರವಾದ ಪಾನೀಯಗಳನ್ನು ನೀಡುತ್ತದೆ. ಅದಕ್ಕಾಗಿಯೇ ನಮ್ಮ ಅನೇಕ ಪಾನೀಯಗಳು ಸಣ್ಣ ಪ್ಯಾಕ್ ಗಾತ್ರಗಳಲ್ಲಿ ಬರುತ್ತವೆ.
ನಾವು ಅವುಗಳಲ್ಲಿರುವ ಸಕ್ಕರೆ ಮತ್ತು ಕ್ಯಾಲೊರಿಗಳ ಬಗ್ಗೆ ಮಾಹಿತಿಯನ್ನು ಪ್ಯಾಕ್‌ಗಳ ಮೇಲೆ ನೀಡುತ್ತೇವೆ. ಆದ್ದರಿಂದ ಜನರು ಅವರಿಗೆ ಮತ್ತು ಅವರ ಕುಟುಂಬಗಳಿಗೆ ಏನು ಸಮಂಜಸವಾಗಿದೆ ಎಂಬುದನ್ನು ನಿರ್ಧರಿಸಬಹುದು. ಜೊತೆಗೆ ಅವುಗಳನ್ನು ಆಯ್ಕೆ ಮಾಡಬಹುದು'' ಎಂದಿದೆ.
ಕೋಕಾ ಕೋಲಾ ಸಂಪೂರ್ಣವಾಗಿ ತ್ಯಜಿಸಿ ಎಂದು ಹೇಳುವುದು ನಮ್ಮ ಉದ್ದೇಶವಲ್ಲ. ಯಾವುದೇ ಪಾನೀಯ ಮಿತವ್ಯಯವಾಗಿದ್ದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹೀಗಾಗಿ ತಂಪು ಪಾನೀಯಗಳನ್ನು ಸೇವಿಸುವಾಗ ಜಾಗರೂಕರಾಗಿರಿ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ತಜ್ಞರನ್ನು ಸಂಪರ್ಕಿಸಿ.)
-
ನಿಮ್ಮ ಮನೆ ದಿಕ್ಕು ಸರಿಯೇ? ರಾಶಿ ಪ್ರಕಾರ ವಾಸ್ತು ಸೂಚನೆಗಳು ಇಲ್ಲಿವೆ -
ಅಳೆದು ತೂಗಿ ಅನ್ನ ಮಾಡಬೇಡಿ,ತುಸು ಮಿಕ್ಕಲಿ: ಇದರ ಹಿಂದಿದೆ ಧಾರ್ಮಿಕ ಕಾರಣ -
ಸರ್ಕಾರಿ ಕಚೇರಿಗಳಲ್ಲಿ ಇನ್ಮುಂದೆ ಕರಿದ ತಿಂಡಿ, ಟೀ-ಕಾಫಿ ಬ್ಯಾನ್: ಸಿರಿಧಾನ್ಯಗಳಿಗೆ ಆದ್ಯತೆ ನೀಡುವಂತೆ ಆರೋಗ್ಯ ಇಲಾಖೆ ಸೂಚನೆ -
PM Modi: ಆದಿಚುಂಚನಗಿರಿ ಮಠಕ್ಕೆ 'ನಮೋ' ಭೇಟಿ: ಕರ್ನಾಟಕ ಸಂಸ್ಕೃತಿ, ಮಠದ ಸೇವೆಗೆ ಮೆಚ್ಚುಗೆ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್












Click it and Unblock the Notifications