ನಾವಿಬ್ಬರು - ನಮಗ್ಯಾಕೆ ಇನ್ನೊಬ್ಬರು, ಏನಿದು ದಂಪತಿಗಳಲ್ಲಿ DINK ಟ್ರೆಂಡ್ ?!
Dual Income and No kids: ತಲೆಮಾರು ಬದಲಾದಂತೆ ವಿಚಾರ, ಆಚಾರ ಹಾಗೂ ಪದ್ಧತಿಗಳು ಬದಲಾಗುತ್ತವೆ. 90ಕಿಡ್ಸ್ ಹಾಗೂ 2000ರ ಕಿಡ್ಸ್ ಮತ್ತು 2020ರಲ್ಲಿ ಜನಿಸಿದವರ ಅಭಿರುಚಿಗಳಿಗೆ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಇದೀಗ ಹೊಸದೊಂದು ವಿಷಯ ನಗರ ಪ್ರದೇಶಗಳಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ ಸೃಷ್ಟಿ ಮಾಡಿದೆ. ಮೊದಲೆಲ್ಲ ಮನೆಯ ತುಂಬಾ ಮಕ್ಕಳಿರಬೇಕು ಎಂದು ಹಿರಿಯರು ಆಸೆಪಡುತ್ತಿದ್ದರು. ಇದಾದ ಮೇಲೆ ನಾವಿಬ್ಬರು ನಮಗಿಬ್ಬರು ಎನ್ನುವುದನ್ನು ಸರ್ಕಾರವೇ ಜಾರಿ ಮಾಡಿತು. ಇದೂ ಮೀರಿ ಜನಸಂಖ್ಯೆ ಮಿತಿಮೀರುತ್ತಿದೆ ಎಂದಾಗ ಗಂಡಾಗಲಿ - ಹೆಣ್ಣಾಗಲಿ ಒಂದೇ ಮಗು ಸಾಕು ಎನ್ನುವುದು ಟ್ರೆಂಡ್ ಆಯ್ತು. ಇಷ್ಟರ ವರೆಗೆ ಓಕೆ. ಆದರೆ, ಇದೀಗ ದುಪ್ಪಟ್ಟು ದುಡಿಯೋಣ... ನನಗೆ ನೀನು - ನಿನಗೆ ನಾನು ಸಾಕು ಎನ್ನುವುದು ಟ್ರೆಂಡ್ ಆಗುತ್ತಿದೆ. ಹಾಗಾದರೆ ಏನಿದು Dual Income and No kids (DINK) ಇಲ್ಲಿದೆ ಅದರ ಇಂಟ್ರಸ್ಟಿಂಗ್ ಮಾಹಿತಿ.
ಕಾಲ ಬದಲಾದಂತೆ ಟ್ರೆಂಡ್ ಬದಲಾಗುತ್ತದೆ. ಹೊಸ ಟ್ರೆಂಡ್‌ಗಳು ಸೃಷ್ಟಿಯಾಗುತ್ತವೆ. ಇದೀಗ ಗಂಡ - ಹೆಂಡತಿ ಚೆನ್ನಾಗಿ ದುಡಿಯೋಣ. ಸುಖ - ನೆಮ್ಮದಿಯಿಂದ ಅರಿತುಕೊಂಡು ಬಾಳೋಣ. ನಮಗೆ ಮಕ್ಕಳು ಬೇಡ ಎನ್ನುವ ಟ್ರೆಂಡ್‌ವೊಂದು ಭಾರತದಲ್ಲೂ ಸೃಷ್ಟಿಯಾಗಿದೆ. ಹೌದು ಇಷ್ಟು ದಿನಗಳ ಕಾಲ ಈ ಪದ್ಧತಿ ವಿದೇಶಗಳಲ್ಲಿತ್ತು. ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲೂ ಈ ರೀತಿಯ ಟ್ರೆಂಡ್‌ವೊಂದು ಸೃಷ್ಟಿಯಾಗಿದೆ.

ಈ ಟ್ರೆಂಡ್‌ನ ಉದ್ದೇಶ ಸುಖ ಜೀವನವನ್ನು ನಡೆಸುವುದು. ಮಕ್ಕಳು ಮಾಡಿಕೊಳ್ಳುವುದಕ್ಕಿಂತ ದಂಪತಿಗಳು ಚೆನ್ನಾಗಿ ಆದಾಯ ಮಾಡಿ ಸುಖಕರ ಜೀವನವನ್ನು ನಡೆಸುವುದು. ಇದರ ಹಿಂದೆ ಕೇವಲ ಸುಖವಾಗಿ ಇರಬೇಕು ಎನ್ನುವ ಉದ್ದೇಶ ಮಾತ್ರ ಇಲ್ಲ. ಜವಾಬ್ದಾರಿಗಳನ್ನು ನಿಭಾಯಿಸುವ ಸವಾಲು, ಪಾಲನೆ ಹಾಗೂ ಷೋಷಣೆಯಂತಹ ವಿಷಯಗಳು ಸಹ ಇವೆ. ಡಬಲ್ ಇನ್ ಕಂ ನೋ ಕಿಡ್ಸ್ ಕಾನ್ಸೆಪ್ಟ್‌ಗೆ DINK ಎಂದು ಕರೆಯಲಾಗುತ್ತದೆ. ಈ ನಿರ್ಧಾರಕ್ಕೆ ಬರುವವರು ಹೆಚ್ಚು ಹೂಡಿಕೆ ಮಾಡುವುದು ಹಾಗೂ ಪ್ರವಾಸ ಮಾಡುವುದರಲ್ಲಿ ಆಸಕ್ತಿ ಹೊಂದಿರುತ್ತಾರೆ.
ಬೇಗ ನಿವೃತ್ತಿ ಆಗಬಹುದು: ಇನ್ನಿ ಡಿಂಕ್ ಕಾನ್ಸೆಪ್ಟ್‌ನಲ್ಲಿ ಹಲವು ಲೆಕ್ಕಾಚಾರಗಳು ಇವೆ. ಅದರಲ್ಲಿ ಮುಖ್ಯವಾಗಿ ಬೇಗ ನಿವೃತ್ತಿ ತೆಗೆದುಕೊಳ್ಳಬಹುದು ಎನ್ನುವುದು. ಹೌದು ಸಾಮಾನ್ಯವಾಗಿ ಮಕ್ಕಳಾದರೆ ಅವರ ಪಾಲನೆ - ಪೋಷಣೆ, ಶಾಲಾ - ಕಾಲೇಜು ಹಾಗೂ ಮದುವೆ ಮಾಡಿಸುವುದು ಅಂತ ಹಲವು ಕಮಿಟ್‌ಮೆಂಟ್‌ಗಳು ಇರುತ್ತವೆ. ಇದನ್ನೆಲ್ಲ ನಿಭಾಯಿಸುವುದಕ್ಕೆ 50 -60 ವರ್ಷದ ವರೆಗೆ ದುಡಿಯಬೇಕಾಗುತ್ತದೆ. ತಡವಾಗಿ ಮದುವೆಯಾದರೆ ಈ ಅವಧಿ ಇನ್ನಷ್ಟು ಮುಂದಕ್ಕೆ ಹೋಗುವ ಸಾಧ್ಯತೆಯೂ ಇದೆ. ಅದೇ ಮಕ್ಕಳನ್ನು ಮಾಡಿಕೊಳ್ಳದೆ ಇದ್ದರೆ ಬೇಗ ನಿವೃತ್ತಿ ಪಡೆದುಕೊಳ್ಳಬಹುದು ಎನ್ನುವ ಲೆಕ್ಕಾಚಾರ ಇದೆ.
ಅಲ್ಲದೆ ಈ ರೀತಿ ಮಾಡುವುದರಿಂದ ದುಡಿದ ಹಣವನ್ನು ದಂಪತಿಗಳಿಬ್ಬರು ವೆಚ್ಚ ಮಾಡುವುದಕ್ಕೆ ಅವಕಾಶ ಸಿಗುತ್ತದೆ. ರಜಾ ದಿನಗಳನ್ನು ಕಳೆಯುವುದಕ್ಕೆ, ಐಷಾರಾಮಿ ಜೀವನ ನಡೆಸುವುದಕ್ಕೆ ಅನುಕೂಲವಾಗುತ್ತದೆ. ಅಲ್ಲದೆ ಆರ್ಥಿಕವಾಗಿ ಸ್ಥಿರತೆ, ಕೆಲಸದಲ್ಲಿ ಅಭಿವೃದ್ಧಿ ಆಗುವುದಕ್ಕೆ ಸಾಧ್ಯವಾಗುತ್ತದೆ ಎನ್ನುವುದು ಸೇರಿದಂತೆ ಹಲವು ಲೆಕ್ಕಾಚಾರಗಳು ಇವೆ. ಡಿಂಕ್ ಸಂಪ್ರದಾಯವು ಮುಖ್ಯವಾಗಿ ನಗರ ಪ್ರದೇಶಗಳಲ್ಲಿ ಹೆಚ್ಚಾಗುತ್ತಿದೆ.












Click it and Unblock the Notifications