ಸಂಕ್ರಾಂತಿ ಸ್ಪೆಷಲ್‌ ಸ್ವೀಟ್ ಪೊಂಗಲ್‌ ಮಾಡುವ ಸರಳ ವಿಧಾನ ಇಲ್ಲಿದೆ

Sweet Pongal Recipe: ಎಳ್ಳು ಬೆಲ್ಲ ತಿಂದು.. ಒಳ್ಳೆ ಮಾತಾಡಿ.. ಎನ್ನುವ ಸಿಹಿ ಮಾತುಗಳೊಂದಿಗೆ ಪ್ರಾರಂಭವಾಗುವ ಸಂಕ್ರಾಂತಿ ಬರ್ತಿದೆ. ಧಾನ್ಯ ಲಕ್ಷ್ಮಿ ಮನೆಗೆ ಬರುವ ಸಮಯದಲ್ಲಿ ಆಚರಿಸುವ ಈ ಹಬ್ಬವು ಸಮೃದ್ಧಿಯ ಸಂಕೇತವಾಗಿದೆ. ಸುಗ್ಗಿ ಸಮಯದಲ್ಲಿ ಆಚರಿಸುವ ಈ ಹಬ್ಬದ ಹಿಂದೆ ಹಲವು ವಿಶೇಷತೆಗಳಿವೆ. ಹಬ್ಬದಲ್ಲಿ ಎಳ್ಳು- ಬೆಲ್ಲ ಹಂಚುವಷ್ಟೇ ಮತ್ತೊಂದು ಆಹಾರ ವಿಶೇಷವಾಗಿದೆ. ಅದೇ ಸ್ವೀಟ್ ಪೊಂಗಲ್‌. ಹೌದು ಪ್ರತಿ ಸಂಕ್ರಾಂತಿಯಲ್ಲೂ ಸ್ವೀಟ್ ಪೊಂಗಲ್‌ ಆಹಾರ ಆಕರ್ಷಣೆಯ ಕೇಂದ್ರ ಬಿಂದುವಾಗಿರುತ್ತದೆ. ಹಾಗಾದರೆ ಈ ಸ್ವೀಟ್ ಪೊಂಗಲ್‌ ಅನ್ನು ಸರಳವಾಗಿ ಮಾಡುವುದು ಹೇಗೆ, ಸ್ವೀಟ್ ಪೊಂಗಲ್‌ ಮಾಡುವುದಕ್ಕೆ ಬೇಕಾಗುವ ಆಹಾರ ಪದಾರ್ಥಗಳು ಏನು ಎನ್ನುವ ಮಾಹಿತಿ ಇಲ್ಲಿದೆ.

ಸ್ವೀಟ್ ಪೊಂಗಲ್‌ ಮಾಡುವುದು ಅತ್ಯಂತ ಸುಲಭ. ಸ್ವೀಟ್ ಪೊಂಗಲ್‌ ಕೇವಲ ಸಂಕ್ರಾಂತಿ ಹಬ್ಬಕ್ಕೆ ಮಾತ್ರವಲ್ಲ. ನೀವು ದೇವರ ಪೂಜೆಗೆ ಅಥವಾ ವಿಶೇಷ ಕಾರ್ಯಕ್ರಮಗಳಿಗೆ ಹಾಗೂ ಮಕ್ಕಳಿಗೆ ಸುಲಭವಾಗಿ ಮನೆಯಲ್ಲೇ ಏನಾದರೂ ಸಿಹಿಯಾಗಿ ಮಾಡಿಕೊಡಬೇಕು ಅಂತ ಅನಿಸಿದರೆ ಸ್ವೀಟ್ ಪೊಂಗಲ್‌ ಬೆಸ್ಟ್‌ ಆಗಿದೆ.

Delicious Sweet Pongal Recipe Perfect Treat for Sankranti

ಸ್ವೀಟ್ ಪೊಂಗಲ್‌ ಮಾಡುವುದಕ್ಕೆ ಬೇಕಾಗುವ ವಸ್ತುಗಳು

ಸಿಹಿ ಪೊಂಗಲ್‌ ಮಾಡುವುದಕ್ಕೆ ಐದರಿಂದ ಆರು ಆಹಾರ ಪದಾರ್ಥಗಳು ಇದ್ದರೆ ಸಾಕು. ಇನ್ನು ಸ್ವೀಟ್ ಪೊಂಗಲ್‌ ಮಾಡುವುದಕ್ಕೆ ನಿಮಗೆ 100ರಿಂದ 150 ಗ್ರಾಂನಷ್ಟು ಅಕ್ಕಿ, ಅಷ್ಟೇ ಪ್ರಮಾಣದ ಹೆಸರು ಬೇಳೆ , 200ರಿಂದ 250 ಗ್ರಾಂ ಬೆಲ್ಲ, ಗೋಡಂಬಿ ಮತ್ತು ಒಣದ್ರಾಕ್ಷಿ 2 ಚಮಚದಷ್ಟು, 2 ಚಮಚ ತುಪ್ಪ, ಏಲಕ್ಕಿ 4 ಹಾಗೂ ಲವಂಗ 1 ಮತ್ತು ಅಕ್ಕಿಯ ಮೇಲೆ ಬರುವಷ್ಟು ನೀರು (ಅಂದಾಜು ಎರಡು ಗ್ಲಾಸ್) ಬೇಕಾಗುತ್ತದೆ.

ಸ್ವೀಟ್ ಪೊಂಗಲ್‌ ಮಾಡುವ ವಿಧಾನ

ಮೊದಲೇ ಹೇಳಿದಂತೆ ಸ್ವೀಟ್ ಪೊಂಗಲ್‌ ಮಾಡುವ ವಿಧಾನ ಸರಳವಾಗಿದೆ. ಮೊದಲು ಅಕ್ಕಿಯನ್ನು ಚೆನ್ನಾಗಿ ತೊಳೆದು ಇಟ್ಟುಕೊಳ್ಳಿ. ಪ್ಯಾನ್‌ಗೆ ಇಲ್ಲವೇ ಪಾತ್ರೆಗೆ ಒಂದು ಚಮಚ ತುಪ್ಪ ಹಾಕಿ ಹೆಸರು ಬೇಳೆಯನ್ನು ಕೆಂಪಗೆ ಆಗುವಂತೆ ಹುರಿದುಕೊಳ್ಳಿ. ಇದಾದ ಮೇಲೆ ನೀರು ಹಾಕಿ ಹಾಗೂ ಈಗಾಗಲೇ ತೊಳೆದಿಟ್ಟಿದ್ದ ಅಕ್ಕಿಯನ್ನು ಇದಕ್ಕೆ ಸೇರಿಸಿ. ಎರಡನ್ನೂ ಚೆನ್ನಾಗಿ ಮಿಕ್ಸ್‌ ಮಾಡಿ ಕುಕ್ಕರ್‌ನಲ್ಲಿ ಮೂರು ಅಥವಾ ನಾಲ್ಕು ವಿಶಲ್ ಕೂಗಿಸಿಕೊಳ್ಳಿ. ಇದಾದ ಮೇಲೆ ಬೆಲ್ಲವನ್ನು ಸಣ್ಣಗೆ ಪುಡಿ ಮಾಡಿಕೊಂಡು ಅರ್ಧ ಕಪ್‌ ನೀರಿನಲ್ಲಿ ಕರಗಲು ಬಿಡಿ. ಬೆಲ್ಲ ಕರಗಿದ ಮೇಲೆ ನೀರನ್ನು ಸೋಸಿ ಅನ್ನ ಹಾಗೂ ಬೇಳೆಯೊಂದಿಗೆ ಸೇರಿಸಿ.

Delicious Sweet Pongal Recipe Perfect Treat for Sankranti

ಮತ್ತೊಂದು ಕಡೆ ಪ್ಯಾನ್‌ ಅಥವಾ ಸಣ್ಣ ಪಾತ್ರೆಯಲ್ಲಿ ತುಪ್ಪದಲ್ಲಿ ಗೋಡಂಬಿ, ಒಣದ್ರಾಕ್ಷಿ ಹುರಿದುಕೊಳ್ಳಿ ಇದಾದ ಮೇಲೆ ಅದಕ್ಕೆ ಏಲಕ್ಕಿ ಹಾಗೂ ಲವಂಗ ಸೇರಿಸಿ. ಏಲಕ್ಕಿಯನ್ನು ಪುಡಿ ಮಾಡಿಕೊಳ್ಳಿ. ಕೊನೆಯಲ್ಲಿ ಈ ಎಲ್ಲವನ್ನೂ ಈಗಾಗಲೇ ಮಾಡಿಟ್ಟುಕೊಂಡಿರುವ ಪೊಂಗಲ್‌ನೊಂದಿಗೆ ಸೇರಿಸಿ. ಸಣ್ಣ ಉರಿಯಲ್ಲಿ ಕುದಿಸಿಕೊಂಡು, ಅರ್ಧ ಲೀಟರ್‌ನಷ್ಟು ನೀರಿನಲ್ಲಿ ಅಥವಾ ಹಾಲಿನಲ್ಲಿ ಕುದಿಸಿಕೊಳ್ಳಿ. ಹದವಾಗಿ ಪೊಂಗಲ್‌ ಕುದಿದಾದ ಮೇಲೆ ಈಗಾಗಲೇ ಹುರಿದುಟ್ಟುಕೊಂಡ ಗೋಡಂಬಿ ಹಾಗೂ ಒಣದ್ರಾಕ್ಷಿಯ ಮಿಶ್ರಣವನ್ನು ಇದಕ್ಕೆ ಸೇರಿಸಿ. ಇಷ್ಟು ಮಾಡಿದರೆ ರುಚಿ ರುಚಿಯಾದ ಸಿಹಿಯಾದ ಪೊಂಗಲ್‌ ಸವಿಯಲು ಸಿದ್ಧವಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+